ನ್ಯೂಯಾರ್ಕ್: ಕೆಲ ಗಂಡಸರು ತಮ್ಮ ಹೆಂಡತಿಯ(Wife) ಹುಟ್ಟುಹಬ್ಬ (Birth day), ವಿವಾಹ ವಾರ್ಷಿಕೋತ್ಸವವನ್ನು (Marriage Anniversary) ಮರೆತು ಬಿಡುವುದು ಸಾಮಾನ್ಯ. ಇನ್ನೂ ಅದೆಷ್ಟೋ ಮಂದಿ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಕೆಲಸದ ಒತ್ತಡದಲ್ಲಿ ಮರೆತೇ ಬಿಟ್ಟಿರುತ್ತಾರೆ. ಆದರೆ ಇಲ್ಲೊಬ್ಬ ಭೂಪ ಪ್ರವಾಸಕ್ಕೆ (Trip) ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದು ಹೋಗಿದ್ದ ಪತ್ನಿಯನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಮರೆತು ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಕ್ರಿಸ್ಮಸ್ ದಿನದಂದು (Christmas Day) ಈ ಘಟನೆ ನಡೆದಿದ್ದು, ನಂತರ ಗಂಡನನ್ನು (Husband) ಹುಡುಕಿಕೊಂಡು ಪತ್ನಿ 12 ಮೈಲಿ ಅನಿವಾರ್ಯವಾಗಿ ನಡೆಯಬೇಕಾಯಿತು ನ್ಯೂಯಾರ್ಕ್ ಪೋಸ್ಟ್ (New York Post) ವರದಿ ಮಾಡಿದೆ.
ತವರೂರಿಗೆ ಪ್ರವಾಸ ಕೈಗೊಂಡಿದ್ದ ದಂಪತಿ
55 ವರ್ಷದ ಥಾಯ್ಲೆಂಡ್ನ ಬೂಂಟೊಮ್ ಚೈಮೂನ್ ಎಂಬ ವ್ಯಕ್ತಿ ತಮ್ಮ 49 ವರ್ಷದ ಪತ್ನಿ ಅಮ್ನುವೇ ಚೈಮೂನ್ ಹೊಸ ವರ್ಷ ಆಚರಿಸಿಲು ಭಾನುವಾರ ಮುಂಜಾನೆ 3 ಗಂಟೆಗೆ ಮಹಾ ಸರಖಮ್ ಪ್ರಾಂತ್ಯದಲ್ಲಿರು ತಮ್ಮ ತವರೂರಿಗೆ ಪ್ರವಾಸ ಕೈಗೊಂಡಿದ್ದರು, ಈ ವೇಳೆ ಘಟನೆ ನಡೆದಿದೆ.
ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದಿದ್ದ ಪತ್ನಿ
ದಂಪತಿ ಕೊಂಚ ದೂರ ಪ್ರಯಾಣಿಸಿದ ಬಳಿ ಪತಿ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಹೇಳಿ, ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದಾನೆ. ಈ ವೇಳೆ ಗ್ಯಾಸ್ ಸ್ಟೇಷನ್ನಲ್ಲಿ ಯಾಕೆ ಗಾಡಿ ನಿಲ್ಲಿಸಲಿಲ್ಲ ಎಂದು ಪತ್ನಿ ಪ್ರಶ್ನಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯೆ ನೀಡದ ವ್ಯಕ್ತಿ ಏಕಾಏಕಿ ಕಾರಿನ ಇಳಿದು ಹೋಗಿದ್ದಾನೆ. ಕಾಡಿನ ಮಧ್ಯೆ ಗಾಡಿಯನ್ನು ನಿಲ್ಲಿಸಿದ್ದರಿಂದ ಪತ್ನಿ ಕೂಡ ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಇಳಿದಿದ್ದಾರೆ.
ಕತ್ತಲಲ್ಲಿ ಕಾಡಿನ ಮಧ್ಯೆ ಪತ್ನಿ ಬಿಟ್ಟು ಹೋದ ಪತಿರಾಯ
ಆದರೆ ತನ್ನ ಹೆಂಡತಿ ಕೂಡ ಕಾರಿನಿಂದ ಇಳಿದಿದ್ದಾಳೆ ಎಂದು ತಿಳಿಯದ ಪತಿ, ಕತ್ತಲಲ್ಲಿ ಪತ್ನಿಯನ್ನು ಬಿಟ್ಟು ಕಾರು ಡ್ರೈವ್ ಮಾಡಿಕೊಂಡು ಹೋಗಿದ್ದಾನೆ. ನಂತರ ಪತಿ ಕಾಣದನ್ನು ಕಂಡು ಭಯಗೊಂಡ ಮಹಿಳೆ ಭಯವಾದರೂ ಹೋಗಬೇಕು ಎಂದು ನಿರ್ಧರಿಸಿ ಸುಮಾರು 20 ಕಿಮೀ (ಅಂದಾಜು 12.4 ಮೈಲುಗಳು) ನಡೆದುಕೊಂಡು ಹೋಗಿದ್ದಾರೆ. ನಂತರ ಮುಂಜಾನರೆ 5 ಗಂಟೆ ಸುಮಾರಿಗೆ ಕಬಿನ್ ಬುರಿ ಜಿಲ್ಲೆಯನ್ನು ತಲುಪಿ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಕಾರಿನಲ್ಲೇ ಫೋನ್ ಬಿಟ್ಟು ಹೋಗಿದ್ದ ಮಹಿಳೆ
ದುರುದೃಷ್ಟವಶಾತ್ ಆಕೆಗೆ ತನ್ನ ಗಂಡನ ನಂಬರ್ ಕೂಡ ಗೊತ್ತಿಲ್ಲದೇ ಮತ್ತಷ್ಟು ತೊಂದರೆಗೆ ಒಳಗಾಗಬೇಕಾಯಿತು. ಅಲ್ಲದೇ ತನ್ನ ಸೆಲ್ ಫೋನ್ ಅನ್ನು ಕೂಡ ಕಾರಿನಲ್ಲಿದ್ದ ಬ್ಯಾಗ್ನಲ್ಲಿಯೇ ಬಿಟ್ಟು ಬಂದಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೆಂಡ್ತಿ ಬಿಟ್ಟು ಸುಮಾರು 159 ಕಿ.ಮೀ ದೂರದವರೆಗೆ ಹೋಗಿದ್ದ ಪತಿ
ಕೊನೆಗೆ ಆದ್ಯಾಗೋ ಬೆಳಗ್ಗೆ 8 ಗಂಟೆಯಷ್ಟೋತ್ತಿಗೆ ಮಹಿಳೆಯ ಪತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಅಲ್ಲಿಯವರೆಗೂ ಆತನಿಗೆ ಪತ್ನಿ ಕಾರಿನಲ್ಲಿ ಇರಲಿಲ್ಲವೆಂಬ ಯಾವುದೇ ಸುಳಿವಿರಲಿಲ್ಲ. ಆತ ಕಾರಿನ ಹಿಂಬದಿ ಸೀಟಿಯಲ್ಲಿ ತನ್ನ ಪತ್ನಿ ಗಾಢ ನಿದ್ದೆಯಲ್ಲಿದ್ದಾಳೆ ಎಂದುಕೊಂಡಿದ್ದ. ಅಷ್ಟೇ ಅಲ್ಲದೇ ಆತ ಸುಮಾರು 159 ಕಿ.ಮೀ ದೂರದವರೆಗೆ ಹೋಗಿದ್ದ.
ಇದನ್ನೂ ಓದಿ:Bomb Cyclone Effect: ಸೌತ್ವೆಸ್ಟ್ ಏರ್ಲೈನ್ಸ್ನ ವಿಮಾನಗಳು ರದ್ದು, ಮದುವೆ ಗಂಡಿಗೆ ಮಿಸ್ ಆಯ್ತು ಫ್ಲೈಟ್!
ತನ್ನ ಪತ್ನಿಯನ್ನು ಬಿಟ್ಟುಬಂದಿದ್ದೇನೆ ಎಂಬ ವಿಷಯ ತಿಳಿದಾಕ್ಷಣ ಆತ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ವಾಪಸ್ ತೆರಳಿದ್ದಾನೆ. ಅಷ್ಟೇ ಅಲ್ಲದೇ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ. ದಂಪತಿಗೆ 27 ವರ್ಷಗಳ ಹಿಂದೆ ಮದುವೆಯಾಗಿದ್ದು, 26 ವರ್ಷದ ಮಗನಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ