Crime: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ: ಒಪ್ಪದ ಹೆಂಡತಿ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪತಿ

ಐಪಿಸಿ ಸೆಕ್ಷನ್ 377 (ಅಸಹಜ ಲೈಂಗಿಕತೆ) ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಯ  ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮುಂಬೈ (ಅ. 21):  ಅಸಹಜ ಲೈಂಗಿಕ ಕ್ರಿಯೆಗೆ (unnatural sex) ಪತ್ನಿ ನಿರಾಕರಿಸಿದ ಕಾರಣಕ್ಕೆ ಆಕೆಯ ಕೆಲವು ಖಾಸಗಿ ಫೋಟೋಗಳನ್ನು (objectional photo) ಪತಿ ಸಾಮಾಜಿಕ ಜಾಲತಾಣದಲ್ಲಿ (social Media) ಅಪ್​ಲೋಡ್​ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗಪುರದ (Maharashtra Nagpur) ನಂದನವನದಲ್ಲಿ ನಡೆದಿದೆ. ಈ ಸಂಬಂಧ 21 ವರ್ಷದ ಪತ್ನಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 27 ವರ್ಷದ ಪತಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಲ್ಲದೆ ತನ್ನ ಆಕ್ಷೇಪಾರ್ಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಅಲ್ಲದೇ ಈತ ಈಗಾಗಲೇ ಒಂದು ಮದುವೆಯಾಗಿದ್ದು, ಈ ವಿಷಯವನ್ನು ನನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

    ಮದುವೆ ಆಗಿದ್ದ ವಿಷಯವನ್ನು ಮುಚ್ಚಿಟ್ಟಿದ್ದ ಗಂಡ

    ಸಂತ್ರಸ್ತ ಪತ್ನಿ ಕಳೆದ ಜನವರಿಯಲ್ಲಿ ಆರೋಪಿಯನ್ನು ಭಿಲಾಯಿ ಪ್ರದೇಶದಲ್ಲಿ ಭೇಟಿಯಾಗಿದ್ದಳು. ಇಬ್ಬರು ಮೆಚ್ಚು ದರ್ಗದಲ್ಲಿ ಮದುವೆ ಆಗಿದ್ದರು. ಈ ವೇಳೆ ಆತ ತನಗೆ ಮದುವೆಯಾಗಿ ಮಗಳಿದ್ದಾಳೆ ಎಂಬ ಮಾಹಿತಿ ತಿಳಿಸಲಿಲ್ಲ. ಈ ವಿಚಾರ ತಿಳಿದ ಬಳಿಕ ಆತನನ್ನು ಪ್ರಶ್ನಿಸಿದಾಗ ಆತ ತನ್ನ ಮೇಲೆ ದೌರ್ಜನ್ಯ ನಡೆಸಿದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಒಪ್ಪದಿದ್ದಕ್ಕೆ ಹಲ್ಲೆ

    ಇದೇ ಕಾರಣಕ್ಕೆ ಆಕೆ ಗಂಡನ ತೊರೆದು ಹೋಗಿದ್ದಳು. ಕಳೆದ ಎರಡು ದಿನಗಳ ಹಿಂದೆ ಮತ್ತೆ ಮರಳಿದಾಗ ಆತ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿ, ಥಳಿಸಿದ. ಈ ಹಿನ್ನಲೆ ಸಂತ್ರಸ್ತೆ ನಂದನವನ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗಿದೆ.

    ಅಹಮದಾಬಾದ್​ನಲ್ಲೂ ಇದೇ ರೀತಿ ಪ್ರಕರಣ

    ಇದೇ ರೀತಿಯ ಪ್ರಕರಣ ಗುಜರಾತ್​ನಲ್ಲೂ ಕೂಡ ದಾಖಲಾಗಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ 45 ವರ್ಷದ ಮಹಿಳೆ ತನ್ನ 48 ವರ್ಷದ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪತಿತನ್ನನ್ನು ಅಸಹಜ ಲೈಂಗಿಕತೆಗೆ ಒತ್ತಾಯಿಸಿದ್ದು, ಕೌಟುಂಬಿಕ ದೌರ್ಜನ್ಯಕ್ಕೆ ನಡೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

    ಇದನ್ನು ಓದಿ: ಮನೆಗೆಲಸದವನಿಂದಲೇ ಮಗು ಕಿಡ್ನಾಪ್​: 1 ಕೋಟಿ ಹಣಕ್ಕೆ ಡಿಮ್ಯಾಂಡ್​, ಮೂರೇ ಗಂಟೆಯಲ್ಲೇ ಲಾಕ್​!

    ಕೌಟುಂಬಿಕ ದೌರ್ಜನ್ಯ ನಡೆಸಿದ ಗಂಡ

    ಅಹಮದಾಬಾದ್ ನ ನವರಂಗಪುರ ನಿವಾಸಿಯಾಗಿರುವ ದೂರುದಾರರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಪತಿ ಐಟಿ ಕಂಪನಿ ನಡೆಸುತ್ತಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ, ಮದುವೆಯಾದ ತಕ್ಷಣ, ತನ್ನ ಪತಿ ಕ್ಷುಲ್ಲಕ ವಿಚಾರಗಳಿಗಾಗಿ ತನ್ನ ಮೇಲೆ ಹಲ್ಲೆ ಮಾಡಲು ಆರಂಭಿಸಿದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಆತ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗುವಂತೆ ಒತ್ತಾಯಿಸಿದದಿದ್ದ, ಆಕ್ಷೇಪಿಸಿದಾಗಲೆಲ್ಲಾ ನನ್ನ ಮೇಲೆ ಥಳಿಸುತ್ತಿದ್ದ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

    ಇದನ್ನು ಓದಿ: ಅಮೆರಿಕದಲ್ಲಿ ರೈಲಿ​ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ; ವಿಡಿಯೋ ಚಿತ್ರೀಕರಿಸಿದ ಸಹ ಪ್ರಯಾಣಿಕರು

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸಹಜ ಲೈಂಗಿಕತೆ) ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಯ  ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
    Published by:Seema R
    First published: