ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ (Love) ಅಂತ ಹುಡುಗ ಹುಡುಗಿಯರು ಪಾರ್ಕ್ ಮತ್ತು ಸಿನಿಮಾ (Cinema) ಅಂತ ಓಡಾಡಿ, ಕೆಲವೊಮ್ಮೆ ಸಲುಗೆ ದೈಹಿಕ ಸಂಪರ್ಕದ ಎಲ್ಲೆಯನ್ನು ಮೀರಿ ಬೆಳೆದು ನಂತರ ಗರ್ಭ ಧರಿಸಿದ್ದಾರೆ ಅಂತ ಗೊತ್ತಾಗಿ ಅದನ್ನು ತೆಗೆಸಿಕೊಳ್ಳಬೇಕು ಅಂತ ಅನೇಕರು ಈ ಆಸ್ಪತ್ರೆಗಳ (Hospital) ಸುತ್ತಲೂ ಸುತ್ತುತ್ತಿರುವ ದೃಶ್ಯಗಳನ್ನು ನಾವೆಲ್ಲಾ ನೋಡಿರುತ್ತೇವೆ. ಇವರಷ್ಟೇ ಅಲ್ಲದೆ, ಹೀಗೆ ಎಷ್ಟೋ ಸಾರಿ ಮಗು ಬೇಡ ಅಂತ ದಂಪತಿ (Couple) ಮಾತ್ರೆಗಳನ್ನು (Pills) ತೆಗೆದುಕೊಂಡು ಗರ್ಭಪಾತ ಮಾಡಿಸಿಕೊಂಡಿರುತ್ತಾರೆ. ಇನ್ನೂ ಕೆಲವರು ಹೆಣ್ಣು ಮಗು ಇದೆ ಅಂತ ಮೊದಲೇ ಆಕ್ರಮವಾಗಿ ತಿಳಿದುಕೊಂಡು ಅದನ್ನು ಗರ್ಭಪಾತ (Abortion) ಮಾಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಈ ಗರ್ಭಪಾತ ಎಂಬುದು ಒಂದು ಎಳೆಯ ಜೀವ ಹೊರಗಿನ ಪ್ರಪಂಚ ನೋಡದೆಯೆ ಅದನ್ನು ಸಾಯಿಸುವ ಕೆಟ್ಟ ಪ್ರಕ್ರಿಯೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಆಯಾ ರಾಷ್ಟ್ರಗಳಲ್ಲಿ ಈ ಗರ್ಭಪಾತ ಎಂಬುದು ಕಾನೂನುಬಾಹಿರವಾಗಿದೆ. ಯಾರಾದರೂ ಆಕ್ರಮವಾಗಿ ಮಾತ್ರೆಗಳನ್ನು ತೆಗೆದುಕೊಂಡು ಗರ್ಭಪಾತ ಮಾಡಿಸಿಕೊಂಡಿದ್ದರೆ, ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಲಾಗುತ್ತದೆ.
ಅಮೆರಿಕದ ಟೆಕ್ಸಾಸ್ ನಲ್ಲಿ ಗರ್ಭಪಾತವು ಕಾನೂನುಬಾಹಿರ
ಅಮೆರಿಕದ ಟೆಕ್ಸಾಸ್ ನಲ್ಲಿ ಬಹುತೇಕರಿಗೆ ತಿಳಿದಿರುವಂತೆ ಗರ್ಭಪಾತವು ಹೆಚ್ಚಿನ ಸಂದರ್ಭಗಳಲ್ಲಿ ಕಾನೂನುಬಾಹಿರವಾಗಿದೆ. ಆಗಸ್ಟ್ 25, 2022 ರಿಂದ ಈ ಒಂದು ಕಾನೂನು ಜಾರಿಯಲ್ಲಿದೆ, ಇದು ತಾಯಿಯ ಜೀವವನ್ನು ಉಳಿಸುವುದನ್ನು ಹೊರತುಪಡಿಸಿ ಎಲ್ಲಾ ಸಂದರ್ಭಗಳಲ್ಲಿ ಗರ್ಭಪಾತವನ್ನು ನಿಷೇಧಿಸುತ್ತದೆ.
ಆದರೂ ಸಹ ಕೆಲವರು ಕದ್ದು ಮುಚ್ಚಿ ಮತ್ತು ಅಕ್ರಮ ಮಾತ್ರೆಗಳ ಸಹಾಯದಿಂದ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ ಅಂತ ಹೇಳಬಹುದು. ಇದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ ಆಗಿದೆ ಅಂತ ಹೇಳಬಹುದು ನೋಡಿ.
ಮಾಜಿ ಪತ್ನಿಗೆ ಗರ್ಭಪಾತ ಮಾಡಿಸಿಕೊಳ್ಳಲು ಸಹಾಯ ಮಾಡಿದವರ ವಿರುದ್ಧ ಕೇಸ್ ಹಾಕಿದ ಪತಿ
ತನ್ನ ಮಾಜಿ ಪತ್ನಿ ತನ್ನ ಗರ್ಭಧಾರಣೆಯನ್ನು ಕೊನೆಗೊಳಿಸಲು ಗರ್ಭಪಾತದ ಮಾತ್ರೆಗಳನ್ನು ಬಳಸಿದ್ದಾಳೆ ಎಂದು ಹೇಳಿರುವ ಟೆಕ್ಸಾಸ್ ವ್ಯಕ್ತಿಯೊಬ್ಬ, ಈ ಕೃತ್ಯದಲ್ಲಿ ಆಕೆಗೆ ಸಹಾಯ ಮಾಡಿದ ಮೂವರು ಮಹಿಳೆಯರ ವಿರುದ್ದ ಪ್ರಕರಣವನ್ನು ದಾಖಲಿಸಿದ್ದಾರೆ ನೋಡಿ.
ಕಳೆದ ವರ್ಷವಷ್ಟೆ ಟೆಕ್ಸಾಸ್ ಬಹುತೇಕ ಎಲ್ಲಾ ಗರ್ಭಪಾತಗಳನ್ನು ನಿಷೇಧಿಸಿತ್ತು, ಅದರ ನಂತರ ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು ಅನೇಕರಿಗೆ ಅಚ್ಚರಿ ಉಂಟು ಮಾಡಿದೆ ಅಂತ ಹೇಳಬಹುದು.
ಬ್ರಿಟ್ನಿ ಸಿಲ್ವಾ ಎಂಬ ಮಹಿಳೆಯ ಮಾಜಿ ಪತಿ ಮಾರ್ಕಸ್ ಸಿಲ್ವಾ, ಮೂವರು ಮಹಿಳೆಯರು "ಕಾನೂನುಬಾಹಿರವಾಗಿ ಪಡೆದ ಮಾತ್ರೆಗಳ" ಮೂಲಕ ಗರ್ಭಪಾತಕ್ಕೆ ಸಹಾಯ ಮಾಡಿದ್ದಾರೆ ಮತ್ತು ಅದನ್ನು ತನ್ನಿಂದ ರಹಸ್ಯವಾಗಿಡಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಗೆ ಮಾಡುವ ಮೂಲಕ, "ಗರ್ಭಿಣಿ ಮಹಿಳೆಗೆ ಸ್ವಯಂ-ನಿರ್ವಹಣೆಯ ಗರ್ಭಪಾತವನ್ನು ಪಡೆಯಲು ಸಹಾಯ ಮಾಡುವ ವ್ಯಕ್ತಿಯು ಕೊಲೆಯ ಅಪರಾಧವನ್ನು ಮಾಡಿದ್ದಾನೆ. ಅಷ್ಟೇ ಅಲ್ಲದೆ ರಾಷ್ಟ್ರದ ಕಾನೂನನ್ನು ಉಲ್ಲಂಘಿಸಿದ್ದಾರೆ” ಎಂದು ಮಾರ್ಕಸ್ ಹೇಳಿದ್ದಾರೆ.
ಮೊಕದ್ದಮೆಯಲ್ಲಿ ಬ್ರಿಟ್ನಿ ಸಿಲ್ವಾ ಅವರನ್ನು ಪ್ರತಿವಾದಿಯಾಗಿ ಹೆಸರಿಸಲಾಗಿಲ್ಲ
ಮಾರ್ಕಸ್ ಸಿಲ್ವಾ ಅವರು ಟೆಕ್ಸಾಸ್ ಹಾರ್ಟ್ ಬೀಟ್ ಕಾಯ್ದೆಯನ್ನು ಮಾಡಿದ ಜೊನಾಥನ್ ಎಫ್ ಅವರು ಹೇಳಿದ ಕಾನೂನನ್ನು ಆಧರಿಸಿ ಈ ಪ್ರಕರಣವನ್ನು ದಾಖಲಿಸಿದ್ದಾರೆ.
ಇಲ್ಲಿ ಭ್ರೂಣದ ಹೃದಯ ಚಟುವಟಿಕೆಯನ್ನು ಪತ್ತೆ ಹಚ್ಚಿದ ನಂತರ ಗರ್ಭಪಾತಕ್ಕೆ ಅನುವು ಮಾಡಿಕೊಡುವವರ ವಿರುದ್ಧ ಮೊಕದ್ದಮೆ ಹೂಡಲು ಖಾಸಗಿ ನಾಗರಿಕರಿಗೆ ಅಧಿಕಾರ ನೀಡುವ ಪ್ರತ್ಯೇಕ ಕಾನೂನು ಇದಾಗಿದೆ.
ರಾಜ್ಯ ನ್ಯಾಯಾಲಯದಲ್ಲಿ ಗುರುವಾರ ದಾಖಲಾದ ಮೊಕದ್ದಮೆಯಲ್ಲಿ ಬ್ರಿಟ್ನಿ ಸಿಲ್ವಾ ಅವರನ್ನು ಪ್ರತಿವಾದಿಯಾಗಿ ಹೆಸರಿಸಲಾಗಿಲ್ಲ. ಅದು ನಿರೀಕ್ಷಿತ ತಾಯಿಯ ವಿರುದ್ಧ ಕಾನೂನು ಕ್ರಮವನ್ನು ನಿಷೇಧಿಸುವ ರಾಜ್ಯ ಕಾನೂನಿಗೆ ಅನುಗುಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ