Bihar- ಹೆಣ್ಮಗು ಆಯಿತೆಂದು ಪತ್ನಿ, ಮಗುವನ್ನು ಮನೆಗೆ ಸೇರಿಸದ ಗಂಡ

Girl Child- ಹೆಣ್ಮಗು ಬಗ್ಗೆ ಸಮಾಜದ ಕೆಲವೆಡೆ ಈಗಲೂ ತಿರಸ್ಕಾರದ ಭಾವನೆ ಇದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಬಿಹಾರದಲ್ಲಿ ಸಿಕ್ಕಿದೆ. ಪತ್ನಿಗೆ ಹೆಣ್ಮಗು ಆಯಿತೆಂಬ ಕಾರಣಕ್ಕೆ ಗಂಡ ಆಸ್ಪತ್ರೆಗೆ ಬಂದು ನೋಡದೇ ಹೋಗಿರುವ ನಾಚಿಕೆಗೇಡಿನ ಸಂಗತಿ ವರದಿಯಾಗಿದೆ.

ನವಜಾತ ಶಿಶುವಿನ ತಾಯಿ ರೀತಾದೇವಿ

ನವಜಾತ ಶಿಶುವಿನ ತಾಯಿ ರೀತಾದೇವಿ

 • News18
 • Last Updated :
 • Share this:
  ಪಾಟ್ನಾ: ಬಿಹಾರ (Bihar)ದ ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಬಗ್ಹಾದಿಂದ ಸಮಾಜವೇ ತಲೆ ತಗ್ಗಿಸುವಂತಹ ಪ್ರಕರಣ ವರದಿಯಾಗಿದೆ. ದೇಶದಲ್ಲಿ ಬೇಟಿ ಪಡಾವೋ, ಬೇಟಿ ಬಚಾವೋ (Beti Padhao, Beti Bachao) ಘೋಷಣೆಗಳುಳ್ಳ ಜಾಹೀರಾತುಗಳನ್ನು ನೋಡುತ್ತಿದ್ದೇವೆ. ಆದ್ರೆ ಕೆಲ ಜನರ ಯೋಚನೆಗಳು ಮಾತ್ರ ಇನ್ನೂ ಬದಲಾಗದಿರೋದು ದೊಡ್ಡ ದುರಂತ. ಬಗ್ಹಾ (Bagaha) ಜಿಲ್ಲೆಯ ಶಾಸ್ತ್ರಿ ನಗರದ ಪೊಖ್ರಾ ಟೋಲಾದ ನಿವಾಸಿ ರೀತಾ ದೇವಿ ಮಂಗಳವಾರ ಹೆಣ್ಣು ಮಗುವಿಗೆ ಜನ್ಮ (Girl Child Birth) ನೀಡಿದ್ದರು. ಈ ಶುಭ ಸುದ್ದಿ ಸಿಗುತ್ತಿದ್ದಂತೆ ರೀತಾದೇವಿ ಪತಿ ಪ್ರದೀಪ್ ಸಾಹನಿ ಮೈ ಮೇಲೆ ಕಂಬಳಿ ಬಿಟ್ಟಂತೆ ಕೋಪದಿಂದ ಆಕಾಶ- ಭೂಮಿ ಮಾಡುವಂತೆ ಕೂಗಾಡಿದ್ದಾನೆ. ಮಗು ಮತ್ತು ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಲು ಹಿಂದೇಟು ಹಾಕಿದ್ದಾನೆ. ಗ್ರಾಮಸ್ಥರು ಮತ್ತು ಕುಟುಂಬಸ್ಥರು ತಿಳಿ ಹೇಳಲು ಮುಂದಾಗಿದ್ದಕ್ಕೆ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನು.

  ಆಸ್ಪತ್ರೆಯಲ್ಲಿ ದೊಡ್ಡ ಹೈಡ್ರಾಮಾ?

  ರೀತಾದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಬಂದು ಕರೆದುಕೊಂಡು ಹೋಗುವಂತೆ ಪ್ರದೀಪ್ ಸಾಹನಿಗೆ ಗ್ರಾಮದ ಆಶಾ ಕಾರ್ಯಕರ್ತೆ ಪುಷ್ಮಾ ಕರೆ ಮಾಡಿದ್ದಾರೆ. ಮಗು (New Born Girl) ಮತ್ತು ತಾಯಿ ಮನೆಗೆ ಬರುವಂತಿಲ್ಲ. ಒಂದು ವೇಳೆ ನನ್ನ ಮಾತು ದಿಕ್ಕರಿಸಿ ಬಂದ್ರೆ ಇಬ್ಬರನ್ನು ಕೊಲೆ ಮಾಡುತ್ತೇನೆ.  ಆಸ್ಪತ್ರೆ(Hospital)ಯಲ್ಲಿ ಮಹಿಳೆಯ ಅತ್ತೆಗೆ (Mother in Law) ಆರೋಗ್ಯ ಸಿಬ್ಬಂದಿ ಮತ್ತು ಸ್ಥಳೀಯರು ಸೊಸೆ ಹಾಗೂ ಮೊಮ್ಮಗಳನ್ನು ಕರೆದೊಯ್ಯುವಂತೆ ತಿಳಿ ಹೇಳಿದ್ದಾರೆ. ಆದರೂ ರತಿದೇವಿ ಇಬ್ಬರನ್ನ ಕರೆದೊಯ್ಯಲು ಹಿಂದೇಟು ಹಾಕಿದ್ದಾಳೆ. ಆಸ್ಪತ್ರೆಯ ಅಕ್ಕ ಪಕ್ಕದ ವಾರ್ಡುಗಳಲ್ಲಿಯೇ ರತಿದೇವಿ ಕುಟುಂಬದ ವಿಷಯದ ಬಗ್ಗೆ ಚರ್ಚೆಗಳು ನಡೆದಿದ್ದವು.

  ಅತ್ತೆಯ ಮನವೊಲಿಸಿದ ಆಸ್ಪತ್ರೆ ಸಿಬ್ಬಂದಿ:

  ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆರೋಗ್ಯ ಪ್ರಭಾರಿ ಉಪಾಧೀಕ್ಷಕ ರಾಜೇಶ್ ಸಿಂಗ್, ಮಂಗಳವಾರ ಸಂಜೆ ರತಿದೇವಿ ಎಂಬವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೇ ಕಾರಣಕ್ಕೆ ಮಹಿಳೆ ಮೇಲೆ ಕುಟುಂಬಸ್ಥರು ಕೋಪಗೊಂಡಿದ್ದರು. ಹೆಣ್ಣು ಶಿಶು ಎಂಬ ನೆಪಗಳನ್ನು ಹೇಳಿ ಇಬ್ಬರನ್ನು ಕರೆದೊಯ್ಯಲು ಒಪ್ಪಿರಲಿಲ್ಲ. ಗಂಟೆಗಳ ಹೈಡ್ರಾಮಾ ಬಳಿಕ ಮಹಿಳೆಯ ಅತ್ತೆ ಇಬ್ಬರನ್ನ ಕರೆದೊಯ್ಯಲು ಒಪ್ಪಿದಳು. ಆದ್ರೆ ರತಿದೇವಿ ಹೆದರುತ್ತಲೇ ಗಂಡನ ಮನೆಗೆ ತೆರಳಿದರು ಎಂದು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: Lalitpur Rape Case- ಅಪ್ಪ ನಶೆಭರಿತ ಪಾನಿಪುರಿ ತಿನಿಸಿ ಹೋಟೆಲ್​ನಲ್ಲಿ ರೇಪ್ ಮಾಡಿದ್ರು: 17 ವರ್ಷದ ಬಾಲಕಿ ಹೇಳಿಕೆ

  ಐದು ವರ್ಷದ ಹಿಂದೆ ಮದುವೆ:

  ರತಿದೇವಿ ಮದುವೆ ಐದು ವರ್ಷಗಳ ಹಿಂದೆ ಪ್ರದೀಪ್ ಜೊತೆ ನಡೆದಿತ್ತು. ಐದು ವರ್ಷದಲ್ಲಿ ರತಿದೇವಿ ಮೂರು ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮೂರರಲ್ಲಿ ಒಂದು ಮಗು ಸಾವನ್ನಪ್ಪಿದೆ. ನಾಲ್ಕನೇ ಬಾರಿ ಗರ್ಭ ಧರಿಸಿದ್ದ ರತಿದೇವಿ ಮತ್ತೆ ಹೆಣ್ಣು ಮಗುವಿನ ತಾಯಿ ಆಗಿದ್ದರು. ಮಂಗಳವಾರ ಮಗುವಿಗೆ ಜನ್ಮ ನೀಡುತ್ತಲೇ ಗಂಡನ ದಾರಿಯನ್ನು ನೋಡುತ್ತಿದ್ದರು. ಮಕ್ಕಳ ಲಾಲನೆ-ಪಾಲನೆಯನ್ನು ನಾನು ನೋಡಿಕೊಳ್ಳುತ್ತೇನೆ. ಇಷ್ಟಾದರೂ ಕುಟುಂಬಸ್ಥರು ನನ್ನನ್ನು ಕರೆದೊಯ್ಯಲು ಒಪ್ಪುತ್ತಿಲ್ಲ, ಕೊಲೆ ಮಾಡುವ ಬೆದರಿಕೆ ಸಹ ಹಾಕುತ್ತಿದ್ದಾರೆ ಎಂದು ರೀತಾದೇವಿ ತಮ್ಮ ಅಳಲು ತೋಡಿಕೊಂಡರು.

  ರೀಟಾದೇವಿ ಅಸಹಾಯಕತೆ:

  ನನ್ನ ತವರು ಜಮುನಾಪುರದ ಬಿರೌಲಿ ಗ್ರಾಮ. ಐದು ವರ್ಷದ ಹಿಂದೆ ಬಾಗ್ಹಾ ಗ್ರಾಮದ ಜೊತೆ ಪ್ರದೀಪ್ ಸಾಹನಿಯೊಂದಿಗೆ ನಡೆಯಿತು. ಇದೀಹ ಪತಿ ಮಗುವಿನ ಮನೆಗೆ ಬರದಂತೆ ಹೇಳುತ್ತಿದ್ದಾನೆ. ತವರಿಗೆ ಹೋಗಿ ಜೀವನ ಕಟ್ಟಿಕೊಳ್ಳೋಣ ಅಂದ್ರೆ ಈ ಐದು ವರ್ಷದಲ್ಲಿ ಅಪ್ಪ-ಅಮ್ಮ ಸಹ ನನ್ನನ್ನು ಬಿಟ್ಟು ಇಹಲೋಕ ತ್ಯಜಿಸಿದರು. ಮಕ್ಕಳನ್ನು ಸಾಕುವ ಶಕ್ತಿ ನನ್ನಲ್ಲಿದೆ. ಆದ್ರೆ ಪತಿಯ ಆಸರೆಯೂ ಬೇಕಾಗುತ್ತದೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: