ಉತ್ತರ ಪ್ರದೇಶ: ಸರಸ ಮತ್ತು ವಿರಸ ಎರಡು ಸಮರಸದಂತಿದ್ದರೆ ಮಾತ್ರ ಅದು ಸಂಸಾರ. ಇಲ್ಲಾಂದ್ರೆ ಜೈಲು (Jail) ಎನ್ನುವುದು ಹಿರಿಯರ ಅನುಭವದ ಮಾತು. ಗಂಡ (Husband) ಹೆಂಡತಿ (Wife) ಜಗಳ (Clash) ಉಂಡು ಮಲಗುವತನಕ ಅಂತಾರೆ. ಆದ್ರೆ ಇಲ್ಲಿ ಗಂಡ ಹೆಂಡತಿ ಉಂಡು, ಮಲಗಿ ಎದ್ದ ಮೇಲೂ ಜಗಳ ಮುಂದುವರೆಸುತ್ತಿದ್ರು. ಚಿಕ್ಕ ಚಿಕ್ಕ ವಿಚಾರಕ್ಕೂ ಈ ಗಂಡ ತನ್ನ ಹೆಂಡತಿ ಮೇಲೆ ತಿರುಗಿ ಬೀಳ್ತಿದ್ದ. ಮೊದಲೇ ವರದಕ್ಷಿಣೆಗಾಗಿ (dowry) ಪೀಡಿಸ್ತಿದ್ದ ಪತಿ, ತನ್ನ ಹೆಂಡತಿ ಮಾಡುತ್ತಿದ್ದ ಪ್ರತಿ ಕೆಲಸದಲ್ಲೂ ತಪ್ಪು ಹುಡುಕ್ತಿದ್ದ. ಇದೀಗ ವಿಪರೀತಕ್ಕೆ ಹೋಗಿದೆ. ತನಗೆ ಬಡಿಸಿದ ಊಟದಲ್ಲಿ (meals) ಕೂದಲು (Hair) ಸಿಕ್ಕಿತು ಅಂತ ಆ ಗಂಡ, ಹೆಂಡತಿಗೆ ಮನಸ್ಸೋ ಇಚ್ಛೆ ಥಳಿಸಿದ್ದಾನೆ. ಅಷ್ಟೇ ಅಲ್ಲದೇ, ಆಕೆಯ ಕೂದಲನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದಾನೆ.
ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಹೆಂಡತಿಗೆ ಥಳಿಸಿದ ಗಂಡ
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಗ್ರಾಮವೊಂದರಲ್ಲಿ ಪತಿಯೊಬ್ಬ ತನ್ನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಊಟದಲ್ಲಿ ಆಕೆಯ ಕೂದಲು ಸಿಕ್ಕಿತು ಎಂಬ ಒಂದೇ ಒಂದು ಕಾರಣಕ್ಕೆ ಹೆಂಡತಿಯನ್ನು ಮನಸ್ಸೋ ಇಚ್ಛೆ ಥಳಿಸಿದ್ದಾನೆ. ಸಂತ್ರಸ್ತೆಯೊಬ್ಬಳು ಆರೋಪಿಸಿದ್ದು, ಆಕೆ ಪತಿ 30 ವರ್ಷ ವಯಸ್ಸಿನ ಜಹೀರುದ್ದೀನ್ ಮೇಲೆ ಆರೋಪ ಕೇಳಿ ಬಂದಿದೆ.
ಕುಟುಂಬಸ್ಥರ ಜೊತೆ ಸೇರಿ ಪತ್ನಿಗೆ ಥಳಿತ
ಜಹೀರುದ್ದೀನ್ ಪ್ರತಿದಿನದಂತೆ ಮನೆಯಲ್ಲಿ ಊಟ ಮಾಡುತ್ತಿದ್ದು, ಊಟದಲ್ಲಿ ಕೂದಲು ಕಂಡು ಏಕಾಏಕಿ ಕೋಪಗೊಂಡಿದ್ದಾನೆ. ಕೂದಲು ಸಿಕ್ಕಿದ್ದಕ್ಕೆ ಹೆಂಡತಿಯನ್ನು ಮನಬಂದಂತೆ ಬೈದಿದ್ದಾನೆ. ಅಷ್ಟೇ ಅಲ್ಲದೇ ಈತ ತನ್ನ ಸಹೋದರ ಜಮೀರುದ್ದೀನ್ ಮತ್ತು ತಾಯಿ ಜುಲೇಖಾ ಎಂಬುವರ ಜೊತೆ ಸೇರಿ ಆಕೆಯನ್ನು ಥಳಿಸಿದ್ದಾನೆ.
ಇದನ್ನೂ ಓದಿ: Instagram Reels: 24 ಗಂಟೆ ರೀಲ್ಸ್ನಲ್ಲೇ ಕಾಲ ಕಳಿತಾಳೆ ಅಂತ ಹೆಂಡ್ತಿಗೆ ಹೊಡೆದ ಗಂಡ! ರೀಲ್ ಅಲ್ಲ ರಿಯಲ್ ಆಗೇ ನಡೀತು ಮರ್ಡರ್!
ಪತ್ನಿಯ ಕೂದಲನ್ನೇ ಕತ್ತರಿಸಿದ ಪಾಪಿ ಪತಿ
ಅಷ್ಟೇ ಅಲ್ಲದೇ ಪತ್ನಿಯ ಕೈಕಾಲನ್ನು ಕಟ್ಟಿ, ಕೂದಲನ್ನು ಕತ್ತರಿಸಿ, ಪತಿ ಜಹೀರುದ್ದೀನ್ ದೌರ್ಜನ್ಯ ಎಸಗಿದ್ದಾನೆ. ಈ ಘಟನೆಯ ನಂತರ, ಪತ್ನಿ ತನ್ನ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದಾರಳೆ. ಆಗ ಆಕೆಗೆ ಬೆದರಿಕೆ ಹಾಕಿದ ಪತಿ, ನಿಮ್ಮ ಮನೆಯವರಿಗೆ ವಿಚಾರ ತಿಳಿಸಿದರೆ ಹೊಡೆದು ಕೊಲ್ಲುವುದಾಗಿ ಎಚ್ಚರಿಸಿದ್ದಾನೆ.
ವರದಕ್ಷಿಣೆಗಾಗಿ ನಿತ್ಯ ಕಿರುಕುಳ
ಸಂತ್ರಸ್ತ ಮಹಿಳೆ ಏಳು ವರ್ಷಗಳ ಹಿಂದೆ ಆರೋಪಿ ಜಹೀರುದ್ದೀನ್ನನ್ನು ಮದಗುವೆಯಾಗಿದ್ದಳು. ಆಗಿನಿಂದಲೂ ಆಕೆಗೆ ವರದಕ್ಷಿಣೆ ತರುವಂತೆ ಪತಿ ಹಾಗೂ ಆತನ ಕುಟುಂಬಸ್ಥರು ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಇತ್ತೀಚಿಗೆ ಇದು ವಿಪರೀತಕ್ಕೂ ಹೋಗಿತ್ತೂ ಅಂತ ಸಂತ್ರಸ್ತೆ ಆರೋಪಿಸಿದ್ದಾಳೆ.
ಪೊಲೀಸರಿಂದ ಪತಿ, ಅತ್ತೆ, ಮೈದುನನ ಬಂಧನ
ಇನ್ನು ಸಂತ್ರಸ್ತೆ ಅದು ಹೇಗೋ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಚಾರವನ್ನು ತನ್ನ ತವರು ಮನೆಯವರಿಗೆ ತಿಳಿಸಿದ್ದಾಳೆ. ಬಳಿಕ ಆಕೆಯ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ಸಂತ್ರಸ್ತೆಯ ಪತಿ, ಸಹೋದರ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Crime News: ಗಂಡನ ಕೊಲೆ ಮಾಡಿಸಿದ್ದ ಹೆಂಡತಿಗಿದ್ದರು ಬಾಯ್ ಫ್ರೆಂಡ್ಸ್! ಪತಿ ಮರ್ಮಾಂಗ ಕತ್ತರಿಸಿದವಳ ಹಿಸ್ಟರಿಯೇ ಭಯಾನಕ!
ಕಳ್ಳತನ ಮಾಡುತ್ತಿದ್ದ ದಂಪತಿ ಬಂಧನ
ಬೆಂಗಳೂರು ನಗರದ ಹಲವೆಡೆ ಕಳ್ಳತನ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ಕಳೆದ ಡಿಸೆಂಬರ್ 5ರಂದು ಬಂಧಿಸಲಾಗಿದೆ. ನಾಗರಾಜು ಹಾಗೂ ರಮ್ಯಾ ಎಂಬುವರೇ ಬಂದಿತ ಆರೋಪಿಗಳು. ಇಬ್ಬರನ್ನೂ ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ 3ನೇ ಹಂತದ ನಿವಾಸಿಗಳಾದ ನಾಗರಾಜು ಹಾಗೂ ರಮ್ಯಾ, ಕಳ್ಳತನದಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಂಧಿತರಿಂದ 5.25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ, ಎರಡು ದ್ವಿಚಕ್ರ ವಾಹನ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ