• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Temple Built for Wife: ಪತ್ನಿ ಆಸೆ ಈಡೇರಿಸುವುದಕ್ಕೆ ₹ 7 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ; ಹೈದರಾಬಾದ್​ನಲ್ಲೊಬ್ಬ ಆಧುನಿಕ ಷಹಜಹಾನ್!

Temple Built for Wife: ಪತ್ನಿ ಆಸೆ ಈಡೇರಿಸುವುದಕ್ಕೆ ₹ 7 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ; ಹೈದರಾಬಾದ್​ನಲ್ಲೊಬ್ಬ ಆಧುನಿಕ ಷಹಜಹಾನ್!

ಪತ್ನಿಗಾಗಿ ದೇವಾಲಯ ನಿರ್ಮಾಣ

ಪತ್ನಿಗಾಗಿ ದೇವಾಲಯ ನಿರ್ಮಾಣ

62 ವರ್ಷದ ಕೈಗಾರಿಕೋದ್ಯಮಿ ಖೇತ್ರಬಶಿ ಲೆಂಕಾ ಪತ್ನಿಗಾಗಿ ದೇವಾಲಯ ನಿರ್ಮಿಸಿದ್ದಾರೆ. ಇವರು ತಮ್ಮ ಪತ್ನಿ ಬೈಜಯಂತಿ ಲೆಂಕಾ (56) ಅವರೊಂದಿಗೆ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಬೈಜಯಂತಿ ಬಾಲ್ಯದಿಂದಲೂ ಮಾ ಸಂತೋಷಿ ದೇವಿಯ ಭಕ್ತರಾಗಿದ್ದಾರೆ. ಹಾಗಾಗಿ ತಮ್ಮ ಪತಿಗೆ ತವರೂರಾದ ಚಿಕ್ನಾ ಹಳ್ಳಿಯಲ್ಲಿ ದೇವಿಯ ದೇವಾಲಯ ಕಟ್ಟಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಖೇತ್ರಬಶಿ ಇದೀಗ ಬರೋಬ್ಬರಿ 7 ಕೋಟಿ ವೆಚ್ಚದಲ್ಲಿ ದೇವಾಲಯ ಕಟ್ಟಿಸಿ ಪತ್ನಿಯ ಆಸೆಯನ್ನು ತೀರಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Odisha (Orissa), India
 • Share this:

ಒಡಿಶಾ: ಈ ಹಿಂದೆ ಪತ್ನಿಯ (Wife) ಆಸೆಯನ್ನು ಈಡೇರಿಸಲು ಮೊಘಲ್ ದೊರೆ ಷಹಜಹಾನ್ (Shah Jahan) ಆಗ್ರಾದಲ್ಲಿ​ ತಾಜ್​ ಮಹಲ್ (Taj Mahal) ಕಟ್ಟಿಸಿದ್ದನ್ನು ನಾವು ಕೇಳಿದ್ದೇವೆ, ಪುಸ್ತಕದಲ್ಲಿ ಓದಿದ್ದೇವೆ. ಆದರೆ ಇದು ಹಳೆಯ ಇತಿಹಾಸ. ಇಲ್ಲೊಬ್ಬ ಆಸಾಮಿ ತನ್ನ ಪತ್ನಿಯ ಆಸೆಯನ್ನು ಈಡೇರಿಸುವುದಕ್ಕೆ ಬರೋಬ್ಬರಿ 7 ಕೋಟಿ ರೂ ವೆಚ್ಚದಲ್ಲಿ ಆಕೆಯ ಹುಟ್ಟೂರಿನಲ್ಲಿ ದೇವಾಲಯ (Temple) ಕಟ್ಟಿಸಿದ್ದಾರೆ. ಈ ಮೂಲಕ ಪತ್ನಿಯ ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ. ಹೈದರಾಬಾದ್​ (Hyderabad) ನಿವಾಸಿಯಾಗಿರುವ ಬ್ಯುಲ್ಡರ್​ ಒಬ್ಬರು ಒಡಿಶಾದ (Odisha) ಬಿಂಜರ್​ಪುರ್​ (Bhingarpur) ಜಿಲ್ಲೆಯ ಚಿಕಾನಾ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮಾ ಸಂತೋಷಿ (Ma Santoshi) ದೇವಿಯ ದೇವಾಲಯ ಕಟ್ಟಿಸಿದ್ದಾರೆ.


62 ವರ್ಷದ ಕೈಗಾರಿಕೋದ್ಯಮಿ ಖೇತ್ರಬಶಿ ಲೆಂಕಾ ಎಂಬುವವರೇ ಪತ್ನಿಗಾಗಿ ದೇವಾಲಯ ನಿರ್ಮಿಸಿರುವ ವ್ಯಕ್ತಿ. ಇವರು ತಮ್ಮ ಪತ್ನಿ ಬೈಜಯಂತಿ ಲೆಂಕಾ (56) ಅವರೊಂದಿಗೆ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಬೈಜಯಂತಿ ಬಾಲ್ಯದಿಂದಲೂ ಮಾ ಸಂತೋಷಿ ದೇವಿಯ ಭಕ್ತರಾಗಿದ್ದಾರೆ. ಹಾಗಾಗಿ ತಮ್ಮ ಪತಿಗೆ ತವರೂರಾದ ಚಿಕ್ನಾ ಹಳ್ಳಿಯಲ್ಲಿ ದೇವಿಯ ದೇವಾಲಯ ಕಟ್ಟಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಖೇತ್ರಬಶಿ ಇದೀಗ ಬರೋಬ್ಬರಿ 7 ಕೋಟಿ ವೆಚ್ಚದಲ್ಲಿ ದೇವಾಲಯ ಕಟ್ಟಿಸಿ ಪತ್ನಿಯ ಆಸೆಯನ್ನು ತೀರಿಸಿದ್ದಾರೆ.


2008ರಲ್ಲೇ ನಿರ್ಮಾಣ ಕಾರ್ಯ ಆರಂಭ


ಪತ್ನಿ ಆಸೆ ಈಡೇರಿಸಲು ಲೆಂಕಾ ಚಿಕಾನಾ ಗ್ರಾಮದಲ್ಲಿ 2008ರಲ್ಲಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಇತ್ತೇಚೆಗೆ ಆ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಾತೆ ಸಂತೋಷಿ ದೇವಾಲಯವನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿಯೇ ನಿರ್ಮಿಸಲಾಗಿದೆ. ಚೆನ್ನೈನಿಂದ ಬಂದಿದ್ದ ಶಿಲ್ಪಿಗಳು ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ. ಈ ದೇವಾಲಯದಲ್ಲಿ ದೇವಿ ಸಂತೋಷಿ ಜೊತೆಗೆ ಶಿವ, ಗಣೇಶ, ಹನುಮಂತ ಮತ್ತು ನವಗ್ರಹಗಳನ್ನು ಸ್ಥಾಪಿಸಲಾಗಿದ್ದು, ವಿಶೇಷ ಪೂಜೆ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: Love Story: 75 ವರ್ಷದ ವರ, 70 ವರ್ಷದ ವಧು; ಲವ್​ ಮ್ಯಾರೇಜ್​ ಅಂದ್ರೆ ನೀವು ನಂಬಲೇಬೇಕು!


ತವರೂರಲ್ಲಿ ದೇವಿ ಪೂಜಿಸುವ ಕನಸು


" ನನ್ನ ಪತ್ನಿ ಬಾಲ್ಯದಿಂದಲೂ ಮಾ ಸಂತೋಷಿಯ ಭಕ್ತೆಯಾಗಿದ್ದಾಳೆ. ಅವಳಿಗೆ ತನ್ನ ಹಳ್ಳಿಯ ದೇವಸ್ಥಾನದಲ್ಲಿ ದೇವಿಯನ್ನು ಪೂಜಿಸುವ ಕನಸಿತ್ತು. ಹಾಗಾಗಿ ನಾನು ನನ್ನ ಅತ್ತೆಯ ಗ್ರಾಮದಲ್ಲಿ 1.5 ಎಕರೆಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದೇನೆ. 2008 ರಲ್ಲಿ ಪ್ರಾರಂಭವಾದ ನಿರ್ಮಾಣವು ಇತ್ತೀಚೆಗೆ ಪೂರ್ಣಗೊಂಡಿದೆ " ಎಂದು ಖೇತ್ರಬಸಿ ಹೇಳಿದ್ದಾರೆ.
ದೇವಾಲಯ ನಿರ್ಮಿಸಲು ಮಕ್ಕಳಿಂದ ಪ್ರೋತ್ಸಾಹ


ಬೈಜಯಂತಿಯವರ ಆಶಯದಂತೆ ಈ ದೇವಾಲಯವನ್ನು ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. " ಬೈಜಯಂತಿ ಸ್ವತಃ ಗ್ರಾಮದಲ್ಲಿ ಉಳಿದುಕೊಳ್ಳುವ ಮೂಲಕ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದಳು. ಸಂತೋಷಿ ದೇವಿಯಲ್ಲದೆ, ಶಿವ, ಗಣೇಶ, ಹನುಮಾನ್ ಮತ್ತು ನವಗ್ರಹಗಳನ್ನು ಸಹ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ನನ್ನ ಮಗ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಮಗಳು ವೈದ್ಯೆ. ನಮ್ಮ ಇಬ್ಬರೂ ಮಕ್ಕಳು ತಮ್ಮ ತಾಯಿಯ ಆಸೆಯಂತೆ ದೇವಸ್ಥಾನವನ್ನು ನಿರ್ಮಿಸಲು ಹಣವನ್ನು ಖರ್ಚು ಮಾಡಲು ನನ್ನನ್ನು ಪ್ರೋತ್ಸಾಹಿಸಿದರು" ಎಂದು ಖೇತ್ರಬಸಿ ತಿಳಿಸಿದ್ದಾರೆ.


ಕನಸು ಈಡೇರಿಸಿದ್ದಕ್ಕೆ ಪತ್ನಿ ಕೃತಜ್ಞತೆ


ಚಿಕಾನಾ ಗ್ರಾಮದಲ್ಲಿ ಸಂತೋಷಿ ದೇವಿಯ ದೇವಾಲಯವನ್ನು ನಿರ್ಮಿಸಿದ್ದರಿಂದ ಖೇತ್ರಬಸಿ ಪತ್ನಿ ಸಂತೋಷ ವ್ಯಕ್ತಪಡಿಸಿದ್ದಾರೆ. " ನನ್ನ ಆಸೆಯಂತೆ ನನ್ನ ಊರಿನಲ್ಲಿ ದೇವಾಲಯ ನಿರ್ಮಿಸಿದ ನನ್ನ ಪತಿಗೆ ಕೃತಜ್ಞಳಾಗಿದ್ದೇನೆ. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿಯ ಮೂರ್ತಿಯನ್ನು ಗ್ರಾಮ ಮಾತ್ರವಲ್ಲದೆ ದೇಶದಾದ್ಯಂತ ಜನರು ಪೂಜಿಸಿ ಸಂತೋಷಿ ಮಾತೆಯ ಆಶೀರ್ವಾದವನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ " ಎಂದು ಬೈಜಯಂತಿ ತಿಳಿಸಿದ್ದಾರೆ.


ನಗರ-ಪಟ್ಟಣಗಳಲ್ಲಿ ಅನೇಕ ದೇವಾಲಯಗಳಿರುವುದರಿಂದ ಹಳ್ಳಿಯಲ್ಲಿ ದೇವಾಲಯವನ್ನು ನಿರ್ಮಿಸುವ ಆಸೆ ನನಗಿತ್ತು. ನನ್ನ ಕನಸನ್ನು ನನಸು ಮಾಡಿದ ನನ್ನ ಪತಿಗೆ ನಾನು ಆಭಾರಿಯಾಗಿದ್ದೇನೆ. ನಾವು ಒಂದು ಸಣ್ಣ ದೇವಾಲಯವನ್ನು ನಿರ್ಮಿಸಲು ಬಯಸಿದ್ದೆವು. ಆದರೆ, ದೇವಿಯ ಆಶೀರ್ವಾದದಿಂದ ನಮ್ಮ ಗ್ರಾಮದಲ್ಲಿ ಇಂತಹ ಸುಂದರ ದೇವಾಲಯ ನಿರ್ಮಾಣವಾಗಿದೆ. ಕೊನೆಗೂ ನನ್ನ ಕನಸು ನನಸಾಗಿದೆ ಎಂದು ಬೈಜಯಂತಿ ಹರ್ಷ ವ್ಯಕ್ತಪಡಿಸಿದ್ದಾರೆ.

Published by:Rajesha M B
First published: