Drunken Husband: ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಸೆಕ್ಸ್​​ಗೆ ಪೀಡಿಸಿ ಅಪಾಯ ತಂದುಕೊಂಡ ಗಂಡ!

ಪತಿ ಚೌಧರಿ ಅಮಲೇರಿದ ಸ್ಥಿತಿಯಲ್ಲಿ ಸೋಮವಾರ ತನ್ನ ಪತ್ನಿ ಸುಮನ್ ದೇವಿ ಜೊತೆ ಲೈಂಗಿಕ ಸಂಪರ್ಕ ಹೊಂದಲು ಪ್ರಯತ್ನಿಸಿದ್ದ. ಕುಡಿತದ ಅಮಲಿನಲ್ಲಿದ್ದ ಕಾರಣ ಪತ್ನಿ ಇದಕ್ಕೆ ನಿರಾಕರಿಸಿದ್ದಾಳೆ. ಇದೇ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗಂಡ-ಹೆಂಡತಿ (Husband & Wife) ಸಂಬಂಧ ಎಷ್ಟೇ ವೈಯಕ್ತಿಕವಾದರೂ ಲೈಂಗಿಕತೆ ವಿಚಾರವಾಗಿ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಗಂಡ ನಡೆದುಕೊಳ್ಳುವಂತಿಲ್ಲ ಎನ್ನುತ್ತೆ ಕಾನೂನು. ಅದರಲ್ಲೂ ಕುಡಿದು ಬಂದು ಹೆಂಡತಿಯನ್ನು ಪೀಡಿಸುವುದು (Seeking Sexual Favours) ನಿಜಕ್ಕೂ ದೌರ್ಜನ್ಯ. ಇದೇ ರೀತಿ ಕುಡಿದ ಮತ್ತಿನಲ್ಲಿ (Drunken State) ಹೆಂಡತಿ ಮೇಲೆ ಅಧಿಕಾರ ಚಲಾಯಿಸಲು ಹೋಗಿ ಗಂಡನೊಬ್ಬ ಬಂಧನಕ್ಕೊಳಗಾಗಿದ್ದಾನೆ. ನಿಷೇಧದ ಹೊರತಾಗಿಯೂ ಬಿಹಾರದಲ್ಲಿ ಮದ್ಯ ಸೇವನೆ, ಅಕ್ರಮ ವ್ಯಾಪಾರ ಮತ್ತು ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿವೆ. ಔರಂಗಾಬಾದ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಕುಡಿದ ಮತ್ತಿನಲ್ಲಿ ಮನೆಗೆ ಬಂದು ಕಾಟ ಕೊಟ್ಟ ಪತಿ ವಿರುದ್ಧ ದೂರು ನೀಡಿ , ಅರೆಸ್ಟ್​​ ಆಗುವಂತೆ ಮಾಡಿದ್ದಾರೆ. ಔರಂಗಾಬಾದ್‌ನ ಬರುನ್ ಪೊಲೀಸ್ ಠಾಣೆ ವ್ಯಾಪ್ತಿಯ ನೀಮ್ ತೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕುಡಿದ ಮತ್ತಿನಲ್ಲಿ ಸೆಕ್ಸ್​​ಗಾಗಿ ಪೀಡಿದ ಗಂಡ

ಸುಮನ್ ದೇವಿ ಎಂಬ ಮಹಿಳೆ ಪೊಲೀಸರಿಗೆ ಲಿಖಿತ ದೂರಿನಲ್ಲಿ ತನ್ನ ಪತಿ ಪವನ್ ಚೌಧರಿ ಕುಡಿದ ಬಂದು ಸೆಕ್ಸ್​​ಗೆ ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಪತಿ ಚೌಧರಿ ಅಮಲೇರಿದ ಸ್ಥಿತಿಯಲ್ಲಿ ಸೋಮವಾರ ತನ್ನ ಪತ್ನಿ ಸುಮನ್ ದೇವಿ ಜೊತೆ ಲೈಂಗಿಕ ಸಂಪರ್ಕ ಹೊಂದಲು ಪ್ರಯತ್ನಿಸಿದ್ದ. ಕುಡಿತದ ಅಮಲಿನಲ್ಲಿದ್ದ ಕಾರಣ ಪತ್ನಿ ಇದಕ್ಕೆ ನಿರಾಕರಿಸಿದ್ದಾಳೆ. ಇದೇ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಕಾಟ ತಾಳಲಾರದೆ ಠಾಣೆ ದೂರು ನೀಡಿದ ಹೆಂಡತಿ

ಕುಡಿದು ರಂಪಾಟ ಮಾಡುತ್ತಿದ್ದ ಪತಿಯನ್ನು  ತಡೆಯಲು ಪತ್ನಿ ಕುಟುಂಬ ಇತರೆ ಸದಸ್ಯರ ಸಹಾಯವನ್ನು ಪಡೆದಿದ್ದಾರೆ. ನಂತರ ನಮಗೆ ಮಾಹಿತಿ ನೀಡಿದರು ಎಂದು ಬರುನ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಧನಂಜಯ್ ಶರ್ಮಾ ಹೇಳಿದರು. ನಾವು ಗ್ರಾಮ ತಲುಪಿದಾಗ ಸುಮನ್ ತನ್ನ ಗಂಡನನ್ನು ಪೊಲೀಸರಿಗೆ ಒಪ್ಪಿಸಿದದರು. ಪವನ್ ಚೌಧರಿ ಕುಡಿದ ಅಮಲಿನಲ್ಲಿದ್ದ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅತನ ರಕ್ತದಲ್ಲಿ ಆಲ್ಕೋಹಾಲ್  ಅಂಶ ಇರುವುದು ಕಂಡು ಬಂತು ಎಂದು ಶರ್ಮಾ ಹೇಳಿದರು.

ಕುಡುಕ ಪತಿ ವಿರುದ್ಧ ಕೇಸ್​ ದಾಖಲು

ಆರೋಪಿ ವಿರುದ್ಧ  ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆದ 17 ದಿನಗಳಲ್ಲಿ, ಮುಜಾಫರ್‌ಪುರ, ಗೋಪಾಲ್‌ಗಂಜ್, ಬೆಟ್ಟಿಯಾ, ಸಮಸ್ತಿಪುರ ಮತ್ತು ವೈಶಾಲಿ ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 40 ಜನರು ದೃಷ್ಟಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: England: ಲೈಂಗಿಕ ಚಟುವಟಿಕೆಗೆ ಬೆಂಬಲ ನೀಡುವ ಕೋರ್ಸ್ ಆರಂಭಿಸಿದ ದುರ್‌ಹಮ್ ವಿಶ್ವವಿದ್ಯಾನಿಲಯ

ಇನ್ನು  ಕೇರಳದ ಮಲಪ್ಪುರಂನಲ್ಲಿ ತ್ರಿವಳಿ ತಲಾಖ್ ಹೇಳದೇ ಇದ್ದದ್ದಕ್ಕಾಗಿ ನವ ವಿವಾಹಿತ ವ್ಯಕ್ತಿಯನ್ನು ಅವನ ಹೆಂಡತಿಯ ಸಂಬಂಧಿಕರು ಮನಬಂದಂತೆ ಕ್ರೂರವಾಗಿ ಥಳಿಸಿರು ಘಟನೆ ನಡೆದಿದೆ. ಕೊಟ್ಟಕಲ್ ಮೂಲದ ಅಬ್ದುಲ್ ಅಸೀಬ್‌ನನ್ನು ಅವನ ಹೆಂಡತಿಯ ಸಂಬಂಧಿಕರು ಅಪಹರಿಸಿ ನಂತರ ಹಿಗ್ಗಾಮುಗ್ಗಾ ಕ್ರೂರವಾಗಿ ಥಳಿಸಿದ್ದಾರೆ ಎಂದು ಅಬ್ದುಲ್ ಅಸೀಬ್ ಸಂಬಂಧಿಕರು ಆರೋಪಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಈ ದಂಪತಿಯ ಮದುವೆ ನಡೆದಿತ್ತು. ಆದರೆ ಅಸೀಬ್‌ನೊಂದಿಗಿನ ಆಗಾಗ್ಗೆ ನಡೆಯುತ್ತಿರುವ ಜಗಳಗಳ ನಂತರ, ಅವನ ಹೆಂಡತಿ ತನ್ನ ತವರು ಮನೆಗೆ ಹಿಂದಿರುಗಿದ್ದಾಳೆ. ಈ ಘಟನೆಯ ನಂತರ, ಮಹಿಳೆಯ ಸಂಬಂಧಿಕರು ಅಸೀಬ್‌ನನ್ನು ಭೇಟಿಯಾದರು ಮತ್ತು ವಿಚ್ಛೇದನ ಒಪ್ಪಂದಕ್ಕೆ ಒತ್ತಾಯಿಸಿದರು. ಅಸೀಬ್ ಪ್ರಕಾರ, ಅವರ ಬೇಡಿಕೆಗಳನ್ನು ಪಾಲಿಸಲು ನಾನು ನಿರಾಕರಿಸಿದಾಗ ಅವಳ ಸಂಬಂಧಿಕರು ನನ್ನನ್ನು ಹೀಗೆ ಕ್ರೂರವಾಗಿ ಥಳಿಸಿದ್ದಾರೆ ಎಂದು ಹೇಳಿದ್ದಾರೆ.
Published by:Kavya V
First published: