ಹೈದರಾಬಾದ್: ಸ್ವಚ್ಛಮಾಡುವ ವಿದ್ಯುತ್ ಸ್ಪರ್ಶವಾಗಿ (Electrocuted ) ಮಹಿಳೆಯೊಬ್ಬರು (Woman) ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನು ಗಮನಿಸಿ ಆಕೆಯ ಪತಿ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ಆ ಪ್ರಯತ್ನದಲ್ಲಿ ಪತ್ನಿಯ ಜೊತೆ ಪತಿಯೂ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆಯಿಂದ ಅಪ್ಪ-ಅಮ್ಮ ಇಬ್ಬರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಈ ಘಟನೆ ತೆಲಂಗಾಣದ (Telangan) ಮಂಚಿರ್ಯಾಲ ಜಿಲ್ಲೆಯ ಚೆನ್ನೂರು (Chennur) ಪಟ್ಟಣದಲ್ಲಿದೆ. ವಿದ್ಯುತ್ ಸ್ಪರ್ಶದಿಂದ ದಂಪತಿಗಳಿಬ್ಬರು (Couple) ಸಾವನ್ನಪ್ಪಿರುವ ಘಟನೆಯಿಂದ ಸಂಬಂಧಿಕರು, ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಅಕ್ಕಸಾಲಿಗ (Goldsmith) ಕೆಲಸ ಮಾಡುತ್ತಿರುವ ಬೊಳ್ಳಂಪಲ್ಲಿ ಶ್ರೀನಿವಾಸ್ ಅವರ ಪತ್ನಿ ಲತಾ ಸಾವನ್ನಪ್ಪಿದ್ದಾರೆ.
ಹೆಂಡತಿ ಪ್ರಾಣ ಉಳಿಸಲು ಹೋಗಿ ಪ್ರಾಣ ತ್ಯಾಗ ಮಾಡಿದ ಪತಿ
ಮಂಚಿರ್ಯಾಲ ಜಿಲ್ಲೆಯ ಚೆನ್ನೂರು ಪಟ್ಟಣದಲ್ಲಿ ಕುಟುಂಬ ಸಮೇತ ವಾಸವಿದ್ದ ಬೊಳ್ಳಂಪಲ್ಲಿ ಶ್ರೀನಿವಾಸ್ ಅಕ್ಕಸಾಲಿಗ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ನಗರ ಅಕ್ಕಸಾಲಿಗರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ ವಿದ್ಯುತ್ ಸ್ಪರ್ಶದಿಂದ ಶ್ರೀನಿವಾಸ್ ಮತ್ತು ಅವರ ಪತ್ನಿ ಲತಾ ಸಾವನ್ನಪ್ಪಿದ್ದಾರೆ. ತಡರಾತ್ರಿ ಬಿರುಗಾಳಿ ಸಹಿತ ಮಳೆ ಅನಾಹುತ ಸೃಷ್ಟಿಸಿದೆ ಎಂದು ತಿಳಿದುಬಂದಿದೆ.
ಮಗ ಸೊಸೆ ಕಳೆದುಕೊಂಡು ವೃದ್ಧ ತಂದೆ ರೋಧನೆ
ಮೃತ ಶ್ರೀನಿವಾಸ್ ಅವರ ತಂದೆ ಲಕ್ಷ್ಮೀನಾರಾಯಣ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ಐದು ವರ್ಷಗಳ ಹಿಂದೆ ಹಿರಿಯ ಮಗ ಕೂಡ ಸಾವನ್ನಪ್ಪಿದ್ದರು. 70ರ ವಯಸ್ಸಿನ ವೃದ್ಧ ತನ್ನ ಕಿರಿಯ ಮಗ ಶ್ರೀನಿವಾಸ್ ಮತ್ತು ಕುಟುಂಬದ ಜೊತೆಗಿದ್ದುಕಾಲ ಕಳೆಯುತ್ತಿದ್ದರು. ಒಂದೆಡೆ ಹೆಂಡತಿಯನ್ನು ಕಳೆದುಕೊಂಡು, ಮತ್ತೊಂದೆಡೆ ಹಿರಿಯ ಮಗನ ಸಾವಿನ ದುಃಖದಲ್ಲಿದ್ದ ವೃದ್ಧನಿಗೆ ಮಗ-ಸೊಸೆ ಸಾವು ಮತ್ತೊಂದು ಆಘಾತ ಎದುರಾಗಿದೆ.
ಅನಾಥವಾದ ಮಕ್ಕಳು
ಮೃತ ಶ್ರೀನಿವಾಸ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ವಿಧಿ ಇಬ್ಬರು ಮಕ್ಕಳ ಪಾಲಕರನ್ನು ಕಿತ್ತುಕೊಳ್ಳುವ ಮೂಲಕ ಅನಾಥರನ್ನಾಗಿ ಮಾಡಿದೆ. ಶ್ರೀನಿವಾಸ್ ಅವರ ಹಿರಿಯ ಮಗ ಡಿಗ್ರಿ ಓದುತ್ತಿದ್ದರೆ, ಕಿರಿಯ ಮಗ 10ನೇ ತರಗತಿ ಓದುತ್ತಿದ್ದರು. ವಿದ್ಯುತ್ ಸ್ಪರ್ಶದಿಂದ ತಂದೆ-ತಾಯಿ ಸಾವನ್ನಪ್ಪಿದ್ದರಿಂದ ಇಬ್ಬರು ಮಕ್ಕಳನ್ನು ಅನಾಥರಾಗಿದ್ದರು.
ಇದನ್ನೂ ಓದಿ: Acid Attack: ಮದುವೆ ಮನೆಗೆ ಒಳಗೇ ನಡೆಯಿತು ಆ್ಯಸಿಡ್ ದಾಳಿ! ವಧು-ವರ ಸೇರಿ 12 ಮಂದಿಗೆ ಗಂಭೀರ ಗಾಯ
ದಂಪತಿ ತಮ್ಮ ತಲೆಯನ್ನು ತಾವೇ ಕಡಿದುಕೊಂಡ ಸಾವನ್ನಪ್ಪಿರುವ ಭಯಾನಕ ಘಟನೆ ಗುಜರಾತ್ನ ರಾಜ್ಕೋಟ್ ಜಿಲ್ಲೆಯ ವಿಂಚಿಯಾ ಎಂಬ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. 38 ವರ್ಷ ವಯಸ್ಸಿನ ರೈತ ಹಾಗೂ ಆತನ ಪತ್ನಿ ತಾವೇ ತಯಾರಿಸಿಕೊಂಡಿದ್ದ ಗಿಲೋಟಿನ್ ಮಾದರಿಯ ಯಂತ್ರಕ್ಕೆ ತಮ್ಮ ತಲೆಯನ್ನು ಕೊಟ್ಟು ಸಾವಿಗೆ ಶರಣಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ