ಭಾವೋಧ್ರಿಕ್ತ ಸೆಲ್ಯೂಟ್ ಮಾಡುವ ಮೂಲಕ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಿದಾಯ ಸಲ್ಲಿಸಿದ ಮಗಳು ಮತ್ತು ಪತಿ!

ಕೇಂದ್ರ ಸರ್ಕಾರದ ವಿದೇಶಾಂಗ ಖಾತೆಯನ್ನು ನಿಭಾಯಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆ ಸುಷ್ಮಾ ಅವರದ್ದು. ಅಲ್ಲದೆ ಅನೇಕ ಪ್ರಥಮಗಳಿಗೂ ಅವರು ಪಾತ್ರರಾಗಿದ್ದಾರೆ. ಕೇವಲ 25 ವರ್ಷಕ್ಕೆ ಹರಿಯಾಣ ರಾಜ್ಯದ ಕ್ಯಾಬಿನೆಟ್ ದರ್ಜೆಯ ಸಚಿವೆಯಾಗುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಸಚಿವೆ ಸ್ಥಾನ ಅಲಂಕರಿಸಿದ ಹಾಗೂ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

MAshok Kumar | news18
Updated:August 7, 2019, 4:27 PM IST
ಭಾವೋಧ್ರಿಕ್ತ ಸೆಲ್ಯೂಟ್ ಮಾಡುವ ಮೂಲಕ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಿದಾಯ ಸಲ್ಲಿಸಿದ ಮಗಳು ಮತ್ತು ಪತಿ!
ಸುಷ್ಮಾ ಸ್ವರಾಜ್ ಅವರ ಮಗಳು ಬಾನ್ಸುರಿ ಸ್ವರಾಜ್ ಹಾಗೂ ಪತಿ ಸ್ವರಾಜ್ ಕುಶಾಲ್.
  • News18
  • Last Updated: August 7, 2019, 4:27 PM IST
  • Share this:
ನವ ದೆಹಲಿ (ಆಗಸ್ಟ್​.07) : ಬುಧವಾರ ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಅಕ್ಷರಶಃ ಕಣ್ಣೀರಿನ ಕೋಡಿ ಹರಿದಿತ್ತು. ಭಾರತ ಸರ್ಕಾರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಕಾಲಿಕ ಮರಣ ಎಲ್ಲರನ್ನೂ ಶೋಕ ಸಾಗರದಲ್ಲಿ ಮುಳುಗಿಸಿತ್ತು. ಭಾವೋದ್ರಿಕ್ತ ಸೆಲ್ಯೂಟ್ ಮಾಡುವ ಮೂಲಕ ಸುಷ್ಮಾ ಸ್ವರಾಜ್ ಅವರ ಮಗಳು ಬಾನ್ಸುರಿ ಸ್ವರಾಜ್ ಹಾಗೂ ಪತಿ ಸ್ವರಾಜ್ ಕುಶಾಲ್ ತಮ್ಮ ನೆಚ್ಚಿನ ವ್ಯಕ್ತಿತ್ವಕ್ಕೆ ಕೊನೆಯ ಹೃದಯಸ್ಪರ್ಶಿ ವಿದಾಯವನ್ನು ಸಲ್ಲಿಸಿದರು.

ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಸುಷ್ಮಾ ಸ್ವರಾಜ್ ಕೊನೆಯುಸಿರೆಳೆದಿದ್ದರು. ಇಂದು ಅವರ ಪಾರ್ಥೀವ ಶರೀರವನ್ನು ದೀನ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗಿತ್ತು. ಈ ವೇಳೆ ವಿವಿಧ ಪಕ್ಷದ ನಾಯಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಬಿಜೆಪಿ ನಾಯಕರು ತಮ್ಮ ನೆಚ್ಚಿನ ನಾಯಕಿಗೆ ಪಕ್ಷದ ಸಂಪ್ರದಾಯದಂತೆ ಕೊನೆಯ ವಿದಾಯ ಸಲ್ಲಿಸಿದರು. ಅಲ್ಲದೆ ಸರ್ಕಾರಿ ಗೌರವವನ್ನೂ ಸಲ್ಲಿಸಲಾಯಿತು.ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸುಷ್ಮಾ ಸ್ವರಾಜ್ ಅವರಿಗೆ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರನಿಗಾ ಚಿಕಿತ್ಸಾ ಘಟದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರನ್ನು ಉಳಿಸಿಕೊಳ್ಳುವುದು ಮಾತ್ರ ಸಾಧ್ಯವಾಗಲಿಲ್ಲ.ಇದನ್ನೂ ಓದಿ : Sushma Swaraj Obituary: ಅಪ್ಪಟ ರಾಪ್ಟ್ರೀಯವಾದಿ, ಕಾಂಗ್ರೆಸ್ ವಿರೋಧಿ ಹಾಗೂ ರೆಬೆಲ್ ನಾಯಕಿ; 1970-2019 ಸುಷ್ಮಾ ಸ್ವರಾಜ್ ಸವೆಸಿದ ರಾಜಕೀಯ ಹೋರಾಟದ ಹಾದಿ!

ಸುಷ್ಮಾ ಸ್ವರಾಜ್ ಅವರ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, “ಭಾರತದ ರಾಜಕೀಯ ಇತಿಹಾಸದ ಅದ್ಭುತ ಅಧ್ಯಾಯವೊಂದು ಕೊನೆಯಾದಂತಾಗಿದೆ. ಸುಷ್ಮಾ ಸ್ವರಾಜ್ ಕೊಟ್ಯಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದ್ದರು. ಜನರ ಏಳಿಗೆಗಾಗಿ ತನ್ನ ಸಾರ್ವಜನಿಕ ಬದುಕನ್ನು ಸಮರ್ಪಿಸಿಕೊಂಡ ನಾಯಕಿಯ ನಿಧನದಿಂದಾಗಿ ದೇಶ ದುಖಿಃಸುತ್ತಿದೆ” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

ಸುಷ್ಮಾ ಸ್ವರಾಜ್ ಅಗಲಿಕೆಗೆ ಕಂಬನಿ ಮಿಡಿದಿರುವ ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, “ಸುಷ್ಮಾ ಸ್ವರಾಜ್ ಪಕ್ಷಾತೀತ ನಾಯಕಿ, ಅವರಿಗೆ ಎಲ್ಲಾ ಪಕ್ಷದಲ್ಲೂ ಉತ್ತಮ ಗೆಳೆಯರಿದ್ದರು. ಅವರೋರ್ವ ಪ್ರತಿಭಾನ್ವಿತ ವಾಗ್ಮಿ ಹಾಗೂ ಅಸಾಧಾರಣ ರಾಜಕೀಯ ನಾಯಕಿ ಅವರ ಅಗಲಿಕೆಯಿಂದ ಅತ್ಯುತ್ತಮ ಸಂಸದೀಯ ಪಟುವನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಮರುಕ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಖಾಯಿಲೆಗೆ ತುತ್ತಾಗಿದ್ದ ಸುಷ್ಮಾ ಸ್ವರಾಜ್ 2016ರಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಅಲ್ಲದೆ ಅನಾರೋಗ್ಯದ ಕಾರಣದಿಂದಾಗಿ 2019ರ ಲೋಕಸಭಾ ಚುನಾವಣೆಯಿಂದ ಹೊರಗುಳಿದಿದ್ದರು. ಸುಷ್ಮಾ ಸ್ವರಾಜ್ ಅವರ ಅನುಪಸ್ಥಿತಿಯಿಂದಾಗಿ ಮೋದಿ ಅವರ 2.0 ಕ್ಯಾಬಿನೆಟ್ ನಲ್ಲಿ ಜೈಶಂಕರ್ ನೂತನ ವಿದೇಶಾಂಗ ಸಚಿವರಾಗಿ ಸ್ಥಾನಪಡೆದಿದ್ದಾರೆ.

ಕೇಂದ್ರ ಸರ್ಕಾರದ ವಿದೇಶಾಂಗ ಖಾತೆಯನ್ನು ನಿಭಾಯಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆ ಸುಷ್ಮಾ ಅವರದ್ದು. ಅಲ್ಲದೆ ಅನೇಕ ಪ್ರಥಮಗಳಿಗೂ ಅವರು ಪಾತ್ರರಾಗಿದ್ದಾರೆ. ಕೇವಲ 25 ವರ್ಷಕ್ಕೆ ಹರಿಯಾಣ ರಾಜ್ಯದ ಕ್ಯಾಬಿನೆಟ್ ದರ್ಜೆಯ ಸಚಿವೆಯಾಗುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಸಚಿವೆ ಸ್ಥಾನ ಅಲಂಕರಿಸಿದ ಹಾಗೂ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಅಲ್ಲದೆ, 1990 ರಿಂದ 1993ರ ಅವಧಿಯಲ್ಲಿ ಮಿಜೋರಾಂ ರಾಜ್ಯಪಾಲರಾಗಿಯೂ ಅವರು ಕೆಲಸ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಕಾಶ್ಮೀರವನ್ನು ದೇಶದೊಂದಿಗೆ ವಿಲೀನಮಾಡುವುದು ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯಾಗಿತ್ತೆ?; ಸತ್ಯ ತೆರೆದಿಟ್ಟ ಟ್ವಿಟ್ಟರ್​​ನಲ್ಲಿ ಏನಿದೆ?
First published: August 7, 2019, 4:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading