Migrating SongBirds Crash| ಗಗನಚುಂಬಿ ಕಟ್ಟಗಳಿಗೆ ಅಪ್ಪಳಿಸಿ ನೂರಾರು ವಲಸೆ ಹಕ್ಕಿಗಳ ಮರಣ; ಇದಕ್ಕೆ ಕಾರಣವೇನು..?

ನ್ಯೂಯಾರ್ಕ್​ ವರ್ಲ್ಡ್ ಟ್ರೇಡ್ ಸೆಂಟರ್‌ನ ಮಾಲೀಕರು ಹಾಗೂ ಇತರ ಗಗನ ಚುಂಬಿ ಕಟ್ಟಡಗಳ ಮಾಲೀಕರು ರಾತ್ರಿಯಲ್ಲಿ ದೀಪಗಳನ್ನು ಕಡಿಮೆ ಮಾಡುವ ಮೂಲಕ ಪಕ್ಷಿಗಳಿಗೆ ರಾತ್ರಿವೇಳೆಯಲ್ಲಿ ಹಾರಾಡಲು ಅನುವು ಮಾಡಿಕೊಡಬೇಕೆಂದು NYC Audubon ವಿನಂತಿಸಿದೆ.

ಮೃತಪಟ್ಟಿರುವ ವಲಸೆ ಹಕ್ಕಿಗಳು.

ಮೃತಪಟ್ಟಿರುವ ವಲಸೆ ಹಕ್ಕಿಗಳು.

  • Share this:
    ನ್ಯೂಯಾರ್ಕ್ (New York) ನಗರದ ಮೂಲಕ ವಲಸೆ ಹೋಗುವ ನೂರಾರು ಪಕ್ಷಿಗಳು ಗಾಜಿನ ಗೋಪುರಕ್ಕೆ ಅಪ್ಪಳಿಸಿ ಮೃತಪಟ್ಟಿದ್ದು ನ್ಯೂಯಾರ್ಕ್ ನಗರದ ಸ್ವಯಂಸೇವಕರ ತಂಡವು ಈ ಕುರಿತು ಟ್ವೀಟ್ ಮಾಡಿದ್ದು ವರ್ಲ್ಡ್ ಟ್ರೇಡ್ ಸೆಂಟರ್ (World Trade Center) ವು ಸಾವಿರಾರು ಪಕ್ಷಿಗಳ ಮೃತದೇಹದಿಂದ ಕೂಡಿದೆ ಎಂಬ ಟ್ವೀಟ್ ವೈರಲ್ ಆಗಿದೆ. ಈ ಬಾರಿ ಪಕ್ಷಿಗಳ ಮರಣ ಸಂಖ್ಯೆ ಹಿಂದಿಗಿಂತಲೂ ಅಧಿಕವಾಗಿದ್ದು ಗಗನಚುಂಬಿ ಕಟ್ಟಡಗಳ ಹೊಡೆತಕ್ಕೆ ಸಿಲುಕಿ ಪಕ್ಷಿಗಳು ಮರಣ ಹೊಂದುತ್ತಿರುವುದು ನಿರಂತರ ಸಮಸ್ಯೆಯಾಗಿದೆ ಎಂದು ಸಮೂಹದ ಸಂರಕ್ಷಣೆ ಮತ್ತು ವಿಜ್ಞಾನದ ಸಹಾಯಕ ನಿರ್ದೇಶಕ ಕೈಟ್ಲಿನ್ ಪಾರ್ಕಿನ್ಸ್ ಹೇಳಿದರು ಇನ್ನು ಬಿರುಗಾಳಿಯ ಪ್ರಕೋಪಕ್ಕೆ ಸಿಲುಕಿ ಕೂಡ ಪಕ್ಷಿಗಳ ಸಾವು ಸಂಭವಿಸಿರಬಹುದೆಂದು ಕೈಟ್ಲಿನ್ ಅಭಿಪ್ರಾಯ ಪಟ್ಟಿದ್ದಾರೆ.

    ಚಂಡಮಾರುತ ಹಾಗೂ ವಿಲಕ್ಷಣ ಹವಾಮಾನಗಳಿಂದ ಪಕ್ಷಿಗಳ ಸಾವು ಸಂಭವಿಸಿದೆ ಎಂಬುದಾಗಿ ಕೈಟ್ಲಿನ್ ತಿಳಿಸಿದ್ದು ಚಂಡಮಾರುತವು ಪಕ್ಷಿಗಳ ಹಾರಾಟದ ದಿಕ್ಕನ್ನು ತಪ್ಪಿಸುತ್ತವೆ ಹೀಗಾಗಿ ಅವುಗಳು ಗಗನ ಚುಂಬಿ ಕಟ್ಟಡಗಳ ಹೊಡೆತದಿಂದ ಸಾವನ್ನಪ್ಪುತ್ತವೆ ಎಂಬುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು NYC Audubon ವಸಂತ ಹಾಗೂ ಶರತ್ಕಾಲದ ಸಮಯದಲ್ಲಿನ ವಲಸೆ ಸಮಯದಲ್ಲಿ ಪಕ್ಷಿಗಳ ಅಧಿಕ ಸಾವನ್ನು ದಾಖಲಿಸಿದ್ದಾರೆ. ಹೊಸ ವರ್ಲ್ಡ್ ಟ್ರೇಡ್ ಸೆಂಟರ್‌ನ ಕಾಲುದಾರಿಗಳಲ್ಲಿ ಸುಮಾರು 300 ಕ್ಕೂ ಅಧಿಕ ಪಕ್ಷಿಗಳ ಮೃತದೇಹಗಳು ಕಂಡುಬಂದಿರುವುದು ನಿಜಕ್ಕೂ ಮನಸ್ಸು ಕಲಕುವಂತಿದೆ ಎಂದು ಸ್ವಯಂಸೇವಕಿ ಮೆಲಿಸ್ಸಾ ಟ್ವೀಟ್ ಮಾಡಿದ್ದಾರೆ.

    ಎಲ್ಲೆಡೆ ಪಕ್ಷಿಗಳ ಮೃತದೇಹದವೇ ತುಂಬಿದ್ದು ನಿಜಕ್ಕೂ ಇದೊಂದು ಹೃದಯವಿದ್ರಾವಕ ಘಟನೆ ಎಂದು ಮೆಲಿಸ್ಸಾ ತಿಳಿಸಿದ್ದಾರೆ. ಇನ್ನು ವರ್ಲ್ಡ್ ಟ್ರೇಡ್ ಸೆಂಟರ್‌ನ ಮಾಲೀಕರು ಹಾಗೂ ಇತರ ಗಗನ ಚುಂಬಿ ಕಟ್ಟಡಗಳ ಮಾಲೀಕರು ರಾತ್ರಿಯಲ್ಲಿ ದೀಪಗಳನ್ನು ಕಡಿಮೆ ಮಾಡುವ ಮೂಲಕ ಪಕ್ಷಿಗಳಿಗೆ ರಾತ್ರಿವೇಳೆಯಲ್ಲಿ ಹಾರಾಡಲು ಅನುವು ಮಾಡಿಕೊಡಬೇಕೆಂದು NYC Audubon ವಿನಂತಿಸಿದೆ. ದೀಪಗಳನ್ನು ತಗ್ಗಿಸುವುದರಿಂದ ಗಾಜಿನ ತಡೆಗೋಡೆ ಇರುವುದನ್ನು ಪರಿಗಣಿಸಿ ಅವುಗಳು ಹಾರಾಟ ಮಾಡುವುದಿಲ್ಲವೆಂದು ಪಾರ್ಕಿನ್ಸ್ ಅಭಿಪ್ರಾಯಪಟ್ಟಿದ್ದಾರೆ.

    ಡರ್ಸ್ಟ್ ಸಂಸ್ಥೆಯ ವಕ್ತಾರ ಜೋರ್ಡಾನ್ ಬಾರೊವಿಟ್ಜ್ ಇಮೇಲ್‌ನಲ್ಲಿ ಸಂದೇಶವೊಂದನ್ನು ರವಾನಿಸಿದ್ದು ವರ್ಲ್ಡ್ ಟ್ರೇಡ್ ಸೆಂಟರ್‌ನ ಮೊದಲ 200 ಅಡಿಗಳು ಗಾಜಿನ ರೆಕ್ಕೆಗಳಲ್ಲಿ ಪ್ರತಿಫಲಿತವಾಗಿಲ್ಲ ಇದರಿಂದ ಪಕ್ಷಿಗಳಿಗೆ ಹೊಡೆತವನ್ನುಂಟು ಮಾಡುವುದಿಲ್ಲ. ಬಹುಶಃ 200 ಅಡಿಗಳಿಗಿಂತ ಕೆಳಗೆ ಹಾಗೂ ಪ್ರತಿಫಲಿತ ಗಾಜಿನಿಂದ ಪಕ್ಷಿಗಳು ಹೊಡೆತಕ್ಕೆ ಸಿಲುಕಿ ಮರಣಹೊಂದುತ್ತಿರಬಹುದೆಂದು ಜೋರ್ಡಾನ್ ತಿಳಿಸಿದ್ದಾರೆ.

    ಇದನ್ನೂ ಓದಿ: Subramanian Swamy| ದೇಶದ ಆರ್ಥಿಕ ಚೇತರಿಗೆ 12 ಪತ್ರ ಬರೆದರೂ ಪ್ರಧಾನಿ ಮೋದಿ ಕ್ಯಾರೆ ಎಂದಿಲ್ಲ; ಸುಬ್ರಮಣಿಯನ್ ಸ್ವಾಮಿ ಕಿಡಿ

    ಇತರ ಮೂರು ವ್ಯಾಪಾರ ಕೇಂದ್ರದ ಗಗನಚುಂಬಿ ಕಟ್ಟಡಗಳ ಅಭಿವರ್ಧಕರಾದ ಸಿಲ್ವರ್‌ಸ್ಟೈನ್ ಪ್ರಾಪರ್ಟೀಸ್‌ನ ವಕ್ತಾರರಾದ ದಾರಾ ಮೆಕ್‌ಕ್ವಿಲಾನ್ ಪಕ್ಷಿಗಳ ಸಂರಕ್ಷಣೆಯಲ್ಲಿ ನಾವು ಕೈಜೋಡಿಸುತ್ತಿದ್ದು ಕೃತಕ ರಾತ್ರಿ ವೇಳೆಯ ಬೆಳಕು ಅವನ್ನು ಕಂಗೆಡಿಸಿಬಿಡುತ್ತವೆ ಹಾಗೂ ನಮ್ಮ ಕಚೇರಿಯಲ್ಲಿನ ಸಿಬ್ಬಂದಿಗಳಿಗೆ ಕೂಡ ರಾತ್ರಿ ವೇಳೆ ಕಡಿಮೆ ಬೆಳಕನ್ನು ಬಳಸುವಂತೆ ನಾವು ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟು 77 ಪಕ್ಷಿಗಳನ್ನು ಮಂಗಳವಾರ ಮೇಲಿನ ಪಶ್ಚಿಮ ಭಾಗದಲ್ಲಿರುವ ವೈಲ್ಡ್ ಬರ್ಡ್ ಫಂಡ್‌ನ ಪುನರ್ವಸತಿ ಸೌಲಭ್ಯಕ್ಕೆ ಕರೆದೊಯ್ಯಲಾಗಿದೆ, ಅವುಗಳಲ್ಲಿ ಹೆಚ್ಚಿನವು ವರ್ಲ್ಡ್ ಟ್ರೇಡ್ ಸೆಂಟರ್ ಪ್ರದೇಶದಿಂದ ಬಂದಿವೆ ಎಂದು ನಿರ್ದೇಶಕ ರಿತಮರಿ ಮೆಕ್ ಮಹೊನ್ ತಿಳಿಸಿದ್ದಾರೆ.
    First published: