ಆಸ್ಟ್ರೇಲಿಯಾದಲ್ಲಿ ಮತ್ತೆ ಲಾಕ್‌ಡೌನ್; ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ, ನೂರಾರು ಜನರ ಬಂಧನ!

ಕೊರೋನಾ ಸೋಂಕು ಆಸ್ಟ್ರೇಲಿಯಾದಲ್ಲಿ ಮತ್ತೆ ಅಧಿಕವಾಗುತ್ತಿರುವ ಪರಿಣಾಮ ಅಲ್ಲಿನ ಸರ್ಕಾರ ಲಾಕ್​ಡೌನ್ ಘೋಷಿಸಿದೆ. ಆದರೆ, ಸರ್ಕಾರ ಲಾಕ್‌ಡೌನ್‌ ನಿರ್ಧಾರದ ವಿರುದ್ದ ಮೆಲ್ಬೋರ್ನ್ ಮತ್ತು ಸಿಡ್ನಿ ನಗರಗಳಲ್ಲಿ ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಆಸ್ಟ್ರೇಲಿಯಾ ಪೊಲೀಸರು ಪ್ರತಿಭಟನಾ ನಿರತ ವ್ಯಕ್ತಿಯನ್ನು ಬಂಧಿಸುತ್ತಿರುವುದು.

ಆಸ್ಟ್ರೇಲಿಯಾ ಪೊಲೀಸರು ಪ್ರತಿಭಟನಾ ನಿರತ ವ್ಯಕ್ತಿಯನ್ನು ಬಂಧಿಸುತ್ತಿರುವುದು.

 • Share this:
  ಸಿಡ್ನಿ; ಕೊರೋನಾ ಮಾರಣಾಂತಿಕ ವೈರಸ್​ ಇಂದು ಇಡೀ ವಿಶ್ವವನ್ನು ವ್ಯಾಪಿಸಿದ್ದು, ಮನುಕುಲಕ್ಕೆ ಮರ್ಮಾಘಾತ ನೀಡುತ್ತಿದೆ. ಈ ಸೋಂಕಿನಿಂದ ಮುಕ್ತಿ ಪಡೆಯುವ ಸಲುವಾಗಿ ಹಲವು ದೇಶಗಳು ಲಾಕ್​ಡೌನ್ ಮೊರೆ ಹೋಗಿದ್ದವು. ಇದು ಆ ದೇಶಗಳ ಮೇಲೆ ಆರ್ಥಿಕವಾಗಿಯೂ ಪರಿಣಾಮ ಬೀರಿತ್ತು. ಹೀಗಾಗಿ ಎರಡನೇ ಅಲೆ ಬಿಡುವು ನೀಡಿರುವ ಹಿನ್ನೆಲೆಯಲ್ಲಿ ಹತ್ತಾರು ದೇಶಗಳು ಲಾಕ್​ಡೌನ್ ಅನ್ನು ತೆರವು ಮಾಡಿವೆ. ಆದರೆ, ಆಸ್ಟ್ರೇಲಿಯಾದಲ್ಲಿ ಕೊರೋನಾ ಸೋಂಕು ಮತ್ತೆ ಅಧಿಕವಾಗುತ್ತಿರುವ ಪರಿಣಾಮ ಅಲ್ಲಿನ ಸರ್ಕಾರ ಮತ್ತೆ ಲಾಕ್​ಡೌನ್​ ಮಾಡುವಂತೆ ಆದೇಶಿಸಿದೆ. ಆದರೆ, ಸರ್ಕಾರ ಲಾಕ್‌ಡೌನ್‌ ನಿರ್ಧಾರದ ವಿರುದ್ದ ಮೆಲ್ಬೋರ್ನ್ ಮತ್ತು ಸಿಡ್ನಿ ನಗರಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಅಲ್ಲದೆ, ಘಟನೆಯಲ್ಲಿ 218 ಜನರನ್ನು ಪೊಲೀಸರು ಬಂಧಿಸಿದ್ದು, ಎಲ್ಲರಿಗೂ ಭಾರೀ ಮೊತ್ತಡ ದಂಡ ವಿಧಿಸಿದ್ದಾರೆ. ಮೆಲ್ಬೋರ್ನ್‌ನಲ್ಲಿ, 4,000 ಜನರು ರ್‍ಯಾಲಿ ನಡೆಸಿದ್ದು, ಅವರನ್ನು ಚದುರಿಸಲು ಪೊಲೀಸರು ಪೆಪ್ಪರ್ ಸ್ಪ್ರೇ ಅನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.

  ಅದೇ ರೀತಿಯಲ್ಲಿ ಸಿಡ್ನಿಯಲ್ಲಿಯೂ ಪ್ರತಿಭಟನೆ ನಡೆದಿದ್ದು, 1,000 ಕ್ಕೂ ಹೆಚ್ಚು ಪೊಲೀಸರು ಲಾಟಿಚಾರ್ಜ್‌ ಮೂಲಕ ಪ್ರತಿಭಟನೆಯನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿಡ್ನಿಯಲ್ಲಿ ಹೊಸದಾಗಿ 825 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದು 24 ಗಂಟೆಗಳ ಅವಧಿಯಲ್ಲಿ ಆಸ್ಟ್ರೇಲಿಯಾದ ಪ್ರದೇಶವೊಂದರಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಎಂದು ಹೇಳಲಾಗಿದೆ.

  ಸಿಡ್ನಿಯಲ್ಲಿ ಲಾಕ್‌ಡೌನ್ ಜಾರಿಗೊಳಿಸಲು ಆಸ್ಟ್ರೇಲಿಯಾ ಸೈನ್ಯವನ್ನು ನಿಯೋಜಿಸಲಿದೆ ಎಂದು ವರದಿಯಾಗಿದೆ. ಬ್ರಿಸ್ಬೇನ್‌ನಲ್ಲಿ 2,000 ಕ್ಕೂ ಹೆಚ್ಚು ಪ್ರತಿಭಟನಾಕಾರರು ದೊಡ್ಡ ಶಾಂತಿಯುತ ಮೆರವಣಿಗೆಯನ್ನು ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 218 ಜನರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಕನಿಷ್ಠ ಏಳು ಅಧಿಕಾರಿಗಳು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

  ಇದನ್ನೂ ಓದಿ: ಅಫ್ಘನ್​ ಕ್ರಿಕೆಟ್​ ಬೋರ್ಡಿಗೆ ಹಂಗಾಮಿ ಅಧ್ಯಕ್ಷನನ್ನು ನೇಮಿಸಿದ ತಾಲಿಬಾನ್​

  ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿತರೆಲ್ಲರಿಗೂ 5,452 ಡಾಲರ್‌ (ಭಾರತೀಯ ರೂಪಾಯಿಯಲ್ಲಿ 4,05,369 ರೂ) ದಂಡವನ್ನು ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಮೂರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: