ಛೀ ಅಂತ ಮುಖ ಸಿಂಡರಿಸಬೇಡಿ, ಮಾನವ ತ್ಯಾಜ್ಯದಿಂದ ತರಕಾರಿ ಬೆಳೆಯಬಹುದಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಬೆಳೆ ಪೋಷಕಾಂಶಗಳಿಗೆ ಪ್ರಮುಖ ಫೀಡ್‌ಸ್ಟಾಕ್ ಆಗಿರುವ ನೈಸರ್ಗಿಕ ಅನಿಲದ ಬೆಲೆಗಳನ್ನು ಹೆಚ್ಚಿಸಿದ ನಂತರ ರಸಗೊಬ್ಬರ ವೆಚ್ಚವನ್ನು ನಿರ್ವಹಿಸಲು ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಲು ವಿಶ್ವಾದಾದ್ಯಂತ ಹಲವು ಸರ್ಕಾರಗಳು ಹೆಣಗಾಡುತ್ತಿವೆ.

  • Share this:

ಯುರೋಪ್ (Europe) ಮತ್ತು ಪ್ರಪಂಚದಾದ್ಯಂತ ಇರುವ ರೈತರು (Farmers) ರಸಗೊಬ್ಬರಗಳ (Fertilizer) ಬೆಲೆಯೇರಿಕೆ ಎದುರಿಸುತ್ತಿರುವಾಗ, ಜನರು ಶೌಚಾಲಯದಲ್ಲಿ ಫ್ಲಶ್ ಮಾಡುವಲ್ಲಿಯೇ ಒಂದು ಪರಿಹಾರವಿದೆ ಎಂಬುದನ್ನು ಸಂಶೋಧಕರು ಹೇಳುತ್ತಾರೆ. ಫ್ರಾಂಟಿಯರ್ಸ್ ಇನ್ ಎನ್ವಿರಾನ್ಮೆಂಟಲ್ ಸೈನ್ಸ್ ಜರ್ನಲ್‌ನಲ್ಲಿ (Journal Frontiers in Environmental Science) ಸೋಮವಾರ ಪ್ರಕಟವಾದ ಯುರೋಪ್‌ನ ವಿಜ್ಞಾನಿಗಳ/ಸಂಶೋಧಕರ ಪೀರ್-ರಿವ್ಯೂಡ್ ಪೇಪರ್ (Peer-Reviewed Paper) ಮಾನವನ ಮಲ ಮತ್ತು ಮೂತ್ರದಿಂದ ತಯಾರಿಸಿದ ರಸಗೊಬ್ಬರವು ಬಳಸಲು ಸುರಕ್ಷಿತವಾಗಿದೆ. ಇದರಲ್ಲಿ ಔಷಧಿ ಹಾಗೂ ರಾಸಾಯನಿಕಗಳು ಕಡಿಮೆ ಇವೆ ಎಂಬುದನ್ನು ಪ್ರತಿಪಾದಿಸಿದೆ. ಉದಾ : ಈ ಮಾನವನ ತ್ಯಾಜ್ಯದ ರಸಗೊಬ್ಬರದಿಂದ ಬೆಳೆದ ತರಕಾರಿಗಳನ್ನು ಆಹಾರವಾಗಿ ಸೇವಿಸಬಹುದು.


ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಹಿನ್ನೆಲೆ ರಸಗೊಬ್ಬರ ಹೇರಿಕೆ


ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಬೆಳೆ ಪೋಷಕಾಂಶಗಳಿಗೆ ಪ್ರಮುಖ ಫೀಡ್‌ಸ್ಟಾಕ್ ಆಗಿರುವ ನೈಸರ್ಗಿಕ ಅನಿಲದ ಬೆಲೆಗಳನ್ನು ಹೆಚ್ಚಿಸಿದ ನಂತರ ರಸಗೊಬ್ಬರ ವೆಚ್ಚವನ್ನು ನಿರ್ವಹಿಸಲು ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಲು ವಿಶ್ವಾದಾದ್ಯಂತ ಹಲವು ಸರ್ಕಾರಗಳು ಹೆಣಗಾಡುತ್ತಿವೆ. ಯುರೋಪಿಯನ್ ಯೂನಿಯನ್ ಅಧಿಕಾರಿಗಳು ಗೊಬ್ಬರ ಆಧಾರಿತ ರಸಗೊಬ್ಬರಗಳ ಅಭಿವೃದ್ಧಿಯನ್ನು ವೇಗಗೊಳಿಸುವ ಮಾರ್ಗಗಳನ್ನು ಪರಿಗಣಿಸುತ್ತಿದ್ದು, ವೆಚ್ಚಗಳ ಏರಿಕೆಯು ರೈತರಲ್ಲಿ ಕೋಪವನ್ನು ಉಂಟು ಮಾಡುತ್ತಿದೆ.


ಸಾಂದರ್ಭಿಕ ಚಿತ್ರ


ಸುರಕ್ಷತೆಯ ದೃಷ್ಟಿಯಿಂದ, ಸಂಶೋಧಕರು ಔಷಧಿಗಳಿಂದ ಕೀಟ ನಿವಾರಕಗಳವರೆಗೆ 310 ರಾಸಾಯನಿಕಗಳಿಗೆ ಮಾನವ ತ್ಯಾಜ್ಯವನ್ನು ಪರೀಕ್ಷಿಸಿದ್ದಾರೆ. ಇವುಗಳಲ್ಲಿ ಕೇವಲ 6.5% ಮಾತ್ರ ಕಡಿಮೆ ಸಾಂದ್ರತೆಗಳ ಮಿತಿಯನ್ನು ಹೊಂದಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. "ಸಾಮಾನ್ಯವಾಗಿ, ಫೆಕಲ್ ಕಾಂಪೋಸ್ಟ್ ಬಳಕೆಯ ಮೂಲಕ ಆಹಾರ ವ್ಯವಸ್ಥೆಯನ್ನು ಪ್ರವೇಶಿಸುವ ಔಷಧೀಯ ಸಂಯುಕ್ತಗಳು ಮಾನವನ ಆರೋಗ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ" ಎಂದು ಲೇಖಕರು ತೀರ್ಮಾನಿಸಿದ್ದಾರೆ.


ಎಲೆಕೋಸುಗಳ ಖಾದ್ಯ ಭಾಗಗಳಲ್ಲಿ ಎರಡು ಔಷಧೀಯ ಉತ್ಪನ್ನ


ಸಂಶೋಧಕರು ಎಲೆಕೋಸುಗಳ ಖಾದ್ಯ ಭಾಗಗಳಲ್ಲಿ ಎರಡು ಔಷಧೀಯ ಉತ್ಪನ್ನಗಳನ್ನು ಪತ್ತೆಹಚ್ಚಿದ್ದು, ಇದರಲ್ಲಿ ನೋವು ನಿವಾರಕ ಐಬುಪ್ರೊಫೇನ್ ಮತ್ತು ಆಂಟಿಕಾನ್ವಲ್ಸೆಂಟ್ ಡ್ರಗ್ ಕಾರ್ಬಮಾಜೆಪೈನ್ ಸಾಂದ್ರತೆಯು ಗಮನಾರ್ಹವಾಗಿ ಕಡಿಮೆಯಾಗಿದೆ. ಇದರರ್ಥ ಒಂದು ಕಾರ್ಬಮಾಜೆಪೈನ್ ಮಾತ್ರೆಗೆ ಸಮಾನವಾದ ಪ್ರಮಾಣವನ್ನು ಸಂಗ್ರಹಿಸಲು ಅರ್ಧ ಮಿಲಿಯನ್ ಎಲೆಕೋಸು ಎಲೆಗಳನ್ನು ತಿನ್ನಬೇಕು ಎಂದು ಸಂಶೋಧಕರು ಹೇಳುತ್ತಾರೆ.


ರಸಗೊಬ್ಬರ ವೆಚ್ಚಗಳ ಉಲ್ಬಣ


ರಷ್ಯಾದ ಆಕ್ರಮಣದ ನಂತರ ರಸಗೊಬ್ಬರ ವೆಚ್ಚಗಳ ಉಲ್ಬಣವು ಈಗಾಗಲೇ ಕೆಲವು ರೈತರನ್ನು ಪ್ರಾಣಿಗಳ ಸಗಣಿ ಮತ್ತು ಮಾನವ ಕೊಳಚೆ ನೀರು ಬಳಸುವಂತೆ ಮಾಡಿದೆ. ಸಂಶ್ಲೇಷಿತ ಬೆಳೆ ಪೋಷಕಾಂಶಗಳನ್ನು ಬದಲಿಸಲಿದ್ದು, ಈ ಪರ್ಯಾಯ ಮಾರ್ಗಗಳು ಅಷ್ಟು ಪರಿಣಾಮಕಾರಿಯಾಗಿಲ್ಲ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಈ ಅಧ್ಯಯನವು ಮಾನವ ತ್ಯಾಜ್ಯದಿಂದ ಸಂಸ್ಕರಿಸಿದ ಕೆಲವು ಉತ್ಪನ್ನಗಳು ಕೃತಕ ಪರ್ಯಾಯಗಳ ದಕ್ಷತೆಗೆ ಹೊಂದಿಕೆಯಾಗಬಹುದು ಎಂದು ಸೂಚಿಸುತ್ತದೆ.


ಸಾಂದರ್ಭಿಕ ಚಿತ್ರ


"ಸರಿಯಾಗಿ ತಯಾರಿಸಿದ ನಂತರ ಗುಣಮಟ್ಟ-ನಿಯಂತ್ರಿತವಾಗಿದ್ದರೆ, ಜರ್ಮನಿಯಲ್ಲಿನ ಸಾಂಪ್ರದಾಯಿಕ ಸಂಶ್ಲೇಷಿತ ಖನಿಜ ರಸಗೊಬ್ಬರಗಳ 25% ವರೆಗೆ ಮಾನವ ಮೂತ್ರ ಮತ್ತು ಮಲದಿಂದ ರಸಗೊಬ್ಬರಗಳನ್ನು ಮರುಬಳಕೆ ಮಾಡುವ ಮೂಲಕ ಬದಲಾಯಿಸಬಹುದು" ಎಂದು ಹೆಸರಾಂತ ಲೇಖಕ ಅರಿಯಾನ್ ಕ್ರೌಸ್ ಹೇಳುತ್ತಾರೆ.


ಆರೋಗ್ಯದ ಅಂಶಗಳು


ಮಾನವ ತ್ಯಾಜ್ಯವನ್ನು ಜೈವಿಕ ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ವೈರಲ್ ಮತ್ತು ಬ್ಯಾಕ್ಟೀರಿಯಾದ ಕಾಯಿಲೆಗಳಿಗೆ ವಾಹಕವಾಗಿದೆ. ಇದು ಕುಡಿಯುವ ನೀರಿನ ಮೂಲಗಳಿಗೆ ಸೇರಿದರೆ ಗಂಭೀರವಾದ ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಗಳ ಪ್ರಕಾರ, ಕಾಲರಾ ಅಥವಾ ಅತಿಸಾರದಂತಹ ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳಿಂದ ವಾರ್ಷಿಕವಾಗಿ ಸುಮಾರು 2.2 ಮಿಲಿಯನ್ ಜನರು ಸಾಯುತ್ತಾರೆ.


ಇದನ್ನೂ ಓದಿ: Good News: ರೈತರಿಗೆ ಗುಡ್ ನ್ಯೂಸ್, ರಸಗೊಬ್ಬರ ಬೆಲೆ ಬಗ್ಗೆ ಕೇಂದ್ರದ ಪ್ರಮುಖ ನಿರ್ಧಾರ!




ಮಾನವ ನಾಗರೀಕತೆಯ ಪ್ರಮುಖ ಸಾಧನೆಯೆಂದರೆ ಮಾನವ ತ್ಯಾಜ್ಯದ ಮೂಲಕ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ರೋಗ ಹರಡುವಿಕೆಯನ್ನು ಕಡಿಮೆ ಮಾಡುವುದಾಗಿದೆ. ಒಟ್ಟಿನಲ್ಲಿ ಈ ಸಂಶೋಧಕರು ಹೇಳುವಂತೆ ಪರಿಸರ ಸ್ನೇಹಿಯಾಗಿರುವ ಮಾನವ ತ್ಯಾಜ್ಯವು ರಸಗೊಬ್ಬರಗಳ ಬಳಕೆಗೆ ಯೋಗ್ಯವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಭವಿಷ್ಯದಲ್ಲಿ ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಕ್ಕು ರಸಗೊಬ್ಬರದ ಕೊರತೆ ನೀಗಿದರೆ ಸಾಕಾಗಿದೆ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು