HDI: ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆ: ಭಾರತಕ್ಕೆ ಎಷ್ಟನೇ ಸ್ಥಾನ?

2020ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 189 ದೇಶಗಳಲ್ಲಿ ಭಾರತವು 131ನೇ ಸ್ಥಾನದಲ್ಲಿತ್ತು ಮತ್ತು ಈ ವರ್ಷ ಒಂದು ಸ್ಥಾನವನ್ನು ಕಳೆದುಕೊಂಡಿದೆ ಎಂದು ಗುರುವಾರ ಪ್ರಕಟವಾದ ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಭಾರತದ ಹೆಚ್‍ಡಿಐ ಮೌಲ್ಯವು 0.633 ರಷ್ಟಿದ್ದು, 2020 ರ ವರದಿಯಲ್ಲಿದ್ದ ಅದರ ಮೌಲ್ಯ 0.645 ಕ್ಕಿಂತ ಕಡಿಮೆಯಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
2021ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (Human Development Index) ಭಾರತವು 191 ದೇಶಗಳ ಪೈಕಿ 132ನೇ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. 2020ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 189 ದೇಶಗಳಲ್ಲಿ ಭಾರತವು (India) 131ನೇ ಸ್ಥಾನದಲ್ಲಿತ್ತು ಮತ್ತು ಈ ವರ್ಷ ಒಂದು ಸ್ಥಾನವನ್ನು ಕಳೆದುಕೊಂಡಿದೆ ಎಂದು ಗುರುವಾರ ಪ್ರಕಟವಾದ ವಿಶ್ವಸಂಸ್ಥೆಯ (United Nations) ವರದಿ ತಿಳಿಸಿದೆ. ಭಾರತದ ಹೆಚ್‍ಡಿಐ ಮೌಲ್ಯವು 0.633 ರಷ್ಟಿದ್ದು, 2020 ರ ವರದಿಯಲ್ಲಿದ್ದ ಅದರ ಮೌಲ್ಯ 0.645 ಕ್ಕಿಂತ ಕಡಿಮೆಯಿದೆ. ಇನ್ನುಳಿದಂತೆ ಬಾಂಗ್ಲಾದೇಶ 129ನೇ ಸ್ಥಾನ, ಭೂತಾನ್ 127, ಶ್ರೀಲಂಕಾ 73 ಮತ್ತು ಚೀನಾ 79ನೇ ಸ್ಥಾನವನ್ನು ಪಡೆದುಕೊಂಡಿವೆ. ಹಾಗೆಯೇ ಸ್ವಿಟ್ಜರ್ಲೆಂಡ್ 0.962ರ ಎಚ್‌ಡಿಐ (HDI) ಮೌಲ್ಯದೊಂದಿಗೆ ಜಾಗತಿಕ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಫಿಲಿಪೈನ್ಸ್ ಮತ್ತು ವೆನೆಜುವೆಲಾದಂತಹ ಉನ್ನತ ಮಾನವ ಅಭಿವೃದ್ಧಿ ಆರ್ಥಿಕತೆಗಳು ಮಧ್ಯಮ ಅಭಿವೃದ್ಧಿ ವರ್ಗಕ್ಕೆ ಇಳಿದಿದ್ದು, ಲ್ಯಾಟಿನ್ ಅಮೇರಿಕಾ, ಕೆರಿಬಿಯನ್, ಉಪ-ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾಗಳು ಭಾರಿ ಕುಸಿತಕಂಡಿವೆ. ಇನ್ನೂ ಭಾರತದ ವಿಷಯದಲ್ಲಿ 2019ರಲ್ಲಿ 0.645 ಇದ್ದ ಮೌಲ್ಯ 2021ರಲ್ಲಿ 0.633ಕ್ಕೆ ಕುಸಿತ ಕಂಡಿದೆ.

ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೇಗೆ ಅಳೆಯಲಾಗುತ್ತದೆ?
ಮಾನವ ಅಭಿವೃದ್ಧಿಯನ್ನು 3 ಪ್ರಮುಖ ಆಯಾಮಗಳಲ್ಲಿ ಅಳೆಯಲಾಗುತ್ತದೆ. ದೀರ್ಘ ಮತ್ತು ಆರೋಗ್ಯಕರ ಜೀವನ, ಶಿಕ್ಷಣದ ಪ್ರವೇಶ ಮತ್ತು ಯೋಗ್ಯ ಜೀವನ ಮಟ್ಟ ಆಧರಿಸಿ ಈ ಸೂಚ್ಯಂಕ ತಯಾರಿಸಲಾಗುತ್ತದೆ. ಜೀವಿತಾವಧಿ, ಸರಾಸರಿ ಶಾಲಾ ವರ್ಷಗಳು, ಶಾಲಾ ಶಿಕ್ಷಣದ ನಿರೀಕ್ಷಿತ ವರ್ಷಗಳು ಮತ್ತು ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (GNI) ಹೀಗೆ ನಾಲ್ಕು ಸೂಚಕಗಳನ್ನು ಬಳಸಿಕೊಂಡು ಸೂಚ್ಯಂಕವನ್ನು ಲೆಕ್ಕಹಾಕಲಾಗುತ್ತದೆ.

ಇದನ್ನೂ ಓದಿ:  Post Office Scheme: ಹೆಣ್ಣು ಮಕ್ಕಳಿಗೋಸ್ಕರಾನೇ ಇರೋ ಪೋಸ್ಟ್ ಆಫೀಸ್​ ಯೋಜನೆಗಳಿವು! ಅಪಾಯ ಕಮ್ಮಿ, ಆದಾಯ ಹೆಚ್ಚು

ಮಾನವ ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯವನ್ನು ಒತ್ತಿಹೇಳುವ, ವೇಗದಿಂದ-ಬೆಳೆಯುತ್ತಿರುವ ಆರ್ಥಿಕತೆಯ ಹೊರತಾಗಿ ಮೂಲಭೂತ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿನ ಜೀವನದ ಗುಣಮಟ್ಟ ಮತ್ತು ಸಾಧನೆಗಳ ಮೇಲೆ ಇದು ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ತಜ್ಞರು. "ಆರ್ಥಿಕ ಬೆಳವಣಿಗೆ ಮಾತ್ರವಲ್ಲದೆ, ದೇಶದ ಪ್ರಜೆಗಳ ಸಾಮರ್ಥ್ಯಗಳು ದೇಶದ ಅಭಿವೃದ್ಧಿಯನ್ನು ನಿರ್ಣಯಿಸಲು ಅಂತಿಮ ಮಾನದಂಡವಾಗಿರಬೇಕು" ಎಂದು ಒತ್ತಿಹೇಳಲು ಎಚ್‌ಡಿಐ ಅನ್ನು ರಚಿಸಲಾಗಿದೆ ಎಂದು ವರದಿ ಹೇಳಿದೆ.

ಮಾನವ ಅಭಿವೃದ್ಧಿ ಸೂಚ್ಯಂಕ ಪರಿಕಲ್ಪನೆಯನ್ನು ಪರಿಚಯಿಸಿದವರು ಇವರೇ
ಎಚ್‌ಡಿಐನ ವಿಧಾನ ಮತ್ತು ಪರಿಕಲ್ಪನಾ ಅಡಿಪಾಯವನ್ನು ಮೊದಲಿಗೆ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಮತ್ತು ಮಹಬೂಬ್ ಉಲ್ ಹಕ್ ಅವರು ಅಭಿವೃದ್ಧಿಪಡಿಸಿದ್ದಾರೆ. "ಮಾನವ ಸಾಮರ್ಥ್ಯಗಳ ವಿಧಾನ" ಆಧಾರದ ಮೇಲೆ 1990 ರಲ್ಲಿ ಮೊದಲ ಎಚ್‌ಡಿಐ ವರದಿಯನ್ನು ಇವರುಗಳು ಹೊರತಂದರು.

32 ವರ್ಷಗಳಲ್ಲಿ ಮೊದಲ ಬಾರಿಗೆ ಎಚ್‌ಡಿಐ ಕುಂಠಿತ
ಮಾನವ ಅಭಿವೃದ್ಧಿ - ಒಂದು ರಾಷ್ಟ್ರದ ಆರೋಗ್ಯ, ಶಿಕ್ಷಣ ಮತ್ತು ಸರಾಸರಿ ಆದಾಯದ ಅಳತೆಯು ಕೊರೋನಾದಿಂದಾಗಿ ಐದು ವರ್ಷಗಳಷ್ಟು ಪ್ರಗತಿಯು ಕುಂಠಿತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವದಾದ್ಯಂತ ಮಾನವ ಅಭಿವೃದ್ಧಿಯು 32 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಗಿತಗೊಂಡಿದೆ ಎಂದು ವರದಿಯಲ್ಲಿ ತೋರಿಸಲಾಗಿದೆ. 2021 ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 67.2 ವರ್ಷಗಳಿದ್ದು, 2020 ರಲ್ಲಿ 70.1 ವರ್ಷಗಳು ಎಂದು ವರದಿ ಹೇಳಿದೆ.

ಇದನ್ನೂ ಓದಿ: SBI: ಎಸ್‌ಬಿಐ ಗ್ರಾಹಕರಿಗೆ ಸಿಹಿಸುದ್ದಿ! ಇನ್ನು ಮುಂದೆ ಅದಕ್ಕೆ ಎಕ್ಸ್ಟ್ರಾ ಹಣ ಕೊಡುವ ಅವಶ್ಯಕತೆ ಇಲ್ಲ 

"ಈ ಎಣಿಕೆಗಳಲ್ಲಿ ನಮ್ಮ ಪ್ರಗತಿ ನಿಧಾನವಾಗಿದೆ ಏಕೆಂದರೆ ನಾವು ಈ ವಿಷಯಗಳತ್ತ ಹೆಚ್ಚಿನ ಗಮನ ಹರಿಸಿಲ್ಲ. ಮಾನವ ಅಭಿವೃದ್ಧಿಯು ರಾಜಕೀಯ ಸಮಸ್ಯೆಯಾಗಿಲ್ಲ, ”ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಹಿಮಾಂಶು ಹೇಳಿದರು. ಒಟ್ಟಾರೆ ಎಚ್‌ಡಿಐ ಮೌಲ್ಯ ಕುಸಿತವು ಆರೋಗ್ಯ ಮತ್ತು ಶಿಕ್ಷಣದಲ್ಲಿ ಮಾಡಿದ ಹೂಡಿಕೆ ಸೇರಿದಂತೆ ದೇಶವು ಕಾಲಾನಂತರದಲ್ಲಿ ಮಾಡಿದ ನೀತಿ ಆಯ್ಕೆಗಳ ಫಲಿತಾಂಶವಾಗಿದೆ ಎಂದು ವರದಿ ತೋರಿಸಿದೆ.
Published by:Ashwini Prabhu
First published: