Crime News: 15 ವರ್ಷಗಳಿಂದ ಬೀಗ ಹಾಕಿದ್ದ ಅಂಗಡಿಯಲ್ಲಿ ಮಾನವ ದೇಹದ ಭಾಗಗಳು ಪತ್ತೆ..!

ಮಹಾರಾಷ್ಟ್ರದ ನಾಸಿಕ್ ನಗರದ ಮುಂಬೈ ನಾಕಾ ಪ್ರದೇಶದಲ್ಲಿರುವ ಒಂದು ಕಟ್ಟಡದ ನೆಲಮಾಳಿಗೆಯಲ್ಲಿರುವ ಅಂಗಡಿಯಲ್ಲಿ 8 ಮಾನವ ಕಿವಿಗಳು, ಮೆದುಳು, ಕಣ್ಣುಗಳು ಮತ್ತು ಮುಖದ ಭಾಗಗಳ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವೊಮ್ಮೆ ಅಪರಾಧಗಳು ಹೇಗೆ ನಡೆಯುತ್ತವೆ ಮತ್ತು ಎಲ್ಲಿ ನಡೆಯುತ್ತವೆ ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಎಷ್ಟೋ ವರ್ಷಗಳಿಂದ ಬೀಗ ಹಾಕಿದ್ದ ಮನೆಗಳು, ಅಂಗಡಿಗಳು ಕೆಲವೊಮ್ಮೆ ಈ ಅಪರಾಧಗಳಿಗೆ (Crime) ಬಳಸಿಕೊಂಡಿರುವುದನ್ನು ನಾವು ಅನೇಕ ಸುದ್ದಿಗಳಲ್ಲಿ ಓದುತ್ತೇವೆ ಮತ್ತು ನೋಡುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಾಗಿ ಅಪರಾಧದ ಬಗ್ಗೆ ಹೊರಗಿನ ಜನಕ್ಕೆ ಸುಳಿವು ಸಹ ಸಿಗಬಾರದು ಎಂದು ಈ ಬೀಗ ಹಾಕಿರುವ ಅಂಗಡಿಗಳು ಮತ್ತು ಮನೆಗಳನ್ನು ಅಪರಾಧಕ್ಕೆ ಬಳಸಿಕೊಳ್ಳುವುದು ಇದೇನೂ ಹೊಸತಲ್ಲ ಎಂದು ಹೇಳಬಹುದು. ಇಲ್ಲಿಯೂ ಸಹ ಇದೇ ರೀತಿಯಾದ ತುಂಬಾ ವರ್ಷಗಳಿಂದ ಬೀಗ ಹಾಕಿದ್ದಂತಹ ಅಂಗಡಿಯಲ್ಲಿ (Closed Shops) ಏನೇನು ಸಿಕ್ಕಿದೆ ಎಂದು ನೀವು ನೋಡಿದರೆ ಒಂದು ಕ್ಷಣ ಬೆಚ್ಚಿ ಬೀಳುವುದಂತೂ ನಿಜ.

ಮಹಾರಾಷ್ಟ್ರದ ನಾಸಿಕ್ ನಗರದ ಮುಂಬೈ (Mumbai) ನಾಕಾ ಪ್ರದೇಶದಲ್ಲಿರುವ ಒಂದು ಕಟ್ಟಡದ ನೆಲಮಾಳಿಗೆಯಲ್ಲಿರುವ ಅಂಗಡಿಯಲ್ಲಿ 8 ಮಾನವ ಕಿವಿಗಳು, ಮೆದುಳು, ಕಣ್ಣುಗಳು ಮತ್ತು ಮುಖದ ಭಾಗಗಳ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ವಿಚಿತ್ರ ಎಂದರೆ ಇವೆಲ್ಲವೂ ಸಿಕ್ಕಿದ್ದು ಒಂದು ಹಳೆಯ ಅಂಗಡಿಯಲ್ಲಿ, ಅದು ಕಳೆದ 15 ವರ್ಷಗಳಿಂದ ಮುಚ್ಚಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಬೀಗ ಹಾಕಿದ ಅಂಗಡಿಯಿಂದ ದುರ್ವಾಸನೆ ಹೊರ ಹೊಮ್ಮುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಪ್ಲಾಸ್ಟಿಕ್ ಡ್ರಮ್‌ಗಳ ಒಳಗೆ ಮೆದುಳು, ಕಣ್ಣು, ಮುಖದ ಭಾಗಗಳು

"ಅಂಗಡಿಯ ತುಂಬ ಗುಜರಿ ವಸ್ತುಗಳು ತುಂಬಿದ್ದವು. ಅಲ್ಲೇ ಇರಿಸಲಾದ ಎರಡು ಪ್ಲಾಸ್ಟಿಕ್ ಡ್ರಮ್‌ಗಳನ್ನು ತೆರೆದು ನೋಡಿದಾಗ, ನಾವು ಮಾನವನ ಕಿವಿಗಳು, ಮೆದುಳು, ಕಣ್ಣುಗಳು ಮತ್ತು ಕೆಲವು ಮುಖದ ಭಾಗಗಳನ್ನು ಕಂಡು ಕೊಂಡಿದ್ದೇವೆ. ಹೆಚ್ಚಿನ ತನಿಖೆಗಾಗಿ ಇವುಗಳನ್ನು ವಿಧಿ ವಿಜ್ಞಾನ ತಂಡವನ್ನು ಕರೆಯಿಸಿ ಈ ಮಾನವನ ದೇಹದ ಭಾಗಗಳನ್ನು ಅವರ ವಶಕ್ಕೆ ನೀಡಿದ್ದೇವೆ" ಎಂದು ಮುಂಬೈ ನಾಕಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ರಾಸಾಯನಿಕದಲ್ಲಿ ಹಾಕಿಟ್ಟಿದ್ದ ದೇಹದ ಭಾಗಗಳು

ಈ ಬಗ್ಗೆ ತನಿಖೆ ನಡೆಯುತ್ತಿರುವಾಗ, ಪೊಲೀಸರು ಈ ಘಟನೆಯನ್ನು ಕೊಲೆಯ ಪ್ರಕರಣವಾಗಿರಬಹುದೆಂದು ಪರಿಗಣಿಸುತ್ತಿಲ್ಲ. ಪೊಲೀಸರ ಪ್ರಕಾರ, ಅಂಗಡಿ ಮಾಲೀಕರಿಗೆ ಇಬ್ಬರು ಪುತ್ರರಿದ್ದು, ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಇಲ್ಲಿ ಸಿಕ್ಕಿರುವ ಮಾನವನ ದೇಹದ ಭಾಗಗಳನ್ನು ಅವರು ವೈದ್ಯಕೀಯ ಉದ್ದೇಶಗಳಿಗಾಗಿ ಇರಿಸಿರುವ ಸಾಧ್ಯತೆಯಿದೆ. ಇದಲ್ಲದೆ, ಮಾನವ ಅಂಗಗಳು ರಾಸಾಯನಿಕಗಳಲ್ಲಿ ಹಾಕಿಟ್ಟಿರುವುದು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BJP ಗೆಲುವು ಸಂಭ್ರಮಿಸಿದ ಮುಸ್ಲಿಂ ಯುವಕನ ಹತ್ಯೆ..! ತನಿಖೆಗೆ ಆದೇಶಿಸಿದ ಸಿಎಂ ಯೋಗಿ

"ಈ ಮಾನವನ ದೇಹದ ಭಾಗಗಳು ಪತ್ತೆಯಾಗಿರುವುದರ ಬಗ್ಗೆ ಸಮಗ್ರವಾಗಿ ತನಿಖೆಯನ್ನು ನಡೆಸುತ್ತಿದ್ದೇವೆ, ಇಲ್ಲಿಯವರೆಗೆ ಇದಕ್ಕೆ ಸಂಬಂಧಿಸಿದಂತೆ ಯಾರ ಮೇಲೂ ಯಾವುದೇ ಪ್ರಕರಣ ದಾಖಲಿಸಿಲ್ಲ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದು ಕೊಲೆ ಎಂದು ಶಂಕಿಸಲು ಸಹ ಅಲ್ಲಿ ಯಾವುದೇ ಸುಳಿವು ಇಲ್ಲ ಎಂದು ಹೇಳಲಾಗುತ್ತಿದೆ.

8 ಕಿವಿಗಳು ಪತ್ತೆ

ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತೆ ಪೂರ್ಣಿಮಾ ಚೌಗುಲೆ ಅವರು “ಅಂಗಡಿಯಲ್ಲಿ ಶವ ಇದ್ದಿದ್ದರೆ, ನಾವು ಕೊಲೆ ನಡೆದಿದೆ ಎಂದು ಖಂಡಿತವಾಗಿಯೂ ಶಂಕಿಸುತ್ತಿದ್ದೆವು ಎಂದು ಹೇಳಿದರು. ಆದರೆ ಒಟ್ಟು 8 ಕಿವಿಗಳನ್ನು ಸರಿಯಾಗಿ ಕತ್ತರಿಸಿರುವುದರಿಂದ, ಈ ಕೆಲಸವನ್ನು ಒಬ್ಬ ತಜ್ಞ ಅಥವಾ ಈ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿಯೇ ಮಾಡಿರಬಹುದು ಎಂದು ತೋರುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Evening Digest: ಪರೀಕ್ಷೆ ವೇಳೆಯೇ SSLC Student ಸಾವು; ಬೀಸ್ಟ್​ ಬಗ್ಗೆ ಯಶ್​​ ಖಡಕ್ ನುಡಿ: ಈ ದಿನದ ಸುದ್ದಿಗಳಿವು

ತನ್ನ ಬೀಗ ಹಾಕಿದ್ದ ಅಂಗಡಿಯಲ್ಲಿ ಈ ಮಾನವನ ದೇಹದ ಭಾಗಗಳು ಹೇಗೆ ಪತ್ತೆ ಆಗಿವೆ ಎನ್ನುವುದರ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಅಂಗಡಿ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರವೇ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಾಸಿಕ್ ಪೊಲೀಸರ ಅಪರಾಧ ವಿಭಾಗವು ಇಡೀ ಪ್ರಕರಣವನ್ನು ತನಿಖೆ ಮಾಡುತ್ತಿದೆ.
Published by:Divya D
First published: