ಸತ್ತ ಮೇಲೂ ನಮ್ಮ ದೇಹ ಚಲಿಸುತ್ತೆ; ಸಂಶೋಧನೆಯಿಂದ ಬಯಲಾಯ್ತು ಅಚ್ಚರಿಯ ಸತ್ಯ

ಈ ಬಗ್ಗೆ ಅಧ್ಯಯನ ನಡೆಸಿರುವ ಆಸ್ಟ್ರೇಲಿಯಾದ ವಿಜ್ಞಾನಿ ಸ್ಮಶಾನವೊಂದರಲ್ಲಿ ಕ್ಯಾಮೆರಾವನ್ನಿಟ್ಟು ವಿಸ್ತಾರವಾದ ಬಯಲಿನಲ್ಲಿ ಶವಗಳನ್ನು ಇರಿಸಿದ್ದರು. 17 ತಿಂಗಳ ಕಾಲ ಕ್ಯಾಮೆರಾದಲ್ಲಿ ಶೂಟಿಂಗ್ ಮಾಡಲಾಗಿತ್ತು.

news18-kannada
Updated:September 13, 2019, 9:58 PM IST
ಸತ್ತ ಮೇಲೂ ನಮ್ಮ ದೇಹ ಚಲಿಸುತ್ತೆ; ಸಂಶೋಧನೆಯಿಂದ ಬಯಲಾಯ್ತು ಅಚ್ಚರಿಯ ಸತ್ಯ
ಸಾಂದರ್ಭಿಕ ಚಿತ್ರ
  • Share this:
ನಾವು ಸತ್ತ ಮೇಲೂ ನಮ್ಮ ಆತ್ಮ ಜೀವಂತವಾಗಿರುತ್ತದೆ ಎಂಬ ವಿಚಾರವನ್ನು ಅನೇಕ ಹಿರಿಯರು ಹೇಳುತ್ತಿರುತ್ತಾರೆ. ಅದೆಲ್ಲ ಅವರವರ ನಂಬಿಕೆ ಎಂದು ನಾವೂ ಸುಮ್ಮನಾಗಿಬಿಡುತ್ತೇವೆ. ಆದರೆ, ಈ ಬಗ್ಗೆ ಆಸ್ಟ್ರೇಲಿಯಾದ ವಿಜ್ಞಾನಿಯೊಬ್ಬರು ಹೊಸ ಸಂಶೋಧನೆ ಮಾಡಿದ್ದು, ಮನುಷ್ಯರು ಸತ್ತು 1 ವರ್ಷದವರೆಗೂ  ದೇಹದಲ್ಲಿ ಚಲೆನ ಇರುತ್ತದೆ ಎಂಬ ವಿಷಯವನ್ನು ಪತ್ತೆಮಾಡಿದ್ದಾರೆ.

ಈ ಬಗ್ಗೆ ಅಧ್ಯಯನ ನಡೆಸಿರುವ ಆಸ್ಟ್ರೇಲಿಯಾದ ವಿಜ್ಞಾನಿ ಸ್ಮಶಾನವೊಂದರಲ್ಲಿ ಕ್ಯಾಮೆರಾವನ್ನಿಟ್ಟು ವಿಸ್ತಾರವಾದ ಬಯಲಿನಲ್ಲಿ ಶವಗಳನ್ನು ಇರಿಸಿದ್ದರು. 17 ತಿಂಗಳ ಕಾಲ ಕ್ಯಾಮೆರಾದಲ್ಲಿ ಶೂಟಿಂಗ್ ಮಾಡಲಾಗಿತ್ತು. ಆಗ ಸೆರೆಯಾದ ದೃಶ್ಯದಲ್ಲಿ ಮೃತ ವ್ಯಕ್ತಿಯ ಕೈಗಳು ಕ್ರಮೇಣ ದೇಹದ ಕಡೆಗೆ ಚಲಿಸುತ್ತಿರುವುದು ಸೆರೆಯಾಗಿತ್ತು. ಈ ಅಚ್ಚರಿಯ ಸಂಗತಿಯನ್ನು ತಿಳಿಸಿರುವ ವಿಜ್ಞಾನಿ ಮನುಷ್ಯನ ದೇಹದಿಂದ ಉಸಿರು ನಿಂತ ತಕ್ಷಣ ಆತನ ಆತ್ಮ ಈ ಲೋಕ ಬಿಟ್ಟು ಹೋಗುವುದಿಲ್ಲ. ಅದು ಅಲ್ಲೇ ಸುತ್ತುತ್ತಾ ಇರುತ್ತದೆ ಎಂದು ಹೇಳಿದ್ದಾರೆ.

2 ವರ್ಷದ ಹಿಂದೆ 2 ಮಾವಿನ ಹಣ್ಣು ಕದ್ದು ತಿಂದ ಭಾರತೀಯನಿಗೆ ಬಂಧನ ಭೀತಿ; ವಿಚಾರಣೆ ಮುಂದೂಡಿದ ದುಬೈ ಕೋರ್ಟ್​

ಈ ಬಗ್ಗೆ ಜರ್ನಲ್​ವೊಂದರಲ್ಲಿ ವಿಜ್ಞಾನಿ ಅಲೈಸನ್ ವಿಲ್ಸನ್ ಅವರ ಲೇಖನವೂ ಪ್ರಕಟವಾಗಿದೆ. ಸಂರಕ್ಷಿಸಿಟ್ಟಿದ್ದ ಮೃತದೇಹಗಳು ಯಾವ ರೀತಿ ಕೊಳೆಯುತ್ತವೆ? ಆ ದೇಹದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಎಂಬುದನ್ನು ತಿಳಿಯಲು ವಿಲ್ಸನ್ ಈ ರೀತಿ ಮಾಡಿದ್ದರು.

ಅಲೈಸನ್ ವಿಲ್ಸನ್ ಪ್ರಕಾರ, ಮನುಷ್ಯ ಸಾವನ್ನಪ್ಪಿದ ನಂತರ ಆತನ ದೇಹ ಕೊಳೆಯುತ್ತದೆ. ಕೊಳೆಯುವಾಗ ದೇಹದ ಚರ್ಮ ಮತ್ತು ಮಾಂಸಖಂಡದಲ್ಲಿ ಚಲನೆ ಉಂಟಾಗುತ್ತದೆ. ಹೀಗಾಗಿ, ಮೃತ ವ್ಯಕ್ತಿಯ ಕೈಗಳು ಆಚೀಚೆ ಅಲುಗಾಡಿರಬಹುದು. ದೇಹದ ಮೂಳೆಯಲ್ಲಿನ ಅಸ್ಥಿಮಜ್ಜೆಗಳು ಒಣಗುವುದರಿಂದ ಕೂಡ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading