ಚೆನ್ನೈ: ಪರಪ್ಪನ ಅಗ್ರಹಾರದಲ್ಲಿ 4 ವರ್ಷದ ಶಿಕ್ಷೆಯನ್ನು ಮುಗಿಸಿ ತಮಿಳುನಾಡಿಗೆ ತೆರಳಿರುವ ಚಿನ್ನಮ್ಮ ಶಶಿಕಲಾ ಅವರಿಗೆ ದ್ರಾವಿಡ ನಾಡಿನಲ್ಲಿ ನಿರೀಕ್ಷೆಗೂ ಮೀರಿ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ಇನ್ನೇನು ತಮಿಳುನಾಡು ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣೆ ನಿರೀಕ್ಷೆಯಲ್ಲಿರುವ ಎಲ್ಲಾ ಪಕ್ಷಗಳೂ ಇದೀಗ ಶಶಿಕಲಾ ಅವರಿಗೆ ಜನರ ನಡುವೆ ಇರುವ ವರ್ಚಸ್ಸನ್ನು ಕಂಡು ಬೆಚ್ಚಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡು ಸ್ಟೇಟ್ ಇಂಟಲಿಜೆನ್ಸ್ ರಿಪೋರ್ಟ್ನಲ್ಲೂ ಶಶಿಕಲಾಗೆ ಹೆಚ್ಚು ಜನ ಬೆಂಬಲದ ಬಗ್ಗೆ ಮಾಹಿತಿ ಕೊಡಲಾಗಿದೆ. ಜೈಲಿನಿಂದ ಬಿಡುಗಡೆಯಾಗಿದ್ದ ಶಶಿಕಲಾ ಅವರಿಗೆ ಹೊಸೂರಿನ ಜೂಜುವಾಡಿ ಪ್ರದೇಶದಿಂದಲೂ ಅದ್ದೂರಿ ಸ್ವಾಗತ ನೀಡಲಾಗಿತ್ತು.
ಆ ಬಳಿಕ ಪ್ರತಿ ಐದು ಕಿಲೋಮೀಟರ್ ಗೆ ಹತ್ತು ಸಾವಿರಕ್ಕೂ ಹೆಚ್ಚು ಬೆಂಬಲಿಗರಿಂದ ಭವ್ಯ ಸ್ವಾಗತ ಕೋರಿದ್ದು, ಕೃಷ್ಣಗಿರಿಯ ಹತ್ತು ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಪೂರ್ಣಕುಂಭ ಸ್ವಾಗತ ಮಾಡಲಾಗಿತ್ತು. 64 ಕಡೆಗಳಲ್ಲಿ ಅದ್ದೂರಿ ಸ್ವಾಗತ ಮಾಡಲಾಗಿತ್ತು. ದಿ. ಜಯಲಲಿತಾ ಸ್ಟೈಲನ್ನೇ ಅನುಸರಿಸಲು ಮುಂದಾಗಿರೋ ಚಿನ್ನಮ್ಮನಿಗೆ ಮಧ್ಯರಾತ್ರಿ ಆದ್ರೂ ಮನೆ ಎದುರಿನ ಜನಸಂಖ್ಯೆ ಕಡಿಮೆಯಾಗಿರಲಿಲ್ಲ.
ಬೆಳಗ್ಗೆ ಬೆಂಗಳೂರು ಬಿಟ್ಟಿದ್ದು 7.50 ಕ್ಕೆ, ಚೆನೈ ತಲುಪಿದ್ದು ಮುಂಜಾನೆ 4.30ಕ್ಕೆ. 346 ಕಿಲೋಮೀಟರ್ನ್ನ ಬರೋಬ್ಬರಿ 23 ಗಂಟೆಗಳ ಕಾಲ ಜರ್ನಿ ಮಾಡಿದ ಚಿನ್ಮಮ್ಮನಿಗೆ ಅಂದುಕೊಂಡದ್ದಕ್ಕಿಂತ ಹೆಚ್ಚು ಜನ ಜಮಾವಣೆ ಸಿಕ್ಕಿದೆ. ಈ ನಡುವೆ ಚೆನೈ ತಲುಪುತ್ತಿದ್ದಂತೆ ಚಿನ್ನಮ್ಮನಿಗೆ ಕರೆ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್, ಆರೋಗ್ಯ ವಿಚಾರಿಸಿದ್ರು...ಇನ್ನು ಚೆನೈ ತಲುಪಿದಂತೆ ಲಕ್ಷಾಂತರ ಬೆಂಬಲಿಗರು ಜಮಾವಣೆಯಾಗಿ ಜೈಕಾರ ಹಾಕಿದ್ರು, ಜಯಲಲಿತಾ ರೀತಿಯಲ್ಲಿ ಹಸಿರು ಸೀರೆಯನ್ನುಟ್ಟು ಸೇಮ್ ಟೂ ಸೇಮ್ ಅಭಿಮಾನಿಗಳತ್ತ ಕೈ ಬೀಸುವ ರೀತಿಯನ್ನೇ ಚಿನ್ನಮ್ಮ ಫಾಲೋ ಮಾಡಿದ್ದರು.
ಈ ನಡುವೆ ಜಯಲಿಲತಾಗೆ ಮಂಡಿಯೂರಿ ನಮಸ್ಕಾರ ಮಾಡುವ ರೀತಿಯಲ್ಲೇ ಚಿನ್ನಮ್ಮನಿಗೆ ಗೌರವ ಸಲ್ಲಿಸಲಾಯ್ತು. ವಾಹನಗಳನ್ನ ತಡೆಯಲು ಬ್ಯಾರಿಕೇಡ್ ಹಾಕಿದ್ದನ್ನ ಕಿತ್ತೆಸೆದು ಮಾರ್ಗದುದ್ದಕ್ಕೂ ಬೆಂಬಲಿಗರು ಪಳನಿಸ್ವಾಮಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪಳನಿಸ್ವಾಮಿ ಜೊತೆಗಿರೋ ಕೆಲ ಸಚಿವರು, ಶಾಸಕರು ಶಶಿಕಲಾ ನಟರಾಜನ್ ಜೊತೆ ಸಂಪರ್ಕ ಇದೆ ಎನ್ನಲಾಗಿದೆ.. ಹೀಗಾಗಿ ಸ್ಟೇಟ್ ಇಂಟಲಿಜೆನ್ಸ್ ರಿಫೋರ್ಟ್ ನೋಡಿ ಸರ್ಕಾರಕ್ಕೆ ಭಯ ಶುರುವಾಗಿದೆ.
ಇದನ್ನೂ ಓದಿ: ಬಂಗಾಳದಲ್ಲಿ 6-7 ಹಂತ, ತಮಿಳುನಾಡು-ಕೇರಳಕ್ಕೆ ಒಂದೇ ಹಂತದಲ್ಲಿ ಚುನಾವಣೆ; ಫೆ.15ರ ನಂತರ ಅಂತಿಮ ಘೋಷಣೆ
ಇನ್ನು ಜಯಲಲಿತಾ ಹುಟ್ಟುಹಬ್ಬದ ದಿನವೇ ಸ್ಮಾರಕಕ್ಕೆ ಹೋಗಲು ಚಿನಮ್ಮ ತಯಾರಿ ಮಾಡಿಕೊಂಡಿದ್ದಾರೆ. ಜಯಲಲಿತಾ ಸಮಾಧಿ ಬಳಿಯೇ ರಾಜಕೀಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿರೋ ಚಿನ್ನಮ್ಮ, ಸಾರ್ವತ್ರಿಕ ಚುನಾವಣೆ ಬೆನ್ನಲ್ಲೇ ಚಿನ್ನಮ್ಮ ಭರ್ಜರಿ ಎಂಟ್ರಿ ಕಂಡು ವಿರೋಧಿ ಬಣ ದಂಗಾಗಿರೋದು ಗ್ಯಾರಂಟಿ..ಇದರ ಬೆನ್ನಲ್ಲೇ ತಮ್ಮನ್ನ ಬಿಡದಂತೆ ಈಗಾಗ್ಲೇ ಎಲ್ಲಾ ಸಚಿವರು ಶಾಸಕರ ಜೊತೆ ಪಳನಿಸ್ವಾಮಿ ಚರ್ಚೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ