ನಕಲಿ ಚೆಕ್ ಬಳಸಿ ರಾಮ ಜನ್ಮಭೂಮಿ ಟ್ರಸ್ಟ್​ನಿಂದ ಭಾರೀ ಮೊತ್ತದ ಹಣ ತೆಗೆದ ಖದೀಮರು!

ವಿಚಾರ ತಿಳಿಯುತ್ತಿದ್ದಂತೆ ಟ್ರಸ್ಟ್​ನವರು ಬ್ಯಾಂಕ್​ಗೆ ಆಗಮಿಸಿದ್ದಾರೆ. ಈ ವೇಳೆ ಇದು ನಕಲಿ ಚೆಕ್​ ಎನ್ನುವ ವಿಚಾರ ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗಾಗಲೇ ಕೆಲವರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

news18-kannada
Updated:September 10, 2020, 9:56 AM IST
ನಕಲಿ ಚೆಕ್ ಬಳಸಿ ರಾಮ ಜನ್ಮಭೂಮಿ ಟ್ರಸ್ಟ್​ನಿಂದ ಭಾರೀ ಮೊತ್ತದ ಹಣ ತೆಗೆದ ಖದೀಮರು!
ರಾಮ ಮಂದಿರ ಬ್ಲ್ಯೂ ಪ್ರಿಂಟ್
  • Share this:
ರಾಮ ಜನ್ಮಭೂಮಿ ವಿವಾದ ಕೊನೆಗೂ ಇತ್ಯರ್ತಗೊಂಡಿದ್ದು, ಇತ್ತೀಚೆಗಷ್ಟೇ ಮಂದಿರ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ಮಾಡಿದ್ದರು. 2022ರ ವೇಳೆಗೆ ರಾಮ ಮಂದಿರ ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಶಾಕಿಂಗ್​ ಬೆಳವಣಿಗೆಯೊಂದು ನಡೆದಿದೆ. ಕೆಲ ಅನಾಮಧೇಯ ವ್ಯಕ್ತಿಗಳು ನಕಲಿ ಚೆಕ್​ ಬಳಕೆ ಮಾಡಿ ರಾಮ ಮಂದಿರ ಟ್ರಸ್ಟ್​ನಿಂದ ದೊಡ್ಡ ಮೊತ್ತದ ಹಣ ವಿತ್​ಡ್ರಾ ಮಾಡಿರುವುದಾಗಿ ಜೀ ನ್ಯೂಸ್​ ವರದಿ ಮಾಡಿದೆ. ನಕಲಿ ಚೆಕ್​ ಬಳಕೆ ಮಾಡಿ ಎರಡು ಬಾರಿ ಹಣ ವಿತ್​ ಡ್ರಾ ಮಾಡಲಾಗಿತ್ತು. ಮೂರನೇ ಬಾರಿಯೂ ಖದೀಮರು ಇದೇ ಮಾರ್ಗ ಅನುಸರಿಸಲು ಮುಂದಾಗಿದ್ದರು. ಈ ಬಗ್ಗೆ ಬ್ಯಾಂಕ್​ನವರಿಗೆ ಅನುಮಾನ ಬಂದಿತ್ತು. ಹೀಗಾಗಿ, ಮೂರನೇ ಬಾರಿ ಹಣ ವಿತ್​ ಡ್ರಾ ಮಾಡಲು ಬಂದಾಗ ಬ್ಯಾಕ್​ ಮ್ಯಾನೇಜರ್​ ಟ್ರಸ್ಟ್​ನವರಿಗೆ ತಿಳಿಸಿದ್ದರು.

ವಿಚಾರ ತಿಳಿಯುತ್ತಿದ್ದಂತೆ ಟ್ರಸ್ಟ್​ನವರು ಬ್ಯಾಂಕ್​ಗೆ ಆಗಮಿಸಿದ್ದಾರೆ. ಈ ವೇಳೆ ಇದು ನಕಲಿ ಚೆಕ್​ ಎನ್ನುವ ವಿಚಾರ ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗಾಗಲೇ ಕೆಲವರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.


ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಈಗಾಗಲೇ ಅನುಮತಿ ಸಿಕ್ಕಿದೆ. ಈ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲಿದೆ. ರಾಮ ಮಂದಿರ ನಿರ್ಮಾಣವಾದ ನಂತರದಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಹೀಗಾಗಿ, ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ.
Published by: Rajesh Duggumane
First published: September 10, 2020, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading