ತೆಲುಗು ಸಿನಿಮಾ ತಂದ ವಿರಸ; ಟಿವಿ ರಿಮೋಟ್​ಗೆ ಕಿತ್ತಾಡಿದ ಗಂಡ ಜೈಲು ಸೇರಿದ ಕಥೆ ಇಲ್ಲಿದೆ...

ಪುಣೆಯ ವಿಜಯಶ್ರೀ ವಿಠೋಲ್ ಎಂಬ 30 ವರ್ಷದ ಮಹಿಳೆ ತನ್ನ 39 ವರ್ಷದ ಗಂಡ ವಿಠೋಲ್ ಮೇಲೆ ದೂರು ನೀಡಿದ್ದಾರೆ. ಇವರಿಬ್ಬರೂ ಮದುವೆಯಾಗಿ ಸುಮಾರು 13 ವರ್ಷ ಕಳೆದಿದ್ದು, 12 ಹಾಗೂ 9 ವರ್ಷದ ಇಬ್ಬರು ಮಕ್ಕಳಿದ್ದಾರೆ.

news18-kannada
Updated:November 11, 2019, 3:03 PM IST
ತೆಲುಗು ಸಿನಿಮಾ ತಂದ ವಿರಸ; ಟಿವಿ ರಿಮೋಟ್​ಗೆ ಕಿತ್ತಾಡಿದ ಗಂಡ ಜೈಲು ಸೇರಿದ ಕಥೆ ಇಲ್ಲಿದೆ...
ಪ್ರಾತಿನಿಧಿಕ ಚಿತ್ರ
  • Share this:
ಪುಣೆ (ನ. 11): ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆ ಇಂದಿನ ಕಾಲಕ್ಕೆ ಅನ್ವಯವಾಗುವುದಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳಿಗೆ ಗಂಡ-ಹೆಂಡತಿ ನಡುವೆ ವಿರಸ ಮೂಡುತ್ತದೆ. ಗಂಡ ನಿದ್ರೆ ಮಾಡುವಾಗ ಗೊರಕೆ ಹೊಡೆಯುತ್ತಾನೆ ಎಂಬ ಕಾರಣಕ್ಕೆ ಡೈವೋರ್ಸ್​ ನೀಡಿದ ಪ್ರಕರಣಗಳೂ ಭಾರತದಲ್ಲಿ ನಡೆದಿವೆ. ಹೆಂಡತಿ ಯಾವಾಗಲೂ ಮೊಬೈಲ್ ನೋಡುತ್ತಿರುತ್ತಾಳೆ, ಮೇಕಪ್, ಡ್ರೆಸ್​ಗೆ ಸುಮ್ಮನೆ ದುಡ್ಡು ಖರ್ಚು ಮಾಡುತ್ತಾಳೆ ಎಂಬ ಕಾರಣಕ್ಕೆ ಮದುವೆಯೇ ಮುರಿದುಬಿದ್ದ ಘಟನೆಗಳೂ ನಡೆದಿವೆ.

ಇದೇ ರೀತಿಯ ಮತ್ತೊಂದು ಘಟನೆ ಪುಣೆಯಲ್ಲಿ ನಡೆದಿದೆ. ಮನೆಯಲ್ಲಿ ಇದ್ದ ಒಂದು ಟಿವಿಗಾಗಿ ದಿನವೂ ಗಂಡ-ಹೆಂಡತಿ ನಡುವೆ ಗಲಾಟೆ ಏಳುತ್ತಿತ್ತು. ಹೆಂಡತಿ ತನಗೆ ಟಿವಿ ರಿಮೋಟ್ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿದ ಗಂಡ ಆಕೆಯ ಕೈಯನ್ನು ಬಲವಾಗಿ ಕಚ್ಚಿದ್ದಾನೆ. ಗಂಡ ಕಚ್ಚಿದ್ದಕ್ಕೆ ನೋವಿನಿಂದ ಜೋರಾಗಿ ಕಿರುಚಿಕೊಂಡ ಹೆಂಡತಿ ಆತನಿಗೆ ಬಲವಾಗಿ ಹೊಡೆದಿದ್ದಾಳೆ. ನಂತರ ಈ ಪ್ರಕರಣ ಪೊಲೀಸ್ ಠಾಣೆಗೆ ಬಂದುನಿಂತಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್​ಸಿಟಿ ಫ್ಲೈ ಓವರ್​ನಲ್ಲಿ ಸಂಚರಿಸುವವರೇ ಎಚ್ಚರ!; ಇಲ್ಲಿ ರಾತ್ರಿ ಏನೆಲ್ಲ ನಡೆಯುತ್ತೆ ಗೊತ್ತಾ?

ಅಷ್ಟಕ್ಕೂ ಆಗಿದ್ದೇನು?:

ಪುಣೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಮನೆಯಲ್ಲಿ ಟಾಲಿವುಡ್ ಆ್ಯಕ್ಷನ್ ಸಿನಿಮಾ ನೋಡುತ್ತಾ ಕುಳಿತಿದ್ದರು. ಸಿನಿಮಾ ಕ್ಲೈಮ್ಯಾಕ್ಸ್​ ಸೀನ್ ಪ್ರಸಾರವಾಗುತ್ತಿತ್ತು. ಆಗ ಚಾನೆಲ್ ಬದಲಿಸಲು ತನಗೆ ತನಗೆ ರಿಮೋಟ್ ಬೇಕೆಂದು ಗಂಡ ಕೇಳಿದ್ದಾನೆ. ಆಸಕ್ತಿಯಿಂದ ಸಿನಿಮಾ ನೋಡುತ್ತಿದ್ದ ಹೆಂಡತಿಗೆ ಇದರಿಂದ ಕೋಪ ಬಂದಿದೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿ ರಿಮೋಟ್ ಕೊಡದ ಹೆಂಡತಿ ಕೈಗೆ ಗಂಡ ಕಚ್ಚಿದ್ದಾನೆ. ತನಗೆ ಕಚ್ಚಿದ ಗಂಡನ ವಿರುದ್ಧ ಹೆಂಡತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಲ್ಲದೆ, ಗಂಡ ಕಚ್ಚಿದ್ದರಿಂದ ತನಗೆ ತೀವ್ರ ಗಾಯವಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಘಟನೆ ಕೇಳಿದರೆ ನಿಮಗೆ ನಗು ಬರಬಹುದು. ಆದರೆ, ಪುಣೆಯಲ್ಲಿ ನಿಜವಾಗಿಯೂ ಇಂಥ ವಿಚಿತ್ರ ಘಟನೆ ನಡೆದಿದೆ.

ಮದುವೆಮನೆ ದುರಂತ; ಸಪ್ತಪದಿ ತುಳಿಯೋ ಜಾಗದಲ್ಲೇ ಬಿತ್ತು ಮದುಮಗನ ಹೆಣ!

ವಿಜಯಶ್ರೀ ವಿಠೋಲ್ ಎಂಬ 30 ವರ್ಷದ ಮಹಿಳೆ ತನ್ನ 39 ವರ್ಷದ ಗಂಡ ವಿಠೋಲ್ ಮೇಲೆ ದೂರು ನೀಡಿದ್ದಾರೆ. ಇವರಿಬ್ಬರೂ ಮದುವೆಯಾಗಿ ಸುಮಾರು 13 ವರ್ಷ ಕಳೆದಿದ್ದು, 12 ಹಾಗೂ 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಘಟನೆ ಸಂಬಂಧ ಪತ್ನಿಯ ದೂರಿನ ಮೇರೆಗೆ ವಿಠೋಲ್​ನನ್ನು ಪೊಲೀಸರು ಬಂಧಿಸಿದ್ದಾರೆ. 10 ಸಾವಿರ ರೂ. ಜಾಮೀನಿನ ಮೇಲೆ ವಿಠೋಲ್​ನನ್ನು ಕೊನೆಗೆ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಂಡತಿ ವಿಜಯಶ್ರೀ, ನನ್ನ ಗಂಡನಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಪೊಲೀಸರಿಗೆ ದೂರು ನೀಡಿದ್ದೆ. ಆಮೇಲೆ ನಾನೇ ಹಣ ಹೊಂದಿಸಿ ಅವರಿಗೆ ಜಾಮೀನು ಕೊಡಿಸಿದೆ ಎಂದು ಹೇಳಿದ್ದಾರೆ.
First published:November 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ