ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಇಲಾಖೆಯಾಗಿ ಮರುನಾಮಕರಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

1985ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಶಿಕ್ಷಣ ಸಚಿವಾಲಯದ ಹೆಸರನ್ನು ಮಾನವ ಸಂಪನ್ಮೂಲ ಸಚಿವಾಲಯ ಎಂದು ಬದಲಾಯಿಸಿದ್ದರು. ಈಗ ತಜ್ಞರ ಸಮಿತಿಯ ಸಲಹೆ ಮೇರೆಗೆ ಮತ್ತೆ ಹೆಸರು ಬದಲಾಯಿಸಲಾಗಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್

 • Share this:
  ನವದೆಹಲಿ(ಜುಲೈ 29): ರಾಜೀವ್ ಗಾಂಧಿ ಪ್ರಧಾನಿ ಆಗಿದ್ದ ಅವಧಿಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯವನ್ನು ಅದರ ಮೂಲ ಹೆಸರಿಗೆ ಬದಲಾಯಿಸಲಾಗುತ್ತಿದೆ. ಮಾನವ ಸಂಪನ್ಮೂಲ ಇಲಾಖೆಯನ್ನು ಶಿಕ್ಷಣ ಇಲಾಖೆಯಾಗಿ ಮತ್ತೆ ಬದಲಾಯಿಸುವ ಪ್ರಸ್ತಾಪವಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ. ಇವತ್ತೇ ಇದನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.

  ಇತ್ತೀಚೆಗೆ ರೂಪಿತವಾಗಿದ್ದ ಹೊಸ ಶಿಕ್ಷಣ ನೀತಿಯಲ್ಲಿ ಇದರ ಶಿಫಾರಸು ಮಾಡಲಾಗಿತ್ತು. ಅದರ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು ನ್ಯೂಸ್18ಗೆ ಮೂಲಗಳು ತಿಳಿಸಿವೆ.

  ಮಾಜಿ ಇಸ್ರೋ ಮುಖ್ಯಸ್ಥ ಕೆ ಕಸ್ತೂರಿರಂಗನ್ ನೇತೃತ್ವದದಲ್ಲಿ ವಿವಿಧ ತಜ್ಞರು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಹೆಸರನ್ನು ಬದಲಾಯಿಸುವ ಸಲಹೆ ನೀಡಿದ್ದರು. ಸಂಘ ಪರಿವಾರದ ಕೆಲ ಸಂಘಟನೆಗಳೂ ಕೂಡ ಹೆಸರು ಬದಲಾವಣೆಗೆ ಒತ್ತಾಯ ಮಾಡಿದ್ದವು.

  1985ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಶಿಕ್ಷಣ ಸಚಿವಾಲಯದ ಹೆಸರನ್ನು ಮಾನವ ಸಂಪನ್ಮೂಲ ಸಚಿವಾಲಯ ಎಂದು ಬದಲಾಯಿಸಿದ್ದರು. ಆಗ ರಾಜೀವ್ ಗಾಂಧಿಗೆ ಯಾರೋ ಕೆಲ ಜನರು ತಪ್ಪು ಮಾರ್ಗದರ್ಶನ ನೀಡಿದ್ದಿರಬಹುದು ಎಂಬುದು ಆರೆಸ್ಸೆಸ್ ನಾಯಕರ ಆರೋಪ.

  ಇದನ್ನೂ ಓದಿ: ಭಾರತದ ರಫೇಲ್, ಪಾಕಿಸ್ತಾನದ ಜೆಎಫ್-17 ಮತ್ತು ಚೀನಾದ ಜೆ-20 ಯುದ್ಧವಿಮಾನಗಳಲ್ಲಿ ಯಾವುದು ಬೆಸ್ಟ್?

  ಇದೇ ವೇಳೆ, 1986ರಲ್ಲಿ ರೂಪಿತವಾಗಿದ್ದ ಹಾಗೂ 1992ರಲ್ಲಿ ಮಾರ್ಪಾಡು ಕಂಡಿದ್ದ ಈಗಿನ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಕೂಡ ಬದಲಾಯಿಸಲಾಗುತ್ತಿದೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ ರಚಿಸಲಾದ ಪ್ರಸ್ತಾವಿತ ನೂತನ ಶಿಕ್ಷಣ ನೀತಿಯ ಅಂಶಗಳನ್ನು ಅಳವಡಿಸಲಾಗಲಿದೆ.  ಈ ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವುದು, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸುವುದು, ಪಠ್ಯಕ್ರಮದಲ್ಲಿ ಪ್ರಮುಖ ಬದಲಾವಣೆ ಸೇರಿದಂತೆ ಹಲವು ಹೊಸ ನೀತಿಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ.
  Published by:Vijayasarthy SN
  First published: