ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

HPCL Recruitment 2019: ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಗುಂಪು ಚರ್ಚೆಯಲ್ಲಿನ ಸಾಧನೆಯ ಆಧಾರದ ಮೇಲೆ ಇರಲಿದೆ.

zahir | news18-kannada
Updated:September 13, 2019, 2:43 PM IST
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
  • Share this:
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪ್ರಾಜೆಕ್ಟ್ ಎಂಜಿನಿಯರ್, ಕಾನೂನು ಅಧಿಕಾರಿ ಮತ್ತು ಎಚ್‌ಆರ್‌ಒ ಸೇರಿದಂತೆ 9 ವಿಭಾಗಗಳ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ವಿಭಾಗಗಳಲ್ಲಿ ಒಟ್ಟು 164 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹಿಂದೂಸ್ತಾನ್ ಪೆಟ್ರೋಲಿಯಂನ ಅಧಿಕೃತ ವೆಬ್‌ಸೈಟ್ hindustanpetroleum.com ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ಹೆಸರು ಮತ್ತು ಒಟ್ಟು ಹುದ್ದೆಗಳು:
-ಮೆಕಾನಿಕಲ್ ಪ್ರಾಜೆಕ್ಟ್ ಇಂಜಿನಿಯರ್: 63 ಹುದ್ದೆಗಳು

-ಸಿವಿಲ್ ಪ್ರಾಜೆಕ್ಟ್ ಇಂಜಿನಿಯರ್: 18 ಹುದ್ದೆಗಳು
-ಎಲೆಕ್ಟ್ರಿಕಲ್ ಪ್ರಾಜೆಕ್ಟ್ ಇಂಜಿನಿಯರ್: 25 ಹುದ್ದೆಗಳು
-ಇನ್ಸ್ಟ್ರುಮೆಂಟೇಶನ್ ಪ್ರಾಜೆಕ್ಟ್ ಇಂಜಿನಿಯರ್: 10 ಹುದ್ದೆಗಳು
-ಕೆಮಿಕಲ್ ರಿಫೈನರಿ ಇಂಜಿನಿಯರ್: 10 ಹುದ್ದೆಗಳು-ಕಾನೂನು ಅಧಿಕಾರಿ: 4 ಹುದ್ದೆಗಳು
-ಕ್ವಾಲಿಟಿ ಕಂಟ್ರೋಲ್ ಅಧಿಕಾರಿ: 20 ಹುದ್ದೆಗಳು
-ಹ್ಯೂಮನ್ ರಿಸೋರ್ಸ್​ ಆಫೀಸರ್: 8 ಹುದ್ದೆಗಳು
-ಫೈನ್ ಮತ್ತು ಸೇಫ್ಟಿ ಆಫೀಸರ್: 6 ಹುದ್ದೆಗಳು

ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಗುಂಪು ಚರ್ಚೆಯಲ್ಲಿನ ಸಾಧನೆಯ ಆಧಾರದ ಮೇಲೆ ಇರಲಿದೆ.

ಪರೀಕ್ಷೆಯ ಮಾದರಿ:
ಲಿಖಿತ ಪರೀಕ್ಷೆ ಎರಡು ಭಾಗಗಳಲ್ಲಿ ಇರಲಿದೆ. ಸಾಮಾನ್ಯ ಯೋಗ್ಯತೆ ಮತ್ತು ತಾಂತ್ರಿಕ ವೃತ್ತಿಪರ ಜ್ಞಾನದ ಪರೀಕ್ಷೆ ನಡೆಸಲಾಗುತ್ತದೆ. ಬೌದ್ಧಿಕ ಸಂಭಾವ್ಯ ಪರೀಕ್ಷೆ, ತಾರ್ಕಿಕ ಮತ್ತು ದತ್ತಾಂಶ ವ್ಯಾಖ್ಯಾನ ಮತ್ತು ಇಂಗ್ಲಿಷ್ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ಅರ್ಹತೆ:
ನೀವು ಅರ್ಜಿ ಸಲ್ಲಿಸಿದ ಹುದ್ದೆಗೆ ಸಂಬಂಧಿಸಿದ ತಾಂತ್ರಿಕ ವೃತ್ತಿಪರ ಜ್ಞಾನ ಮತ್ತು ಶಿಕ್ಷಣದ ಹಿನ್ನೆಲೆಯಲ್ಲಿ ಅರ್ಹ ಪದವಿ ಹೊಂದಿರಬೇಕು.

ಕನಿಷ್ಠ ಅರ್ಹತಾ ಒಟ್ಟಾರೆ ಅಂಕಗಳು (ಡೊಮೇನ್ + ಆಪ್ಟಿಟ್ಯೂಡ್) ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯರಿಗೆ 60% ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಒಬಿಸಿಎನ್‌ಸಿಗೆ 54% ಅಂಕಗಳನ್ನು ಪಡೆಯಬೇಕು.

ಗುಂಪು ಚರ್ಚೆಯಲ್ಲಿ ಸಾಮಾನ್ಯರು ​ 40% ಯುಆರ್‌ ಮಾರ್ಕ್ಸ್ ಪಡೆಯಬೇಕು. ಹಾಗೆಯೇ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಒಬಿಸಿಎನ್‌ಸಿ ಅಭ್ಯರ್ಥಿಗಳು 33.33% ಅಂಕಗಳನ್ನು ಗಳಿಸಬೇಕಾಗುತ್ತದೆ.

ಸಂದರ್ಶನದಲ್ಲಿ ಉತ್ತೀರ್ಣರಾಗಲು ಅಭ್ಯರ್ಥಿಯು ಯುಆರ್‌ ಶೇ. 40% ರಷ್ಟು ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಒಬಿಸಿಎನ್‌ಸಿಗೆ 33.33% ಅಂಕ ಪಡೆದಿರಬೇಕು.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 16, 2019.

ಇದನ್ನೂ ಕ್ಲಿಕ್ ಮಾಡಿ : ಮಗಳ ವಯಸ್ಸಿನವಳೊಂದಿಗೆ ಪ್ರಣಯದಾಟ: ಬಾಲಿವುಡ್ ನಟನಿಗೆ ನೆಟ್ಟಿಗರಿಂದ ತರಾಟೆ..!

ಈ ಹುದ್ದೆಗಳ ಮತ್ತಷ್ಟು ಮಾಹಿತಿಗಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ವೆಬ್​ಸೈಟ್​ hindustanpetroleum.com ಗೆ ಭೇಟಿ ನೀಡಿ ಪರಿಶೀಲಿಸಬಹುದು.First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ