Howdy Modi: ಸೋಷಿಯಲ್​​ ಮೀಡಿಯಾದಲ್ಲಿ ಟ್ರೆಂಡ್​​ ಸೆಟ್​​ ಮಾಡಿದ ಹೌಡಿ ಮೋದಿ!

ಹೌದು, ಕಳೆದ ಮೂರು ದಿನಗಳಿಂದ ದೇಶದಲ್ಲಿ ಸಾಕಷ್ಟು ಕೇಳಿಬರುತ್ತಿರುವ ಕೂಗೆಂದರೆ, ಅದು ಹೌಡಿ ಮೋದಿ. ಅಮೆರಿಕದ ಹ್ಯೂಸ್ಟನ್​​ನಲ್ಲಿ ನಡೆದ ಈ ಹೌಡಿ ಮೋದಿ ಎಂಬ ಕಾರ್ಯಕ್ರಮವೂ ಬಾರಿ ಟ್ರೆಂಡ್​​ ಸೆಟ್​​ ಮಾಡಿದೆ.

news18
Updated:September 23, 2019, 8:51 AM IST
Howdy Modi: ಸೋಷಿಯಲ್​​ ಮೀಡಿಯಾದಲ್ಲಿ ಟ್ರೆಂಡ್​​ ಸೆಟ್​​ ಮಾಡಿದ ಹೌಡಿ ಮೋದಿ!
ಪ್ರಧಾನಿ ಮೋದಿ
  • News18
  • Last Updated: September 23, 2019, 8:51 AM IST
  • Share this:
ನವದೆಹಲಿ(ಸೆ.23): ಇತ್ತೀಚೆಗೆ ಸಿನಿಮಾ ಮತ್ತು ಕ್ರೀಡೆ ಸುದ್ದಿಗಳು ಮಾತ್ರ ಟ್ರೆಂಡ್ ಆಗುತ್ತಿದ್ದುದ್ದನ್ನು ನಾವು ಸಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಆದರೆ, ಇದೇ ಮೊದಲ ಬಾರಿಗೆ ನಿರೀಕ್ಷೆಗೂ ಮೀರಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಗಟ್ಟಿಗೊಳಿಸುವ "ಹೌಡಿ ಮೋದಿ" ಎಂಬ ರಾಜಕೀಯ ಸುದ್ದಿಯೊಂದು ಸೋಷಿಯಲ್​​​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಹೌದು, ಕಳೆದ ಮೂರು ದಿನಗಳಿಂದ ದೇಶದಲ್ಲಿ ಸಾಕಷ್ಟು ಕೇಳಿಬರುತ್ತಿರುವ ಕೂಗೆಂದರೆ, ಅದು ಹೌಡಿ ಮೋದಿ. ಅಮೆರಿಕದ ಹ್ಯೂಸ್ಟನ್​​ನಲ್ಲಿ ನಡೆದ ಈ 'ಹೌಡಿ ಮೋದಿ' ಎಂಬ ಕಾರ್ಯಕ್ರಮವೂ ಬಾರಿ ಟ್ರೆಂಡ್​​ ಸೆಟ್​​ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇ ಈ ಟ್ರೆಂಡ್​​ ಸೆಟ್​​ ಕಾರಣ ಎನ್ನಬಹುದು.

ಹೌಡಿ ಮೋದಿ ಎಂಬುದು 'ಹೌ ಡು ಯು ಡು ಮೋದಿ' (ಹೇಗಿದ್ದೀರ ಮೋದಿ) ಎಂಬುದರ ಹೃಸ್ವ ರೂಪ. ನಿನ್ನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತದ ಪ್ರಮುಖ ಹತ್ತು ಭಾಷೆಗಳಲ್ಲಿ ಈ ಹೌಡಿ ಮೋದಿ ಎಂಬುದಕ್ಕೆ ಉತ್ತರ ನೀಡಿದ್ದಾರೆ. 'ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ' ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್​​​ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಶೇರ್​​ ಮಾಡುವ ಮೂಲಕ ನೆಟ್ಟಿಗರು ಟ್ರೆಂಡ್​ ಸೆಟ್​​ ಮಾಡಿದ್ದಾರೆ.

ಸೋಷಿಯಲ್​​ ಮೀಡಿಯಾದಲ್ಲಿ "ಹೌಡಿ ಮೋದಿ" ಟ್ರೆಂಡ್​​ ಸೆಟ್​​

Loading...





















----------------
First published:September 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...