ಚಂದ್ರನ ಮೇಲ್ಮೈ ಕುರಿತ ಹೆಚ್ಚಿನ ಅಧ್ಯಯನಕ್ಕೆ ಚಂದ್ರಯಾನ-2 ಹೇಗೆ ಸಹಕಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV Mk III (ಜಿಎಸ್​ಎಲ್​ವಿ ಎಂಕೆ 3) ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ನಿರ್ಮಿಸಿದೆ. ಇದು ಚಂದ್ರನ ದಕ್ಷಿಣ ಗೋಳಾರ್ಧವನ್ನು ಅಧ್ಯಯನ ಮಾಡಲಿದೆ.

Rajesh Duggumane | news18
Updated:July 22, 2019, 12:38 PM IST
ಚಂದ್ರನ ಮೇಲ್ಮೈ ಕುರಿತ ಹೆಚ್ಚಿನ ಅಧ್ಯಯನಕ್ಕೆ ಚಂದ್ರಯಾನ-2 ಹೇಗೆ ಸಹಕಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
Rajesh Duggumane | news18
Updated: July 22, 2019, 12:38 PM IST
ಸ್ವದೇಶಿ ನಿರ್ಮಿತ ಚಂದ್ರಯಾನ-1 ಯೋಜನೆ ಯಶಸ್ವಿಯಾಗಿತ್ತು. ಇದಾದ 10 ವರ್ಷಗಳ ನಂತರ ಭಾರತೀಯ  ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಅಂಗಳಕ್ಕೆ ಮತ್ತೊಂದು ಉಪಗ್ರಹ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಜುಲೈ 15 ರಂದು ಚಂದ್ರಯಾನ 2 ಉಪಗ್ರಹ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲು ಸಾಸಧ್ಯವಾಗಿತ್ತು. ಆದರೆ ತಾಂತ್ರಿಕ ದೋಷ ಕಂಡುಬಂದದ್ದರಿಂದ ಚಂದ್ರಯಾನ-2 ಯೋಜನೆಯನ್ನು ಮುಂದೂಡಲಾಗಿತ್ತು. ಇಂದು ಮಧ್ಯಾಹ್ನ 2.43ಕ್ಕೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಉಡಾವಣೆಗೊಳ್ಳಲಿದೆ.

ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV Mk III (ಜಿಎಸ್​ಎಲ್​ವಿ ಎಂಕೆ 3) ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ನಿರ್ಮಿಸಿದೆ. ಇದರ ಮೂಲಕ ಉಪಗ್ರಹವನ್ನು ಭೂ ಕಕ್ಷೆಯಿಂದ ಚಂದ್ರನ ಮೇಲ್ಮೈಗೆ ಉಡಾಯಿಸಲಾಗುವುದು.

ಚಂದ್ರುಯಾನ 2 ವಿಶೇಷತೆಗಳೇನು?:

ವಿಶ್ವದ ಯಾವ ರಾಷ್ಟ್ರವೂ ಚಂದ್ರನ ಮತ್ತೊಂದು ಪಾರ್ಶ್ವಮುಖವಾದ ದಕ್ಷಿಣ ಧ್ರುವವವನ್ನು ಅಧ್ಯಯನ ಮಾಡಿಲ್ಲ. ಹಾಗಾಗಿ ಚಂದ್ರಯಾನ-2 ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಭಾಗದ ಬಗ್ಗೆ ಅಧ್ಯಯನ ನಡೆಸಲಿದೆ.

ಈ ಉಪಗ್ರಹ 3,877 ಕೆಜಿ ತೂಕವಿದೆ. ಅಂದರೆ ಚಂದ್ರಯಾನ 1ರಲ್ಲಿ ಬಳಕೆ ಮಾಡಿದ ಉಪಗ್ರಹದ ತೂಕಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಭಾರವನ್ನು ಇದು ಹೊಂದಿದೆ. ಈ ಗಗನನೌಕೆಯು ಆರ್ಬಿಟರ್‌, ವಿಕ್ರಮ್‌ ಹೆಸರಿನ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ಹೆಸರಿನ ರೋವರ್‌ ಅನ್ನು ತನ್ನ ಜೊತೆಗೆ ಹೊತ್ತೊಯ್ಯುತ್ತಿದೆ.

ಈ ಯೋಜನೆಗೆ ತಗುಲುತ್ತಿರುವ ಒಟ್ಟು ವೆಚ್ಛ 978 ಕೋಟಿ ರೂಪಾಯಿ. ಅಂದರೆ ಹಾಲಿವುಡ್​ನ  'ಅವೆಂಜರ್​ ಎಂಡ್​​ಗೇಮ್​ ' ಸಿನಿಮಾ ಬಜೆಟ್​ಗಿಂತ ಕಡಿಮೆ ಮೊತ್ತದಲ್ಲಿ ಈ ಯೋಜನೆ ಸಿದ್ಧಗೊಂಡಿದೆ. 'ಅವೆಂಜರ್​ ಎಂಡ್​​ಗೇಮ್​ ' ಸಿನಿಮಾಗೆ 2400 ಕೋಟಿ ರೂ. ವೆಚ್ಛ ಮಾಡಲಾಗಿತ್ತು.
Loading...

ಉದ್ದೇಶವೇನು?:

ಈ ಉಪಗ್ರಹ  ಟೆರ್ರೇನ್​ ಮ್ಯಾಪಿಂಗ್​ ಕ್ಯಾಮರಾ 2 ಅನ್ನು ಹೊಂದಿದೆ. ಚಂದ್ರನ ಮೇಲಿಳಿಯುವ 20 ಕೆಜಿ ತೂಕದ ರೋವರ್​, ಚಂದ್ರನ ಮೇಲೆ ಸಂಚಾರ ನಡೆಸಿ ಅಲ್ಲಿಯ ಹವಾಮಾನ, ಅಲ್ಲಿನ ಕಲ್ಲು ಮತ್ತು ಮಣ್ಣಿನ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಂತರ ಅದನ್ನು ಆರ್ಬಿಟರ್​ ಮೂಲಕ ಭೂಮಿಗೆ ಕಳುಹಿಸುತ್ತದೆ. ಲ್ಯಾಂಡರ್​-ರೋವರ್​ನ ಆಯುಷ್ಯ 14 ದಿನಗಳಿದ್ದರೆ ಆರ್ಬಿಟರ್​ 1 ವರ್ಷದವರೆಗೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಹೊಸ ದಾಖಲೆ:

ಈ ವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್​ ಕಳುಹಿಸಿವೆ. ಈಗ ಈ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಕಳುಹಿಸಿದ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗಲಿದೆ.

First published:July 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...