SBI ಖಾತೆದಾರರೇ.. ಎಟಿಯಂನಲ್ಲಿ ಮಾತ್ರವಲ್ಲ ADWMನಲ್ಲೂ ಹಣ ಡ್ರಾ ಮಾಡಬಹುದು; ಹೇಗೆ ಗೊತ್ತಾ?
SBI Cash Withdrawal Rules: ಎಸ್ಬಿಐ ಈ ಬಗ್ಗೆ ಟ್ವೀಟ್ ಮಾಡಿದ್ದು, ಹಣ ತೆಗೆಯಲು ಎಟಿಯಂ ಮುಂದೆ ಏಕೆ ಕ್ಯೂ ನಿಲ್ಲಬೇಕು. ಎಡಿಡಬ್ಲ್ಯುಎಮ್ ಮೆಷಿನ್ನಲ್ಲೂ ಹಣ ಹಿಂತೆಗೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ’ ಎಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರು ಹಣ ತೆಗೆಯಲು ಎಟಿಯಂ ಮುಂದೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು, ಇದೀಗ ಆ ಸಮಸ್ಯೆಗೆ ಪರಿಹಾರವೆಂಬಂತೆ ಠೇವಣಿ ಮಾಡುವ ಯಂತ್ರದ ಮೂಲಕ (ಎಡಿಡಬ್ಲ್ಯುಎಮ್) ಮೂಲಕ ಹಣ ವಿತ್ ಡ್ರಾ ಮಾಡುವ ಅವಕಾಶವನ್ನು ಮಾಡಿದೆ. ಇದರಿಂದ ಗ್ರಾಹಕರು ಹಣ ಡ್ರಾ ಮಾಡಲು ಗಂಟೆಗಟ್ಟಲೆ ಎಟಿಯಂ ಮುಂದೆ ನಿಂತು ಕ್ಯೂ ನಿಲ್ಲಿಸುವುದನ್ನು ತಪ್ಪಿಸಿದೆ. ಗ್ರಾಹಕರು ಎಟಿಯಂನಂತಯೇ ಎಡಿಡಬ್ಲ್ಯುಎಮ್ ಮೆಷಿನ್ನಲ್ಲಿ ಹಣ ಡ್ರಾ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಎಟಿಯಂಗೆ ನೀಡುತ್ತಿದ್ದ ಸೆಕ್ಯುರಿಟಿ ಪಿನ್ಕೋಡ್ ಅನ್ನು ಬಳಸಿಕೊಂಡು ಎಡಿಡಬ್ಲ್ಯುಎಮ್ ಮೆಷಿನ್ನಲ್ಲಿ ಹಣವನ್ನು ಡ್ರಾ ಮಾಡಬಹುದಾಗಿದೆ. ಇದರಿಂದ ಅನೇಕರಿಗೆ ಪ್ರಯೋಜನ ಸಿಗುವ ವ್ಯವಸ್ಥೆಯನ್ನುಎಸ್ಬಿಐ ಬ್ಯಾಂಕ್ ಕಲ್ಪಿಸಿದೆ.
ಎಸ್ಬಿಐ ಈ ಬಗ್ಗೆ ಟ್ವೀಟ್ ಮಾಡಿದ್ದು, ಹಣ ತೆಗೆಯಲು ಎಟಿಯಂ ಮುಂದೆ ಏಕೆ ಕ್ಯೂ ನಿಲ್ಲಬೇಕು. ಎಡಿಡಬ್ಲ್ಯುಎಮ್ ಮೆಷಿನ್ನಲ್ಲೂ ಹಣ ಹಿಂತೆಗೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ’ ಎಂದಿದೆ.
ಎಸ್ಬಿಐ ಬ್ಯಾಂಕ್ ದೇಶದಾದ್ಯಂತ 13 ಸಾವಿರಕ್ಕೂ ಅಧಿಕ ಎಡಿಡಬ್ಲ್ಯುಎಮ್ ಮೆಷಿನ್ ಸ್ಥಾಪಿಸಿದೆ.
ಎಡಿಡಬ್ಲ್ಯುಎಮ್ ಮೆಷಿನ್ನಲ್ಲಿ ಹಣ ಡ್ರಾ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
-ಡೆಬಿಟ್ ಕಾರ್ಡ್ ಬಳಸಿ ನಿಮ್ಮ ಹತ್ತಿರದ ಎಸ್ಬಿಐ ಎಡಿಡಬ್ಲ್ಯುಎಮ್ಗೆ ಭೇಟಿ ನೀಡಿ
-ನಂತರ ಡೆಬಿಟ್ ಕಾರ್ಡ್ ಬಳಸಿ ಸ್ವೈಪ್ ಮಾಡಿ. ಭಾಷೆಯನ್ನು ಆರಿಸಿ.
- ಭಾಷೆಯನ್ನು ಆರಿಸಿದ ನಂತರ ಪಿನ್ ಕೋಡ್ ನಮೂದಿಸಿ.
- ಮೊತ್ತವನ್ನು ನಮೂದಿಸಿ ನಂತರ ಹಣವನ್ನು ಡ್ರಾ ಮಾಡಿಕೊಳ್ಳಿ.
ಎಸ್ಬಿಐ ಸೆ. 18ರಿಂದ ಒಟಿಪಿ ಆಧಾರಿತ ನಗದು ಹಿಂಪಡೆಯುವ ಸೇವೆಯನ್ನು ಪ್ರಾರಂಭಿಸಿದೆ. 10 ಸಾವಿರಕ್ಕಿಂತ ಅಧಿಕ ಮೊತ್ತವನ್ನು ಡ್ರಾ ಮಾಡಬೇಕಾದರೆ ಒಟಿಪಿ ನಮೂದಿಸಬೇಕಾಗಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ