PF Rule Update: ಕೆಲಸ ಬದಲಿಸುತ್ತಿದ್ದೀರಾ? ನಿಮ್ಮ ಇಪಿಎಫ್​ ಅಕೌಂಟ್​ ಆನ್​ಲೈನ್​ ಟ್ರಾನ್ಸ್​ಫರ್​ ಮಾಡೋದು ಹೀಗೆ

How to transfer PF money to another account: ಕೂತ ಜಾಗದಿಂದಲೇ ನಿಮ್ಮ ಅಕೌಂಟ್​ನಲ್ಲಿರುವ ಹಣವನ್ನು ಇನ್ನೊಂದು ಪಿಎಫ್​ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡಬಹುದು. ಹೇಗೆ ಎಂಬುದರ ಡಿಟೇಲ್ಸ್​ ಈ ಕೆಳಗಿದೆ

EPFO

EPFO

 • Share this:
  ತಂತ್ರಜ್ಞಾನದ ಆವಿಷ್ಕಾರ ಮತ್ತು ಡಿಜಿಟಲ್​ ಕ್ರಾಂತಿಯಿಂದ ನಮ್ಮ ದಿನನಿತ್ಯದ ವ್ಯವಹಾರಗಳನ್ನು ಬಹಳ ಅನಾಯಾಸವಾಗಿ ಮಾಡಬಹುದಾಗಿದೆ. ಈ ಹಿಂದೆ ಮತ್ತೊಬ್ಬರ ಅಕೌಂಟ್​ಗೆ ದುಡ್ಡು ಹಾಕಬೇಕು ಎಂದರೆ, ಬ್ಯಾಂಕಿಗೆ ಹೋಗಿ ಕ್ಯೂನಲ್ಲಿ ನಿಲ್ಲಬೇಕಿತ್ತು. ಆದರೆ ಈಗ ಸ್ಮಾರ್ಟ್​ಫೋನ್​ನಲ್ಲಿ ಒಂದು ಕ್ಷಣದಲ್ಲಿ ಟ್ರಾನ್ಸ್​ಫರ್​ ಮಾಡಬಹುದು. ಅದೇ ರೀತಿ ಬ್ಯಾಂಕ್​, ಪಿಎಫ್​, ಪೋಸ್ಟ್​ ಆಫೀಸ್​, ಇನ್ನಿತರೆ ಕೆಲಸಗಳು ಬೆರಳ ತುದಿಯಲ್ಲಿಯೇ ಮಾಡಬಹುದಾಗಿದೆ. ಡಿಜಿಟಲ್​ ಕ್ರಾಂತಿಯಿಂದ ಆದ ಇನ್ನೊಂದು ಮುಖ್ಯ ಪ್ರಯೋಜನವೆಂದರೆ ಉದ್ಯೋಗ ಭವಿಷ್ಯ ನಿಧಿಯ ನಿರ್ವಹಣೆ. ನಿಮ್ಮ ಇಪಿಎಫ್​ ಅಕೌಂಟ್​ನಿಂದ ಹಣ ಡ್ರಾ ಮಾಡುವುದಾಗಲೀ, ಅಥವಾ ಮತ್ತೊಂದು ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡುವುದಾಗಲೀ ಈಗ ಅತಿ ಸುಲಭದ ಕೆಲಸ. ಮುಂಚೆಯಾದರೆ, ಈ ಕೆಲಸಕ್ಕೆ ಪಿಎಫ್​ ಕಚೇರಿಗೆ ವಾರಗಟ್ಟಲೆ ಅಲೆಯಬೇಕಾಗಿತ್ತು. ಆದರೆ ಈಗ ಕೂತ ಜಾಗದಿಂದಲೇ ನಿಮ್ಮ ಅಕೌಂಟ್​ನಲ್ಲಿರುವ ಹಣವನ್ನು ಇನ್ನೊಂದು ಪಿಎಫ್​ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡಬಹುದು. ಹೇಗೆ ಎಂಬುದರ ಡಿಟೇಲ್ಸ್​ ಈ ಕೆಳಗಿದೆ.

  PF Account​ನಲ್ಲಿರುವ ಹಣವನ್ನು ಇನ್ನೊಂದು ಪಿಎಫ್​ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡುವ ವಿಧಾನ ಈ ಕೆಳಗಿದೆ:

  ಹಂತ 1: Official EPFO Website​ಗೆ ಲಾಗಿನ್​ ಮಾಡಿ: https://unifiedportal-mem.epfindia.gov.in/memberinterface

  ಹಂತ 2: ನಿಮ್ಮ UAN Number​ ಮತ್ತು ಪಾಸ್​ವರ್ಡ್​ ಹಾಕಿ ಲಾಗಿನ್​ ಮಾಡಿ.

  ಹಂತ 3: Online Services ಸೆಕ್ಷನ್​ ಕ್ಲಿಕ್​ ಮಾಡಿ. ಅದರಲ್ಲಿ ಒನ್​ ಮೆಂಬರ್​ ಇಪಿಎಫ್​ ಅಕೌಂಟ್​ (ಟ್ರಾನ್ಸ್​ಫರ್​ ರಿಕ್ವೆಸ್ಟ್​) ಕ್ಲಿಕ್​ ಮಾಡಿ (One Member EPF Account Transfer Request).

  ಹಂತ 4: ಹೊಸ ಸಂಸ್ಥೆಯ ಅಧಿಕೃತ ಮಾಹಿತಿ ನಮೂದಿಸಿ ವೈಯಕ್ತಿಕ ಪಿಎಫ್​ ಅಕೌಂಟ್​ ವೆರಿಫೈ ಮಾಡಿ.

  ಹಂತ 5: ನಂತರ ಡಿಟೇಲ್ಸ್​ ಬಟನ್​ ಕ್ಲಿಕ್​ ಮಾಡಿ. ನಿಮ್ಮ ಹಳೆಯ ಪಿಎಫ್​ ಅಕೌಂಟ್​ ಮತ್ತು ಸಂಸ್ಥೆಯ ಮಾಹಿತಿ ಅಲ್ಲಿ ಬರುತ್ತದೆ.

  ಹಂತ 6: ಹಿಂದಿನ ಸಂಸ್ಥೆ ಅಥವಾ ಈಗ ಕೆಲಸ ಮಾಡುತ್ತಿರುವ ಸಂಸ್ಥೆ ಎರಡರಲ್ಲಿ ಒಂದನ್ನು ನೀವು ಅಟೆಸ್ಟಿಂಗ್​ ಫಾರ್ಮ್​ನಲ್ಲಿ ಮಾರ್ಕ್​ ಮಾಡಬೇಕು.

  ಹಂತ 7: ನಂತರ ಗೆಟ್​ ಒಟಿಪಿ ಆಪ್ಷನ್​ ಕ್ಲಿಕ್​ ಮಾಡಿ. 6 ಸಂಖ್ಯೆಗಳ ಒಟಿಪಿ ನಿಮ್ಮ ಅಧಿಕೃತ ಮೊಬೈಲ್​ ಸಂಖ್ಯೆಗೆ ಬರುತ್ತದೆ.

  ಹಂತ 8: ಒಟಿಪಿ ಟೈಪ್​ ಮಾಡಿ ಸಬ್ಮಿಟ್​ ಬಟನ್​ ಕ್ಲಿಕ್​ ಮಾಡಿದರೆ ನಿಮ್ಮ ಹಳೆ ಪಿಎಫ್​ ಅಕೌಂಟ್​ನಿಂದ ಹೊಸ ಅಕೌಂಟ್​ಗೆ ಹಣ ಟ್ರಾನ್ಸ್​ಫರ್​ ಆಗುತ್ತದೆ.

  ಇದನ್ನೂ ಓದಿ: ದಿನಕ್ಕೆ ರೂ 50 ಹೂಡಿಕೆ ಮಾಡಿ, ಕಡೆಗೆ ಬರೋಬ್ಬರಿ 34 ಲಕ್ಷ ಲಾಭ ಗಳಿಸಿ: ಇಲ್ಲಿದೆ Savings Tips

  ಇಷ್ಟು ಮಾಡಿದ ನಂತರ ಇನ್ನೇನನ್ನೂ ನೀವು ಮಾಡುವುದು ಬೇಡ. ನಿಮ್ಮ ಹಳೆಯ ಸಂಸ್ಥೆ ಅಥವಾ ಹೊಸ ಸಂಸ್ಥೆ ನಿಮ್ಮ ರಿಕ್ವೆಸ್ಟ್​ನ್ನು ವೆರಿಫೈ ಮಾಡಿ, ಅನುಮತಿ ನೀಡಿದರೆ ಸಾಕು. ಹಣ ಅದಾಗದೇ ನಿಮ್ಮ ಖಾತೆಗೆ ಜಮೆಯಾಗುತ್ತದೆ. ಆದರೆ ನೀವು ಇನ್ನೊಂದು ವಿಚಾರವನ್ನು ಗಮನವಿಟ್ಟು ಮಾಡಬೇಕು. ನೀವು ಆನ್​ಲೈನ್​ ರಿಕ್ವೆಸ್ಟ್​ ಕಳಿಸಿದ ಹತ್ತು ದಿನಗಳೊಳಗಾಗಿ, ಸ್ವಯಂ ದೃಢೀಕೃತ ಪತ್ರವನ್ನು ಆಯ್ಕೆ ಮಾಡಿದ ಸಂಸ್ಥೆಗಳಿಗೆ ನೀಡಬೇಕು. ಅದು ಪಿಡಿಎಫ್​ ಫಾರ್ಮ್ಯಾಟ್​ನಲ್ಲಿ ಇರಬೇಕು.

  ಇದನ್ನೂ ಓದಿ: Investment Guide: ಆರ್ಥಿಕ ಪ್ರಗತಿಗಾಗಿ ಯಾವ ಹೂಡಿಕೆ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು? ಲಾಭ ಗಳಿಸುವುದು ಹೇಗೆ?

  ಸ್ವಯಂ ದೃಢೀಕೃತ ಪತ್ರ (Self Attestation Form) ಕೊಟ್ಟ ನಂತರ, ನಿಮ್ಮ ಸಂಸ್ಥೆ ಅದನ್ನು ಡಿಜಿಟಲ್​ ಆಗಿ ಆನ್​ಲೈನ್​ನಲ್ಲೇ ಅನುಮತಿಸುತ್ತದೆ. ಅದಾದ ನಂತರ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಜತೆಗೆ ಈ ಎಲ್ಲಾ ಹಂತಗಳನ್ನೂ ನೀವು ಕುಳಿತಲ್ಲೇ ಟ್ರಾಕ್​ ಮಾಡಬಹುದು. ನಿಮ್ಮ ರಿಕ್ವೆಸ್ಟ್​ ಫಾರ್ಮ್​ ಯಾವ ಹಂತದಲ್ಲಿದೆ ಎಂಬುದನ್ನು ನೀವು ಬೇಕೆಂದಾಗ ತಿಳಿದುಕೊಳ್ಳಬಹುದು. ನಿಮ್ಮ ಖಾತೆಗೆ ಹಣ ವರ್ಗಾವಣೆಯಾದ ನಂತರ ನಿಮ್ಮ ಅಧಿಕೃತ ಮೊಬೈಲ್​ ಸಂಖ್ಯೆಗೆ ಮೆಸೇಜ್​ ಕೂಡ ಬರುತ್ತದೆ.
  Published by:Sharath Sharma Kalagaru
  First published: