Har Ghar Tiranga: ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ರಾಷ್ಟ್ರ ಧ್ವಜ

ರಾಷ್ಟ್ರ ಧ್ವಜ

ಸಾಮಾನ್ಯ ಜನರಿಗೆ ತ್ರಿವರ್ಣ ಧ್ವಜದ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಅದನ್ನು ಹಾರಿಸುವುದು ಎಷ್ಟು ಮುಖ್ಯವೋ ಅದನ್ನು ಸೂಕ್ತವಾಗಿ ಮಡಚುವುದು ಕೂಡ ತುಂಬಾ ಮುಖ್ಯವಾಗಿದೆ. ಇದರ ಕುರಿತು ಕೇಂದ್ರ ಸರ್ಕಾರ ದೇಶದ ಜನತೆಗೆ ಧ್ವಜವನ್ನು ಹಾರಿಸಿದ ನಂತರ ಹೇಗೆ ಮಡಚುವುದು ಎಂಬುದರ ಕುರಿತು ಮಾರ್ಗದರ್ಶಿಯನ್ನು ಹಂಚಿಕೊಂಡಿದೆ.

ಮುಂದೆ ಓದಿ ...
  • Share this:

ಸ್ವಾತಂತ್ರ್ಯ ದಿನಾಚರಣೆಗೆ (Independence Day) ಇನ್ನೇನು ಕೆಲವು ದಿನಗಳು ಮಾತ್ರ ಇದೆ. ಈ ವರ್ಷದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು (Central Government) 'ಹರ್ ಘರ್ ತಿರಂಗ' ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಅಂಗವಾಗಿ ಭಾರತದ ನಾಗರಿಕರು ಆಗಸ್ಟ್ 13 ಮತ್ತು 15ರ ನಡುವೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು (National Flag) ಹಾರಿಸಬೇಕೆಂದು ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಸಾಮಾನ್ಯ ಜನರಿಗೆ ತ್ರಿವರ್ಣ ಧ್ವಜದ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಅದನ್ನು ಹಾರಿಸುವುದು ಎಷ್ಟು ಮುಖ್ಯವೋ ಅದನ್ನು ಸೂಕ್ತವಾಗಿ ಮಡಚುವುದು (Fold) ಕೂಡ ತುಂಬಾ ಮುಖ್ಯವಾಗಿದೆ. ಇದರ ಕುರಿತು ಕೇಂದ್ರ ಸರ್ಕಾರ ದೇಶದ ಜನತೆಗೆ ಧ್ವಜವನ್ನು ಹಾರಿಸಿದ ನಂತರ ಹೇಗೆ ಮಡಚುವುದು ಎಂಬುದರ ಕುರಿತು ಮಾರ್ಗದರ್ಶಿಯನ್ನು ಹಂಚಿಕೊಂಡಿದೆ.


'ಹರ್ ಘರ್ ತಿರಂಗ' ಅಭಿಯಾನ


ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂತೋಷದ ಸಲುವಾಗಿ 75 ವರ್ಷಗಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕೇಂದ್ರದ 'ಆಜಾದಿ ಕಾ ಅಮೃತ್ ಮಹೋತ್ಸವ' ದ ಅಂಗವಾಗಿ 'ಹರ್ ಘರ್ ತಿರಂಗ' ಅಭಿಯಾನವನ್ನು ಕಳೆದ ತಿಂಗಳು ಪ್ರಾರಂಭಿಸಲಾಯಿತು. ಅಭಿಯಾನವನ್ನು ಪ್ರಾರಂಭಿಸಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು "ರಾಷ್ಟ್ರಧ್ವಜದೊಂದಿಗೆ ನಮ್ಮ ಸಂಪರ್ಕವು ಮತ್ತಷ್ಟು ಹತ್ತಿರವಾಗಿಸುತ್ತದೆ” ಎಂದು ಟ್ವೀಟರ್‌ನಲ್ಲಿ ಹೇಳಿದ್ದಾರೆ.


ಇದನ್ನೂ ಓದಿ:  AzaadiSAT: ಬಾಹ್ಯಾಕಾಶದಲ್ಲಿಯೂ ಹಾರಲಿದೆ ರಾಷ್ಟ್ರಧ್ವಜ; ಇದು ಗ್ರಾಮೀಣ ವಿದ್ಯಾರ್ಥಿನಿಯರ ಸಾಧನೆ


“ಜುಲೈ 22 ನಮ್ಮ ದೇಶದ ಇತಿಹಾಸದಲ್ಲಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. 1947 ರಲ್ಲಿ ಈ ದಿನ ನಮ್ಮ ರಾಷ್ಟ್ರಧ್ವಜವನ್ನು ಸ್ವೀಕಾರ ಮಾಡಲಾಯಿತು. ನಮ್ಮ ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಸಮಿತಿಯ ವಿವರಗಳು ಮತ್ತು ಪಂಡಿತ್ ನೆಹರೂ ಅವರು ಹಾರಿಸಿದ ಮೊದಲ ತ್ರಿವರ್ಣ ಧ್ವಜ ಸೇರಿದಂತೆ ಇತಿಹಾಸದಿಂದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ”ಎಂದು ಪ್ರಧಾನಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.


ಈ ಅಭಿಯಾನ ಪ್ರಾರಂಭವಾಗುವ ಮೊದಲು, ರಾಷ್ಟ್ರಧ್ವಜವನ್ನು ಹೇಗೆ ಸರಿಯಾಗಿ ಮಡಚುವುದು ಎಂದು ಕೇಂದ್ರ ಸರ್ಕಾರವು ಕೆಲವು ಹಂತಗಳು ಜನತೆಗೆ ತಿಳಿಸಿದೆ. ಆ ಹಂತಗಳು ಇಲ್ಲಿವೆ:


ಹಂತ 1: ತ್ರಿವರ್ಣವನ್ನು ಅಡ್ಡಲಾಗಿ ಇರಿಸಿ.
ಹಂತ 2: ಬಿಳಿ ಬ್ಯಾಂಡ್‌ನ ಕೆಳಗೆ ಕೇಸರಿ ಮತ್ತು ಹಸಿರು ಬ್ಯಾಂಡ್‌ಗಳು ಇರುವುದನ್ನು ಖಚಿತಪಡಿಸಿಕೊಳ್ಳಿ.


ಹಂತ 3: ನಂತರ, ಕೇಸರಿ ಮತ್ತು ಹಸಿರು ಬ್ಯಾಂಡ್‌ಗಳು ಸ್ವಲ್ಪವೇ ಕಾಣುವ ಹಾಗೆ, ಅಶೋಕ ಚಕ್ರ ಮಾತ್ರ ಗೋಚರಿಸುವ ರೀತಿಯಲ್ಲಿ ಬಿಳಿ ಪಟ್ಟಿಯನ್ನು ಮಡಚಿ.
ಹಂತ 4: ಮಡಿಚಿದ ಧ್ವಜವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ ಅಂಗೈಗಳಲ್ಲಿ ತೆಗೆದುಕೊಂಡು ಹೋಗಿ.


ಅಂತಿಮವಾಗಿ ಹರ್ ಫರ್ ತಿರಂಗಾ ಅಭಿಯಾನದಲ್ಲಿ ರಾಜ್ಯ ಸರ್ಕಾರದ ಸರ್ಕಾರಿ, ಅರೆ ಸರಕಾರಿ, ನಿಗಮ, ಮಂಡಳಿ, ಸಾರ್ವಜನಿಕ ಉದ್ಯಮಗಳು, ಸ್ವಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಇತರೆ ಎಲ್ಲಾ ಸಿಬ್ಬಂದಿ ಮತ್ತು ಸಾರ್ವಜನಿಕರು ಅವರ ಕುಟುಂಬ ವರ್ಗದವರು ಸೇರಿದಂತೆ ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು. ಆ ಮೂಲಕ ತಮ್ಮ ರಾಷ್ಟ್ರ ಪ್ರೇಮವನ್ನು ಮೆರೆಯಬೇಕು.


ರಾಷ್ಟ್ರ ಧ್ವಜವನ್ನು ಹಾರಿಸುವಾಗ ಗೊತ್ತಿರಬೇಕಾದ ಕೆಲವು ನಿಯಮಗಳು


ಗೃಹ ವ್ಯವಹಾರಗಳ ಮಂತ್ರಾಲಯವು ಧ್ವಜ ಸಂಹಿತೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕೈಯಲ್ಲಿ ತಯಾರಿಸಿದ ರಾಷ್ಟ್ರೀಯ ಧ್ವಜ ಅಥವಾ ಯಂತ್ರದಿಂದ ತಯಾರಿಸಿದ ಪಾಲಿಸ್ಟರ್, ಹತ್ತಿ, ಉಣ್ಣೆ ರೇಷ್ಮೆ, ಖಾದಿ ಬಟ್ಟೆಯಿಂದ ತಯಾರಿಸುವ ರಾಷ್ಟ್ರೀಯ ಧ್ವಜವನ್ನು ಹಾರಿಸಬಹುದಾಗಿದೆ.


ಇದನ್ನೂ ಓದಿ: Independence Day 2022: ಹೇಗಿತ್ತು 1947ರಲ್ಲಿ ಮೊದಲ ಸ್ವಾತಂತ್ರ್ಯ ಹಬ್ಬ? ಫೋಟೋಗಳಲ್ಲಿ ನೋಡಿ ಅಂದಿನ ಸಂಭ್ರಮ!


ರಾಷ್ಟ್ರೀಯ ಧ್ವಜದ ಅಳತೆಯು 20/30 ಅಥವಾ ಈ ಅಳತೆಯ ಅರ್ಧದಷ್ಟು ಸಹ ಆಗಿರಬಹುದೆಂದು ಕೇಂದ್ರ ಸರಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರಾಷ್ಟ್ರಧ್ವಜಗಳ ಹಂಚಿಕೆ ಮತ್ತು ಮಾರಾಟ ಮಾಡುವ ಸ್ಥಳಗಳನ್ನು ಗ್ರಾಮಮಟ್ಟದಲ್ಲಿ ಗ್ರಾಮ ಪಂಚಾಯಿತಿ ಮತ್ತು ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಗುರುತಿಸಬೇಕು. ನ್ಯಾಯಬೆಲೆ ಅಂಗಡಿಗಳನ್ನು ಸಹ ಧ್ವಜಗಳ ವಿತರಣೆ, ಮಾರಾಟದ ಕೇಂದ್ರವಾಗಿ ಉಪಯೋಗಿಸಿಕೊಳ್ಳಬಹುದು.


ಎಲ್ಲ ಸರಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳು 'ಹರ್ ಘರ್ ತಿರಂಗಾ' ಅಭಿಯಾನ ಕುರಿತು ಕೈಗೊಂಡ ಕ್ರಮದ ಬಗ್ಗೆ ಛಾಯಾಚಿತ್ರ ಸಹಿತ ಅನುಪಾಲನಾ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ.

top videos
    First published: