ನೀವು 2022ರ ಜೆಇಇ ಮುಖ‍್ಯ ಪರೀಕ್ಷೆ ತೆಗೆದುಕೊಳ್ಳುತ್ತಿದ್ದೀರಾ..? ಈ ಸಿದ್ದತೆಗಳ ಕಡೆ ಗಮನ ಕೊಡಿ

ಅಧ್ಯಯನಕ್ಕೆ ತೊಡಗುವಾಗ ಯಶಸ್ವಿ ಫಲಿತಾಂಶ ಪಡೆಯಲು ಯಾವುದಾದರೂ ಒಂದು ವಿಷಯ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಡೀ ದೇಶದಲ್ಲಿ ಜೆಇಇ (JEE Exam) ಅತ್ಯಂತ ಸವಾಲಿನ ಪರೀಕ್ಷೆಯಾಗಿದೆ. ಈ ಪರೀಕ್ಷೆಯು ಬದ್ಧತೆ, ಸ್ಥಿರತೆ ಹಾಗೂ ತಾಳ್ಮೆಯನ್ನು ಬೇಡುತ್ತದೆ. ಸಂಯುಕ್ತ ಮುಖ್ಯ ಪರೀಕ್ಷೆ ಹಾಗೂ ಸಂಯುಕ್ತ ಸುಧಾರಿತ ಪರೀಕ್ಷೆಗಳೆರಡೂ 11 ಮತ್ತು 12ನೇ ತರಗತಿಗಳಲ್ಲಿ ಅಧ್ಯಯನ ಮಾಡಿರುವ ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry) ಹಾಗೂ ಗಣಿತದ (Math's) ಪಠ್ಯವನ್ನು ಒಳಗೊಂಡಿರುತ್ತದೆ. ಪ್ರತಿ ವರ್ಷ ಸಾವಿರಾರು ಆಕಾಂಕ್ಷಿಗಳು ಅತ್ಯಂತ ಭರವಸೆದಾಯಕ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಕನಸಿನ ಶಿಕ್ಷಣ ಪಡೆಯಲು ಈ ಪರೀಕ್ಷೆ ತೆಗೆದುಕೊಳ್ಳುತ್ತಾರೆ. 12ನೇ ತರಗತಿಯ ಪರೀಕ್ಷೆಯ ಜೊತೆಜೊತೆಗೇ ಈ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧತೆ ನಡೆಸುವಂತೆ ಸಲಹೆ ನೀಡಲಾಗುತ್ತದೆ.

  ವಿದ್ಯಾರ್ಥಿಗಳು ತಮ್ಮ ಸಿದ್ಧತೆ ವ್ಯವಸ್ಥಿತವಾಗಿಸಿಕೊಳ್ಳಲು ಈ ಪರೀಕ್ಷೆಗಾಗಿ ಅಧ್ಯಯನ ಮಾಡಬೇಕಾದ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿರಬೇಕಾಗುತ್ತದೆ. ಸುಲಭ ಹಾಗೂ ಕ್ಲಿಷ್ಟ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಅಧ್ಯಯನ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅಧ್ಯಯನಕ್ಕೆ ತೊಡಗುವಾಗ ಯಶಸ್ವಿ ಫಲಿತಾಂಶ ಪಡೆಯಲು ಯಾವುದಾದರೂ ಒಂದು ವಿಷಯ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

  ಅಧ್ಯಯನ ವೇಳಾಪಟ್ಟಿ ಸಿದ್ಧಪಡಿಸಿ

  ನೀವು ನಿಮ್ಮ ವೇಗವನ್ನು ಆಧರಿಸಿ ಎಲ್ಲ 3 ವಿಷಯಗಳು ಸೇರ್ಪಡೆಯಾಗುವಂತೆ ದೈನಂದಿನ ಅಧ್ಯಯನ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬೇಕು ಹಾಗೂ ಆ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಿಂದ ನಿರ್ಲಕ್ಷತೆ ಹಾಗೂ ಅಧಿಕ ಸಮಯ ವ್ಯಯ ತಪ್ಪಿ ಸೂಕ್ತ ಸಮಯದಲ್ಲಿ ಅಧ್ಯಾಯಗಳನ್ನು ಪೂರ್ಣಗೊಳಿಸಲು ಅನುಕೂಲವಾಗುತ್ತದೆ.

  ಋಣಾತ್ಮಕ ಅಂಕ ಇಲ್ಲ

  ಪರೀಕ್ಷಾ ವಿಧಾನ ಅರ್ಥ ಮಾಡಿಕೊಳ್ಳುವುದು ತುಂಬಾ ಕ್ಲಿಷ್ಟವಾಗಿದ್ದು, ಸಮಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿರುವ 90 ಪ್ರಶ್ನೆಗಳ ಪೈಕಿ 75 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸುವ ಸಮಯವನ್ನು ಮೂರು ಗಂಟೆಗಳ ಕಾಲ ನಿಗದಿಗೊಳಿಸಲಾಗಿದೆ. ಪ್ರತಿ ವಿಷಯವೂ 20 ಬಹು ಆಯ್ಕೆ ಪ್ರಶ‍್ನೆಗಳನ್ನು ಒಳಗೊಂಡಿದ್ದು, 10 ಅಂಕಿಗಳ ಪ್ರಶ್ನೆಗಳಿರುತ್ತವೆ. ಈ ಪೈಕಿ 5 ಪ್ರಶ‍್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಬಹು ಆಯ್ಕೆ ಪ್ರಶ‍್ನೆಗಳ ಪೈಕಿ ಪ್ರತಿ ಸರಿಯಾದ ಉತ್ತರಕ್ಕೆ 4 ಅಂಕಗಳನ್ನು ನೀಡಿದರೆ, ಪ್ರತಿ ತಪ್ಪು ಉತ್ತರಗಳಿಗೆ ಒಂದು ಅಂಕ ಕಡಿತಗೊಳಿಸಲಾಗುತ್ತದೆ. ಅಂಕಿಗಳ ಪ್ರಶ್ನೆಗಳಿಗೆ 4 ಅಂಕಗಳನ್ನು ನೀಡಲಾಗುತ್ತದೆ. ಆದರೆ, ಈ ವಿಭಾಗದಲ್ಲಿ ಯಾವುದೇ ಋಣಾತ್ಮಕ ಅಂಕ ನೀಡಲಾಗುವುದಿಲ್ಲ.

  ಪ್ರಶ್ನೆ ಪತ್ರಿಕೆಗಳು ಬಹು ಭಾಷೆಯಲ್ಲಿ ಲಭ್ಯವಿದ್ದು, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಳಿ, ಗುಜರಾತಿ, ಕನ್ನಡ, ಮರಾಠಿ, ಮಲಯಾಳಂ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದೆ.

  ಇದನ್ನು ಓದಿ: ವೋಟರ್​ ಐಡಿ ಜೊತೆ ಆಧಾರ್​ ಲಿಂಕ್​; ಲೋಕಸಭೆಯಲ್ಲಿ ಮಸೂದೆ ಪಾಸ್

  ಭೌತಶಾಸ್ತ್ರ: ಭೌತಶಾಸ್ತ್ರ ಮುಖ್ಯವಾಗಿ ಪರಿಕಲ್ಪನೆ ಅರ್ಥ ಮಾಡಿಕೊಳ್ಳುವುದನ್ನು ಅವಲಂಬಿಸಿದೆ. ವಿದ್ಯಾರ್ಥಿಗಳು ಯಾವುದೇ ಅಸ್ಪಷ್ಟತೆಯಿಲ್ಲದೆ ಪರಿಕಲ್ಪನೆ ಅರ್ಥ ಮಾಡಿಕೊಳ್ಳಲು ತಮ್ಮ ಗಮನ ನೀಡಬೇಕು. ಪರಿಕಲ್ಪನೆಯಲ್ಲಿ ನುರಿತರಾದ ನಂತರ ಆ ಪರಿಣತಿಯನ್ನು ಲೆಕ್ಕ ಪರಿಹಾರಕ್ಕಾಗಿ ಬಳಸಿಕೊಳ್ಳಬೇಕು. ದೊಡ್ಡ ಮಟ್ಟದ ಲೆಕ್ಕ ಪರಿಹಾರಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಮತ್ತು ಆ ಮೂಲಕ ಅಧ್ಯಯನ ಮಾಡಿರುವ ವಿಷಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.

  ಇದನ್ನು ಓದಿ: ಮಕ್ಕಳ ಜೀವಕ್ಕೆ ಕುತ್ತು ತಂದ ಸೋಪ್ ಕಿಟ್​​; ನೀರು ಎಂದು ರಾಸಾಯನಿಕ ಕುಡಿದ ಕಂದಮ್ಮಗಳು

  ರಸಾಯನಶಾಸ್ತ್ರ: ರಸಾಯನಶಾಸ್ತ್ರದಲ್ಲಿ 3 ವಿಭಾಗಗಳಿವೆ: ಭೌತಿಕ, ಸಾವಯವ ಮತ್ತು ಅಜೈವಿಕ. ಈ ವಿಷಯಗಳನ್ನು ವಿದ್ಯಾರ್ಥಿಗಳು ಸಮಗ್ರವಾಗಿ ಅಧ್ಯಯನ ಮಾಡಬೇಕು ಹಾಗೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪರಿಕಲ್ಪನೆಯಲ್ಲಿ ನುರಿತರಾಗಬೇಕು.

  ಗಣಿತ: ಗಣಿತ ಶಾಸ್ತ್ರವು ಅಪಾರ ಅಭ್ಯಾಸ ಬೇಡುತ್ತದೆ. ಗಣಿತದ ಪ್ರಶ‍್ನೆಗಳು ಪದೇ ಪದೇ ತಂತ್ರಗಾರಿಕೆ ಹೊಂದಿರುತ್ತವೆ ಮತ್ತು ಅವುಗಳನ್ನು ಅರ್ಥ ಮಾಡಿಕೊಳ್ಳಲು ಕಠಿಣ ಪರಿಶ್ರಮದ ಅಗತ್ಯವಿರುತ್ತದೆ. ನಿರಂತರ ಅಭ್ಯಾಸ ಲೆಕ್ಕ ಪರಿಹರಿಸುವ ಸಾಮರ್ಥ್ಯ ಇಮ್ಮಡಿಗೊಳಿಸುತ್ತದೆ. ಜೆಇಇ ಪರೀಕ್ಷೆಯಲ್ಲಿ ಪ್ರಶ‍್ನೆಗಳು ಭಾಗಶಃ ಉದ್ದವಾಗಿರುತ್ತವೆ ಮತ್ತು ಆಯ್ಕೆಗಳು ತೀರಾ ಸೀಮಿತವಾಗಿರುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಲೆಕ್ಕಾಚಾರ, ಸಮಯ ನಿರ್ವಹಣೆ, ಪರಿಕಲ್ಪನೆ ಹಾಗೂ ಸೂತ್ರಗಳ ಬಗ್ಗೆ ನುರಿತರಾಗಿದ್ದು, ಅವೆಲ್ಲ ಅವರ ಬೆರಳಂಚಿನಲ್ಲಿರಬೇಕಾಗುತ್ತದೆ. ವಿದ್ಯಾರ್ಥಿಗಳು ಪ್ರತಿ ಸುವರ್ಣ ಗಳಿಗೆಯನ್ನು ಉಳಿಸಲು ಚಿಕ್ಕ ಮಾರ್ಗವನ್ನು ಕಲಿತಿರಬೇಕಾಗುತ್ತದೆ.
  Published by:Seema R
  First published: