ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುವುದು ಹೇಗೆ?; ಇಲ್ಲಿದೆ ಮಾಹಿತಿ

ಎಸ್​ಎಸ್​ವೈ ಖಾತೆಯಲ್ಲಿ ನೀಡಲಾಗುವ ಬಡ್ಡಿದರವು ವಾರ್ಷಿಕ ಆಧಾರದ ಮೇಲೆ ಶೇ 8.1 ರಷ್ಟಿದೆ. ಎಸ್ಎಸ್​ವೈ ಖಾತೆಯು ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿದರದೊಂದಿಗೆ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗೆ ಕಡಿತದ ಮೂಲಕ ಆದಾಯ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್​ವೈ) ಎಂಬುದು ಸರ್ಕಾರದ ಉಪಕ್ರಮವಾದ ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನದ ಭಾಗವಾಗಿ 2015 ರಲ್ಲಿ ಪ್ರಾರಂಭಿಸಲಾದ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯು ಪೋಷಕರಿಗೆ ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಅಧಿಕೃತ ವಾಣಿಜ್ಯ ಬ್ಯಾಂಕ್ ಅಥವಾ ಇಂಡಿಯಾ ಪೋಸ್ಟ್ ಶಾಖೆಯೊಂದಿಗೆ ಉಳಿತಾಯ ಖಾತೆಯನ್ನು ತೆರೆಯಲು ಅನುವು ಮಾಡಿಕೊಡುತ್ತದೆ.

  ಎಸ್​ಎಸ್​ವೈ ಖಾತೆಯಲ್ಲಿ ನೀಡಲಾಗುವ ಬಡ್ಡಿದರವು ವಾರ್ಷಿಕ ಆಧಾರದ ಮೇಲೆ ಶೇ 8.1 ರಷ್ಟಿದೆ. ಎಸ್ಎಸ್​ವೈ ಖಾತೆಯು ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿದರದೊಂದಿಗೆ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗೆ ಕಡಿತದ ಮೂಲಕ ಆದಾಯ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.

  ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುವುದು ಹೇಗೆ?

  ಹೆಣ್ಣು ಮಗುವಿನ ಹೆಸರಿನಲ್ಲಿ ಯಾವುದೇ ಭಾರತ ಅಂಚೆ ಕಚೇರಿ ಅಥವಾ ಅಧಿಕೃತ ವಾಣಿಜ್ಯ ಬ್ಯಾಂಕುಗಳ ಶಾಖೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃದ್ಧಿ ಖಾತೆಯನ್ನು ಹೆಣ್ಣು ಮಗುವಿನ ಪೋಷಕರು ಅಥವಾ ಪಾಲಕರು ಅಧಿಸೂಚಿತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ. ಅಂಚೆ ಕಚೇರಿ ಅಥವಾ ಗೊತ್ತುಪಡಿಸಿದ ಬ್ಯಾಂಕಿನಲ್ಲಿ ಲಭ್ಯವಿರುವ ಸುಕನ್ಯಾ ಸಮೃದ್ಧಿ ಖಾತೆ ಫಾರ್ಮ್ (ಎಸ್ಎಸ್ಎ -1) ಅನ್ನು ಪಾಲಕರು ಮೊದಲು ಭರ್ತಿ ಮಾಡಬೇಕು.

  SSY ಖಾತೆಯನ್ನು ತೆರೆಯಲು ಅಗತ್ಯವಿರುವ ದಾಖಲೆಗಳು:

  • ಮಗುವಿನ ಜನನ ಪ್ರಮಾಣಪತ್ರ.

  • ಪೋಷಕರ ವಿಳಾಸ ಪುರಾವೆ- ಪಾಸ್​ಪೋಟ್​ರ್, ಪಡಿತರ ಚೀಟಿ, ಚಾಲನಾ ಪರವಾನಗಿ, ಯುಟಿಲಿಟಿ ಬಿಲ್.

  • ಪಾಲಕರ ಗುರುತಿನ ಪುರಾವೆ - ಪ್ಯಾನ್, ಆಧಾರ್, ಅಥವಾ ಪಾಸ್ಪೋರ್ಟ್.

  • ಮಗು ಮತ್ತು ಪೋಷಕರ ಛಾಯಾಚಿತ್ರ.


  ಅರ್ಹತೆ:

  ಹೆಣ್ಣು ಮಗುವಿನ ಜನನದಿಂದ ಅವಳು 10 ವರ್ಷ ತುಂಬುವವರೆಗೆ ಹೆಣ್ಣು ಮಗುವಿನ ಹೆಸರಿನಲ್ಲಿ ಪೋಷಕರು ಎಸ್ಎಸ್​ವೈ ಖಾತೆಯನ್ನು ತೆರೆಯಬಹುದು. ಹೆಣ್ಣು ಮಗುವಿನ ಹೆಸರಿನಲ್ಲಿ ಮಾತ್ರ ಠೇವಣಿದಾರರಿಂದ ಖಾತೆಯನ್ನು ತೆರೆಯಬಹುದು. ಹೆಣ್ಣು ಮಗುವಿನ ನೈಸರ್ಗಿಕ ಪೋಷಕರು ಅಥವಾ ಕಾನೂನು ಪಾಲಕರಿಗೆ ಎರಡು ಹೆಣ್ಣು ಮಕ್ಕಳಿದ್ದರೆ ಆ ಇಬ್ಬರ ಹೆಸರಿನಲ್ಲೂ ಖಾತೆಯನ್ನು ತೆರೆಯಲು ಅವಕಾಶವಿದೆ.

  ಅವಧಿ:

  ಹುಡುಗಿಗೆ 21 ವರ್ಷ ಪೂರ್ಣಗೊಂಡಾಗ ಸುಕನ್ಯಾ ಸಮೃದ್ಧಿ ಖಾತೆಯಿಂದ ಹಣವನ್ನು ಪಡೆಯಬಹುದಾಗಿರುತ್ತೆ. ಎಸ್ಎಸ್​ವೈನಲ್ಲಿನ ಬಾಕಿ, ಬಡ್ಡಿ ಸೇರಿದಂತೆ ಹೆಣ್ಣು ಮಗುವಿಗೆ ಅರ್ಜಿ ಮತ್ತು ಗುರುತು, ನಿವಾಸ, ಪೌರತ್ವ ದಾಖಲೆಗಳ ಪುರಾವೆಗಳನ್ನು ಸಲ್ಲಿಸುವಾಗ ಹಣವನ್ನು ಪಾವತಿಸಲಾಗುತ್ತದೆ. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಖಾತೆದಾರರು ಪೂರ್ಣ ಮೊತ್ತವನ್ನು ಹಿಂಪಡೆಯಬಹುದು ಅನುಮತಿಸಲಾಗಿದೆ.

  ಇದನ್ನೂ ಓದಿ : ಯಡಿಯೂರಪ್ಪ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಯತ್ನಾಳ್ ವಾಗ್ದಾಳಿ; ಮುಂದುವರಿದ ಬಿಜೆಪಿ ಜಟಾಪಟಿ

  ಎಸ್ಎಸ್​ವೈ ಖಾತೆಯನ್ನು ತೆರೆಯಲು ಯಾವ ಮೊತ್ತದ ಅಗತ್ಯವಿದೆ:

  ಎಸ್ಎಸ್​ವೈ ಖಾತೆಯಲ್ಲಿ ಠೇವಣಿ ಇಡಬಹುದಾದ ಗರಿಷ್ಠ ಮತ್ತು ಕನಿಷ್ಠ ಮೊತ್ತವು ಆರ್ಥಿಕ ವರ್ಷದಲ್ಲಿ ಈ ಯೋಜನೆಯಡಿ ಅಂದಾಜು 1.5 ಲಕ್ಷ ರೂ.

  ಸೂಚನೆ:

  ಒಂದು ತಿಂಗಳಲ್ಲಿ ಅಥವಾ ಹಣಕಾಸು ವರ್ಷದಲ್ಲಿ ಠೇವಣಿಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ವಾರ್ಷಿಕ ಠೇವಣಿ ರೂ. ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ.
  Published by:MAshok Kumar
  First published: