• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Credit Card: ರಿವಾರ್ಡ್ ಪಾಯಿಂಟ್​​ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ? ಈ ವಿಧಾನಗಳನ್ನು ಅನುಸರಿಸಿ

Credit Card: ರಿವಾರ್ಡ್ ಪಾಯಿಂಟ್​​ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ? ಈ ವಿಧಾನಗಳನ್ನು ಅನುಸರಿಸಿ

ರಿವಾರ್ಡ್ ಪಾಯಿಂಟ್ಸ್​ ಎಂಬುದು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಮತ್ತು ಕಾರ್ಡ್‌ನಿಂದ ಕಾರ್ಡ್‌ಗೆ ಭಿನ್ನವಾಗಿರುತ್ತದೆ. ಈ ರಿವಾರ್ಡ್ ಪಾಯಿಂಟ್‌ಗಳನ್ನು ನೀವು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಹುದು. ಹೇಗೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.

ರಿವಾರ್ಡ್ ಪಾಯಿಂಟ್ಸ್​ ಎಂಬುದು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಮತ್ತು ಕಾರ್ಡ್‌ನಿಂದ ಕಾರ್ಡ್‌ಗೆ ಭಿನ್ನವಾಗಿರುತ್ತದೆ. ಈ ರಿವಾರ್ಡ್ ಪಾಯಿಂಟ್‌ಗಳನ್ನು ನೀವು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಹುದು. ಹೇಗೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.

ರಿವಾರ್ಡ್ ಪಾಯಿಂಟ್ಸ್​ ಎಂಬುದು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಮತ್ತು ಕಾರ್ಡ್‌ನಿಂದ ಕಾರ್ಡ್‌ಗೆ ಭಿನ್ನವಾಗಿರುತ್ತದೆ. ಈ ರಿವಾರ್ಡ್ ಪಾಯಿಂಟ್‌ಗಳನ್ನು ನೀವು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಹುದು. ಹೇಗೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.

 • Share this:

ಅದೆಷ್ಟೋ ಬ್ಯಾಂಕ್‌ಗಳು (Bank) ಕ್ರೆಡಿಟ್ ಕಾರ್ಡ್‌ಗಳನ್ನು (Credit Card) ಗ್ರಾಹಕರಿಗೆ  ಒದಗಿಸುತ್ತಿವೆ. ಆಕರ್ಷಕ ಆಫರ್‌ಗಳು, ಸುಲಭ ಇಎಮ್‌ಐಗಳು (EMI), ಗಿಫ್ಟ್ ವೋಚರ್, ಡಿಸ್ಕೌಂಟ್ ಹೀಗೆ ಬೇರೆ ಬೇರೆ ಆಫರ್‌ಗಳನ್ನು ಒದಗಿಸುವ ಮೂಲಕ ಕ್ರೆಡಿಟ್ ಕಾರ್ಡ್‌ಗಳನ್ನು ಖರೀದಿಸುವಂತೆ ಗ್ರಾಹಕರ ಮನವೊಲಿಸುತ್ತವೆ. ಕ್ರೆಡಿಟ್ ಕಾರ್ಡ್ ಬಳಸುವಾಗ ಗ್ರಾಹಕರು ಸಾಧ್ಯವಾದಷ್ಟು ಜಾಗರೂಕತೆಯಿಂದ ಕೂಡ ಇರಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್‌ಗಳಿಂದ ಗ್ರಾಹಕರಿಗೆ (Customers) ದೊರೆಯುವ ಉತ್ತಮ ಪ್ರಯೋಜನ ಎಂದರೆ ರಿವಾರ್ಡ್ ಪಾಯಿಂಟ್‌ಗಳನ್ನು(Reward points) ಗಳಿಸುವುದಾಗಿದೆ. ನೀವು ವಹಿವಾಟು ನಡೆಸಿದಂತೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿಕೊಳ್ಳುತ್ತೀರಿ.


ಆದರೆ ರಿವಾರ್ಡ್ ದರ ಎಂಬುದು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಮತ್ತು ಕಾರ್ಡ್‌ನಿಂದ ಕಾರ್ಡ್‌ಗೆ ಭಿನ್ನವಾಗಿರುತ್ತದೆ ಎಂಬುದನ್ನು ಗಮನಿಸಿಕೊಳ್ಳಬೇಕು. ಈ ರಿವಾರ್ಡ್ ಪಾಯಿಂಟ್‌ಗಳನ್ನು ನೀವು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಹುದು. ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


ಸ್ಟೇಟ್‌ಮೆಂಟ್ ಕ್ರೆಡಿಟ್


ಸ್ಟೇಟ್‌ಮೆಂಟ್ ಕ್ರೆಡಿಟ್‌ಗಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ರೆಡೀಮ್ ಮಾಡಲು ಕೆಲವು ಕ್ರೆಡಿಟ್ ಕಾರ್ಡ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ. ಈ ಸಮಯದಲ್ಲಿ ರಿವಾರ್ಡ್ ಪಾಯಿಂಟ್ ಮೊತ್ತಕ್ಕೆ ಸಮವಾದ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತದೆ. ರಿವಾರ್ಡ್ ಪಾಯಿಂಟ್‌ಗಳನ್ನು ನಗದಾಗಿ ಜಮೆ ಮಾಡಿದಾಗ, ಸಾಮಾನ್ಯವಾಗಿ ಅದನ್ನು ಪ್ರತಿ ರಿವಾರ್ಡ್ ಪಾಯಿಂಟ್‌ಗೆ ರೂ 0.20 ಯಿಂದ ಆರಂಭಿಸಿ ರೂ 0.25 ವರೆಗೆ ವಿಭಾಗಿಸಲಾಗುತ್ತದೆ. ಕೆಲವು ಪ್ರೀಮಿಯಂ ಕಾರ್ಡ್‌ಗಳು ಈ ಶ್ರೇಣಿಯನ್ನು ಮೀರಿದ ಮೌಲ್ಯವನ್ನು ನೀಡಬಹುದು.


ಇದನ್ನೂ ಓದಿ: EPF ಬಡ್ಡಿಯ ಮೇಲಿನ ತೆರಿಗೆ, ಉದ್ಯೋಗಿಗಳು ಇದನ್ನು ಮಿಸ್ ಮಾಡ್ದೇ ತಿಳಿದಿರಬೇಕು!


ಉದಾಹರಣೆಯ ಮೂಲಕ ವಿವರಿಸುವುದಾದರೆ ನೀವು 1000 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿದ್ದೀರಿ ಎಂದು ಭಾವಿಸೋಣ ಹಾಗೂ ಪ್ರತಿ ಪಾಯಿಂಟ್‌ಗೆ ನಿಗದಿಪಡಿಸಿರುವ ಮೌಲ್ಯ ರೂ 0.25 ಆಗಿದೆ. ಈ ಸಂದರ್ಭದಲ್ಲಿ ನೀವು ಅವುಗಳನ್ನು ಸ್ಟೇಟ್‌ಮೆಂಟ್ ಕ್ರೆಡಿಟ್‌ಗಾಗಿ ರಿಡೀಮ್ ಮಾಡಿದಾಗ, ನಿಮಗೆ ರೂ 250 ದೊರೆಯುತ್ತದೆ. ಈ ಮೊತ್ತವನ್ನು ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಜಮೆ ಮಾಡಲಾಗುತ್ತದೆ ಹಾಗೂ ನಿಮ್ಮ ಸ್ಟೇಟ್‌ಮೆಂಟ್‌ನಲ್ಲಿ ಈ ಮೊತ್ತ ನೋಡಬಹುದು.


ಮುಂದಿನ ಮಾಸಿಕ ಸ್ಟೇಟ್‌ಮೆಂಟ್‌ನಲ್ಲಿ ರೂ 250 ಅನ್ನು ನೀವು ಪಾವತಿಸಬೇಕಾದ ಮೊತ್ತದಿಂದ ಕಡಿತಗೊಳಿಸುವ ಮೂಲಕ ಬಾಕಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಇದು ನಿಮಗೆ ಕಡಿಮೆ ರಿಡೆಂಪ್​ಶನ್​ ದರವನ್ನು ಒದಗಿಸುತ್ತದೆ.


ಪಾಯಿಂಟ್‌ಗಳೊಂದಿಗೆ ಪಾವತಿಸುವುದು


ನಿಮ್ಮ ಆನ್‌ಲೈನ್ ವಹಿವಾಟುಗಳಿಗೆ ಪಾವತಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಲು ಕೆಲವು ಕಾರ್ಡ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ. ಆನ್‌ಲೈನ್ ಖರೀದಿಗೆ ರೂ 500 ಅನ್ನು ಪಾವತಿಸಬೇಕು, ಈ ಸಮಯದಲ್ಲಿ ನಿಮ್ಮ ರಿವಾರ್ಡ್ ಪಾಯಿಂಟ್ ಬಳಸಿ ಪಾವತಿಸಲು ಬಯಸಿದರೆ, ಇಲ್ಲಿ ರಿವಾರ್ಡ್ ಪಾಯಿಂಟ್ ಮೌಲ್ಯ ರೂ 0.25 ಆಗಿರುವುದರಿಂದ ಈ ವಹಿವಾಟಿಗೆ ನಿಮ್ಮ ಖಾತೆಯಿಂದ  2,000 ರಿವಾರ್ಡ್ ಪಾಯಿಂಟ್‌ಗಳನ್ನು ಡೆಬಿಟ್ ಮಾಡಲಾಗುತ್ತದೆ.
ಕ್ಯಾಟಲಾಗ್ ಮರ್ಚಂಡೈಸ್ ಪ್ರತಿಯಾಗಿ ರಿಡೀಮ್ ಮಾಡಿ


ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಮುಂದಿನ ಆಯ್ಕೆ ಎಂದರೆ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕ್ಯಾಟಲಾಗ್‌ನಿಂದ ಮಾರಾಟದ ಸರಕುಗಳನ್ನು ಖರೀದಿಸಲು ಪಾಯಿಂಟ್‌ಗಳನ್ನು ಬಳಸುವುದಾಗಿದೆ. ಇಲ್ಲಿ ನೀವು ನಿಮಗೆ ಇಷ್ಟದ ಬ್ರ್ಯಾಂಡ್ ಪಡೆಯುವುದಿಲ್ಲ, ಹಾಗಾಗಿ ನಿಮ್ಮ ಕ್ರೆಡಿಟ್​ ಕಾರ್ಡ್​ ಪಾಯಿಂಟ್ಸ್​ ಬಳಸಿಕೊಳ್ಳಲು ಇದು ಸೂಕ್ತ ವೇದಿಕೆಯಲ್ಲ.


ಗಿಫ್ಟ್ ಕಾರ್ಡ್‌ಗಳಿಗೆ ಪಾಯಿಂಟ್‌ಗಳನ್ನು ಬಳಸುವುದು


ಅಮೆಜಾನ್, ಫ್ಲಿಪ್‌ಕಾರ್ಟ್ ಮೊದಲಾದ ವಿವಿಧ ಬ್ರಾಂಡ್‌ಗಳ ಗಿಫ್ಟ್​ ಕಾರ್ಡ್‌ಗಳಲ್ಲಿಯೂ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಬಹುದಾಗಿದೆ. ರಿಡೆಂಪ್ಶನ್ ದರ ಪ್ರತಿ ಪಾಯಿಂಟ್‌ಗೆ ರೂ 0.25 ಅನ್ನು ಹೆಚ್ಚಿನ ಕಾರ್ಡ್‌ಗಳು ಒದಗಿಸುತ್ತವೆ.


ವಿಮಾನ ಟಿಕೆಟ್ ಹಾಗೂ ಹೋಟೆಲ್‌ ರೂಮ್‌ಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸುವುದು


ಕೆಲವು ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ದಾರರಿಗೆ ತಮ್ಮ ಪೋರ್ಟಲ್‌ಗಳ ಮೂಲಕ ಟಿಕೆಟ್‌ಗಳು ಮತ್ತು ಇತರ ಉತ್ಪನ್ನಗಳನ್ನು ಬುಕಿಂಗ್ ಮಾಡಲು ರಿವಾರ್ಡ್ ಪಾಯಿಂಟ್‌ಗಳನ್ನು ರೆಡೀಮ್ ಮಾಡಲು ಅವಕಾಶ ನೀಡುತ್ತವೆ.


ರಿವಾರ್ಡ್ ಪಾಯಿಂಟ್‌ಗಳನ್ನು ಬಹು ಉದ್ದೇಶಗಳಿಗಾಗಿ ಬಳಸಬಹುದು


ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು. ನಗದು ಬೇಕೆಂದರೆ ಸ್ಟೇಟ್‌ಮೆಂಟ್ ಕ್ರೆಡಿಟ್ ಅನ್ನು ಆರಿಸಿಕೊಳ್ಳಬಹುದು ಇಲ್ಲದಿದ್ದರೆ ಆನ್‌ಲೈನ್ ಪಾವತಿಗಳಿಗೆ ಬಳಸಿಕೊಳ್ಳಲೂ ಈ ರಿವಾರ್ಡ್ ಪಾಯಿಂಟ್‌ಗಳನ್ನು ಉಪಯೋಗಿಸಬಹುದಾಗಿದೆ.

top videos


  ಹೋಟೆಲ್‌ಗಳಲ್ಲಿ ಆಯೋಜನೆಯಾಗುವ ಹಲವಾರು ಕಾರ್ಯಕ್ರಮಗಳಲ್ಲಿಯೂ ಅಂದರೆ ಮ್ಯಾರಿಯೊಟ್ ಬೊನ್ವಾಯ್, ಕ್ಲಬ್ ಐಟಿಸಿ ಮೊದಲಾದವುಗಳಲ್ಲಿ ಈ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಳ್ಳಬಹುದಾಗಿದೆ.

  First published: