HOME » NEWS » National-international » HOW TO MAKE BEST USE OF INDIAS WATER ADVANTAGES LG

Mission Pani: ಭಾರತದಲ್ಲಿ ನೀರಿನ ಬಿಕ್ಕಟ್ಟು ನಿವಾರಿಸಲು ಅಂತರ್ಜಲ ವೃದ್ಧಿ ಮತ್ತು ನದಿಗಳ ಸಂರಕ್ಷಣೆ ಬಹುಮುಖ್ಯ

ಸಿಎನ್​ಎನ್​ ನ್ಯೂಸ್​-18 ಮತ್ತು ಹಾರ್ಪಿಕ್ ಇಂಡಿಯಾದ ಉಪಕ್ರಮವು ಮಿಷನ್ ಪಾನಿ, ಭಾರತದ ಅತ್ಯಮೂಲ್ಯವಾದ ನೀರಿನ ಸಂಪನ್ಮೂಲಗಳನ್ನು ಉಳಿಸಲು ಮುಂದಾಗಿದೆ. ನೀವು ಕೂಡ ಜಲಪ್ರತಿಜ್ಞೆ ಮಾಡಿ ಕೊಡುಗೆ ನೀಡಬಹುದಾಗಿದೆ. ಇದಕ್ಕಾಗಿ Www.news18.com/mission-paani ಗೆ ಭೇಟಿ ನೀಡಿ.

news18-kannada
Updated:January 20, 2021, 5:04 PM IST
Mission Pani: ಭಾರತದಲ್ಲಿ ನೀರಿನ ಬಿಕ್ಕಟ್ಟು ನಿವಾರಿಸಲು ಅಂತರ್ಜಲ ವೃದ್ಧಿ ಮತ್ತು ನದಿಗಳ ಸಂರಕ್ಷಣೆ ಬಹುಮುಖ್ಯ
ಸಿಎನ್​ಎನ್​ ನ್ಯೂಸ್​-18 ಮತ್ತು ಹಾರ್ಪಿಕ್ ಇಂಡಿಯಾದ ಉಪಕ್ರಮವು ಮಿಷನ್ ಪಾನಿ, ಭಾರತದ ಅತ್ಯಮೂಲ್ಯವಾದ ನೀರಿನ ಸಂಪನ್ಮೂಲಗಳನ್ನು ಉಳಿಸಲು ಮುಂದಾಗಿದೆ. ನೀವು ಕೂಡ ಜಲಪ್ರತಿಜ್ಞೆ ಮಾಡಿ ಕೊಡುಗೆ ನೀಡಬಹುದಾಗಿದೆ. ಇದಕ್ಕಾಗಿ Www.news18.com/mission-paani ಗೆ ಭೇಟಿ ನೀಡಿ.
  • Share this:
ಭಾರತದ  ಸಾಂಪ್ರದಾಯಿಕವಾಗಿ ಶುದ್ಧ ನೀರಿನ ವೈವಿಧ್ಯಮಯ ಸಂಪನ್ಮೂಲಗಳನ್ನು ಒಳಗೊಂಡಿದೆ. ವಿಶ್ವದ ಶೇ.4ರಷ್ಟು ಶುದ್ಧ ಕುಡಿಯುವ ನೀರಿನ ಪ್ರಮಾಣದಲ್ಲಿ ಭಾರತವು ಅತೀ ಹೆಚ್ಚು ಭಾಗವನ್ನು ಹೊಂದಿದೆ. ದೇಶಾದ್ಯಂತ ಸಾಕಷ್ಟು ನದಿಗಳು ಹರಿಯುತ್ತಿದ್ದು, ಅವುಗಳನ್ನು ಕಾಪಾಡುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಭಾರತದಲ್ಲಿ ಹರಿಯುವ ನದಿಗಳ ಪೈಕಿ 10,360 ನದಿಗಳು ಒಂದು ಅಂದಾಜಿನ ಪ್ರಕಾರ, 1,869 ಕ್ಯೂಬಿಕ್ ಕಿ.ಮೀ. ಜಾಗವನ್ನು ಸುತ್ತುವರೆದು ಹರಿಯುತ್ತವೆ. ರಚನಾತ್ಮಕ ಅಸಮರ್ಪಕತೆಯಿಂದಾಗಿ ನದಿಗಳು ಎಲ್ಲಾ ಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದರೆ ನೀರಿನ ಮೂಲಗಳಾದ ನದಿಗಳು ನೀರಿನ ಬಿಕ್ಕಟ್ಟನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಬಹುದಾಗಿದೆ.

ದೇಶದಲ್ಲಿ ನದಿಗಳು ಸಮೃದ್ಧವಾಗಿವೆ:

ಭಾರತದಲ್ಲಿ ನದಿಗಳು ಸಮೃದ್ಧವಾಗಿ ಹರಿಯುತ್ತವೆ ಎಂದು ಹೇಳಬಹುದಾಗಿದೆ. ಗಂಗಾ, ಯಮುನಾ ಮತ್ತು ಬ್ರಹ್ಮಪುತ್ರದಂತಹ ಅನೇಕ ನದಿಗಳ ಸಂರಕ್ಷಣೆಗಾಗಿ ಪ್ರಯತ್ನಗಳು ನಡೆಯುತ್ತವೆ. ಮಾನವ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯಗಳು ನದಿಗಳನ್ನು ಸೇರಿ ನೀರು ಮಲಿನವಾಗುತ್ತಿದೆ. ಇದರಿಂದಾಗಿ ನದಿಗಳನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ನದಿಗಳ ಸಂರಕ್ಷಣೆ, ನಿರ್ವಹಣೆ ಮಾಡಿದರೆ ನದಿಪಾತ್ರದ ಜನರ ಜೀವನವೂ ಸುಧಾರಿಸುತ್ತದೆ.

ರೈತನಿಗೆ ಗೊತ್ತಿಲ್ಲದೆ ಬ್ಯಾಂಕ್ ಖಾತೆ ತೆಗೆದು ಲೋನ್ ಪಡೆದ ಕಾರ್ಖಾನೆ; ಕೋರ್ಟ್​ ಮೆಟ್ಟಿಲೇರಿದ ಅನ್ನದಾತ

ಭೂಗತದಿಂದ ಮುಖ್ಯವಾಹಿನಿಗೆ:
ಅಂತರ್ಜಲ ಮಟ್ಟವನ್ನು ವೃದ್ಧಿಸುವುದು ಮತ್ತು ಕಾಪಾಡುವುದು ಸಹ ಮುಖ್ಯವಾಗುತ್ತದೆ. ಭೂಮಿಯೊಳಗಿರುವ ನೀರನ್ನು ಭೂಮಿಯ ಮೇಲಕ್ಕೆ ತಂದು ಬಳಸುವುದು. ಆದರೆ ಎಗ್ಗಿಲ್ಲದೇ ನೀರಿನ ಬಳಕೆ ಮಾಡುವುದರಿಂದ ಅಂತರ್ಜಲದ ಪ್ರಮಾಣ ಕುಸಿಯತೊಡಗುತ್ತದೆ. ಇದು ಜನರ ಜೀವನವನ್ನು ಅಪಾಯಕ್ಕೆ ತಳ್ಳುತ್ತದೆ. ಜೊತೆಗೆ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಅಂತರ್ಜಲ ಬಳಕೆಯನ್ನು ಹಿತಮಿತವಾಗಿಸಬೇಕು. ನೀರನ್ನು ಉಳಿಸಿಸುವ ಅವಶ್ಯಕತೆ ಇದೆ. ಮಳೆ ಬಂದಾಗ ಮತ್ತೆ ಅಂತರ್ಜಲ ಮಟ್ಟ ವೃದ್ಧಿಯಾಗಲು ಸಹಾಯಕವಾಗುತ್ತದೆ.
ಸಿಎನ್​ಎನ್​ ನ್ಯೂಸ್​-18 ಮತ್ತು ಹಾರ್ಪಿಕ್ ಇಂಡಿಯಾದ ಉಪಕ್ರಮವು ಮಿಷನ್ ಪಾನಿ, ಭಾರತದ ಅತ್ಯಮೂಲ್ಯವಾದ ನೀರಿನ ಸಂಪನ್ಮೂಲಗಳನ್ನು ಉಳಿಸಲು ಮುಂದಾಗಿದೆ. ನೀವು ಕೂಡ ಜಲಪ್ರತಿಜ್ಞೆ ಮಾಡಿ ಕೊಡುಗೆ ನೀಡಬಹುದಾಗಿದೆ. ಇದಕ್ಕಾಗಿ Www.news18.com/mission-paani ಗೆ ಭೇಟಿ ನೀಡಿ,
Published by: Latha CG
First published: January 20, 2021, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories