ಚಿಟ್​ ಫಂಡ್​ ಚೀಟಿಂಗ್: ನೀವು ಹೂಡಿಕೆ ಮಾಡಿದ್ದೀರಾ? ಹಾಗಿದ್ರೆ ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ

ಚಿಟ್​ ಫಂಡ್​ ಕಂಪೆನಿಗಳು ನೀಡುವ ಜಾಹೀರಾತುಗಳು ಜನ ಸಾಮಾನ್ಯರನ್ನು ಬೇಗನೇ ಆಕರ್ಷಿಸುತ್ತದೆ. 

zahir | news18
Updated:February 7, 2019, 2:52 PM IST
ಚಿಟ್​ ಫಂಡ್​ ಚೀಟಿಂಗ್: ನೀವು ಹೂಡಿಕೆ ಮಾಡಿದ್ದೀರಾ? ಹಾಗಿದ್ರೆ ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ
ಸಾಂದರ್ಭಿಕ ಚಿತ್ರ
zahir | news18
Updated: February 7, 2019, 2:52 PM IST
ಜನಸಾಮಾನ್ಯರು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ಸೆಬಿ(SEBI)ಯ ಎಚ್ಚರಿಕೆಯ ಹೊರತಾಗಿಯು ಚಿಟ್​ ಫಂಡ್​ ಕಂಪೆನಿಗಳ ಆಮಿಷಕ್ಕೆ ಬಲಿಯಾಗುವುದು ಮಾತ್ರ ನಿಂತಿಲ್ಲ. ಶೀಘ್ರದಲ್ಲೇ ಶ್ರೀಮಂತರಾಗಬಹುದೆಂಬ ಅತಿಯಾಸೆಯಿಂದ ಇಂತಹ ಕಂಪೆನಿಗಳಲ್ಲಿ ಹಣ ಹೂಡಿ ಮೋಸ ಹೋದವರೇ ಹೆಚ್ಚು. ಇದೀಗ ಶಾರದಾ ಚಿಟ್​ಫಂಡ್​ ಹಗರಣದಿಂದ ಮತ್ತೊಮ್ಮೆ ಚಿಟ್​ ಫಂಡ್​ ಕಂಪೆನಿಗಳು ಎಷ್ಟು ನಂಬಿಕಾರ್ಹ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಶಾರದಾ ಚಿಟ್​ ಫಂಡ್​ನಲ್ಲೂ ಗ್ರಾಹಕರಿಗೂ ದೊಡ್ಡ ಭರವಸೆ ನೀಡಲಾಗಿತ್ತು. ಇಲ್ಲಿ ಹಣ ಹೂಡಿದರೆ 34 ಪಟ್ಟು ಹೆಚ್ಚು ನೀಡುವುದಾಗಿ ಕಂಪೆನಿ ಹೇಳಿಕೊಂಡಿತ್ತು. ಆದರೆ ಕೊನೆಯಲ್ಲಿ ಗ್ರಾಹಕರಿಗೆ ಪಂಗನಾಮ ಹಾಕಿರುವುದು ಈಗ ಇತಿಹಾಸ. ಹೆಚ್ಚಿನ ಚಿಟ್​ ಫಂಡ್​ ಕಂಪೆನಿಗಳ ಕಥೆಯು ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಕೂಡ ಅಷ್ಟೇ  ಸತ್ಯ. ಹಾಗಾಗಿಯೇ ಇಂತಹ ಮೋಸದ ಬಲೆಯಿಂದ ಹೇಗೆ ಪಾರಾಗಬಹುದು ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

ಪ್ರಶ್ನೆ: ಆರ್​ಬಿಐ ಮತ್ತು ಸೆಬಿ ಹೊರತಾಗಿಯೂ ಈ ಕಂಪೆನಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ಉತ್ತರ: ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಮತ್ತು ಸೆಬಿಯಿಂದ ಚಿಟ್​ಫಂಡ್​ ಕಂಪೆನಿಗಳು ನಿರ್ದಿಷ್ಟ ಅವಧಿಗೆಹೂಡಿಕೆಯ ಅನುಮತಿ ಪಡೆದಿರುತ್ತದೆ. ಸಾಮಾನ್ಯ ವ್ಯಕ್ತಿಯಿಂದ ಫಿಕ್ಸೆಡ್​ ಡೆಪಾಸಿಟ್​ ಮತ್ತು ದಿನನಿತ್ಯದ ಠೇವಣಿಗಾಗಿ ಈ ಯೋಜನೆಗೆ ಅನುಮತಿ ಸ್ವೀಕರಿಸಲಾಗುತ್ತದೆ. ಈ ಯೋಜನೆಗಳು ಉತ್ತಮವಾಗಿಯೇ ಇರುತ್ತದೆ. ಆದರೆ ಅನುಮತಿಯಲ್ಲಿ ತಿಳಿಸಲಾದ ಯೋಜನೆಗಳ ಹೊರತಾಗಿಯು ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ವಿಶೇಷ ಸ್ಕೀಂಗಳನ್ನು ಪರಿಚಯಿಸುತ್ತದೆ.

ಸಾಮಾನ್ಯವಾಗಿ ಈ ಯೋಜನೆಗಳಲ್ಲಿ 5-7 ವರ್ಷಗಳಲ್ಲಿ ಠೇವಣಿ ಆದಾಯವನ್ನು 10 ಪಟ್ಟು ಹೆಚ್ಚಾಗಿಸುವುದಾಗಿ ತಿಳಿಸುತ್ತವೆ. ಇಲ್ಲಿ ಸಾಮಾನ್ಯ ಜನರನ್ನೇ ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಹೆಚ್ಚಿನವರು ಇಂತಹ ಕಂಪೆನಿಗಳಲ್ಲಿ ಹಣ ಹೂಡಲು ಮುಂದಾಗುತ್ತಾರೆ. ಅಂಚೆ ಕಚೇರಿ ಹೂಡಿಕೆ ಮತ್ತು ಬ್ಯಾಂಕ್​ ಠೇವಣಿಗಳಿಂದ ನಿಮಗೆ ಎಂಟರಿಂದ ಒಂಬತ್ತು ಪ್ರತಿಶತದಷ್ಟು ಬಡ್ಡಿ ಲಭಿಸಿದರೆ, ಚಿಟ್​ ಫಂಡ್​ ಕಂಪೆನಿಗಳು ಇದಕ್ಕಿಂತ ಎರಡ್ಮೂರು ಪಟ್ಟು ಹೆಚ್ಚು ಬಡ್ಡಿ ನೀಡುವುದಾಗಿ ಭರವಸೆ ನೀಡುತ್ತಾರೆ. ಹಾಗೆಯೇ ಹೊಸ ಹೂಡಿಕೆದಾರರ ಹಣದಿಂದ ಹಳೆಯ ಹೂಡಿಕೆದಾರನಿಗೆ ಮೊತ್ತವನ್ನು ಪಾವತಿಸಲಾಗುತ್ತದೆ. ಒಂದು ಹಂತದವರೆಗೆ ಇದು ಯಶಸ್ವಿಯಾದರೂ, ಹೊಸ ಹೂಡಿಕೆದಾರರು ಕಡಿಮೆಯಾಗುತ್ತಿದ್ದಂತೆ ತೊಂದರೆ ಕಾಣಿಸುತ್ತದೆ. ಇದರಿಂದ ಕಂಪೆನಿಗಳನ್ನು ಮುಚ್ಚಲಾಗುತ್ತದೆ.

ಪ್ರಶ್ನೆ: ಇಂತಹ ಕಂಪೆನಿಗಳು ಸಿಕ್ಕಿ ಬೀಳುವುದಿಲ್ಲವೇ?
ಉತ್ತರ: ಚಿಟ್​ ಫಂಡ್​ ಕಂಪೆನಿಗಳು ಸಾಮಾನ್ಯವಾಗಿ ಏಜೆಂಟ್​ ನೆಟ್​ವರ್ಕ್​ ಅನ್ನು ಹೊಂದಿರುತ್ತದೆ. ಆಯಾ ಪ್ರದೇಶಕ್ಕೆ ಏಜೆಂಟ್​ಗಳನ್ನು ನೇಮಿಸಿ ಕಮೀಷನ್​ಗಳನ್ನು ನೀಡುತ್ತಾರೆ. ಇದರಿಂದ ಏಜೆಂಟರು ಕೂಡ ಹೆಚ್ಚಿನ ಜನರನ್ನು ತಲುಪುವ ಗುರಿಯನ್ನು ಹೊಂದಿರುತ್ತಾರೆ. ಪರಿಚಿತ ವ್ಯಕ್ತಿಯು ಏಜೆಂಟ್ ಆಗಿರುವುದರಿಂದ ಸಾಮಾನ್ಯ ಜನರು ಕೂಡ ವಿಶ್ವಾಸದಲ್ಲಿ ಹಣ ಹೂಡುತ್ತಾರೆ. ಇದರೊಂದಿಗೆ ಹೂಡಿಕೆದಾರರಿಗೆ ಭೂಮಿ, ಪ್ರವಾಸದ ಆಮೀಷಗಳನ್ನು ನೀಡುತ್ತಾರೆ. ಆದರೆ ಕೊನೆಯಲ್ಲಿ ಕಂಪೆನಿಯು ಬಂದ್​ ಆದರೆ ಇಲ್ಲಿ ಸಿಕ್ಕಿ ಬೀಳುವುದು ಮಾತ್ರ ಏಜೆಂಟ್​ ಆಗಿರುತ್ತಾರೆ.

ಪ್ರಶ್ನೆ: ಕಂಪೆನಿಗಳು ವಂಚಿಸುತ್ತಿದ್ದರೂ, ಜನರೇಕೆ ಹೂಡಿಕೆ ಮಾಡುತ್ತಿದ್ದಾರೆ?
Loading...

ಉತ್ತರ: ಚಿಟ್​ ಫಂಡ್​ ಕಂಪೆನಿಗಳು ನೀಡುವ ಜಾಹೀರಾತುಗಳು ಜನ ಸಾಮಾನ್ಯರನ್ನು ಬೇಗನೇ ಆಕರ್ಷಿಸುತ್ತದೆ.  ಅದರಲ್ಲೂ ಕೆಲ ಕಂಪೆನಿಗಳು ಸಿನಿಮಾದವರನ್ನು ಕರೆಸಿ ಕಂಪೆನಿಗಳನ್ನು ಉದ್ಘಾಟಿಸುವುದು ಮತ್ತು ಜಾಹೀರಾತು ನೀಡುವುದು ಜನರನ್ನು ಮರುಳು ಮಾಡಿಬಿಡುತ್ತದೆ ಎನ್ನುತ್ತಾರೆ ತಜ್ಞರೊಬ್ಬರು. ಇದುವೇ ಶಾರದಾ ಚಿಟ್​ಫಂಡ್​ನಲ್ಲೂ ಸಂಭವಿಸಿದೆ. ಶಾರದಾ ಚಿಟ್​ ಫಂಡ್​ ಕಂಪೆನಿಯು ಏಜೆಂಟ್​ಗಳ ಮೂಲಕ ಹಲವು ಜಾಹೀರಾತುಗಳನ್ನು ಹರಿಡಿತ್ತು. ಇದರಿಂದ ಜನಸಾಮಾನ್ಯರು ಹೆಚ್ಚು ಹೂಡಿಕೆ ಮಾಡಿದ್ದರು.

ಪ್ರಶ್ನೆ: ಏಜೆಂಟ್​ಗಳು ಮರಳಾಗುವುದು ಹೇಗೆ?
ಉತ್ತರ: ಸಾಮಾನ್ಯ ಜನರೇ ಇಲ್ಲಿ ಏಜೆಂಟ್​ಗಳಾಗಿ ಕೆಲಸ ಮಾಡುತ್ತಾರೆ. ಹಣದ ಕಲೆಕ್ಟ್​ ಮೇಲೆ ಇಲ್ಲಿ ಕಮೀಷನ್​ ನಿರ್ಧರಿಸಲಾಗುತ್ತದೆ. ಜನರಿಂದ ಸಂಗ್ರಹಿಸುವ ಹಣದಿಂದ 25% ರಿಂದ 40%, ಕಮಿಷನ್ ನೀಡುವುದಾಗಿ ಏಜೆಂಟ್​ಗಳನ್ನು ನೇಮಿಸಿಕೊಳ್ಳುತ್ತಾರೆ. ನಿರುದ್ಯೋಗ ಸಮಸ್ಯೆಯಿಂದ ಪಟ್ಟಣ ಮತ್ತು ಹಳ್ಳಿಗಳ ವಿದ್ಯಾವಂತ ಯುವಕರೇ ಇವರ ಮಾತುಗಳಿಗೆ ಬಲಿಯಾಗುತ್ತಾರೆ.

ಪ್ರಶ್ನೆ: ಮೋಸ ಮಾಡುವುದು ಗುರುತಿಸುವುದು ಹೇಗೆ?
ಉತ್ತರ: ಮುಂದಿನ 5 ವರ್ಷ ಮತ್ತು 10 ವರ್ಷಗಳಲ್ಲಿ ನಿಮ್ಮ ಹೂಡಿಕೆಯನ್ನು ಮೂರು ಅಥವಾ ನಾಲ್ಕು ಹೆಚ್ಚಿಸುತ್ತೇವೆ ಎಂದು ಹೇಳುತ್ತಾರಲ್ವಾ, ಅದುವೇ ದೊಡ್ಡ ಸುಳ್ಳಾಗಿರುತ್ತದೆ. ಏಕೆಂದರೆ ಯಾವುದೇ ವ್ಯವಹಾರದಲ್ಲಿ ಇಷ್ಟೊಂದು ರಿಟರ್ನ್​ ನೀಡಲಾಗುವುದಿಲ್ಲ. ಇಂತಹ ಹೇಳಿಕೆಗಳೇ ಇದು ಮೋಸದ ಜಾಲ ಎಂಬುದನ್ನು ಗುರುತಿಸಲು ಇರುವ ಸುಲಭ ಉಪಾಯ.

ಪ್ರಶ್ನೆ: ಈಗಾಗಲೇ ಇಂತಹ ಚಿಟ್​ ಫಂಡ್​ಗಳಲ್ಲಿ ಹಣ ಹೂಡಿದರೆ ಏನು ಮಾಡುವುದು?
ಉತ್ತರ: ನೀವು ಈಗಾಗಲೇ ಚಿಟ್​ ಫಂಡ್​ಗಳಿಗೆವ ಹಣ ನೀಡಿದ್ದರೆ, ಆ ಹಣವನ್ನು ಹಿಂತಿರುಗಿಸಲು ದೂರು ನೀಡಬಹುದು. ಹೂಡಿಕೆದಾರರು ಸೆಕ್ಯುರಿಟೀಸ್ ಮತ್ತು ಎಕ್ಸ್​ಛೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮತ್ತು ಸ್ಕೋರ್ಸ್​ (SCORES)ವೇದಿಕೆಗಳ ಮೂಲಕ ಕಂಪೆನಿಗಳ ವಿರುದ್ಧ ನೇರವಾಗಿ ದೂರು ನೀಡಬಹುದು ಎಂದು ಎಸ್​ಸಿಆರ್ ಭದ್ರತಾ ಸಂಶೋಧನಾ ಮುಖ್ಯಸ್ಥರಾದ ಆಸಿಫ್ ಇಕ್ಬಾಲ್ ಎಂದು ತಿಳಿಸಿದ್ದಾರೆ. ಇದಲ್ಲದೇ ಆರ್​ಬಿಐಗೆ ಮೇಲ್ ಮಾಡುವ ಮೂಲಕ ದೂರು ನೀಡಬಹುದು. ಲಿಖಿತ ದೂರುಗಳ ಮೂಲಕ ಪೊಲೀಸ್​ರನ್ನು ಭೇಟಿಯಾಗಬಹುದು. ಇಲ್ಲ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ