• Home
  • »
  • News
  • »
  • national-international
  • »
  • Divorce: ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಪಡೆಯುವುದು ಹೇಗೆ..? ಕಾನೂನು ಏನು ಹೇಳುತ್ತದೆ..?

Divorce: ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಪಡೆಯುವುದು ಹೇಗೆ..? ಕಾನೂನು ಏನು ಹೇಳುತ್ತದೆ..?

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಪತಿ - ಪತ್ನಿ ಇಬ್ಬರೂ ಪರಸ್ಪರರ ಮೇಲೆ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ಇಂತಹ ಪ್ರಕರಣಗಳನ್ನು ಕೋರ್ಟ್ ಬೇಗ ವಿಚ್ಛೇದನವನ್ನು ಮಾನ್ಯ ಮಾಡುತ್ತದೆ

  • Share this:

    ಆಧುನಿಕ ಯುಗದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವ ಗಂಡ ಹೆಂಡತಿಯ ಸಂಖ್ಯೆ  ಹೆಚ್ಚಾಗುತ್ತಲೇ ಇದೆ. ಈ ಪೈಕಿ ಹಲವು ಪ್ರಕರಣಗಳಲ್ಲಿ ಒಬ್ಬರೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಇದರಿಂದ, ಹಲವು ವರ್ಷಗಳ ಕಾಲ ವಿಚ್ಛೇದನ ಪ್ರಕರಣಗಳು ಕೋರ್ಟ್‌ನಲ್ಲಿ ಇತ್ಯರ್ಥವಾಗದೇ ಹೋಗಬಹುದು. ಆದರೆ, ಪತಿ - ಪತ್ನಿ ಇಬ್ಬರೂ ಪರಸ್ಪರರ ಮೇಲೆ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ಇಂತಹ ಪ್ರಕರಣಗಳನ್ನು ಕೋರ್ಟ್ ಬೇಗ ವಿಚ್ಛೇದನವನ್ನು ಮಾನ್ಯ ಮಾಡುತ್ತದೆ. ಹಿಂದೂ ವಿವಾಹ ಕಾಯ್ದೆಯ ನಿಯಮಗಳು ಏನು ಹೇಳುತ್ತವೆ, ಬನ್ನಿ ನೋಡೋಣ..


    1) ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಎಂದರೇನು?
    ನೀವು ಮತ್ತು ನಿಮ್ಮ ಸಂಗಾತಿಯು ಪ್ರತ್ಯೇಕವಾಗುವ ಬಗ್ಗೆ ಇಬ್ಬರೂ ಒಪ್ಪಿದಾಗ, ನೀವು ಪರಸ್ಪರ ಒಪ್ಪಿಗೆಯ ವಿಚ್ಛೇದನ ಅರ್ಜಿಯನ್ನು ಸಲ್ಲಿಸುವ ಮೂಲಕ (ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13 ಬಿ ಅಡಿಯಲ್ಲಿ) (ವಿಶೇಷ ವಿವಾಹ ಕಾಯ್ದೆ, 1954 ರ ಸೆಕ್ಷನ್ 28 ರ ಅಡಿಯಲ್ಲಿ) ವಿವಾಹವನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ರದ್ದು ಮಾಡಬಹುದು.


    2) ವಿಚ್ಛೇದನಕ್ಕೆ ಎಲ್ಲಿ ಅರ್ಜಿ ಸಲ್ಲಿಸಬಹುದು..?
    ವಿಚ್ಛೇದನ ಅರ್ಜಿಯನ್ನು ಸ್ಥಳೀಯ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಬಹುದು. ಈ ಪೈಕಿ ನಿಮ್ಮ ವಿವಾಹ ನಡೆದ ಸ್ಥಳ, ನೀವು ಮತ್ತು ನಿಮ್ಮ ಸಂಗಾತಿಯು ಕೊನೆಯದಾಗಿ ಒಟ್ಟಿಗೆ ವಾಸಿಸುತ್ತಿದ್ದ ಸ್ಥಳ, ಪತ್ನಿ ವಾಸಿಸುವ ಸ್ಥಳ


    3) ಸ್ವತ: ನಾನೇ ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಅರ್ಜಿಯನ್ನು ಸಲ್ಲಿಸಬಹುದೇ..?
    ಕಾನೂನು ಅದನ್ನು ನಿಷೇಧಿಸದಿದ್ದರೂ, ಇದಕ್ಕೆ ವಿಶೇಷ ಕರಡು ರಚನೆಯ ಅಗತ್ಯವಿರುತ್ತದೆ ಮತ್ತು ಪ್ರತ್ಯೇಕತೆಯ ಸಮಯದಲ್ಲಿ ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನೀವು ವಕೀಲರ ಪರಿಣತಿಯನ್ನು ತೊಡಗಿಸಿಕೊಳ್ಳುವುದು ಯಾವಾಗಲೂ ಸೂಕ್ತವಾಗಿದೆ.


    4) ಪರಸ್ಪರ ಒಪ್ಪಿಗೆ ವಿಚ್ಛೇದನಕ್ಕಾಗಿ ಕಾರ್ಯವಿಧಾನ ಯಾವುದು?
    ಪರಸ್ಪರ ಒಪ್ಪಿಗೆಗೆ ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ಎರಡು ಪ್ರಮುಖ ದಾಖಲಾತಿಗಳು ಬೇಕಾಗುತ್ತವೆ:


    - ಹಿಂದೂ ವಿವಾಹ ಕಾಯ್ದೆ, 1955 ರ ಮೊದಲ ಚಲನೆ 13 ಬಿ (1) ಗೆ ಅರ್ಜಿ
    ಮೊದಲ ಚಲನೆಯಲ್ಲಿ ಹೇಳಿಕೆಯನ್ನು ದಾಖಲಿಸಿದ ನಂತರ ಪಕ್ಷಗಳು ತಮ್ಮ ನಿರ್ಧಾರವನ್ನು ಪುನರ್‌ ವಿಮರ್ಶಿಸಲು ಕನಿಷ್ಠ 6 ತಿಂಗಳುಗಳು ಮತ್ತು ಗರಿಷ್ಠ 18 ತಿಂಗಳುಗಳ ಶಾಸನಬದ್ಧ ''ಕೂಲಿಂಗ್‌ ಅವಧಿ'' ಯ ನಂತರ ಪತಿ ಹಾಗೂ ಪತ್ನಿ ಇಬ್ಬರೂ ವಿಚ್ಛೇದನವನ್ನು ಬಯಸಿದರೆ, ಅವರು ಮುಂದಿನ ಹಂತಕ್ಕೆ ಮುಂದುವರಿಯುತ್ತಾರೆ. ಇನ್ನು, ಮುಂದಿನ ಹಂತಕ್ಕೆ ಹೋಗಲು ಅವರು ಸಲ್ಲಿಸಬೇಕಾದದ್ದು:


    - ಹಿಂದೂ ವಿವಾಹ ಕಾಯ್ದೆ, 1955 ರ ಎರಡನೇ ಚಲನೆ 13 ಬಿ (2) ಗೆ ಅರ್ಜಿ


    5) 6 ರಿಂದ 18 ತಿಂಗಳು “ಕೂಲಿಂಗ್ ಪೀರಿಯಡ್‌'' ಅನ್ನು ಮನ್ನಾ ಮಾಡಬಹುದೇ..?
    ಗೌರವಾನ್ವಿತ ಸುಪ್ರೀಂ ಕೋರ್ಟ್ 2017 ರಲ್ಲಿ ಈ ಅವಧಿಯನ್ನು 4 ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ವಿನಾಯಿತಿ ನೀಡಬಹುದು ಮತ್ತು ಸತ್ಯ ಹಾಗೂ ಸಂದರ್ಭಗಳ ಬೇಡಿಕೆ ಇದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯದಿಂದ ಮನ್ನಾ ಮಾಡಬಹುದು. ಇದಕ್ಕಾಗಿ ಎರಡನೇ ಚಲನೆಯ ಅರ್ಜಿಯೊಂದಿಗೆ ಹೆಚ್ಚುವರಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅದರಲ್ಲಿ ನಿಮ್ಮ ಸಂದರ್ಭದಲ್ಲಿ ಕೂಲಿಂಗ್‌ ಅವಧಿ ಏಕೆ ಅನ್ವಯಿಸುವುದಿಲ್ಲ ಎಂದು ಪಟ್ಟಿ ಮಾಡಬೇಕಾಗುತ್ತದೆ.


    6) ಪರಸ್ಪರ ಒಪ್ಪಿಗೆಯ ವಿಚ್ಛೇದನದಲ್ಲಿ ಪತಿ - ಪತ್ನಿ ಇಬ್ಬರ ಪರವಾಗಿಯೂ ಒಬ್ಬರೇ ವಕೀಲರು ಪ್ರತಿನಿಧಿಸಬಹುದೇ?
    ಹೌದು


    7) ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆದುಕೊಳ್ಳಲುಎಷ್ಟು ಸಮಯ ತೆಗೆದುಕೊಳ್ಳುತ್ತದೆ?
    ಪತಿ - ಪತ್ನಿ ಇಬ್ಬರಲ್ಲಿ ಒಬ್ಬರು ವಿಚ್ಛೇದನಕ್ಕೆ ಒಪ್ಪದೆ ಹೋದಲ್ಲಿ, ಇಂತಹ ಪ್ರಕರಣಗಳು ಫಲಪ್ರದವಾಗಲು ಎಷ್ಟು ಸಮಯವಾದರೂ ತೆಗೆದುಕೊಳ್ಳಬಹುದು. ಆದರೆ, ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನವನ್ನು 1 ರಿಂದ 2 ತಿಂಗಳ ಕಡಿಮೆ ಅವಧಿಯಲ್ಲಿ ಪಡೆಯಬಹುದು.


    (ಮಾಹಿತಿ: ಪ್ರಾಚಿ ಮಿಶ್ರಾ, ಸುಪ್ರೀಂಕೋರ್ಟ್‌ ವಕೀಲೆ)

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು