Sabarimala: ಶಬರಿಮಲೆಯ ವಾರ್ಷಿಕ ಯಾತ್ರೆಗಾಗಿ ವರ್ಚುವಲ್ ಬುಕ್ಕಿಂಗ್ ಮಾಡಿಕೊಳ್ಳುವುದು ಹೇಗೆ..?

Sabarimala virtual booking :ಶಬರಿಮಲೆ ವಾರ್ಷಿಕ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗಿಯಾಗುವುದರಿಂದ ದೇವಸ್ಥಾನದಲ್ಲಿ ಜನದಟ್ಟನೆ ಹೆಚ್ಚಾಗಲಿದೆ..ಹೀಗಾಗಿ ವರ್ಚುವಲ್‌ ಕ್ಯೂ ವ್ಯವಸ್ಥೆಯಲ್ಲಿ ಶಬರಿಮಲೆ ಯತ್ರಾರ್ಥಿಗಳಿಗೆ ನಿರ್ದಿಷ್ಟ ಸಮಯದಲ್ಲಿ ದರ್ಶನ ಪಡೆಯಲು ವರ್ಚುವಲ್ ಬುಕಿಂಗ್ ಮಾಡಬೇಕಾಗಿದೆ

 ಶಬರಿಮಲೆ

ಶಬರಿಮಲೆ

  • Share this:
    ಕೊರೊನಾ (corona )ಮಹಾಮಾರಿ ಕಾಟದಿಂದ ಕಳೆದ ಎರಡು ವರ್ಷಗಳಿಂದ ಶಬರಿಮಲೆ ಅಯ್ಯಪ್ಪ(Sabarimala) ಸ್ವಾಮಿಯ ದರ್ಶನಕ್ಕೆ ಭಕ್ತರು ನಾನಾ ಸಂಕಷ್ಟ ಪಡುತ್ತಿದ್ದಾರೆ. ಈ ವರ್ಷವೂ ಕೊರೊನಾ(Corona) ಮೂರನೇ ಅಲೆಯ ಆತಂಕದ ನಡುವೆ ದಕ್ಷಿಣ ಭಾರತದ (South India) ಅತ್ಯಂತ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದರ್ಶನ ಯಾತ್ರೆ ಆರಂಭವಾಗಿದೆ. ವಾರ್ಷಿಕ ಮಂಡಲ ಮಕರ ವಿಳಕ್ಕು ಯಾತ್ರೆಯು ನವೆಂಬರ್‌ (November) 15ರಿಂದ ಆರಂಭವಾಗಿದ್ದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಾಗಿಲು ತೆರೆದಿದೆ.. ಹೀಗಾಗಿ ಅಯ್ಯಪ್ಪನ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಬರುತ್ತಿದ್ದಾರೆ. ಜೊತೆಗೆ ದೇವಸ್ಥಾನದಲ್ಲಿ ಜನದಟ್ಟಣೆಯನ್ನು ತಪ್ಪಿಸಿ ಕೊರೊನಾ ರೋಗ ತಡೆಗಟ್ಟಲು ಕೇರಳ ಸರ್ಕಾರ ಮುಂದಾಗಿದೆ.. ಅಯ್ಯಪ್ಪನ ದರ್ಶನ ಬೇಕೆಂದವರು ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಬೇಕಾಗಿದೆ..

    ವರ್ಚುವಲ್ ಕ್ಯೂ ಮೂಲಕ ಅಯ್ಯಪ್ಪನ ದರ್ಶನ.

    ಶಬರಿಮಲೆ ವಾರ್ಷಿಕ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗಿಯಾಗುವುದರಿಂದ ದೇವಸ್ಥಾನದಲ್ಲಿ ಜನದಟ್ಟನೆ ಹೆಚ್ಚಾಗಲಿದೆ. ಹೀಗಾಗಿ ವರ್ಚುವಲ್‌ ಕ್ಯೂ ವ್ಯವಸ್ಥೆಯಲ್ಲಿ ಶಬರಿಮಲೆ ಯತ್ರಾರ್ಥಿಗಳಿಗೆ ನಿರ್ದಿಷ್ಟ ಸಮಯದಲ್ಲಿ ದರ್ಶನ ಪಡೆಯಲು ವರ್ಚುವಲ್ ಬುಕಿಂಗ್ ಮಾಡಬೇಕಾಗಿದೆ. ಹೀಗಾಗಿ ಆನ್ಲೈನ್ ಮೂಲಕ ಅಯ್ಯಪ್ಪನ ಸ್ವಾಮಿ ದರ್ಶನ ಪಡೆಯಲು ಬಯಸುವವರು ಹೇಗೆ ಟಿಕೆಟ್ ಬುಕಿಂಗ್ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ..

    ಇದನ್ನೂ ಓದಿ :ಶಬರಿಮಲೆ ದೇಗುಲದಲ್ಲೂ ಅಪ್ಪು ಜಪ: ಪುನೀತ್​ ಫೋಟೋ ಹಿಡಿದು ಮೆಟ್ಟಿಲು ಹತ್ತಿದ ಅಭಿಮಾನಿ!

    ಬುಕ್ಕಿಂಗ್‌ ಮಾಡುವುದು ಹೇಗೆ?

    * ಮೊದಲು http://sabarimalaonline.org ವೆಬ್‌ಸೈಟ್‌ಗೆ ಭೇಟಿ ನೀಡಿ ಆ ಬಳಿಕ ರಿಜಿಸ್ಟರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ

    * ನಂತರ ಕಾಣಿಸುವ ಪುಟದಲ್ಲಿ ನಿಮ್ಮ ಅಗತ್ಯ ದಾಖಲೆಗಳನ್ನು ಉಲ್ಲೇಖ ಮಾಡಬೇಕು, ಹೆಸರು, ಹುಟ್ಟಿದ ದಿನಾಂಕ, ವಿಳಾಸ, ದೇಶ, ಪಿನ್‌ ಕೋಡ್‌ ಹಾಕಿ

    * ಗುರುತಿನ ಪುರಾವೆ, ಸ್ಕ್ಯಾನ್‌ ಮಾಡಿದ ಫೋಟೋ, ಫೋನ್‌ ನಂಬರ್‌ ಹಾಕಿಆ ಬಳಿಕ ಇಮೇಲ್‌ ಸಂಖ್ಯೆ ನಮೂದಿಸ ಬೇಕು

    * ಪಾಸ್‌ವರ್ಡ್ ರಚನೆ ಮಾಡಿ, ಅದನ್ನು ದೃಢೀಕರಣ ಮಾಡಿನಿಯಮಗಳು/ಷರತ್ತನ್ನು ಒಪ್ಪುತ್ತೀರಿ ಎಂಬ ಬಾಕ್ಸ್‌ ಮೇಲೆ ಕ್ಲಿಕ್‌ ಮಾಡಿ ನಂತರ Continue ಮೇಲೆ ಕ್ಲಿಕ್‌ ಮಾಡಿ

    * ಆ ಬಳಿಕ ನಿಮ್ಮ ನೋಂದಾಯಿತ ಸಂಖ್ಯೆಗೆ OTP ಬರಲಿದೆOTP ಅನ್ನು ನಮೂದಿಸಿ, ಖಾತೆಯನ್ನು ಪರಿಶೀಲಿಸಿದರೆ ನೋಂದಣಿ ಪ್ರಕ್ರಿಯೆ ಕೊನೆಯಾಗುತ್ತದೆ

    ದರ್ಶನಕ್ಕೆ ಸಮಯ ನಿಗದಿ ಪಡಿಸುವುದು ಹೇಗೆ..?

    ಮೊದಲು ನೀವು ಲಾಗಿನ್ ಬಟನ್ ಕ್ಲಿಕ್ ಮಾಡಿ, ಇಮೇಲ್‌ ಐಡಿ ಹಾಗೂ ಪಾಸ್‌ವರ್ಡ್ ಅನ್ನು ಹಾಕಿ ಲಾಗಿನ್‌ ಆಗಿ, ವರ್ಚುವಲ್ ಕ್ಯೂ ಬಟನ್ ಕ್ಲಿಕ್ ಮಾಡಿ

    * ವರ್ಚುವಲ್ ಕ್ಯೂ ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಗ್ರೂಪ್ ಐಕಾನ್ ಮೇಲೆ ಕ್ಲಿಕ್ ಮಾಡಿ ಎಷ್ಟು ಮಂದಿ ಭಕ್ತರು ದರ್ಶನಕ್ಕೆ ಬರಲಿದ್ದಾರೆ ಎಂದು ನಮೂದಿಸಬೇಕು.

    *ಬಳಿಕ ಆಡ್ ಪಿಲಿಗ್ರಿಮ್ ಐಕಾನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜೊತೆ ದೇವರ ದರ್ಶನಕ್ಕೆ ಬರುತ್ತಿರುವವರ ವಿವರಗಳನ್ನು ದಾಖಲು ಮಾಡಬೇಕು. ಅಲ್ಲದೆ ಅವರ ವೈಯಕ್ತಿಕ ವಿವರಗಳನ್ನು ಸ್ಪಷ್ಟವಾಗಿ ದಾಖಲು ಮಾಡಬೇಕು.

    * ನಿಮ್ಮ ಜೊತೆ ದೇವರ ದರ್ಶನ ಪಡೆಯಲು ಇಚ್ಚಿಸುವ ವ್ಯಕ್ತಿಯ ಫೋಟೋ, ಐಡಿ ಪುರಾವೆ, ಜನ್ಮ ದಿನಾಂಕ ಮತ್ತು ಫೋನ್ ಸಂಖ್ಯೆಯನ್ನು ದಾಖಲಿಸಬೇಕು

    * ಪೋರ್ಟಲ್‌ನಲ್ಲಿ ಒದಗಿಸಲಾದ ಕ್ಯಾಲೆಂಡರ್‌ನಲ್ಲಿ ಭೇಟಿಯ ನಿಖರವಾದ ದಿನಾಂಕ ಮತ್ತು ಸಮಯವನ್ನು ನಮೂದಿಸ ಬೇಕು

    ಇದನ್ನೂ ಓದಿ :ದೇವರ ನಾಡಲ್ಲಿ ರಣಮಳೆ ಆರ್ಭಟ, ಇಂದು ಭಕ್ತರಿಗಿಲ್ಲ ಶಬರಿಮಲೆ ಅಯ್ಯಪ್ಪನ ದರ್ಶನ !

    ಬುಕಿಂಗ್ ಸಮಯದಲ್ಲಿ ಸೇವೆಗಳ ಆಯ್ಕೆಗೂ ಅವಕಾಶ

    ಇನ್ನು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಬುಕಿಂಗ್ ಮಾಡುವ ವೇಳೆಯಲ್ಲಿ ಮಣಿಕಂಠ ನಿಗೆ ಯಾವ ರೀತಿಯ ಸೇವೆಗಳನ್ನು ಸಲ್ಲಿಸಬೇಕು ಎಂದು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಇದಕ್ಕಾಗಿ ಬುಕಿಂಗ್ ವೇಳೆ ವಿಶ್‌ಲಿಸ್ಟ್ ಐಕಾನ್ ಗೆ ಹೋಗಿ, ಅಲ್ಲಿರುವ
    ಅಪ್ಪಂ, ಅರವಣ, ಅಭಿಷೇಕ ತುಪ್ಪ,ವಿಭೂತಿ ಅಲ್ಲಿರುವ ನೀವು ಮಾಡಿಸಬೇಕು ಎಂದಿರುವ ಸೇವೆಗಳನ್ನು ಆಯ್ಕೆಮಾಡಿಕೊಳ್ಳಬೇಕು..ಬಳಿಕ ಬುಕ್ ನೌ ಕ್ಲಿಕ್ ಮಾಡಿದರೆ ಪ್ರತಿ ಭಕ್ತರ ಹೆಸರು ಮತ್ತು ವಿವರಗಳು ಅದರಲ್ಲಿ ದಾಖಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಖಾತರಿ ಸಂದೇಶ ಬರುತ್ತದೆ.

    ನೇರ ಬುಕ್ಕಿಂಗ್‌ ಮಾಡಿಕೊಳ್ಳಲು ಅವಕಾಶ

    ಇನ್ನು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬೇಕು ಎನ್ನುವವರು ಬುಕಿಂಗ್ ಕೂಡ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.. ಆನ್ಲೈನ್ ಮೂಲಕ ದರ್ಶನಕ್ಕೆ ಬುಕ್ ಮಾಡಿದವರು ಬರದೆ ಇದ್ದರೆ ಸ್ಪಾಟ್‌ ಬುಕ್ಕಿಂಗ್‌ ಮಾಡಿಕೊಂಡವರಿಗೆ ಅವಕಾಶವನ್ನು ನೀಡಲಾಗುತ್ತದೆ. ಅದಕ್ಕಾಗಿ ನೀವು ಆಧಾರ್‌ ಕಾರ್ಡ್ ಅಥವಾ ವೋಟರ್‌ ಐಡಿ ಅಥವಾ ಪಾಸ್‌ಪೋರ್ಟ್ ಅನ್ನು ಹೊಂದಿದ್ದರೆ ಸಾಕಾಗುತ್ತದೆ.

    ವಾರ್ಷಿಕ ಯಾತ್ರೆಗಾಗಿ ಹಲವು ಸಿದ್ಧತೆ ಮಾಡಿಕೊಂಡಿದ್ದ ಸರ್ಕಾರ

    ಇನ್ನು ಈ ಬಾರಿ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಯಾತ್ರೆಗಾಗಿ ಕೇರಳ ಸರ್ಕಾರ ಹಲವು ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಕಳೆದ ಕೆಲವು ವರ್ಷಗಳಿಂದ ತುಂಬಾ ನದಿಯಲ್ಲಿ ಭಕ್ತರಿಗೆ ಸ್ನಾನ ನಿಷೇಧ ಮಾಡಲಾಗಿತ್ತು.. ಆದರೆ ಈ ಬಾರಿ ಪಂಪಾ ನದಿಯಲ್ಲಿ ಸ್ನಾನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿದೆ.. ಮತ್ತು ಅಯ್ಯಪ್ಪನ ದರ್ಶನಕ್ಕೆ ಬರುವ ಯಾತ್ರಿಕರ ವಾಹನಗಳಿಗೆ ನಿಲಕ್ಕಲ್ ವರೆಗೆ ಮಾತ್ರ ಅನುಮತಿಸಲಾಗಿದೆ.
    Published by:ranjumbkgowda1 ranjumbkgowda1
    First published: