ಆನ್​ಲೈನ್​ನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಕೇಸ್​ ಬಗ್ಗೆ ತಿಳಿಯೋದು ಹೇಗೆ?; ಇಲ್ಲಿದೆ ಮಾಹಿತಿ

ಪೊಲೀಸರು ನಿಮ್ಮ ವಾಹನದ ಫೋಟೋ ತೆಗೆದುಕೊಂಡಿರುತ್ತಾರೆ. ಅಷ್ಟೇ ಅಲ್ಲ, ಅದನ್ನು ಅವರ ಸೈಟ್​ನಲ್ಲಿ ಅಪ್​ಲೋಡ್​ ಮಾಡುತ್ತಾರೆ. ಈ ವೇಳೆ ನಿಮ್ಮ ವಾಹನ ವಿರುದ್ಧ ಕೇಸ್​ ದಾಖಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರಿನಂಥ ಮಹಾನಗರಗಳಲ್ಲಿ ವಾಹನ ಸಂಚಾರ ಮಾಡುವಾಗ ನಮಗೆ ಗೊತ್ತಿಲ್ಲದೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಬಿಡುತ್ತೇವೆ. ಈ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಸಂಚಾರಿ ಪೊಲೀಸರ ಬಳಿಯೇ ತೆರಳಬೇಕು ಎಂದು ಅನೇಕರು ಭಾವಿಸಿರುತ್ತಾರೆ. ಆದರೆ, ಆನ್​ಲೈನ್​ ಮೂಲಕವೂ ನೀವು ಇದನ್ನು ನೋಡಬಹುದಾಗಿದೆ.

  ನೀವು ಗೊತ್ತಿಲ್ಲದೆ  ಜೀಬ್ರಾ ಪಟ್ಟಿಯ ಮೇಲೆ ನಿಂತಿರುತ್ತೀರಿ, ಹೆಲ್ಮೆಟ್​ ಧರಿಸದೇ ಓಡಾಟ ನಡೆಸಿರುತ್ತೀರಿ. ಈ ವೇಳೆ ಪೊಲೀಸರು ನಿಮ್ಮ ವಾಹನದ ಫೋಟೋ ತೆಗೆದುಕೊಂಡಿರುತ್ತಾರೆ. ಅಷ್ಟೇ ಅಲ್ಲ, ಅದನ್ನು ಅವರ ಸೈಟ್​ನಲ್ಲಿ ಅಪ್​ಲೋಡ್​ ಮಾಡುತ್ತಾರೆ. ಈ ವೇಳೆ ನಿಮ್ಮ ವಾಹನ ವಿರುದ್ಧ ಕೇಸ್​ ದಾಖಲಾಗುತ್ತದೆ. ಇದಕ್ಕೆ ನೀವು ದಂಡ ಕೂಡ ಕಟ್ಟಬೇಕು.

  ಈ ರೀತಿ ಅಪ್​ಲೋಡ್​ ಮಾಡುವ ಫೋಟೋಗಳನ್ನು ನೀವು ನೋಡಬಹುದಾಗಿದೆ. Mchallan ವೆಬ್​ಸೈಟ್​ಗೆ ಬೇಟಿ ನೀಡಬೇಕು. ಅಲ್ಲಿ ನೀವು ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ದಾಖಲು ಮಾಡಬೇಕು. ನಂತರ ಸಬ್​ಮಿಟ್​ ಬಟನ್​ ಕ್ಲಿಕ್​​ ಮಾಡಿದರೆ ನಿಮ್ಮ ವಾಹನದ ವಿರುದ್ಧ ಕೇಸ್​ ದಾಖಲಾಗಿದ್ದರೆ ಮಾಹಿತಿ ಸಿಗಲಿದೆ. ಒಂದೊಮ್ಮೆ ಯಾವುದೇ ಕೇಸ್​​ ದಾಖಲಾಗದೆ ಇದ್ದರೆ ಬ್ಲ್ಯಾಂಕ್​ ಬರಲಿದೆ. ವೆಬ್​ಸೈಟ್​ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್​ ಮಾಡಿ.
  Published by:Rajesh Duggumane
  First published: