NEET UG Answer Key 2022: ಇಂದು ನೀಟ್​ ಯುಜಿ ಕೀ ಉತ್ತರ ಬಿಡುಗಡೆ ಸಾಧ್ಯತೆ; ಈ ರೀತಿ ಫಲಿತಾಂಶ ಪರೀಕ್ಷಿಸಿ

ಕಳೆದ ತಿಂಗಳು ಅಂದರೆ ಜುಲೈ 17ರಂದು ಈ ನೀಟ್​ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪದವಿ ಪೂರ್ವ ವೈದ್ಯಕೀಯ ಕೋರ್ಸ್​ಗಳ (Medical course) ಪ್ರವೇಶಕ್ಕೆ ನಡೆಸಲಾಗುವ ನೀಟ್​ ಯುಜಿ 2022 (NEET UG-2022)  ಪರೀಕ್ಷೆಯ ಕೀ ಆನ್ಸರ್​ ಇಂದು ಪ್ರಕಟವಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (National Testing Agency) ನೀಟ್​ ಕೀ ಆನ್ಸರ್ ಅನ್ನು ಈ ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಈ ಹಿನ್ನಲೆ ಇಂದು ಈ ಕೀ ಉತ್ತರಗಳು ಅಧಿಕೃತವಾಗಿ ವೆಬ್​ಸೈಟ್​ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಕಳೆದ ತಿಂಗಳು ಅಂದರೆ ಜುಲೈ 17ರಂದು ಈ ನೀಟ್​ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು.

    ಕಳೆದ ತಿಂಗಳು ನಡೆದಿತ್ತು ಪರೀಕ್ಷೆ

    ಈ ವರ್ಷ ಪೆನ್​ ಅಂಡ್​ ಪೇಪರ್​ ಮಾದರಿಯಲ್ಲಿ ನೀಟ್​ ಯುಕಿ ಪರೀಕ್ಷೆಯನ್ನು ಎನ್​ಟಿಎ ನಡೆಸಿತ್ತು. ದೇಶಾದ್ಯಂತ ಏಕಕಾಲದಕ್ಕೆ 497 ನಗರದಲ್ಲಿ 3570 ಕೇಂದ್ರದಲ್ಲಿ ಈ ಪರೀಕ್ಷೆ ನಡೆದಿತ್ತು. ಜೊತೆಗೆ ದೇಶದ ಹೊರಗೆ 14 ನಗರದಲ್ಲೂ ಕೂಡ ಈ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಿದ್ದರು. ಸರಿಸುಮಾರು 18 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಶೇ 90ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

    ಈ ವೆಬ್​ಸೈಟ್​ನಲ್ಲಿ ಕೀ ಉತ್ತರ ಪಡೆಯಿರಿ

    ಇನ್ನು ನೀಟ್​ ಕೀ ಉತ್ತರಗಳನ್ನು ಎನ್​ಟಿಎ ಅಧಿಕೃತದ ವೆಬ್​ಸೈಟ್​ನಲ್ಲಿ neet.nta.nic.in, ಅಥವಾ nta.ac.in ಅಭ್ಯರ್ಥಿಗಳು ಪಡೆಯಬಹುದಾಗಿದೆ. ನೀಟ್​ ಮೂಲಕ ಅಭ್ಯರ್ಥಿಗಳು ಎಂಬಿಬಿಎಸ್​, ಬಿಡಿಎಸ್​, ಬಿಎಸ್ಸಿ ನರ್ಸಿಂಗ್​ ಮತ್ತು ಆಯುಷ್​ ಕೋರ್ಸ್​ಗೆ ಪ್ರವೇಶ ಪಡೆಯಬಹುದಾಗಿದೆ.

    ಉತ್ತರಕ್ಕೆ ಆಕ್ಷೇಪಣೆ ಕೂಡ ಸಲ್ಲಿಸಬಹುದು

    ಅಭ್ಯರ್ಥಿಗಳು ಕೀ ಉತ್ತರ ಬಿಡುಗಡೆ ಬಳಿಕ ಆ ಉತ್ತರಗಳ ಕುರಿತು ಸಂದೇಹ ಇದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಕೂಡ ಅವಕಾಶ ಇದೆ. ಅಭ್ಯರ್ಥಿಗಳು ಕೀ ಉತ್ತರಗಳ ಮೇಲೆ ಆಕ್ಷೇಪಣೆ ಸಲ್ಲಿಸಬೇಕೆಂದರೆ, ಒಂದು ಪ್ರಶ್ನೆಗೆ 200 ರೂಪಾಯಿ ಶುಲ್ಕವನ್ನು ಪಾವತಿಸಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಕೀ ​ಉತ್ತರದ  ಬಿಡುಗಡೆಯಾದ ನಂತರ 2-3 ದಿನಗಳವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಈ ಅವಧಿಯಲ್ಲಿ ಪ್ರತಿ ಆಕ್ಷೇಪಣೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಇದನ್ನು ಓದಿ: ಕೊಡಗಿನಲ್ಲಿ 62 ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ನೇಮಕಾತಿ

    ಕೀ ಉತ್ತರವನ್ನು ಈ ರೀತಿ ಪರಿಶೀಲಿಸಿ

    -ನೀಟ್‌ ಅಧಿಕೃತ ವೆಬ್‌ಸೈಟ್‌ neet.nta.nic.inಗೆ ಭೇಟಿ ನೀಡಿ.
    -ಮುಖಪುಟದಲ್ಲಿ "NEET UG 2022 Answer Key" ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
    -ನಂತರ ನಿಮ್ಮ ಲಾಗಿನ್‌ ಐಡಿ, ಜನ್ಮ ದಿನಾಂಕ, ನೋಂದಣಿ ಸಂಖ್ಯೆಯನ್ನು ನಮೂದಿಸಿ.
    -ಆಗ ನಿಮಗೆ ನೀಟ್‌ ಯುಜಿ ಕೀ ಉತ್ತರಗಳು ಪರದೆಯ ಮೇಲೆ ಕಾಣಿಸುತ್ತದೆ.ಅದನ್ನು ಡೌನ್‌ಲೋಡ್‌ ಮಾಡಿಕೋಂಡು, ಪ್ರಿಂಟ್‌ ತೆಗೆದುಕೊಳ್ಳಿ.

    ತಪ್ಪು ಉತ್ತರಕ್ಕೆ ಅಂಕ ಕಡಿತ

    ನೀಟ್​ನಲ್ಲಿ ನಲ್ಲಿ ಪ್ರತಿ ಸರಿಯಾದ ಉತ್ತರಕ್ಕೆ ಅಭ್ಯರ್ಥಿಗಳು ನಾಲ್ಕು ಅಂಕಗಳನ್ನು ಗಳಿಸುತ್ತಾರೆ. ಪ್ರತಿ ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಪ್ರಯತ್ನಿಸದ ಪ್ರಶ್ನೆಗಳಿಗೆ ಯಾವುದೇ ನಕಾರಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುವುದಿಲ್ಲ.

    ಇದನ್ನು ಓದಿ: ಬೆಳಗಾವಿ ಜಿಲ್ಲಾ ಪಂಚಾಯತ್​ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಮೆರಿಟ್​ ಆಧಾರದ ಮೇಲೆ ಆಯ್ಕೆ

    ನೀಟ್​ ಯುಜಿ 2022ರ ಅಂಕಗಳನ್ನು ಸಾಮಾನ್ಯ ಮೆರಿಟ್​ ಲಿಸ್ಟ್​ ಆಧಾರದ ಮೇಲೆ ಅತಿ ಹೆಚ್ಚು ಅಂಕಗಳಿಸಿದವರ ಆಯ್ಕೆ ನಡೆಸಲಾಗುವುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ನೀಟ್​ನ ಕಟ್​ ಆಫ್​ ಅಂಕಗಳಿಗಿಂತ ಹೆಚ್ಚು ಅಂಕ ಪಡೆಬೇಕಿದೆ. ಅಂದರೆ, 720 -138 ಶ್ರೇಣಿ. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭ್ಯರ್ಥಿಗಳು 137-108 ಅಂಕಗಳನ್ನು ಪಡೆಬೇಕಿದೆ.

    ಕೀ ಉತ್ತರ ಬಿಡುಗಡೆಗೆ ಮುನ್ನವೇ ಅಭ್ಯರ್ಥಿಗಳು  ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ವಿವಿಧ ಕೋಟಾಗಳ ಅಡಿಯಲ್ಲಿ ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಬಹುದಾಗಿದೆ.
    Published by:Seema R
    First published: