EPF ಅಕೌಂಟ್​​ನಲ್ಲಿ ನಿಮ್ಮ ಮೊಬೈಲ್​ ನಂಬರ್ ಚೇಂಜ್ ಮಾಡುವುದು ಹೇಗೆ?; ಇಲ್ಲಿದೆ ಮಾಹಿತಿ

ಇಪಿಎಫ್ ಸದಸ್ಯರು ಸರಳ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಂಬರ್​ನ್ನು ಅಧಿಕೃತ ಎಪಿಎಫ್​​ಒ ಡೇಟಾಬೇಸ್​​​ನಲ್ಲಿ ಇಪಿಎಫ್​ ವೆಬ್​ ಪೋರ್ಟಲ್​ ಮೂಲಕ ನೊಂದಣಿ ಅಥವಾ ರಿಜಿಸ್ಟರ್​ ಮಾಡಿಕೊಳ್ಳಬಹುದಾಗಿದೆ.

ಇಪಿಎಫ್​ಒ

ಇಪಿಎಫ್​ಒ

  • Share this:
    ನೌಕರರ ಭವಿಷ್ಯ ನಿಧಿಯು(EPFO) ತನ್ನ ಸದಸ್ಯರಿಗೆ UAN ಅಥವಾ ಸಾರ್ವತ್ರಿಕ ಖಾತೆ ಸಂಖ್ಯೆ(ಯೂನಿವರ್ಸಲ್ ಅಕೌಂಟ್ ನಂಬರ್)​​ಗಳನ್ನು ಆನ್​​ಲೈನ್​ನಲ್ಲಿ ಸಕ್ರಿಯಗೊಳಿಸಲು, ನೌಕರರ ಭವಿಷ್ಯ ನಿಧಿ ವೆಬ್​ಸೈಟ್​ ಮೂಲಕ ತಮ್ಮ ಮೊಬೈಲ್​ ನಂಬರ್​ನ್ನು ರಿಜಿಸ್ಟರ್​​​ ಮಾಡಲು ಮತ್ತು ಆಯಾ ಖಾತೆಗಳಲ್ಲಿ ಪಿಎಫ್​​ ಹಣವನ್ನು ಪರಿಶೀಲಿಸಲು ವಿವಿಧ ಸೇವೆಗಳನ್ನು ಪರಿಚಯಿಸಿದೆ.

    ಇಪಿಎಫ್ ಸದಸ್ಯರು ಸರಳ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಂಬರ್​ನ್ನು ಅಧಿಕೃತ ಎಪಿಎಫ್​​ಒ ಡೇಟಾಬೇಸ್​​​ನಲ್ಲಿ ಇಪಿಎಫ್​ ವೆಬ್​ ಪೋರ್ಟಲ್​ ಮೂಲಕ ನೊಂದಣಿ ಅಥವಾ ರಿಜಿಸ್ಟರ್​ ಮಾಡಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೇ ಸದಸ್ಯರು ತಮ್ಮ ರಿಜಿಸ್ಟರ್​ ಮೊಬೈಲ್​ ನಂಬರ್​​ನ್ನು ಯುಎಎನ್ ಮೆಂಬರ್ ಪೋರ್ಟಲ್​ ಮೂಲಕ ಬದಲಾವಣೆ ಕೂಡ ಮಾಡಿಕೊಳ್ಳಬಹುದಾಗಿದೆ.

    ಹಾಗಾದ್ರೆ ಇಪಿಎಫ್​ ಖಾತೆಯಲ್ಲಿ ಆನ್​ಲೈನ್​ ಮೂಲಕ ಮೊಬೈಲ್​ ನಂಬರ್ ರಿಜಿಸ್ಟರ್ ಮಾಡುವುದು ಹೇಗೆ ಅಂತೀರಾ? ಈ ಕೆಳಕಂಡ ಸರಳ ಹಂತಗಳನ್ನು ಅನುಸರಿಸಿ.

    ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ; ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್​



    • ಮೊದಲಿಗೆ ಎಪಿಎಫ್​ ಮೆಂಬರ್ ಪೋರ್ಟಲ್​ https://unifiedportal-mem.epfindia.gov.in/memberinterface ಗೆ ಭೇಟಿ ನೀಡಿ ನಿಮ್ಮ ಖಾತೆಗೆ ಲಾಗಿನ್ ಆಗಿ.

    • ಬಳಿಕ Manage Section ಪೇಜ್​ನಲ್ಲಿ Contact Deatils ಮೇಲೆ ಕ್ಲಿಕ್ ಮಾಡಿ.

    • ನಂತರ Check Mobile Number ಆಯ್ಕೆ ಮೇಲೆ ಕ್ಲಿಕ್ ಮಾಡಿ, ಆಗ ಹೊಸ ಸೆಕ್ಷನ್ ಓಪನ್ ಆಗುತ್ತದೆ.

    • ಇದಾದ ಬಳಿಕ ಎರಡು ಬಾರಿ ನಿಮ್ಮ ಹೊಸ ಮೊಬೈಲ್​ ನಂಬರ್​ನ್ನು ನಮೂದಿಸಿ.

    • ಈಗ Get Authorization Pin ಆಯ್ಕೆ ಮೇಲೆ ಕ್ಲಿಕ್ಕಿಸಿ.

    • ಇದಾದ ನಂತರ ನಿಮ್ಮ ಮೊಬೈಲ್​​ಗೆ ಒಂದು OTP ನಂಬರ್ ಬರುತ್ತದೆ.

    • ಈ ಸರಿಯಾದ OTP ನಂಬರ್​ನ್ನು ಕೇಳಿರುವ ಜಾಗದಲ್ಲಿ ನಮೂದಿಸಿ, ಕೊನೆಗೆ Submit ಬಟನ್ ಒತ್ತಿ.

    • ಈಗ EPF-ಇಪಿಎಫ್​ ಪೋರ್ಟಲ್​​ನಲ್ಲಿ ನಿಮ್ಮ ಹೊಸ ಮೊಬೈಲ್​ ನಂಬರ್ ಅಪ್ಡೇಟ್ ಆಗುತ್ತದೆ.



    ನೌಕರರ ಭವಿಷ್ಯ ನಿಧಿ ಸಂಸ್ಥೆಯು ತನ್ನ 6 ಕೋಟಿ ಸದಸ್ಯರಿಗೆ 2019-20ನೇ ಸಾಲಿನ ನೌಕರರ ಭವಿಷ್ಯ ನಿಧಿಗೆ ಶೇ.8.5ರಷ್ಟು ಬಡ್ಡಿದರವನ್ನು ಜಮಾ ಮಾಡುತ್ತಿದೆ. ಸದಸ್ಯರು ತಮ್ಮ ಇಪಿಎಫ್​ ಖಾತೆಗಳಿಗೆ ಕ್ರೆಡಿಟ್ ಆದ ಬಡ್ಡಿದರವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
    Published by:Latha CG
    First published: