EPFO Update: PF ಖಾತೆಗೆ ಉದ್ಯೋಗದಾತರ ಕೊಡುಗೆಯನ್ನು ಯಾವ ರೀತಿಯಲ್ಲಿ ಉಲ್ಲೇಖಿಸಲಾಗುತ್ತದೆ; ಇಲ್ಲಿದೆ ವಿವರ

Employee Provident Fund Latest Update: ಉದ್ಯೋಗಿಯು EPSಗೆ ಕೊಡುಗೆ ನೀಡಬೇಕಾಗಿಲ್ಲ ಆದರೆ ಉದ್ಯೋಗದಾತರ ಕೊಡುಗೆಯೊಂದರಿಂದ, ಒಂದು ನಿರ್ದಿಷ್ಟ ಶೇಕಡ ಮೊತ್ತವನ್ನು EPS ಕಡೆಗೆ ನೀಡಲಾಗುತ್ತದೆ. ಮೂಲ ವೇತನವನ್ನು 15,000 ರೂ ಗೆ ಮಿತಿಗೊಳಿಸಿದ್ದರೆ, ಸಂಬಳದಲ್ಲಿ 8.33% ಅನ್ನು EPS ಗೆ ನೀಡಲಾಗುತ್ತದೆ

ಇಪಿಎಫ್​ಒ

ಇಪಿಎಫ್​ಒ

  • Share this:
    ಪ್ರಾವಿಡೆಂಟ್ ಫಂಡ್ (ಪಿಎಫ್ - Provident Fund) ಕೊಡುಗೆಯು ವಿನಮ್ರ ಉಳಿತಾಯವನ್ನು ಸಂಬಳ ಪಡೆಯುವ ಉದ್ಯೋಗಿಗಳಿಗೆ ಪ್ರತಿನಿಧಿಸುತ್ತದೆ. ಹೆಚ್ಚಿನ ಉದ್ಯೋಗಿಗಳಿಗೆ, ತಮ್ಮ ಮೂಲ ಸಂಬಳದ 12% ದಷ್ಟು ಪ್ರತೀ ತಿಂಗಳು ಪಿಎಫ್ ಖಾತೆಗೆ ಹೋಗುತ್ತದೆ. ಉದ್ಯೋಗದಾತರು (ಉದ್ಯೋಗ ನೀಡಿದ ಕಂಪನಿ, ಸಂಸ್ಥೆ) ಸಮಾನ ಶೇಕಡಾವಾರು ಮೊತ್ತವನ್ನು ಸಹ ಕೊಡುಗೆ ನೀಡುತ್ತಾರೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರತೀ ತಿಂಗಳು ಸಂಪೂರ್ಣ 24% ದಷ್ಟು ಪಿಎಫ್ ಕೊಡುಗೆಗಳು ಉದ್ಯೋಗಿಯ EPF ಖಾತೆಯಲ್ಲಿ ಜಮೆಯಾಗಿರುವುದಿಲ್ಲ. Provident Fund ಪಾಸ್‌ಬುಕ್‌ನಲ್ಲಿ ನಿಮ್ಮ ಪಿಎಫ್ ಸ್ಟೇಟ್‌ಮೆಂಟ್‌ ಅನ್ನು ವಿಶ್ಲೇಷಿಸಿದಲ್ಲಿ, ಪಿಎಫ್ ಖಾತೆಯಲ್ಲಿ ಉದ್ಯೋಗಿಗಳ ಹಾಗೂ ಉದ್ಯೋಗದಾತರ ಪ್ರತ್ಯೇಕ ಕೊಡುಗೆ ನಮೂದುಗಳನ್ನು ನೋಡಬಹುದು. ಹೆಚ್ಚುವರಿಯಾಗಿ, ಉದ್ಯೋಗಿಯ ಪಿಂಚಣಿ ಯೋಜನೆಗಾಗಿ (EPS) ಕೊಡುಗೆ ನೀಡುವ ಇನ್ನೊಂದು ಕಾಲಂ ಅನ್ನು ನೀವು ನೋಡಬಹುದು. Employee Provident Fund ಹಾಗೂ Employee Pension Scheme ಎರಡೂ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employee Provident Fund Organisation) ವ್ಯಾಪ್ತಿಯಲ್ಲಿವೆ. EPF ಎಂಬುದು ಉದ್ಯೋಗಿಯ ಸಂಪೂರ್ಣ ನಿವೃತ್ತ ವ್ಯವಸ್ಥೆಯ ಒಂದು ಭಾಗವಾಗಿದ್ದರೆ EPS ಇನ್ನೊಂದು ಭಾಗವಾಗಿದೆ.

    ಉದ್ಯೋಗಿಯು EPSಗೆ ಕೊಡುಗೆ ನೀಡಬೇಕಾಗಿಲ್ಲ ಆದರೆ ಉದ್ಯೋಗದಾತರ ಕೊಡುಗೆಯೊಂದರಿಂದ, ಒಂದು ನಿರ್ದಿಷ್ಟ ಶೇಕಡ ಮೊತ್ತವನ್ನು EPS ಕಡೆಗೆ ನೀಡಲಾಗುತ್ತದೆ. ಮೂಲ ವೇತನವನ್ನು 15,000 ರೂ ಗೆ ಮಿತಿಗೊಳಿಸಿದ್ದರೆ, ಸಂಬಳದಲ್ಲಿ 8.33% ಅನ್ನು EPS ಗೆ ನೀಡಲಾಗುತ್ತದೆ. ಅಂದರೆ ಹೆಚ್ಚಿನ ಮೂಲ ವೇತವನ್ನು ಪರಿಗಣಿಸದೆಯೇ, 1250 ರೂ ಉದ್ಯೋಗದಾತರ ಕೊಡುಗೆಯನ್ನು EPS ಗೆ ಸೇರಿಸಲಾಗುತ್ತದೆ.

    ಮಾಸಿಕ ಪಿಂಚಣಿಯ ಮೊತ್ತವು ಸೇವೆಯ ವರ್ಷಗಳ ಸಂಖ್ಯೆ ಮತ್ತು ಸ್ಥಿರ ಸೂತ್ರವನ್ನು ಅವಲಂಬಿಸಿರುತ್ತದೆ. ನಿವೃತ್ತಿಯ ನಂತರ, ಹತ್ತು ವರ್ಷಗಳ ಸೇವೆಯ ಕನಿಷ್ಠ ಅವಧಿಯ ನಂತರ, ತಿಂಗಳಿಗೆ ಕನಿಷ್ಠ ಪಿಂಚಣಿಯನ್ನು 1,000 ರೂ.ಗಳಿಗೆ ನಿಗದಿಪಡಿಸಲಾಗಿದ್ದರೆ ಮತ್ತು ಗರಿಷ್ಠ ಮಾಸಿಕ ಪಿಂಚಣಿ ಮೊತ್ತವು 7,500 ರೂ ಆಗಿರುತ್ತದೆ. ಕೆಲಸ ಮಾಡಿದ ವರ್ಷಗಳ ಸಂಖ್ಯೆಗೆ ಒಬ್ಬರು ಪ್ರಯೋಜನ ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಸೇವಾ ಅವಧಿಯ ದಾಖಲೆಯನ್ನು ಇರಿಸಿಕೊಳ್ಳಲು EPFO ಗೆ ಸಹಾಯ ಮಾಡುವ 'ಸ್ಕೀಮ್ ಸರ್ಟಿಫಿಕೇಟ್' ಅನ್ನು ಆಯ್ಕೆ ಮಾಡಿಕೊಳ್ಳಿ.

    ಇದನ್ನೂ ಓದಿ: Post Officeನ ಈ ಯೋಜನೆಯಲ್ಲಿ ಕೇವಲ 94 ರೂ. ಹೂಡಿಕೆ ಮಾಡಿ ₹14 ಲಕ್ಷಗಳನ್ನು ಪಡೆಯಿರಿ

    ಕಾರ್ಯನಿರ್ವಹಿಸುವ EPS, EPF ಗೆ ಸಮನಾಗಿರುವುದಿಲ್ಲ EPS ಕೊಡುಗೆಗಳು ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ. EPS ಗೆ ಹೋಗುವ ಮೊತ್ತವು, ಸಂಪೂರ್ಣ ರಚನೆಯು ಸರಕಾರದ ಬಳಿ ಇರುತ್ತದೆ ಹಾಗೂ ಉದ್ಯೋಗಿಯು ನಿವೃತ್ತಿಯ ನಂತರ ಪಿಂಚಣಿಯನ್ನು ಪಡೆಯಲು ಆರಂಭಿಸುತ್ತಾರೆ. ಉದ್ಯೋಗಿಯು ಉದ್ಯೋಗವನ್ನು ಬದಲಾಯಿಸಿದಾಗ, EPF ಅನ್ನು ಹೊಸ ಉದ್ಯೋಗದಾತರಿಗೆ ವರ್ಗಾಯಿಸಲಾಗುತ್ತದೆ UAN ಒಂದೇ ಆಗಿರುತ್ತದೆ. ಆದರೆ ಉದ್ಯೋಗ ಬದಲಾಯಿಸಿದ ನಂತರ, EPS ಕೊಡುಗೆಯು EPFO ನಲ್ಲಿ ಉಳಿಯುತ್ತದೆ. EPS ನಿಧಿಗಳನ್ನು ಹಿಂಪಡೆದುಕೊಳ್ಳುವ ಅಥವಾ ಮುಂದಿನ ಉದ್ಯೋಗಕ್ಕೆ ಈ ನಿಧಿಯನ್ನು ಮುಂದುವರಿಸಿಕೊಂಡು ಹೋಗುವ ಆಯ್ಕೆ ಉದ್ಯೋಗಿಗೆ ಇರುತ್ತದೆ. ಇದು ಸೇವೆಯ ದೀರ್ಘತೆ ಹಾಗೂ ಉದ್ಯೋಗಿಯ ವಯಸ್ಸನ್ನು ಆಧರಿಸಿರುತ್ತದೆ.

    ಇದನ್ನೂ ಓದಿ: ನಿಮ್ಮ PF ಖಾತೆಯ UAN ನಂಬರ್ ಮರೆತು ಹೋಗಿದ್ಯಾ? ಮರಳಿ ಪಡೆಯುವ ಸುಲಭ ವಿಧಾನ ಇಲ್ಲಿದೆ

    ಒಬ್ಬ ಉದ್ಯೋಗಿಯು ಹತ್ತು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸದಿದ್ದರೆ, ಆತ EPS ಮೊತ್ತವನ್ನು ಹಿಂಪಡೆಯಬಹುದು, ಅಥವಾ 'ಸ್ಕೀಮ್ ಪ್ರಮಾಣಪತ್ರ' ತೆಗೆದುಕೊಳ್ಳಬಹುದು. ಹೊಸ ಸಂಸ್ಥೆಗೆ ಸೇರಿದ ನಂತರ, ಹೊಸ ಉದ್ಯೋಗದಾತರ (ಸಂಸ್ಥೆಯ) ಮೂಲಕ EPFOಗೆ ಸ್ಕೀಮ್ ಪ್ರಮಾಣಪತ್ರವನ್ನು ಸಲ್ಲಿಸಿ. ಹತ್ತು ವರ್ಷಗಳು ಪೂರ್ಣಗೊಂಡ ನಂತರ, ಹಿಂಪಡೆಯುವಿಕೆಯ ಪ್ರಯೋಜನವು ನಿಲ್ಲುತ್ತದೆ ಮತ್ತು 10C ಫಾರ್ಮ್ ಅನ್ನು ಸಲ್ಲಿಸುವ ಮೂಲಕ EPFO ನಿಂದ ಸ್ಕೀಮ್ ಪ್ರಮಾಣಪತ್ರವನ್ನು ಮಾತ್ರ ತೆಗೆದುಕೊಳ್ಳಬಹುದಾಗಿದೆ.
    Published by:Sharath Sharma Kalagaru
    First published: