HOME » NEWS » National-international » HOW THIS ELON MUSK TWEET SENT WRONG SIGNAL TO INVESTORS SNVS

Signal ಬಳಸಿ ಎಂದು ವಿಶ್ವದ ನಂ 1 ಶ್ರೀಮಂತ ಹೇಳಿದ್ದನ್ನ ತಪ್ಪಾಗಿ ಅರ್ಥೈಸಿಕೊಂಡ ಹೂಡಿಕೆದಾರರ ಫಜೀತಿ

‘Use Signal’ ಎಂದು ಇಲಾನ್ ಮಸ್ಕ್ ಟ್ವೀಟ್ ಮಾಡಿದ್ದನ್ನ ತಪ್ಪಾಗಿ ಅರ್ಥೈಸಿಕೊಂಡು ಜನರು ಅಮೆರಿಕದ ‘Signal Advance Inc’ ಎಂಬ ಪುಟ್ಟ ಕಂಪನಿಯ ಷೇರುಗಳ ಬೆಲೆ ಎಂಟು ಪಟ್ಟು ಹೆಚ್ಚಳವಾದ ವಿಚಾರ ಬೆಳಕಿಗೆ ಬಂದಿದೆ.

news18-kannada
Updated:January 13, 2021, 2:15 PM IST
Signal ಬಳಸಿ ಎಂದು ವಿಶ್ವದ ನಂ 1 ಶ್ರೀಮಂತ ಹೇಳಿದ್ದನ್ನ ತಪ್ಪಾಗಿ ಅರ್ಥೈಸಿಕೊಂಡ ಹೂಡಿಕೆದಾರರ ಫಜೀತಿ
ಇಲಾನ್ ಮಸ್ಕ್
  • Share this:
ಬೆಂಗಳೂರು: ಉದ್ಯಾನನಗರಿಯಲ್ಲಿ ಘಟಕ ಸ್ಥಾಪಿಸಹೊರಟಿರುವ ಟೆಸ್ಲಾ ಕಂಪನಿಯ ಮಾಲೀಕ ಹಾಗೂ ವಿಶ್ವದ ಅತಿ ದೊಡ್ಡ ಶ್ರೀಮಂತ ಇಲಾನ್ ಮಸ್ಕ್ ಅವರು ಕಳೆದ ವಾರ ಮಾಡಿದ ಒಂದು ಟ್ವೀಟ್ ಲಕ್ಷಾಂತರ ಹೂಡಿಕೆದಾರರಿಗೆ ಗೊಂದಲ ಉಂಟು ಮಾಡಿದೆ. ತತ್​ಪರಿಣಾಮವಾಗಿ ಹೆಸರೇ ಮಾಡದ ಸಾಧಾರಣ ಕಂಪನಿಯೊಂದು ಷೇರು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ಕಂಡಿದೆ. ಮಂಗಳ ಗ್ರಹದಲ್ಲಿ ಕಾಲೋನಿ ನಿರ್ಮಿಸಲು ಹೊರಟಿರುವ ಸಿರಿವಂತ ಉದ್ಯಮಿ ಇಲಾನ್ ಮಸ್ಕ್ ಅವರು ಜನವರಿ 7ರಂದು “ಯೂಸ್ ಸಿಗ್ನಲ್” (Use Signal) ಎಂದು ಟ್ವೀಟ್ ಮಾಡಿದ್ದರು. ಇವೆರಡು ಪದ ಬಿಟ್ಟು ಬೇರೇನೂ ವಿವರಣೆ ಆ ಟ್ವೀಟ್​ನಲ್ಲಿ ಇರಲಿಲ್ಲ. 4.2 ಕೋಟಿ ಫಾಲೋಯರ್ಸ್ ಹೊಂದಿರುವ ಅವರ ಟ್ವಿಟ್ಟರ್ ಖಾತೆಯಿಂದ ಆ ಟ್ವೀಟ್ ಬಂದಿದ್ದೇ ತಡ “ಸಿಗ್ನಲ್ ಅಡ್ವಾನ್ಸ್” (Signal Advance Inc) ಎಂಬ ಹೆಸರಿನ ಕಂಪನಿಯ ಷೇರುಗಳ ಬೆಲೆ ಗಗನಕ್ಕೇರಿಹೋಗಿದೆ.

ಯೂಸ್ ಸಿಗ್ನಲ್ ಎಂದು ಮಸ್ಕ್ ಮಾಡಿದ ಟ್ವೀಟನ್ನು ಅಪಾರ್ಥ ಮಾಡಿಕೊಂಡು ಸಿಗ್ನಲ್ ಅಡ್ವಾನ್ಸ್ ಕಂಪನಿಯ ಷೇರುಗಳ ಮೇಲೆ ಅನೇಕ ಮಂದಿ ಹೂಡಿಕೆ ಮಾಡಿರುವುದು ಬಹುತೇಕ ಸ್ಪಷ್ಟವಾಗಿದೆ. ಸಿಗ್ನಲ್ ಅಡ್ವಾನ್ಸ್ ಕಂಪನಿಯ ಷೇರು ಶೇ. 800ರಷ್ಟು, ಅಂದರೆ ಎಂಟು ಪಟ್ಟು ಬೆಲೆ ಹೆಚ್ಚಳ ಕಂಡಿತು.

ಇದನ್ನೂ ಓದಿ: Tesla: ದೇಶದ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಹೊಸ ಅಲೆ; ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಮುಂದಾದ ಟೆಸ್ಲಾ!

ವಾಸ್ತವವಾಗಿ, ಸ್ಪೇಸ್ ಎಕ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಯ ರೂವಾರಿ ಇಲಾನ್ ಮಸ್ಕ್ ಅವರು ಯೂಸ್ ಸಿಗ್ನಲ್ ಎಂದು ಟ್ವೀಟ್ ಮಾಡಿದ್ದರ ಮರ್ಮವೇ ಬೇರೆ. ಜನರು ಅರ್ಥೈಸಿಕೊಂಡಿದ್ದೇ ಬೇರೆ. ವಾಟ್ಸಾಪ್​ನ ಪರಿಷ್ಕೃತ ಪ್ರೈವೆಸಿ ಪಾಲಿಸಿ ಬಗ್ಗೆ ಜನರು ಅಸಮಾಧಾನಗೊಂಡು ಸಿಗ್ನಲ್ ಎಂಬ ಆ್ಯಪ್​ಗೆ ವಲಸೆ ಹೋಗುವ ಟ್ರೆಂಡ್ ಶುರುವಾಗಿದೆ. ಅದೇ ಹಿನ್ನೆಲೆಯಲ್ಲಿ ಮಸ್ಕ್ ಅವರು ಆ ಟ್ವೀಟ್ ಮಾಡಿದ್ದರು. ಆದರೆ, ಇದರ ಲಾಭವಾಗಿದ್ದು ಅಮೆರಿಕದ ಟೆಕ್ಸಾಸ್ ನಗರ ಮೂಲದ ಸಿಗ್ನಲ್ ಅಡ್ವಾನ್ಸ್ ಕಂಪನಿಯ ಷೇರುಗಳಿಗೆ. ಈ ಬೆಳವಣಿಗೆ ಕಂಡು ಸಿಗ್ನಲ್ ಅಡ್ವಾನ್ಸ್ ಕಂಪನಿಯೇ ಶಾಕ್ ಆಗಿದೆ.
Published by: Vijayasarthy SN
First published: January 13, 2021, 2:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories