ಚೀನೀ ಆ್ಯಪ್​ಗಳ ನಿಷೇಧ ಕ್ರಮ ಹೇಗೆ ಜಾರಿಯಾಗುತ್ತದೆ? ಪ್ಲೇಸ್ಟೋರ್​ನಲ್ಲಿ ಇರುತ್ತವಾ ಈ ಆ್ಯಪ್​ಗಳು?

ಕೇಂದ್ರ ಸರ್ಕಾರವು ಚೀನೀ ಆ್ಯಪ್ಗಳನ್ನ ನಿಷೇಧಿಸಿರುವುದನ್ನು ಭಾರತದಲ್ಲಿನ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಗಳಿಗೆ ನೀಡುತ್ತದೆ. ಆಗ ಪ್ಲೇಸ್ಟೋರ್ ಅಥವಾ ಆ್ಯಪ್ಸ್ಟೋರ್ಗಳಿಂದ ಈ ಆ್ಯಪ್ಗಳನ್ನ ಭಾರತದಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಅಸಾಧ್ಯವಾಗುತ್ತದೆ.

news18-kannada
Updated:June 29, 2020, 10:45 PM IST
ಚೀನೀ ಆ್ಯಪ್​ಗಳ ನಿಷೇಧ ಕ್ರಮ ಹೇಗೆ ಜಾರಿಯಾಗುತ್ತದೆ? ಪ್ಲೇಸ್ಟೋರ್​ನಲ್ಲಿ ಇರುತ್ತವಾ ಈ ಆ್ಯಪ್​ಗಳು?
ಚೀನೀ ಆ್ಯಪ್​ಗಳು
  • Share this:
ಬೆಂಗಳೂರು(ಜೂನ್ 29): ಭದ್ರತಾ ಕಾರಣವೊಡ್ಡಿ ಕೇಂದ್ರ ಸರ್ಕಾರ ಚೀನೀ ಮೂಲದ 59 ಆ್ಯಪ್​ಗಳನ್ನ ನಿಷೇಧಿಸಿದೆ. ಭಾರತದಲ್ಲಿ 10 ಕೋಟಿ ಜನರು ಬಳಸುವ ಟಿಕ್ ಟಾಕ್ ಈ ನಿಷೇಧಿತ ಆ್ಯಪ್​ಗಳ ಪಟ್ಟಿಯಲ್ಲಿರುವುದೆ. ಮೊಬೈಲ್ ಬಳಕೆದಾರರ ದತ್ತಾಂಶವನ್ನು ಅನಧಿಕೃತವಾಗಿ ಭಾರತದ ಹೊರಗಿರುವ ಸರ್ವರ್​ಗಳಿಗೆ ರವಾನಿಸಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಹಾಗೂ ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹೇಳಿದೆ.

ಭಾರತದ ಗಡಿಭಾಗದಲ್ಲಿ ಚೀನಾ ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ಭಾರತ ನೀಡಿರುವ ಎಚ್ಚರಿಕೆ ಸಂದೇಶ ಇದು ಎಂಬ ವಾದವೂ ಇದೆ. ಇದೇನೇ ಇರಲಿ, ಈಗ ಭಾರತ ಸರ್ಕಾರ ಈ 59 ಚೀನೀ ಆ್ಯಪ್​ಗಳನ್ನ ಅಧಿಕೃತವಾಗಿ ನಿಷೇಧಿಸಿದೆ. ನಮ್ಮ ಮೊಬೈಲ್​ಗಳಲ್ಲಿ ಈ ಕೆಲ ಆ್ಯಪ್​ಗಳನ್ನ ನಾವು ಡೌನ್​ಲೋಡ್ ಮಾಡಿಕೊಂಡಿರಬಹುದು. ಆ ಆ್ಯಪ್​ಗಳಿಗೆ ಏನಾಗುತ್ತದೆ? ಭಾರತ ಈ ನಿಷೇಧದ ಕ್ರಮವನ್ನು ಹೇಗೆ ಜಾರಿಗೊಳಿಸುತ್ತದೆ ಎಂಬ ಸಂದೇಹ ನಿಮ್ಮಲ್ಲಿರಬಹುದು.

ಇದನ್ನೂ ಓದಿ: ಟಿಕ್ ಟಾಕ್ ಸೇರಿ ಚೀನಾದ 59 ಆ್ಯಪ್​ಗಳಿಗೆ ನಿಷೇಧ; ಇಲ್ಲಿದೆ ನಿಷೇಧಿತ ಆ್ಯಪ್​ಗಳ ಪಟ್ಟಿ

ಕೇಂದ್ರ ಸರ್ಕಾರವು ಚೀನೀ ಆ್ಯಪ್​ಗಳನ್ನ ನಿಷೇಧಿಸಿರುವುದನ್ನು ಭಾರತದಲ್ಲಿನ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್​ಗಳಿಗೆ ನೀಡುತ್ತದೆ. ಆಗ ಪ್ಲೇಸ್ಟೋರ್ ಅಥವಾ ಆ್ಯಪ್​ಸ್ಟೋರ್​ಗಳಿಂದ ಈ ಆ್ಯಪ್​ಗಳನ್ನ ಭಾರತದಲ್ಲಿ ಡೌನ್​ಲೋಡ್ ಮಾಡಿಕೊಳ್ಳಲು ಅಸಾಧ್ಯವಾಗುತ್ತದೆ. ಈಗಾಗಲೇ ಡೌನ್​ಲೋಡ್ ಆಗಿದ್ದರೆ ಕೆಲ ಆ್ಯಪ್​ಗಳನ್ನ ಆಫ್​ಲೈನ್​ನಲ್ಲೇ ಬಳಕೆ ಮಾಡಬಹುದು. ಆದರೆ, ಟಿಕ್ ಟಾಕ್, ಯುಸಿ ನ್ಯೂಸ್, ಹೆಲೋ ಇತ್ಯಾದಿ ಇಂಟರ್ನೆಟ್ ಕನೆಕ್ಷನ್ ಅಗತ್ಯ ಇರುವ ಆ್ಯಪ್​ಗಳನ್ನ ಬಳಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಚೀನಾದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಭಾರತ ಸರ್ಕಾರ; ಕಾರಣವೇನು ಗೊತ್ತಾ?

ಟಿಕ್ ಟಾಕ್ ಅನ್ನು ಭಾರತದಲ್ಲಿ ನಿಷೇಧಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಟಿಕ್ ಟಾಕ್ ವೇದಿಯ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿತ್ತು. ಆದರೆ, ನ್ಯಾಯಾಲಯದ ಮಧ್ಯಪ್ರವೇಶದಿಂದ ನಿಷೇಧ ಹಿಂಪಡೆದುಕೊಳ್ಳಲಾಯಿತು.

ಇದನ್ನೂ ಓದಿ: PUBG: ಚೀನಾದ 59 ಆ್ಯಪ್​ಗಳು​ ಬ್ಯಾನ್​; ಇದರಲ್ಲಿ ಪಬ್​ಜಿ ಹೆಸರಿಲ್ಲವೇಕೆ?; ಇಲ್ಲಿದೆ ಉತ್ತರ

ಆದರೆ, ಈ ಬಾರಿ ರಾಷ್ಟ್ರೀಯ ಭದ್ರತೆಗೆ ಅಪಾಯ ಇರುವ ಕಾರಣವೊಡ್ಡಿ ಕೇಂದ್ರ ಸರ್ಕಾರ ಚೀನೀ ಆ್ಯಪ್​ಗಳನ್ನ ನಿಷೇಧಿಸಿದೆ. ಇದು ಚೀನಾ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ತೆಗೆದುಕೊಂಡ ಕ್ರಮವಾಗಿದ್ದರೆ, ಅಥವಾ ಚೀನಾ ಸೌಹಾರ್ದಯುತವಾಗಿ ಗಡಿಸಮಸ್ಯೆ ಪರಿಹಾರಕ್ಕೆ ಮುಂದಾದರೆ ಕೇಂದ್ರ ಸರ್ಕಾರ ಚೀನೀ ಆ್ಯಪ್​ಗಳ ನಿಷೇಧ ಕ್ರಮವನ್ನು ಹಿಂಪಡೆದರೂ ಪಡೆಯಬಹುದು ಎನ್ನಲಾಗುತ್ತಿದೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading