TABLEAUX: ನಿಮಗೆ ಗೊತ್ತೇ ಗಣರಾಜ್ಯೋತ್ಸವದ ಮೆರವಣಿಗೆಯಿಂದ ಒಮ್ಮೆ ತಿರಸ್ಕಾರವಾಗಿತ್ತು ಕರ್ನಾಟಕದ ಸ್ತಬ್ಧಚಿತ್ರ!

Karnataka TABLEAUX: ಹಿಂದೆ ಕರ್ನಾಟಕದ ಸ್ತಬ್ಧಚಿತ್ರ ಥೀಮ್ ಕೊಡುವ ಸಭೆಗೆ ಹಾಜರಾಗುವದಕ್ಕೆ 15 ನಿಮಿಷ ತಡವಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಸ್ತಾವನೆಯನ್ನು ಅಂದು ರಾಷ್ಟ್ರಪತಿಗಳು ನಿರಾಕರಿಸಿದ್ದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  73ನೇ ಗಣತಂತ್ರ ಹಬ್ಬಕ್ಕೆ(Republic Day) ದೇಶದಿಂದ ಸಕಲ ಸಿದ್ಧತೆಗಳು(Preparation) ಆರಂಭವಾಗಿವೆ.. ಕೋವಿಡ್(Covid 19) ಹಿನ್ನೆಲೆಯಲ್ಲಿ ಈ ವರ್ಷವೂ ಸಹ ಸರಳವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(National Capital Delhi) ಗಣರಾಜ್ಯೋತ್ಸವ ಹಬ್ಬವನ್ನು ಆಚರಣೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.. ಅದರಲ್ಲೂ ಬಹುಮುಖ್ಯವಾಗಿ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ನಡೆಯುವ ಸ್ತಬ್ಧಚಿತ್ರಗಳ(TABLEAUX) ಆಯ್ಕೆ ವಿಷಯ ಈ ಬಾರಿ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಕೇರಳ (Kerala)ಪಶ್ಚಿಮ ಬಂಗಾಳ(West Bengal) ತಮಿಳುನಾಡು(Tamil Nadu ಸ್ತಬ್ಧಚಿತ್ರಗಳನ್ನು ತಿರಸ್ಕಾರ ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.. ಆದರೆ ಇದೆಲ್ಲದರ ನಡುವೆ ಖುಷಿಯ ವಿಷಯ ಅಂದ್ರೆ ನಮ್ಮ ಕರ್ನಾಟಕದ(Karnataka) ಸ್ತಬ್ಧಚಿತ್ರದ 13ನೇ ಬಾರಿಗೆ ಗಣರಾಜ್ಯೋತ್ಸವ ಮೆರವಣಿಗೆಗೆ ಆಯ್ಕೆಯಾಗಿದೆ. ಆದರೆ ನಮಗೆಲ್ಲ ಗೊತ್ತಿರುವ ಒಂದು ವಿಷಯ ಅಂದ್ರೆ ಕರ್ನಾಟಕದ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರ ಕೂಡಾ ಒಮ್ಮೆ ತಿರಸ್ಕಾರ ವಾಗಿತ್ತು.. ಅಂದು ಯಾಕೆ ನಮ್ಮ ಕರ್ನಾಟಕದ ಸ್ತಬ್ಧಚಿತ್ರ ತಿರಸ್ಕಾರವಿತ್ತು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..

  "ಥೀಮ್" ಕೊಡುವ ಸಭೆಗೆ 15 ನಿಮಿಷ ತಡವಾಗಿದ್ದಕ್ಕೆ ರಾಜ್ಯದ ಸ್ತಬ್ಧಚಿತ್ರ ತಿರಸ್ಕಾರ

  ಹಿಂದೆ ಕರ್ನಾಟಕದ ಸ್ತಬ್ಧಚಿತ್ರ ಥೀಮ್ ಕೊಡುವ ಸಭೆಗೆ ಹಾಜರಾಗುವದಕ್ಕೆ 15 ನಿಮಿಷ ತಡವಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಸ್ತಾವನೆಯನ್ನು ಅಂದು ರಾಷ್ಟ್ರಪತಿಗಳು ನಿರಾಕರಿಸಿದ್ದರು. ಹೌದು. ಕೇವಲ ಹದಿನೈದು ನಿಮಿಷದ ವಿಳಂಬಕ್ಕಾಗಿ ಹಿಂದೊಮ್ಮೆ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ತಪ್ಪಿ ಹೋಗಿತ್ತು.

  ಭಾರತೀಯ ರಕ್ಷಣಾ ಇಲಾಖೆ ಇಂದಿಗೂ ಪಾಲಿಸಿಕೊಂಡು ಬಂದಿರುವ ಶಿಸ್ತು ಹಾಗೂ ಶಿಷ್ಟಾಚಾರದ ವ್ಯಾಪ್ತಿಯಲ್ಲಿ ಕೊಂಚ ಏರುಪೇರಾದರೂ ಪರೇಡ್‌ಗೆ ಆಯ್ಕೆಯಾಗುವ ಅವಕಾಶ ತಪ್ಪಿಹೋಗುತ್ತದೆ. ಕರ್ನಾಟಕಕ್ಕೆ ಈ ಹಿಂದೆ ಇಂಥ ಸನ್ನಿವೇಶ ಎದುರಾಗಿತ್ತು.

  ಇದನ್ನೂ ಓದಿ: ಕರ್ನಾಟಕದ ಇಳಕಲ್ ಸೀರೆ, ಗುಳೇದಗುಡ್ಡದ ಖಣ ಆಯ್ಕೆ...ಏನಿದರ ವಿಶೇಷತೆ?

  ಗಣರಾಜ್ಯೋತ್ಸವದ ಸ್ತಬ್ಧ ಚಿತ್ರಗಳ ಆಯ್ಕೆ ಹೇಗಿರುತ್ತದೆ..

  ಪ್ರತಿವರ್ಷ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗುವ ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆನ್ನು ಪ್ರತಿವರ್ಷ ರಕ್ಷಣಾ ಇಲಾಖೆ ನಡೆಸುತ್ತದೆ.ಆಯ್ಕೆ ಪ್ರಕ್ರಿಯೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ..

  ಉತ್ತರ-ದಕ್ಷಿಣ ಪೂರ್ವ-ಪಶ್ಚಿಮ ರಾಜಕಾರಣ ಎಂಬುದು ಇಲ್ಲಿ ಇರುವುದೇ ಇಲ್ಲ.. ದೇಶದಲ್ಲಿರುವ ಅಷ್ಟು ರಾಜ್ಯಗಳ ಪೈಕಿ ಯಾವ ರಾಜ್ಯಧ ಥೀಮ್ ಬಹಳ ಉತ್ತಮವಾಗಿರುತ್ತದೆ ಅಂತಹ ಥೀಮ್ ರಕ್ಷಣಾ ಇಲಾಖೆ ಆಯ್ಕೆ ಮಾಡುತ್ತದೆ.

  ಹೀಗೆ ಆಯ್ಕೆಗೊಂಡ ರಾಜ್ಯದ ಥೀಮ್‌ಗೆ ರಕ್ಷಣಾ ಸಚಿವರು ಅಂಕಿತ ಹಾಕಿದ ಬಳಿಕ ರಾಷ್ಟ್ರಪತಿ ಅನುಮೋದಿಸಬೇಕಾಗುತ್ತದೆ. ಅಲ್ಲಿಯವರೆಗೂ ಯಾವ ರಾಜ್ಯ ಆಯ್ಕೆಯಾಗಿದೆ ಎಂಬುದರ ಕಿಂಚಿತ್ ಸುಳಿವೂ ಇರುವುದಿಲ್ಲ. ಈ ಬಾರಿ ಕೋವಿಡ್ ಕಾರಣಕ್ಕೆ 21 ಸ್ಥಬ್ದ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ.

  ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

  ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗುವ ಸ್ತಬ್ಧ ಚಿತ್ರಗಳ ಬಗ್ಗೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲೇ ಮಾಹಿತಿಯನ್ನು ನೀಡಲಾಗಿರುತ್ತದೆ.

  ಮೊದಲ ಹಂತದಲ್ಲಿ ಆಯಾ ರಾಜ್ಯಗಳು ಮಾಡುವ ಸ್ತಬ್ಧಚಿತ್ರಗಳ ಬಗ್ಗೆ ಸಂಬಂಧಪಟ್ಟಂತೆ 5ರಿಂದ6 ಥೀಮ್ ನ್ನೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು.. ಅದರ ಗುಣಮಟ್ಟ ಹಾಗೂ ಶಿಷ್ಟಾಚಾರ ಆದರಿಸಿ ಪೈಕಿ ಅತ್ಯುತ್ತಮವಾದ 2 ಥೀಮ್‌ನ್ನು ರಕ್ಷಣಾ ಇಲಾಖೆ ಆಯ್ಕೆ ಮಾಡುತ್ತದೆ.

  ಈ ಪ್ರಕ್ರಿಯೆ ಮುಗಿದ ಬಳಿಕ ಎರಡರಲ್ಲಿ ಯಾವುದು ಶ್ರೇಷ್ಠ ಎಂಬುದನ್ನು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳ ಸಮಿತಿ ತೀರ್ಮಾನ ಮಾಡುತ್ತದೆ.

  ಇದನ್ನೂ ಓದಿ: ಈ ಬಾರಿ Republic Dayಗೆ ವಿದೇಶಿ ಅತಿಥಿಗಳಿಗಿಲ್ಲ ಆಹ್ವಾನ; ಆದರೂ ಇರಲಿದೆ ಹಲವು ವಿಶೇಷತೆ

  ಇನ್ನು ಇಷ್ಟಕ್ಕೆ ಪ್ರಕ್ರಿಯೆ ಮುಗಿಯದೆ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗಿಯಾಗುವ, ಥೀಮ್ ನ ಸಾಹಿತ್ಯ, ಬೊಂಬೆಗಳು, ಹಿನ್ನೆಲೆ ಸಂಗೀತ, ನೃತ್ಯ, ಬೇಕಾದ ಕಲಾವಿದರ ಬಗ್ಗೆ ಆಯಾ ರಾಜ್ಯಗಳು ಮಾಹಿತಿ ನೀಡಬೇಕಾಗುತ್ತದೆ.

  ಈ ಸ್ತಬ್ಧ ಚಿತ್ರ ಮೆರವಣಿಗೆ ಯಲ್ಲಿ ಗರಿಷ್ಠ 12 ಕಲಾವಿದರು ಮಾತ್ರ ಭಾಗಿಯಾಗುವುದಕ್ಕೆ ಹೆಚ್ಚಿನ ಅವಕಾಶ ಇರುತ್ತದೆ. ಬಹುಮುಖ್ಯವಾಗಿ ಸ್ತಬ್ಧಚಿತ್ರಗಳಲ್ಲಿ ಯಾರ ಭಾವನೆಗೆ ಧಕ್ಕೆಯಾಗುವಂತಹ ಸನ್ನಿವೇಶ ಇರಕೂಡದು ಎಂದು ರಕ್ಷಣಾ ಇಲಾಖೆ ಎಲ್ಲಾ ರಾಜ್ಯಗಳಿಗೂ ಮುಂಜಾಗೃತಾ ಕ್ರಮವಾಗಿ ಸೂಚನೆ ನೀಡುತ್ತದೆ.

  ಇನ್ನು ಸ್ತಬ್ಧಚಿತ್ರಗಳ ಗಾತ್ರ ಎತ್ತರ ಸೇರಿದಂತೆ ಎಲ್ಲಾದಕ್ಕೂ ಶಿಷ್ಟಾಚಾರ ಇರುತ್ತದೆ. ಹೀಗಾಗಿ ಸ್ಪರ್ಧೆಯ ಆರಂಭದಲ್ಲಿ ಕೆಲವೊಂದಷ್ಟು ರಾಜ್ಯಗಳು ಸ್ಪರ್ಧೆಯಿಂದ ಹೊರ ಬೀಳುತ್ತದೆ.
  Published by:ranjumbkgowda1 ranjumbkgowda1
  First published: