ಬ್ರಿಟೀಷರ ಕಪಿಮುಷ್ಠಿಯಿಂದ ಸ್ವತಂತ್ರಗೊಂಡ ಭಾರತಕ್ಕೆ (India) ಈಗ 75 ವರ್ಷಗಳ (75 Years) ಸಂಭ್ರಮ. ಸ್ವಾತಂತ್ರ್ಯ ದಿನಾಚರಣೆಯ ಅಮೃತೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನಾಳೆ ಕೆಂಪುಕೋಟೆಯಿಂದ ಭಾಷಣ ಮಾಡಲಿದ್ದಾರೆ. ಕೆಂಪುಕೋಟೆಯಲ್ಲಿ ನಿಂತು 9ನೇ ಬಾರಿ ಮೋದಿ ಧ್ವಜಾರೋಹಣ (Flag Hoisting) ಮಾಡಲಿದ್ದಾರೆ. ಹಾಗಾಗಿ ದೆಹಲಿಯ ಕೆಂಪುಕೋಟೆಯ (Red Fort) ಮೇಲೆ ಇಡೀ ದೇಶದ ನೋಟ ನೆಟ್ಟಿದೆ. 75ನೇ ವರ್ಷದ ತ್ರಿವರ್ಣ (Flag) ಧ್ವಜಾರೋಹಣಕ್ಕೆ ಕೆಂಪುಕೋಟೆ ಭದ್ರಕೋಟೆಯಾಗಿದೆ. ಅದರಲ್ಲೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ದೇಶವಾಸಿಗಳಿಗೆ ಭರ್ಜರಿ ಘೋಷಣೆ (Gift) ಕೂಡ ಮಾಡಬಹುದು ಎನ್ನಲಾಗ್ತಿದೆ.
ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ತಕ್ಷಣ ನೆನಪಾಗೋದು ದೆಹಲಿಯ ಕೆಂಪುಕೋಟೆ. ಪ್ರತಿವರ್ಷ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಾಗಿರುವ ಹಿನ್ನಲೆ ದೆಹಲಿಯ ಕೆಂಪುಕೋಟೆ ವಿಶೇಷವಾಗಿ ಸಿದ್ದವಾಗಿದೆ.
9ನೇ ಬಾರಿ ಮೋದಿ ಧ್ವಜಾರೋಹಣ
ಭಾರತ ದೇಶ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಅಂದಹಾಗೇ ಕೆಂಪುಕೋಟೆಯಲ್ಲಿ ಮೋದಿ ನೆರವೇರಿಸ್ತಿರೋದು 9 ಬಾರಿಯ ಧ್ವಜಾರೋಹಣ.
ಕೆಂಪುಕೋಟೆಗೆ ಭರ್ಜರಿ ಸಿಂಗಾರ
75 ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ದೆಹಲಿಯ ಕೆಂಪುಕೋಟೆಯಲ್ಲಿ ಸಕಲ ಸಿದ್ದತೆಗಳು ಪೂರ್ಣಗೊಂಡಿದೆ. ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವ ಹಿನ್ನೆಲೆ ಕೆಂಪುಕೋಟೆಗೆ ವಿಶೇಷ ಕಳೆ ಬಂದಿದೆ. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆ ಈ ಬಾರಿ ಕೆಂಪುಕೋಟೆಯನ್ನು ವಿಶೇಷವಾಗಿ ತಯಾರಿ ಮಾಡಲಾಗಿದೆ.
ಇದನ್ನೂ ಓದಿ: ನಾಳೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ, ಬಂಪರ್ ಗಿಫ್ಟ್ ನಿರೀಕ್ಷೆ
7 ಸಾವಿರ ಗಣ್ಯರಿಗೆ ವ್ಯವಸ್ಥೆ
ಕೆಂಪುಕೋಟೆಯಲ್ಲಿ ನಾಳೆ ಮೋದಿ 9ನೇ ಬಾರಿಗೆ ಧ್ವಜಾರೋಹಣ ಮಾಡಲಿದ್ದಾರೆ. ಹಾಗಾಗಿ ಸುಮಾರು 7 ಸಾವಿರ ಗಣ್ಯರಿಗೆ ಕೆಂಪುಕೋಟೆಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಕೆಂಪುಕೋಟೆ ಆವರಣದ ಒಳಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಾವಚಿತ್ರಗಳನ್ನು ಹಾಕಲಾಗಿದೆ. ಮಾತ್ರವಲ್ಲದೇ ವಿಶೇಷ ವಿಡಿಯೋಗಳನ್ನು ಕೂಡ ಮಾಡಲಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ಅಮೃತೋತ್ಸವ, ನೆಹರೂ ಮರೆತ ಕರ್ನಾಟಕ ಸರ್ಕಾರ- ಕಾಂಗ್ರೆಸ್ ಆಕ್ರೋಶ
ಬೆಳಗ್ಗೆ 8 ಗಂಟೆಗೆ ಮೋದಿ ಭಾಷಣ
ನಾಳೆ ಬೆಳಗ್ಗೆ 7.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ 8 ಗಂಟೆಗೆ ಮೋದಿ ಮೋದಿ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ ದೇಶದ ಜನರ ಕುತೂಹಲ, ನಿರೀಕ್ಷೆ ಕೆಂಪುಕೋಟೆಯತ್ತ ನೆಟ್ಟಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಉಗ್ರರ ಕರಿನೆರಳು
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆ ಇಡೀ ದೇಶವೇ ಸಂತಸದಿಂದ ಕುಣಿಯುತ್ತಿದೆ. ಹಾಗಾಗಿ ಈ ಬಾರಿ ಉಗ್ರರ ಕರಿಛಾಯೆ ಕೂಡ ಇದರ ಮೇಲೆ ಬಿದ್ದಿದೆ. ಕೆಂಪುಕೋಟೆಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ಮೇಲೆ ಉಗ್ರರ ಕರಿನೆರಳು ಬಿದ್ದಿದೆ.
ಡ್ರೋಣ್ ದಾಳಿಯ ಎಚ್ಚರಿಕೆ!
ಕೆಂಪುಕೋಟೆಯ ಬಳಿ ಅಥವಾ ದೇಶದ ಹಲವು ಕಡೆ ಡ್ರೋಣ್ ದಾಳಿಯಾಗಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಉಗ್ರರ ಭೀತಿ ನಡುವೆಯೂ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ದೇಶ ಸನ್ನದ್ಧವಾಗಿದೆ. ಐತಿಹಾಸಿಕ ದಿನವನ್ನು ನೋಡಲು ಜನರು ಕಾತುರದಿಂದ ಕಾದು ಕುಳಿತಿದ್ದಾರೆ. ಕೆಂಪುಕೋಟೆಯಲ್ಲಿ ನಾಳೆಗೆ ಎಲ್ಲಾ ತಯಾರಿಗಳು ಪೂರ್ಣಗೊಂಡಿದ್ದು ಮದುಮಗಳಂತೆ ಗೋಚರವಾಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ