• Home
  • »
  • News
  • »
  • national-international
  • »
  • Twitter: ಟ್ವಿಟರ್ ಸ್ವಾಧೀನಪಡಿಸಲು ಶಕ್ತಿ ತುಂಬಿದಾತನನ್ನೇ ಹೊರಗಟ್ಟಿದ್ದೇಕೆ ಮಸ್ಕ್? ಪರಾಗ್​ ವಜಾಗೊಳ್ಳಲು ಇದೇ ಕಾರಣ!

Twitter: ಟ್ವಿಟರ್ ಸ್ವಾಧೀನಪಡಿಸಲು ಶಕ್ತಿ ತುಂಬಿದಾತನನ್ನೇ ಹೊರಗಟ್ಟಿದ್ದೇಕೆ ಮಸ್ಕ್? ಪರಾಗ್​ ವಜಾಗೊಳ್ಳಲು ಇದೇ ಕಾರಣ!

ಎಲಾನ್ ಮಸ್ಕ್ ಮತ್ತು ಪರಾಗ್ ಅಗ್ರವಾಲ್

ಎಲಾನ್ ಮಸ್ಕ್ ಮತ್ತು ಪರಾಗ್ ಅಗ್ರವಾಲ್

ಎಲಾನ್ ಮಸ್ಕ್‌ ಟ್ವಿಟರ್ ಒಡೆಯನಾಗಲು ಮುಖ್ಯ ಪಾತ್ರವಹಿಸಿದವರೇ ಪರಾಗ್ ಅಗರವಾಲ್ ಎನ್ನಲಾಗುತ್ತಿದೆ. ಟ್ವಿಟರ್ ಖರೀದಿಸಲು ಎಲಾನ್ ಮಸ್ಕ್ ಅವರನ್ನು ಇವರೇ ಬಲವಂತಪಡಿಸಿದ್ದರಂತೆ. ಅಗರವಾಲ್ ಮತ್ತು ಅವರ ತಂಡ ಇಲ್ಲದಿದ್ದರೆ, ಎಲಾನ್ ಮಸ್ಕ್ ಟ್ವಿಟರ್‌ನ ಸ್ಟಾಕ್ ಮೌಲ್ಯಮಾಪನವನ್ನು ತಗ್ಗಿಸಿ ಒಪ್ಪಂದದಿಂದ ಹಿಂದೆ ಸರಿಯುವ ಸಾಧ್ಯತೆ ಕೂಡ ಇತ್ತಂತೆ ಎಂದು ಕೆಲವು ವರದಿಗಳು ಹೇಳಿವೆ.

ಮುಂದೆ ಓದಿ ...
  • Share this:

    ಟ್ವಿಟರ್, ಸದ್ಯ ಜಗತ್ತಿನಲ್ಲಿ ಭಾರಿ ಸುದ್ದಿಯಲ್ಲಿರುವ ಸಂಸ್ಥೆ. ಕೆಲ ದಿನಗಳ ಹಿಂದೆ ಎಲೋನ್‌ ಮಸ್ಕ್‌ ಟ್ವಿಟರ್ (Twitter) ಖರೀದಿ ಮಾಡ್ತಾರಂತೆ ಅನ್ನೋ ಊಹಾಪೋಹ ದೊಡ್ಡದಾಗಿತ್ತು ಹಬ್ಬಿತ್ತು, ಅದರಂತೆ ಅಂತಿಮವಾಗಿ ಟ್ವಿಟರ್ ಅನ್ನು ಎಲಾನ್ ಮಸ್ಕ್‌ (Elon Musk) ಸ್ವಾಧೀನಪಡಿಸಿಕೊಂಡರು. ಇದಾದ ನಂತರ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ಒಂದೇ ದಿನದಲ್ಲಿ ಎಲಾನ್ ಮಸ್ಕ್‌ ತನ್ನ ಎಲ್ಲಾ ಉನ್ನತ ಅಧಿಕಾರಿಗಳನ್ನು ವಜಾಗೊಳಿಸುವ ಮೂಲಕ ಸುದ್ದಿಯಾದರು. ಮುಖ್ಯವಾಗಿ ವಜಾಗೊಳಿಸಿದ ಅಧಿಕಾರಿಗಳಲ್ಲಿ ಟ್ವಿಟರ್ ಭಾರತೀಯ ಮೂಲದ ಸಿಇಒ ಪರಾಗ್‌ ಅಗರ್‌ವಾಲ್‌ (Parag Agarwal), ಸಿಎಫ್‌ಒ ನೆಡ್ ಸೆಗಲ್ ಮತ್ತು ಜನರಲ್ ಕೌನ್ಸೆಲ್ ವಿಜಯ ಗಡ್ಡೆ ಸೇರಿದ್ದಾರೆ.


    ಪರಾಗ್ ಅಗರ್‌ವಾಲ್‌ಗೆ ಗೇಟ್‌ ಪಾಸ್‌


    ಎಲಾನ್ ಮಸ್ಕ್‌ ಟ್ವಿಟರ್ ಒಡೆಯನಾಗಲು ಮುಖ್ಯ ಪಾತ್ರವಹಿಸಿದವರೇ ಪರಾಗ್ ಅಗರವಾಲ್ ಎನ್ನಲಾಗುತ್ತಿದೆ. ಟ್ವಿಟರ್ ಖರೀದಿಸಲು ಎಲಾನ್ ಮಸ್ಕ್ ಅವರನ್ನು ಇವರೇ ಬಲವಂತಪಡಿಸಿದ್ದರಂತೆ. ಅಗರವಾಲ್ ಮತ್ತು ಅವರ ತಂಡ ಇಲ್ಲದಿದ್ದರೆ, ಎಲಾನ್ ಮಸ್ಕ್ ಟ್ವಿಟರ್‌ನ ಸ್ಟಾಕ್ ಮೌಲ್ಯಮಾಪನವನ್ನು ತಗ್ಗಿಸಿ ಒಪ್ಪಂದದಿಂದ ಹಿಂದೆ ಸರಿಯುವ ಸಾಧ್ಯತೆ ಕೂಡ ಇತ್ತಂತೆ ಎಂದು ಕೆಲವು ವರದಿಗಳು ಹೇಳಿವೆ. ಟ್ವಿಟರ್ ಸ್ವಾಧೀನದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಪರಾಗ್‌ ಅವರಿಗೆ ಗೇಟ್‌ ಪಾಸ್‌ ನೀಡಿದ್ದೇ ಸದ್ಯದ ಯಕ್ಷಪ್ರಶ್ನೆ. ಕಂಪನಿಯಿಂದ ವಜಾಗೊಂಡ ಪರಾಗ್ ನಂತರ $42 ಮಿಲಿಯನ್‌ನೊಂದಿಗೆ ಹೊರಬಂದಿದ್ದಾರೆ.


    ವಜಾಗೊಂಡ ಪರಾಗ್​ಗೆ 42 ಮಿಲಿಯನ್‌ ಡಾಲರ್‌ ಹಣ


    ಟ್ವಿಟರ್ನಿಂದ ವಜಾಗೊಂಡ ಅಗರ್‌ವಾಲ್‌ಗೆ ಕಂಪನಿಯ ಕಡೆಯಿಂದ ಸುಮಾರು 42 ಮಿಲಿಯನ್‌ ಡಾಲರ್‌ ಹಣ ದೊರಕಲಿದೆಯಂತೆ. ಟ್ವಿಟರ್‌ನ ಮಾಜಿ CEO ಜಾಕ್ ಡಾರ್ಸೆಯ ನಂತರ ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಪರಾಗ್‌ ಅಗರ್‌ವಾಲ್‌ ಅವರು ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಕೆಲ ವರದಿಗಳು ಹೇಳುವಂತೆ ಮಸ್ಕ್‌ಗೆ ಪರಾಗ್ ಬಗ್ಗೆ ಹೆಚ್ಚಿನ ಯಾವುದೇ ಅತೃಪ್ತಿ ಇರಲಿಲ್ಲ, ಆದಾಗ್ಯೂ ಇಬ್ಬರ ಸಂಬಂಧ ಸರಿ ಇರಲಿಲ್ಲ ಎನ್ನಲಾಗುತ್ತಿತ್ತು.


    ಇದನ್ನೂ ಓದಿ: ಟ್ವಿಟರ್ ಉದ್ಯೋಗಿಗಳಿಗೆ ಇನ್ನು ದಿನದ 12 ಗಂಟೆ, ವಾರದ 7 ದಿನ ಕೆಲಸ, ಮಾಡದವರು ವಜಾ!


    ಇಬ್ಬರ ನಡುವೆ ನಡೆಯುತಿತ್ತು ಮುಸುಕಿನ ಗುದ್ದಾಟ


    ಮಸ್ಕ್ ಬಗ್ಗೆ ಕೊಂಚ ಅಸಮಾಧಾನವನ್ನು ಪರಾಗ್‌ ಹೊಂದಿದ್ದರು. ಟ್ವಿಟರ್ ನಿರ್ವಹಣೆಯಲ್ಲಿ ಮಸ್ಕ್ ಅಸಮರ್ಥರಾಗಿದ್ದಾರೆ ಮತ್ತು ಅವರ ಸೋರಿಕೆಯಾದ ಚಾಟ್‌ಗಳು ಅಗರ್ವಾಲ್ ಅಸಮಾಧಾನಕ್ಕೆ ಕಾರಣವಾಗಿತ್ತು. ಮಸ್ಕ್ ಮತ್ತು ಪರಾಗ್ ಅಗರವಾಲ್ ನಡುವೆ ಮುಸುಕಿನ ಗುದ್ದಾಟಗಳು ನಡೆಯುತ್ತಿತ್ತು.


    ಈ ಬಗ್ಗೆ ಇಬ್ಬರು ಕೂಡಾ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಹವಾಯಿಯಲ್ಲಿ ರಜೆಯಲ್ಲಿ ಇದ್ದ ಅಗರವಾಲ್‌ರನ್ನು ಇವರು ಟ್ವಿಟರ್ ಅನ್ನು ನಡೆಸುವ ರೀತಿಯ ವ್ಯಕ್ತಿಯಲ್ಲ ಎಂದು ಮಸ್ಕ್ ಅಪಹಾಸ್ಯ ಮಾಡಿದ್ದರಂತೆ. ಒಟ್ಟಾರೆ ಈ ಎಲ್ಲಾ ಪ್ರಸಂಗಗಳು ಟ್ವಿಟರ್ ಸ್ವಾಧೀನಪಡಿಸಿಕೊಂಡ ತಕ್ಷಣ ಅವರಿಗೆ ಗೇಟ್‌ಪಾಸ್‌ ನೀಡಿದ್ದಕೆ ಸಾಕ್ಷಿಯಾಗಿವೆ.


    Elon Musk may appoint a new Twitter CEO soon stg-hg
    ಪರಾಗ್ ಅಗರ್ವಾಲ್


    ಟ್ವಿಟರ್ ಸ್ವಾಧೀನದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಪರಾಗ್‌


    ಹಲವು ಬಾರಿ ಎಲೋನ್ ಮಸ್ಕ್‌ ವಿರುದ್ಧ ಪರಾಗ್‌ ನಿಲುವು ‌ತೆಗೆದುಕೊಂಡಿದ್ದರು, ಹೆಚ್ಚಿನ ಸಂದರ್ಭಗಳಲ್ಲಿ, ಅವರು ಇದರಲ್ಲಿ ವಿಜಯಶಾಲಿ ಕೂಡ ಆಗಿದ್ದರು. ಮಸ್ಕ್‌ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮತ್ತು ಹುರಿದುಂಬಿಸಿದವರಲ್ಲಿ ಪರಾಗ್‌ ಅಗರವಾಲ್ ಮೊದಲಿಗರಾಗಿದ್ದರು.


    ಅಗರ್ವಾಲ್ ಇರದಿದ್ದರೆ ಮಸ್ಕ್​ ಟ್ವಿಟರ್​ ಖರೀದಿಸುತ್ತಿರಲಿಲ್ಲ


    ಪರಾಗ್‌ ಅಗರವಾಲ್‌ ಇಲ್ಲದಿದ್ದರೆ ಮಸ್ಕ್‌ ಟ್ವಿಟರ್ ಅನ್ನು ಖರೀದಿ ಮಾಡುತ್ತಿರಲಿಲ್ಲ ಎಂಬ ಮಾತೂ ಸದ್ಯ ಜೋರಾಗಿ ಕೇಳಿಬರುತ್ತಿದೆ. ಟ್ವಿಟರ್ ಸ್ಪ್ಯಾಮ್‌ ಖಾತೆಗಳ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದ ಮಸ್ಕ್‌ ಒಪ್ಪಂದ ಮುರಿದುಕೊಳ್ಳುವ ಘೋಷಣೆ ಮಾಡಿದ್ದರು.


    ಹೀಗಾಗಿ ಮಸ್ಕ್‌ ವಿರುದ್ಧ ಟ್ವಿಟರ್ ಕಂಪನಿ ಕೋರ್ಟ್ ಮೊರೆ ಹೋಗಿತ್ತು. ನಂತರ ಮಸ್ಕ್ ​​​​ಕಂಪನಿಯಲ್ಲಿ 9.2% ಪಾಲು ಹೊಂದಿರುವುದಾಗಿ ಬಹಿರಂಗಪಡಿಸಿದ್ದರು. ಈ ಮೂಲಕ ಮಸ್ಕ್‌ ಟ್ವಿಟರ್ ಅತಿದೊಡ್ಡ ಷೇರುದಾರಾಗಿದ್ದರು. ಟ್ವಿಟರ್ ಖರೀದಿಗೆ ಮುಂದಾಗಿದ್ದ ಉದ್ಯಮಿ ಎಲಾನ್‌ ಮಸ್ಕ್‌ ಆಫರ್‌ಗೆ ಕಂಪನಿಯ ಷೇರುದಾರರು ಅಂಗೀಕಾರ ನೀಡಿದ್ದರು.


    ಇದನ್ನೂ ಓದಿ: ಟ್ವಿಟರ್‌ಗೆ ಮತ್ತೆ ಮರಳಲಿದ್ದಾರೆ ಶ್ರೀರಾಮ್‌ ಕೃಷ್ಣನ್‌, ಎಲಾನ್​ ಮಸ್ಕ್​ ಪ್ಲ್ಯಾನ್​ ಗೆಸ್ಸ್​​​ ಮಾಡೋದೇ ಕಷ್ಟ!


    ಸಿಇಒ ಪರಾಗ್ ಅಗರವಾಲ್ ಹೊರಕ್ಕೆ


    ಈ ಇಡೀ ಘಟನೆಯಲ್ಲಿ ಪರಾಗ್‌ನ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು. ವಿಲೀನದ ಮೂಲಕ ಹೋಗಲು ಮಸ್ಕ್ ಅನ್ನು ಒತ್ತಾಯಿಸುವುದರ ಜೊತೆಗೆ ಹಲವು ಸಂದರ್ಭಗಳನ್ನು ನಿಭಾಯಿಸುವಲ್ಲಿ ಪರಾಗ್‌ ಯಶಸ್ವಿಯಾಗಿದ್ದರು.ಎಲಾನ್ ಮಸ್ಕ್ ಅವರ ಟ್ವಿಟರ್ ಖರೀದಿಯ ಒಪ್ಪಂದವು ಮುಗಿಯುವವರೆಗೆ ಮಾತ್ರ ಪರಾಗ್ ಅಗರವಾಲ್ ಕಂಪನಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. 42 ಮಿಲಿಯನ್ ಡಾಲರ್ (ಸುಮಾರು 321 ಕೋಟಿ ರೂ) ಪ್ಯಾಕೇಜ್‌ನಿಂದ ಸಿಇಒ ಪರಾಗ್ ಅಗರವಾಲ್ ಹೊರಬಂದಿದ್ದಾರೆ.


    12 ತಿಂಗಳ ಒಳಗೆ ಪರಾಗ್ ಅವರನ್ನು ತೆಗೆದು ಹಾಕಿದರೆ, ಅವರ ಮೂಲ ವೇತನ, ಎಲ್ಲ ಇಕ್ವಿಟಿ ಪಾವತಿ, ಮುಂತಾದವುಗಳನ್ನು ಸೇರಿಸಿದರೆ ಇಷ್ಟು ದೊಡ್ಡ ಮೊತ್ತದ ಹಣ ನೀಡಬೇಕಾಗುತ್ತೆ ಎಂದು ಕೆಲ ವರದಿಗಳು ತಿಳಿಸಿವೆ.

    Published by:Precilla Olivia Dias
    First published: