• Home
  • »
  • News
  • »
  • national-international
  • »
  • Charles |||: ಕಿಂಗ್ ಚಾರ್ಲ್ಸ್, ನಿಮ್ಮ ವಯಸ್ಸು ಎಷ್ಟು? ಮಕ್ಕಳ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಕಿಂಗ್‌ ಚಾರ್ಲ್ಸ್

Charles |||: ಕಿಂಗ್ ಚಾರ್ಲ್ಸ್, ನಿಮ್ಮ ವಯಸ್ಸು ಎಷ್ಟು? ಮಕ್ಕಳ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಕಿಂಗ್‌ ಚಾರ್ಲ್ಸ್

 ಹಾಸ್ಯಮಯವಾಗಿ ಉತ್ತರಿಸಿದ ಕಿಂಗ್‌  ಚಾರ್ಲ್ಸ್

ಹಾಸ್ಯಮಯವಾಗಿ ಉತ್ತರಿಸಿದ ಕಿಂಗ್‌ ಚಾರ್ಲ್ಸ್

ಕಿಂಗ್ ಚಾರ್ಲ್ಸ್ III, ಪೂರ್ವ ಲಂಡನ್‌ಗೆ ಭೇಟಿ ನೀಡಿದಾಗ ಅವರ ವಯಸ್ಸಿನ ಬಗ್ಗೆ ಮಕ್ಕಳು ಪ್ರಶ್ನೆ ಕೇಳಿದರು. ಇದಕ್ಕೆ ನೂತನ ದೊರೆ ಉತ್ತರಿಸಿರುವ ಪರಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.

  • Share this:

ದೀರ್ಘ ಕಾಲ ಬ್ರಿಟನ್ನಿನ ರಾಣಿಯಾಗಿದ್ದ 96 ವರ್ಷದ ಎಲಿಜಬೆತ್ ( Elizabeth) ಇತ್ತೀಚೆಗಷ್ಟೇ ನಿಧನ ಹೊಂದಿದ್ದು, ಅವರ ನಂತರ ಮಗ ಚಾರ್ಲ್ಸ್ III ರಾಜನಾಗಿ ಆಳ್ವಿಕೆ ನಡೆಸುತ್ತಿದ್ದಾರೆ. ತಾಯಿಯಂತೆ ದಕ್ಷ ಮತ್ತು ನಿಸ್ವಾರ್ಥ ಸೇವೆ ಮಾಡುವುದಾಗಿ ಭರವಸೆ ಕೊಟ್ಟ ನೂತನ ರಾಜ (King) ಅದರಂತೆ ಕೆಲಸ ಮಾಡುವ ಹಾದಿಯಲ್ಲಿ ಸಾಗುತ್ತಿದ್ದಾರೆ. ರಾಣಿ ಎಲಿಜಬೆತ್‌ ದಕ್ಷ ಆಡಳಿತದ ಜೊತೆ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹೊಂದಿದ್ದರು, ಅದರಲ್ಲಿ ಮುಖ್ಯವಾಗಿದ್ದು ರಾಣಿಯ ಹಾಸ್ಯಪ್ರಜ್ಞೆ. ಕೆಲವೊಮ್ಮೆ ಪ್ರಶ್ನೆಗಳಿಗೆ ನೀಡುತ್ತಿದ್ದ ಉತ್ತರಗಳು ಎಲ್ಲರ ಮುಖದಲ್ಲಿ ಸಣ್ಣ ನಗು ತರಿಸುತ್ತಿತ್ತು. ತಾಯಿಯ ಹಾಸ್ಯಪ್ರಜ್ಞೆಯನ್ನು ಕಿಂಗ್‌ ಚಾರ್ಲ್ಸ್‌ ಕೂಡ ಮೈಗೂಡಿಸಿಕೊಂಡಂತೆ ಕಾಣುತ್ತಿದೆ. ಮೊನ್ನೆ ಮೊನ್ನೆ ತಾನೇ ನಡೆದ ಘಟನೆಯಲ್ಲಿ ಚಾರ್ಲ್ಸ್ III (Charles III) ನೀಡಿದ ಉತ್ತರ ಈ ಹಾಸ್ಯಪ್ರಜ್ಞೆಗೆ ಸಾಕ್ಷಿಯಾಯಿತು. ಹೌದು, ಕಿಂಗ್ ಚಾರ್ಲ್ಸ್ III, ಪೂರ್ವ ಲಂಡನ್‌ಗೆ ಭೇಟಿ ನೀಡಿದಾಗ ಅವರ ವಯಸ್ಸಿನ ಬಗ್ಗೆ ಮಕ್ಕಳು ಪ್ರಶ್ನೆ ಕೇಳಿದರು. ಇದಕ್ಕೆ ನೂತನ ದೊರೆ ಉತ್ತರಿಸಿರುವ ಪರಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. ಈ ಮೂಲಕ ದಿವಂಗತ ರಾಣಿ ಎಲಿಜಬೆತ್ II (Elizabeth II) ರ ಹಾಸ್ಯಪ್ರಜ್ಞೆಯನ್ನು ಮತ್ತೊಮ್ಮೆ ಜಗತ್ತಿಗೆ ನೆನಪಿಸಿದರು.


ಶಾಲೆಗೆ ಭೇಟಿ, ಮಕ್ಕಳ ಜೊತೆ ಹರಟೆ


ಕಿಂಗ್ ಚಾರ್ಲ್ಸ್ III ಸಾಮಾಜಿಕ ಯೋಗಕ್ಷೇಮವನ್ನು ಉತ್ತೇಜಿಸುವ ಸಂಘಟನೆಯಾದ ಪ್ರಾಜೆಕ್ಟ್ ಝೀರೋ ವಾಲ್ತಮ್ಸ್ಟೋವ್‌ಗೆ ಭೇಟಿ ನೀಡಿದ್ದರು. ಇದೇ ವೇಳೆ, ಪೂರ್ವ ಲಂಡನ್‌ನಲ್ಲಿರುವ ಬಾರ್ನ್ ಕ್ರಾಫ್ಟ್ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಸ್ವಲ್ಪ ಹೊತ್ತು ಕಾಲಕಳೆದರು. ಕಿಂಗ್ ಚಾರ್ಲ್ಸ್ III ಜೊತೆ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೂಡ ಉಪಸ್ಥಿತರಿದ್ದರು. ಈ ವೇಳೆ ಮಕ್ಕಳು ರಾಜನಿಗೆ ಪ್ರಶ್ನೆಯನ್ನು ಕೇಳಿದರು, ಆ ಪ್ರಶ್ನೆಗೆ ನಾಜೂಕಾಗಿ ಉತ್ತರಿಸಿದ ಚಾರ್ಲ್ಸ್‌ ಒಂದು ಹಾಸ್ಯ ಚಟಾಕಿ ಹಾರಿಸಿದರು.


ಇದನ್ನೂ ಓದಿ: ಮೊರ್ಬಿ ದುರಂತ ಕಲಿಸಿದ ಪಾಠ: ಅಟಲ್ ಸೇತುವೆ ಪ್ರವೇಶಕ್ಕೆ ಮಿತಿ ಹೇರಿದ ಆಡಳಿತ


"ಕಿಂಗ್ ಚಾರ್ಲ್ಸ್, ನಿಮ್ಮ ವಯಸ್ಸು ಎಷ್ಟು?"


ಕಿಂಗ್ ಚಾರ್ಲ್ಸ್ III ಜನಸಮೂಹದೊಂದಿಗೆ ಸಂವಾದ ನಡೆಸುತ್ತಿರುವಾಗ, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಮಗುವೊಂದು "ಇಟ್ಸ್ ದಿ ಕಿಂಗ್!" ( ಇವರು ರಾಜನಾ?) ಎಂದು ಹೇಳುವುದನ್ನು ಕೇಳಬಹುದು. ಇದೇ ವೇಳೆ
ಕಿಂಗ್ ಚಾರ್ಲ್ಸ್‌ಗೆ ಮಕ್ಕಳು "ಕಿಂಗ್ ಚಾರ್ಲ್ಸ್, ನಿಮ್ಮ ವಯಸ್ಸು ಎಷ್ಟು?" ಎಂದು ಕೇಳಿದರು.


ಮಕ್ಕಳಿಗೆ ತನ್ನ ವಯಸ್ಸನ್ನು ನಿಖರವಾಗಿ ಹೇಳದೇ, ಜೋರಾಗಿ ನಗುತ್ತಾ, ನನ್ನ ವಯಸ್ಸನ್ನೂ ನೀವೇ ಊಹಿಸುತ್ತೀರಾ ಅಂತಾ ಜೋಕ್‌ ಮಾಡಿದರು. ರಾಜನ ಪ್ರತಿಕ್ರಿಯೆಗೆ ಅಲ್ಲಿ ನೆರೆದಿದ್ದ ಮಕ್ಕಳು ಶಿಕ್ಷಕರು ಎಲ್ಲರೂ ನಕ್ಕರು. ಕಿಂಗ್‌ ಚಾರ್ಲ್ಸ್‌ ಬಾರ್ನ್ ಕ್ರಾಫ್ಟ್ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಾಲಕಳೆದು, ಅವರೊಟ್ಟಿಗೆ ಮಾತನಾಡಿದರು. ಮಕ್ಕಳು ಧ್ವಜ ಹಿಡಿದು ಅದನ್ನು ಬೀಸುತ್ತಾ ರಾಜನಿಗೆ ಪ್ರೀತಿ ತೋರಿದರು.



ರಾಣಿ ಎಲಿಜಬೆತ್‌ ಹಾಸ್ಯ ಪ್ರಜ್ಞೆ


ದಿವಂಗತ ರಾಣಿ ಎಲಿಜಬೆತ್‌ ಕೂಡ ಈ ರೀತಿಯಾದ ತಕ್ಷಣದಲ್ಲಿಯೇ ಉತ್ತರ ನೀಡುವ ಮತ್ತು ಬಲವಾದ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದರು. ಉತ್ತರ ಐರ್ಲೆಂಡ್‌ಗೆ 2016 ರ ಭೇಟಿಯ ಸಂದರ್ಭದಲ್ಲಿ ಸಬ್ ಫಸ್ಟ್ ಮಿನಿಸ್ಟರ್ ಮಾರ್ಟಿನ್ ಮೆಕ್‌ಗಿನ್ನೆಸ್ ಅವರು ರಾಣಿಯನ್ನು ಸ್ವಾಗತಿಸಿ, "ಹಲೋ, ನೀವು ಚೆನ್ನಾಗಿದ್ದೀರಾ?" ಎಂದು ಯೋಗ ಕ್ಷೇಮವನ್ನು ವಿಚಾರಿಸಿದರು, ಈ ವೇಳೆ ತೊಂಬತ್ತು ವರ್ಷದ ಎಲಿಜಬೆತ್‌ ರಾಣಿ "ತುಂಬಾ ಧನ್ಯವಾದಗಳು, ಹೇಗೋ ನಾನು ಇನ್ನೂ ಜೀವಂತವಾಗಿದ್ದೇನೆ", ಎಂದು ಹಾಸ್ಯಮಯವಾಗಿ ಉತ್ತರಿಸಿದ್ದರಂತೆ. ಇಂತಹ ಹಲವು ಸಂದರ್ಭಗಳು ರಾಣಿಯ ಹಾಸ್ಯಪ್ರಜ್ಞೆಗೆ ಸಾಕ್ಷಿಯಾಗಿವೆ.


ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ; ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್


ಇತ್ತ, ಕಿಂಗ್ ಚಾರ್ಲ್ಸ್ ಅವರ ಪಟ್ಟಾಭಿಷೇಕವು ಮುಂದಿನ ವರ್ಷ ಮೇ 6 ರಂದು ನಡೆಯಲಿದ್ದು, ಅಧಿಕೃತವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.

First published: