Climate Change: ಹವಾಮಾನ ಬದಲಾವಣೆ ಸರಿ ಮಾಡೋಕೆ ವರ್ಷಕ್ಕೆ 100 ಬಿಲಿಯನ್ ಡಾಲರ್ ಹಣ ಬೇಕು!

UNO:  ಈ ಮಧ್ಯೆ  ಯುಎಸ್ ಹವಾಮಾನ ರಾಯಭಾರಿ  ಜಾನ್ ಕೆರ್ರಿ, ಅಕ್ಟೋಬರ್ 31 ರಿಂದ ನವೆಂಬರ್ 12 CoP-26 ಹವಾಮಾನ ಬದಲಾವಣೆಯ ಸಮ್ಮೇಳನಕ್ಕೆ ಮುಂಚಿತವಾಗಿ ದೇಶವು ಹೆಚ್ಚಿನ ಸಹಾಯವನ್ನು ನೀಡಲಿದೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವಸಂಸ್ಥೆಯ(UNO) ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ,  ಪ್ರಪಂಚ ಎದುರಿಸುತ್ತಿರುವ ಹವಾಮಾನ ತುರ್ತುಸ್ಥಿತಿಯ ನಿರ್ವಹಣೆಯ ಕುರಿತು ಹೆಚ್ಚು ಮಾತುಗಳು ಕೇಳಿಬಂದಿದೆ. ಹವಾಮಾನ ವೈಪರಿತ್ಯ(Climate Change) ತಪ್ಪಿಸಲು ಈಗ ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ.  ಸಭೆ ಆರಂಭವಾದ ಗಂಟೆಗಳ ನಂತರ, ತುರ್ತು ಹಣಕಾಸು ಶೃಂಗಸಭೆಯನ್ನು ಕರೆಯಲಾಗಿದ್ದು, ಹವಾಮಾನ ಹಣಕಾಸು ಮತ್ತು ಶ್ರೀಮಂತ ದೇಶಗಳ ಇತರ ಕ್ರಮಗಳ ಕುರಿತು ಹೆಚ್ಚಿನ ಕ್ರಮಕ್ಕಾಗಿ ಒತ್ತಾಯಿಸಲಾಗಿದೆ.

ಮುಂದಿನ ತಿಂಗಳು ಸ್ಕಾಟ್ಲೆಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ಪಕ್ಷಗಳ ಸಮ್ಮೇಳನ (CoP-26) ಕ್ಕೆ ಮುಂಚಿತವಾಗಿ ವಿಶ್ವಸಂಸ್ಥೆಯು  ಎಲ್ಲ ದೇಶಗಳ ಜೊತೆ ಚರ್ಚಿಸುತ್ತಿರುವುದರಿಂದ ಈ ಸಭೆಯು ಮಹತ್ವ ಪಡೆದಿದೆ.  ಭವಿಷ್ಯದ ಪೀಳಿಗೆಯನ್ನು ಉಳಿಸುವುದು ಸಾಮಾನ್ಯ ಜವಾಬ್ದಾರಿಯಾಗಿದೆ ಎಂದು ಯುಎನ್ ಚೀಫ್ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.   ತುರ್ತು ಹಣಕಾಸು ಶೃಂಗಸಭೆಯ ಪ್ರಮುಖ ಅಜೆಂಡಾಗಳಲ್ಲಿ ಒಂದು ಹವಾಮಾನ ಕ್ರಿಯೆಯ ಉಪಕ್ರಮಗಳಿಗೆ ಧನಸಹಾಯ ಮಾಡಲು ಹಣಕಾಸು ಸಂಪನ್ಮೂಲಗಳನ್ನು ಸಂಗ್ರಹಿಸುವುದಾಗಿದೆ.

ಯುಎನ್ ಮುಖ್ಯಸ್ಥರೊಂದಿಗಿನ ಸಭೆಯನ್ನು ನಡೆಸಿರುವ  ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್, ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಪ್ರತಿ ವರ್ಷ $ 100 ಬಿಲಿಯನ್ ಹವಾಮಾನ ನಿಧಿಗೆ  ನೀಡುವಂತೆ ಒತ್ತಾಯಿಸಿದ್ದಾರೆ.  ಹಲವಾರು ಪ್ರಮುಖ  ದೇಶಗಳು ಕೆಲವು ಇಂದು ಇಲ್ಲಿ  ಭಾಗವಹಿಸಿವೆ, ಕೆಲವು  ದೇಶಗಳು ಗೈರಾಗಿವೆ. ಆದರೆ ನಾವು ಹವಾಮಾನ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಯೋಜನೆ ಯಶಸ್ವಿಯಾಗಲು ನಾವು 100 ಬಿಲಿಯನ್ ಡಾಲರ್‌ಗಳನ್ನು  ಒಟ್ಟು ಗೂಡಿಸಬೇಕಿದೆ ಎಂದು ಯುಎನ್ ಜನರಲ್ ಅಸೆಂಬ್ಲಿಯ ವಾರ್ಷಿಕ ಉನ್ನತ ಮಟ್ಟದ  ಸಭೆಯಲ್ಲಿ ಜಾನ್ಸನ್ ಹೇಳಿದರು.

ಇದನ್ನೂ ಓದಿ: ಮತ್ತೆ ತೈವಾನ್​ನಿಂದ ಹಣ್ಣುಗಳ ಅಮದಿಗೆ ನಿರ್ಬಂಧ ಹೇರಿದ ಚೀನಾ..

ಈ ಮಧ್ಯೆ  ಯುಎಸ್ ಹವಾಮಾನ ರಾಯಭಾರಿ  ಜಾನ್ ಕೆರ್ರಿ, ಅಕ್ಟೋಬರ್ 31 ರಿಂದ ನವೆಂಬರ್ 12 CoP-26 ಹವಾಮಾನ ಬದಲಾವಣೆಯ ಸಮ್ಮೇಳನಕ್ಕೆ ಮುಂಚಿತವಾಗಿ ದೇಶವು ಹೆಚ್ಚಿನ ಸಹಾಯವನ್ನು ನೀಡಲಿದೆ ಎಂದು ಹೇಳಿದರು. ಹವಾಮಾನ ಹಣಕಾಸು ಕುರಿತ ಆಕ್ಸ್‌ಫ್ಯಾಮ್ ಇಂಟರ್‌ನ್ಯಾಷನಲ್ ವರದಿಯು ಪರಿಸ್ಥಿತಿಯ ಕಠೋರ ಚಿತ್ರವನ್ನು ಚಿತ್ರಿಸಿದ್ದು,  ಹವಾಮಾನ ಬದಲಾವಣೆಯಿಂದ ಸಮಸ್ಯೆಯಾಗಿರುವ  ಅತ್ಯಂತ ದುರ್ಬಲ ದೇಶಗಳಿಗೆ ಸಹಾಯ ಮಾಡಲು ಪ್ರತಿವರ್ಷ 100 ಶತಕೋಟಿ ಡಾಲರ್‌ಗಳನ್ನು ಸಂಗ್ರಹಿಸುವ  ಯೋಜನೆಯನ್ನು ಪೂರೈಸುವಲ್ಲಿ ಶ್ರೀಮಂತ ರಾಷ್ಟ್ರಗಳಿಗೆ  $ 75 ಶತಕೋಟಿಗಳಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಹೊಸದಾಗಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ,  ಅಭಿವೃದ್ಧಿ ಹೊಂದಿದ ದೇಶಗಳು 2019 ರಲ್ಲಿ ಕೇವಲ 80 ಬಿಲಿಯನ್ ಡಾಲರ್  ಒದಗಿಸಿದೆ, 2025 ರ ವೇಳೆಗೆ ಕೇವಲ $ 93 ಶತಕೋಟಿಯಿಂದ $ 95 ಶತಕೋಟಿಯನ್ನು ತಲುಪುತ್ತದೆ.  ಇನ್ನು ಗುಟೆರೆಸ್  ಶ್ರೀಮಂತ ದೇಶಗಳು ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳಿಗೆ  ಗುರಿ ಮುಟ್ಟುವ ಕಡೆಗೆ ಹೆಚ್ಚು ಗಮನ ನೀಡುವಂತೆ ಒತ್ತಡ ಹೇರಿದ್ದಾರೆ. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ದೇಶಗಳಿಗೆ ಸಹಾಯ ಮಾಡಲು ಮೀಸಲಾಗಿರುವ ಹಣಕಾಸಿನ ಪಾಲನ್ನು ಪ್ರಸ್ತುತ ಶೇಕಡ 21 ರ ಮಟ್ಟದಿಂದ 50 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ ಎಂದು ವಿಶೇಷ ಸಲಹೆಗಾರ ಸೆಲ್ವಿನ್ ಹಾರ್ಟ್ ಹೇಳಿದ್ದಾರೆ.

ಹವಾಮಾನ ಬದಲಾವಣೆಯ ಅತಿದೊಡ್ಡ  ಕಾರಣ ಎಂದರೆ  ವಿಷ ಅನಿಲಗಳ ಹೊರಸುಸುವಿಕೆ, ಮತ್ತು ಅವುಗಳಲ್ಲಿ ಹೆಚ್ಚಿನವು ಮನುಷ್ಯನ ಕಾರಣದಿಂದ ಉಂಟಾಗಿದೆ ಎಂದು ಹವಾಮಾನ ಬದಲಾವಣೆಯ ಕುರಿತಾದ ಅಂತರ್ ಸರ್ಕಾರಿ ಸಮಿತಿಯ ವರದಿಯು ತಿಳಿಸಿದೆ, ಅಲ್ಲದೇ  ಭೂಮಿಯು ತಾಪಮಾನದ ಮಿತಿಯನ್ನು ಮುಟ್ಟುವತ್ತ ಸಾಗುತ್ತಿದೆ ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಗಾಳಿಯಲ್ಲಿ ಹೆಚ್ಚು ಹರಡುತ್ತದೆ ಕೊರೊನಾ ರೂಪಾಂತರ ಸೋಂಕು..

ಪ್ಯಾರಿಸ್ ಒಪ್ಪಂದದ ಪ್ರಕಾರ, ಪ್ರತಿ ಐದು ವರ್ಷಗಳಿಗೊಮ್ಮೆ ವಿಶ್ವದ ರಾಷ್ಟ್ರಗಳು ಇನ್ನಷ್ಟು ಬಡ ರಾಷ್ಟ್ರಗಳಿಗೆ ಸ್ವಚ್ಛ ಇಂಧನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಹೆಚ್ಚಿನ ಹಣವನ್ನು ನೀಡಬೇಕು.
Published by:Sandhya M
First published: