ಇನ್ಫೋಸಿಸ್​ ಅಭಿವೃದ್ಧಿಪಡಿಸಿದ ಹೊಸ E-ಫೈಲಿಂಗ್ ಪೋರ್ಟಲ್ ನಲ್ಲಿ ಸಲ್ಲಿಕೆಯಾದ ITR ಎಷ್ಟು ಗೊತ್ತಾ!

ಇನ್ಫೋಸಿಸ್​ (Infosys) ಅಭಿವೃದ್ಧಿ ಪಡಿಸಿದ ಈ ಹೊಸ ಫೈಲಿಂಗ್ ಪೋರ್ಟಲ್ (E- Filing Portal) ಆರಂಭದಲ್ಲಿ ಕೊಂಚ ತೊಂದರೆಯಾಗಿತ್ತಾದರೂ ಬಳಿಕ ಬಳಕೆದಾರರಿಗೆ ಸಿಕ್ಕಾಪಟ್ಟೆ ಸುಲಭವಾಯಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೆರಿಗೆದಾರರಿಗೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ( Income Tax Return) ಅನ್ನು ಮನೆಯಲ್ಲಿಯೇ ಕುಳಿತು ಐಟಿಆರ್ (ITR) ಅನ್ನು ಫೈಲ್ ಮಾಡಲು ಆದಾಯ ತೆರಿಗೆ ಇಲಾಖೆಯು ಹೊಸದೊಂದು ಇ-ಫೈಲಿಂಗ್ ಪೋರ್ಟಲ್ ಅನ್ನು ಪರಿಚಯಿಸಿತು. ಕೋವಿಡ್​ ಸಮಯದಲ್ಲಿ  ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಕೆಲಸ ಮಾಡುವವರಿಗೆ ಈ ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಇನ್ಫೋಸಿಸ್​ ಅಭಿವೃದ್ಧಿ ಪಡಿಸಿದ ಈ ತಾಣದಲ್ಲಿ ಆರಂಭದಲ್ಲಿ ಕೊಂಚ ತೊಂದರೆಯಾಗಿತ್ತಾದರೂ ಬಳಿಕ ಬಳಕೆದಾರರಿಗೆ ಸಿಕ್ಕಾಪಟ್ಟೆ ಸುಲಭವಾಯಿತು. ಇನ್ನು ಈ ಆದಾಯ ತೆರಿಗೆ ತಾಣದ ಮೂಲಕ ಇಲ್ಲಿಯವರೆಗೆ ಎಷ್ಟು ಮಂದಿ ತೆರಿಗೆ ಪಾವತಿಸಿದ್ದಾರೆ ಗೊತ್ತಾ!

ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ (IT E- Filing Portal) ನಲ್ಲಿ ಡಿಸೆಂಬರ್ 3 ರ ವರೆಗೆ ಸುಮಾರು ಮೂರು ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.ಈ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್ ಅನ್ನು 2021-22 ರ ಹಣಕಾಸು ವರ್ಷಕ್ಕೆ ಮಾಡಬೇಕಾಗಿದ್ದು, ಇದನ್ನು ಮಾಡಲು ವಿಫಲವಾದರೆ ತೆರಿಗೆದಾರರು ಹೆಚ್ಚಿನ ತೆರಿಗೆಯನ್ನು ಕಟ್ಟಬಹುದಾಗಬಹುದು. ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಹೊಸ ಕ್ರಮದಲ್ಲಿ, ಸರ್ಕಾರವು ಇ-ಫೈಲಿಂಗ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದನ್ನು ಬಳಸಿಕೊಂಡು ತೆರಿಗೆದಾರರು ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ಕಂಪ್ಯೂಟರ್ ನಲ್ಲಿ ಆನ್‌ಲೈನ್ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬಹುದು.

"ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಈಗಾಗಲೇ 3 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಅನ್ನು 2021 ರ ಡಿಸೆಂಬರ್ 3 ರವರೆಗೆ ಸಲ್ಲಿಸಲಾಗಿದೆ. ನೀವು ಇನ್ನೂ ನಿಮ್ಮ ಆದಾಯ ತೆರಿಗೆ ರೀಟರ್ನ್ಸ್ ಅನ್ನು ಸಲ್ಲಿಸಿದ್ದೀರಾ? ಇಲ್ಲದಿದ್ದರೆ,  http://incometax.gov.inಗೆ ಲಾಗಿನ್ ಮಾಡಿ ಬಳಕೆದಾರರು  ಪಾವತಿ ಮಾಡಬಹುದಾಗಿದೆ.  ಕೊನೆಯ ಕ್ಷಣದ ಅಡಚಣೆಯನ್ನು ತಪ್ಪಿಸಲು ಈಗ ಹಣಕಾಸು ವರ್ಷ 2021-22 ಗಾಗಿ ನಿಮ್ಮ ITR ಅನ್ನು ಫೈಲ್ ಮಾಡಿ" ಎಂದು ಆದಾಯ ತೆರಿಗೆ ಇಲಾಖೆಯು ತನ್ನ ಟ್ವೀಟ್ ನಲ್ಲಿ ತಿಳಿಸಿದೆ. ಅಲ್ಲದೇ, ನಿಮ್ಮ ಆದಾಯ ತೆರಿಗೆಯ ರೀಟರ್ನ್ಸ್ ಸಲ್ಲಿಸಲು ಡಿಸೆಂಬರ್ 31, 2021ರವರೆಗೆ ದಿನಾಂಕ ವಿಸ್ತರಿಸಿದೆ.

ಇದನ್ನು ಓದಿ: ಮನೆಯವರ ವಿರೋಧಿಸಿ ಮದುವೆಯಾದ ಅಕ್ಕನ ಕತ್ತು ಸೀಳಿ ಸೆಲ್ಪಿ ತೆಗೆದುಕೊಂಡ ತಮ್ಮ; ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ

ಡಿಸೆಂಬರ್ 31, 2021 ರ ವಿಸ್ತೃತ ನಿಗದಿತ ದಿನಾಂಕ ಸಮೀಪಿಸುತ್ತಿರುವುದರಿಂದ ದಿನಕ್ಕೆ ಸಲ್ಲಿಸಲಾದ ಐಟಿಆರ್ ಗಳ ಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚುತ್ತಿದೆ.  ಈ ಸಂಖ್ಯೆಯೂ ಸಹ ಪ್ರತಿದಿನ ಹೆಚ್ಚುತ್ತಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: ನಾಗಾಲ್ಯಾಂಡ್ ನಾಗರಿಕರ ಮೇಲಿನ ದಾಳಿಗೆ ಕೇಂದ್ರ ವಿಷಾದ; ಎಸ್​ಐಟಿ ಆದೇಶಕ್ಕೆ ಸೂಚನೆ

"ತೆರಿಗೆದಾರರು ತಮ್ಮ ಬ್ಯಾಂಕ್ ಪಾಸ್ ಬುಕ್, ಬಡ್ಡಿ ಪ್ರಮಾಣಪತ್ರ, ಫಾರ್ಮ್ 16 ಮತ್ತು ಈಕ್ವಿಟಿ ಅಥವಾ ಮ್ಯೂಚುಯಲ್ ಫಂಡ್ ಗಳ ಖರೀದಿ ಮತ್ತು ಮಾರಾಟದ ಸಂದರ್ಭದಲ್ಲಿ ಬ್ರೋಕರೇಜ್ ಗಳಿಂದ ಕ್ಯಾಪಿಟಲ್ ಗೇನ್ಸ್ ಹೇಳಿಕೆಯೊಂದಿಗೆ ಎಐಎಸ್ ಹೇಳಿಕೆಯಲ್ಲಿನ ಡೇಟಾವನ್ನು ಮರು ಪರಿಶೀಲಿಸಿ ಕೊಳ್ಳುವುದು ತುಂಬಾನೇ ಮುಖ್ಯವಾಗಿದೆ" ಎಂದು ಸಚಿವಾಲಯ ಹೇಳಿದೆ. ಆಧಾರ್ ಒಟಿಪಿ ಮತ್ತು ಇತರ ವಿಧಾನಗಳ ಮೂಲಕ ಇ-ಪರಿಶೀಲನೆಯ ಪ್ರಕ್ರಿಯೆಯು ಐಟಿಆರ್ ನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಯಾವುದಾದರೂ ಇದ್ದರೆ ಮರುಪಾವತಿಗಳನ್ನು ನೀಡಲು ಇಲಾಖೆಗೆ ತುಂಬಾನೇ ಮುಖ್ಯವಾಗುತ್ತದೆ.

"2.69 ಕೋಟಿ ರೂ ರಿಟರ್ನ್ಸ್ ಅನ್ನು ಆನ್‌ಲೈನ್ ನಲ್ಲಿ ಮರು ಪರಿಶೀಲಿಸಲಾಗಿದೆ, ಇದರಲ್ಲಿ 2.28 ಕೋಟಿ ರೂಗೂ ಹೆಚ್ಚು ಆಧಾರ್ ಆಧಾರಿತ ಒಟಿಪಿ ಮೂಲಕವಾಗಿದೆ ಎಂಬುದನ್ನು ಗಮನಿಸುವುದು ಉತ್ತೇಜನಕಾರಿಯಾಗಿದೆ" ಎಂದು ಹೇಳಿದೆ.
Published by:Seema R
First published: