Indo-China Conflict: ಗಾಲ್ವಾನ್‌ ಕಣಿವೆಯಲ್ಲಿ ಸತ್ತ ಚೀನಾ ಸೈನಿಕರ ಸಂಖ್ಯೆ ಎಷ್ಟು? ಪ್ರತಿಕ್ರಿಯಿಸಲು ನಿರಾಕರಿಸಿದ ಚೀನಾ

ಚೀನಾ ಕಡೆ ಮೃತಪಟ್ಟ ಸೈನಿಕರ ಸಂಖ್ಯೆ ಎಷ್ಟು? ಎಂಬುದು ಇದೀಗ ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ. ಆದರೆ, ಚೀನಾ ಸರ್ಕಾರ ಈ ಕುರಿತು ನಿಖರ ಸಂಖ್ಯೆ ನೀಡಲು ಮತ್ತು ಪ್ರತಿಕ್ರಿಯಿಸಲು ನಿರಾಕರಿಸಿದೆ. 

ಭಾರತ ಮತ್ತು ಚೀನಾ ಸೈನಿಕರು

ಭಾರತ ಮತ್ತು ಚೀನಾ ಸೈನಿಕರು

  • Share this:
ನವ ದೆಹಲಿ (ಜೂನ್‌ 17); ಪೂರ್ವ ಲಡಾಕ್​​​​ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಭವಿಸಿದ ಸಂಘರ್ಷದಲ್ಲಿ ದೇಶದ ಕಮಾಂಡಿಂಗ್​ ಅಧಿಕಾರಿ ಸೇರಿ 20 ಮಂದಿ ಯೋಧರು ಹುತಾತ್ಮರಾಗಿದ್ಧಾರೆ. ಇದೇ ವೇಳೆ ಚೀನಾ ಸೇನೆಯ 43 ಜನ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆ ನೀಡಿದೆ. ಆದರೆ, ಇದನ್ನೂ ಚೀನಾ ಸರ್ಕಾರ ಈವರೆಗೆ ಇದನ್ನು ದೃಢಪಡಿಸಿಲ್ಲ.

ಕಳೆದ ಹಲವು ದಿನಗಳಿಂದ ಉದ್ವಿಗ್ನತೆಗೆ ಒಳಗಾಗಿದ್ದ ಭಾರತ-ಚೀನಾ ಗಡಿ ವಿವಾದ ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು 20ಕ್ಕೂ ಹೆಚ್ಚು ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ.

ಆದರೆ, ಚೀನಾ ಕಡೆ ಮೃತಪಟ್ಟ ಸೈನಿಕರ ಸಂಖ್ಯೆ ಎಷ್ಟು? ಎಂಬುದು ಇದೀಗ ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ. ಆದರೆ, ಚೀನಾ ಸರ್ಕಾರ ಈ ಕುರಿತು ನಿಖರ ಸಂಖ್ಯೆ ನೀಡಲು ಮತ್ತು ಪ್ರತಿಕ್ರಿಯಿಸಲು ನಿರಾಕರಿಸಿದೆ.

ಇದನ್ನೂ ಓದಿ : ಭಾರತ-ಚೀನಾ ಗಡಿ ಸಂಘರ್ಷ: ಜೂ.19ಕ್ಕೆ ಸರ್ವಪಕ್ಷಗಳ ಸಭೆ ಕರೆದ ಪ್ರಧಾನಿ ಮೋದಿ

ಈ ಕುರಿತು ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಝಾವೋ ಲಿಜಿಯಾನ್, "ಭಾರತ ಮತ್ತು ಚೀನಾ ಈಗ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತಮಾಡುತ್ತಿರುವ ಸಂದರ್ಭದಲ್ಲಿ ಇತರೆ ಯಾವುದೇ ವಿಚಾರಗಳನ್ನು ಮಾತನಾಡುವುದಿಲ್ಲ" ಎಂದು ಹೇಳುವ ಮೂಲಕ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆಯ ಕುರಿತು ನಿಖರತೆ ನೀಡಲು ಹಿಂದೇಟು ಹಾಕಿದ್ದಾರೆ.
First published: