ಕರುಣಾನಿಧಿಗೆ ಕಲೈಙರ್​ ಹೆಸರು ಬಂದಿದ್ಯಾಕೆ ಗೊತ್ತಾ?

news18
Updated:August 8, 2018, 7:28 AM IST
ಕರುಣಾನಿಧಿಗೆ ಕಲೈಙರ್​ ಹೆಸರು ಬಂದಿದ್ಯಾಕೆ ಗೊತ್ತಾ?
news18
Updated: August 8, 2018, 7:28 AM IST

ಅನಿತಾ ಈ, ನ್ಯೂಸ್​ 18 ಕನ್ನಡ 


ಹೆಸರಲ್ಲೇ ನಿಧಿ ಹೊಂದಿರುವ ಕರುಣಾನಿಧಿ, ಕಲೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನಿಜವಾಗಿಯೂ ಅಮೂಲ್ಯವಾದ ನಿಧಿಯಾಗಿದ್ದರು. ಕಲೆ, ರಂಗಭೂಮಿ, ಚಿತ್ರರಂಗ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಕಲೆಗೆ ಸಂಬಂಧಿಸಿದ ಬಿರುದನ್ನೇ ನೀಡಲಾಗಿತ್ತು. ಏನಿದು ಬಿರುದು? ಅವರಿಗೆ ಏತಕ್ಕಾಗಿ ಈ ಬಿರುದನ್ನು ನೀಡಲಾಗಿತ್ತು ಎಂದು ತಿಳಿಯಲು ಈ ವರದಿಯನ್ನು ಓದಿ.12ನೇ ವಯಸ್ಸಿನಲ್ಲೇ ರಂಗಭೂಮಿಗೆ ಕಲಾವಿದರಾಗಿ ಪದಾರ್ಪಣೆ ಮಾಡಿದ ಕಲಾನಿಧಿ, ನಂತರದ ದಿನಗಳಲ್ಲಿ ರಂಗಕೃತಿಗಳನ್ನು ರಚಿಸಲಾರಂಭಿಸಿದರು. ತಮ್ಮ ರಂಗಕೃತಿಗಳ ಮೂಲಕ  ಸಾಮಾಜಿಕ ಕಳಕಳಿಯುಳ್ಳ ಕಥಾವಸ್ತುವನ್ನು ಜನರ ಮುಂದಿಡುತ್ತಿದ್ದರು. ಸಾಕಷ್ಟು ನಾಟಕಗಳಿಗೆ ಕಲಾವಿದರಾಗಿ ಬಣ್ಣ ಹಚ್ಚಿರುವ ಕರುಣಾನಿಧಿ ಅವರಿಗೆ ಅವರ ಒಂದು ನಾಟಕದಿಂದಲೇ ದೊಡ್ಡ ಬಿರುದೊಂದು ಸಿಕ್ಕಿತ್ತು.
ಇಂದು ಅವರ ಹೆಸರಿನ ಮುಂದೆ ಬರೆಯಲಾಗುವ 'ಕಲೈಙರ್' ಎಂಬ ಬಿರುದು, ಅವರು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುವ ಮುನ್ನವೇ ಸಿಕ್ಕಿತ್ತು. ತಮಿಳಿನ ಹಳೆಯ ರಂಗ ಕಲಾವಿದ ಹಾಗೂ ಚಿತ್ರ ನಟ ಎಂ. ಆರ್.​ ರಾಧಾ ಎಂಬುವರು ಕರುಣಾನಿಧಿ ಅವರಿಗೆ 'ಕಲೈಙರ್' ಎಂಬ ಬಿರುದನ್ನು ನೀಡಿದ್ದರು.​ 


'ತೂಕು ಮೆಡೈ' ಎಂಬ ನಾಟಕಕ್ಕೆ ರಂಗಕೃತಿ ಬರೆದ ಕಾರಣಕ್ಕೆ ಅವರಿಗೆ ಈ ಬಿರುದನ್ನು ಎಂ. ರಂ. ಆರ್​. ರಾಧಾ ಅವರು ನೀಡಿದ್ದರು. ಅಂದು ಆ ನಾಟಕಕ್ಕೆ ಬರೆದ ಕೃತಿಯಿಂದ ಪ್ರೇರಿತರಾಗಿದ್ದ ರಾಧಾ ಅವರು ಸಂತೋಷದಿಂದ ಈ ಬಿರುದನ್ನು ನೀಡಿದ್ದರು.  ಆಗಷ್ಟೆ ಡಿಎಂಕೆ ಪಕ್ಷದಲ್ಲಿ ಸಕ್ರಿಯವಾಗುತ್ತಿದ್ದ ಕರುಣಾನಿಧಿ ಕಲೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. 


Loading...

ರಂಗಭುಮಿ, ಸಿನಿಮಾ ರಂಗ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಈ ಕಲಾವಿದನಿಗೆ ಇದು ಸರಿಯಾದ ಬಿರುದೆಂದು ಅದನ್ನು ನೀಡಲಾಗಿತ್ತು ಎನ್ನಲಾಗುತ್ತದೆ.   

First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...