Russia-Ukraine War: ಪರದೇಶದಲ್ಲಿ ಪರದಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು! ಮರಳಿ ಬರುವುದು ಹೇಗೆೆ?

ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವರು ಸ್ವದೇಶಕ್ಕೆ ವಾಪಸ್ಸಾಗಿದ್ದು, ಹಲವರು ಅಲ್ಲೇ ಸಿಲುಕಿದ್ದಾರೆ. ಉಕ್ರೇನ್‌ನಲ್ಲಿ ಈಗಾಗಲೇ ವಿಮಾನ ಹಾರಾಟ ಸ್ತಬ್ಧಗೊಂಡಿದೆ. ಹಾಗಾದ್ರೆ ಯುದ್ಧ ಭೀತಿಯಲ್ಲಿ ಕಂಗೆಟ್ಟಿರುವ ಅವರು ದೇಶಕ್ಕೆ ವಾಪಸ್ಸಾಗೋದು ಹೇಗೆ?

ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು

ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು

  • Share this:
ರಷ್ಯಾ (Russia), ಉಕ್ರೇನ್‌ (Ukraine) ನಡುವಿನ ಯುದ್ಧ (War) ಜೋರಾಗುತ್ತಿದೆ. ನಿನ್ನೆ ಇಡೀ ದಿನ ಉಕ್ರೇನ್‌ ಮೇಲೆ ದಾಳಿ ನಡೆಸಿದ್ದ ರಷ್ಯಾ ಸೇನೆ, 137ಕ್ಕೂ ಹೆಚ್ಚು ಮಂದಿ ಉಕ್ರೇನ್ ಸೈನಿಕರು ಹಾಗೂ ನಾಗರಿಕರನ್ನು ಕೊಂದಿತ್ತು. ಇದೀಗ ಇಂದೂ ಕೂಡ ಯುದ್ಧ ಮುಂದುವರೆದಿದೆ. ಅತ್ತ ಉಕ್ರೇನ್‌ನಲ್ಲಿ ಯುದ್ಧ ಶುರುವಾಗುತ್ತಿದ್ದಂತೆ ಇತ್ತ ಭಾರತೀಯರೂ (Indians) ಸಹ ಭಯಕ್ಕೆ ಒಳಗಾಗಿದ್ದಾರೆ. ಯಾಕೆಂದ್ರೆ ಅಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದಾರೆ. ಅವುಗಳಲ್ಲಿ ಕೆಲವರು ಉದ್ಯೋಗಿಗಳಾಗಿದ್ದರೆ, ಬಹುತೇಕ ಹೆಚ್ಚಿನವರು ವಿದ್ಯಾರ್ಥಿಗಳು (Students). ಅದರಲ್ಲೂ ಇಂಜಿನಿಯರ್ (Engineering) ಸೇರಿದಂತೆ ಹಲವು ಕೋರ್ಸ್‌ ಓದುತ್ತಿದ್ದು, ಈ ಪೈಕಿ ವೈದ್ಯಕೀಯ ಶಿಕ್ಷಣ (Medical) ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೇ ಜಾಸ್ತಿ. ಇದೀಗ ಹೆಚ್ಚಿನ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕ್ಷಣ ಕ್ಷಣಕ್ಕೂ ಯುದ್ಧ ಭೀತಿ ಜಾಸ್ತಿಯಾಗುತ್ತಾ ಇರುವುದರಿಂದ ವಿದ್ಯಾರ್ಥಿಗಳ ಜೊತೆಗೆ ಇಲ್ಲಿ ಪೋಷಕರೂ ಆತಕಂಗೊಂಡಿದ್ದಾರೆ.

 ಏರ್‌ಪೋರ್ಟ್‌ ಮುಚ್ಚಿರುವ ಉಕ್ರೇನ್ ಸರ್ಕಾರ

ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಎಲ್ಲಾ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಯುದ್ಧದ ಸೂಚನೆ ಸಿಗುತ್ತಿದ್ದಂತೆ ಏರ್‌ಪೋರ್ಟ್‌ ಬಂದ್ ಮಾಡಿರುವ ಉಕ್ರೇನ್ ಸರ್ಕಾರ, ಅಲ್ಲೆಲ್ಲಾ ಸೇನಾಪಡೆಗಳನ್ನು ನಿಯೋಜಿಸಿದೆ.

ಭಾರತೀಯರನ್ನು ಕರೆತರಲು ಹೋಗಿದ್ದ ವಿಮಾನ ವಾಪಸ್

ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಮುಂದಾಗಿದೆ. ಈಗಾಗಲೇ ಹಲವರನ್ನು ಏರ್‌ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದೆ. ಆದ್ರೆ ಉಕ್ರೇನ್‌ ಏರ್‌ಪೋರ್ಟ್‌ ಮುಚ್ಚಿದ್ದರಿಂದ ಭಾರತದಿಂದ ಹೋಗಿದ್ದ ವಿಮಾನ ದೆಹಲಿಗೆ ವಾಪಸ್ ಆಗಿತ್ತು. ಹೀಗಾಗಿ ಅದೆಷ್ಟೋ ಭಾರತೀಯರು ವಾಪಸ್ ಬರಲಾಗದೇ ಉಕ್ರೇನ್‌ನಲ್ಲೇ ಪರದಾಡುತ್ತಿದ್ದಾರೆ.

 ಇದನ್ನೂ ಓದಿ: Russia-Ukraine War: "ಮೊದಲ ದಿನದ ಯುದ್ಧ Success" ಎಂದ ಪುಟಿನ್! ಈವರೆಗಿನ Updates ಇಲ್ಲಿದೆ

 ನಾಲ್ಕು ದೇಶಗಳ ಮೂಲಕ ಏರ್‌ಲಿಫ್ಟ್‌ಗೆ ನಿರ್ಧಾರ

ಉಕ್ರೇನ್ ಏರ್‌ಪೋರ್ಟ್‌ಗಳನ್ನು ಮುಚ್ಚಿರುವುದರಿಂದ ಭಾರತದ ವಿಮಾನ ಉಕ್ರೇನ್ ಗಡಿ ಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಉಕ್ರೇನ್ ಸುತ್ತಮುತ್ತಲ ದೇಶಗಳ ನೆರವು ಪಡೆಯಲು ಭಾರತ ಸರ್ಕಾರ ಯೋಚಿಸಿದೆ.

 ನಾಲ್ಕು ದೇಶಗಳ ಗಡಿಗಳಿಂದ ಕಾರ್ಯಾಚರಣೆ

ಅಂದರೆ ಉಕ್ರೇನ್ ಸುತ್ತ ಇರುವ ಹಂಗೇರಿ, ಪೋಲೆಂಡ್, ರೊಮೇನಿಯಾ ಹಾಗೂ ಸ್ಲೋವಾಕಿಯಾದಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಪ್ಲಾನ್ ಮಾಡಿದೆ. ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಈ ದೇಶಗಳ ಗಡಿ ತಲುಪಿಸುವುದು ಉಕ್ರೇನ್ ಜವಾಬ್ದಾರಿ.  ಅಲ್ಲಿಂದ ಏರ್‌ಲಿಫ್ಟ್ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರುವ ವ್ಯವಸ್ಥೆಯನ್ನು ಭಾರತೀಯ ಸರ್ಕಾರ ಮಾಡಿದೆ.

ಭಾರತೀಯರ ಸಹಾಯಕ್ಕಾಗಿ ಹೆಲ್ಪ್‌ಲೈನ್ ಸ್ಥಾಪನೆ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಭಾರತ ಸರ್ಕಾರ ಸಹಾಯವಾಣಿ ಆರಂಭಿಸಿದೆ.  1800118797 (ಟೋಲ್ ಫ್ರೀ ಸಂಖ್ಯೆ) ಜೊತೆಗೆ +91 11 23012113, +91 11 23014104, +91 11 23017905 ಸಂಖ್ಯೆಗಳು ಹಾಗೂ  ಫ್ಯಾಕ್ಸ್‌ಗಾಗಿ +91 11 23088124 ಹಾಗೂ ಸಹಾಯ.ಕ್ಕಾಗಿ situationroom@mea.gov.in ಎಂಬ ಈ ಮೇಲೆ ರಚಿಸಿದೆ.

ಸುರಕ್ಷಿತವಾಗಿದ್ದಾರೆ ಭಾರತೀಯರು

ಉಕ್ರೇನ್‌ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಅಂತ ಉಕ್ರೇನ್ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಊಟ, ವಸತಿಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಬಂಕರ್‌ಗಳು, ಮೆಟ್ರೋ ನಿಲ್ದಾಣಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ತಮ್ಮ ದಾಖಲಾತಿ ಜೊತೆಗೆ ಅಲ್ಲಿ ಸೇರಿರುವ ವಿದ್ಯಾರ್ಥಿಗಳು ಸ್ವದೇಶಕ್ಕೆ ಬರುವುದಕ್ಕೆ ಕಾಯುತ್ತಿದ್ದಾರೆ.

ಇದನ್ನೂ ಓದಿ: Russia-Ukraine War: ಅಲ್ಲಿ ಉಕ್ರೇನ್‌ನಲ್ಲಿ ಯುದ್ಧ, ಇಲ್ಲಿ ಮಗಳಿಗಾಗಿ ಊಟ ಬಿಟ್ಟು ಕಾಯುತ್ತಿರುವ ಅಮ್ಮ!

ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರಗಳಿಂದ ಮನವಿ

ಉಕ್ರೇನ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಕೇರಳ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳೂ ಇದ್ದಾರೆ. ಹೀಗಾಗಿ ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ಮನವಿ ಮಾಡಿವೆ.
Published by:Annappa Achari
First published: