Zoonotic Disease: ವಿದೇಶಿ ಪ್ರಾಣಿಗಳಿಂದ Zoonotic ಕಾಯಿಲೆಯನ್ನು ತಡೆಯುವುದು ಹೇಗೆ? ಇದಕ್ಕೆ ಸರಕಾರ ಹೊರಡಿಸಿರುವ ಶಿಫಾರಸುಗಳೇನು?

ಜೀವಂತ ವಿದೇಶಿ ಪ್ರಾಣಿಗಳ ಆಮದು ಕಸ್ಟಮ್ಸ್ ಕಾಯ್ದೆ ಅಡಿಯಲ್ಲಿ ಒಳಪಟ್ಟಿದೆಯಾದರೂ, ಭಾರತದಲ್ಲಿ ಸಾಕುಪ್ರಾಣಿಗಳಂತೆ ಸಾಕುತ್ತಿರುವ ವಿದೇಶಿ ಪ್ರಾಣಿ ಹಾಗೂ ಸಸ್ಯವರ್ಗಗಳ ಸಂಖ್ಯೆಯನ್ನು ದಾಖಲಿಸಲು ಹಾಗೂ ನಿಯಂತ್ರಿಸಲು ಕಠಿಣ ಕಾನೂನು ಮತ್ತು ಮಾರ್ಗಸೂಚಿಗಳನ್ನು ತಜ್ಞರು ಕೋರಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಭಾರತದಲ್ಲಿ (India) ವಿದೇಶಿ ಪ್ರಾಣಿ ಮತ್ತು ಪಕ್ಷಿಗಳ (Exotic Animals and Birds) ಆಮದು ಮತ್ತು ಸಂಗ್ರಹಣೆಗಳ ವಿವರಣೆ ಹಾಗೂ ಕಾನೂನುಬದ್ಧತೆ ಮತ್ತು ಸಿಂಧುತ್ವವನ್ನು ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ವಜಾಗೊಳಿಸುವ ಕ್ರಮಗಳೊಂದಿಗೆ ವ್ಯವಹರಿಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಹೊರಡಿಸಿದ ಜೂನ್ 2020 ರ ಸಲಹೆಯನ್ನು ಸುಪ್ರೀಂ ಕೋರ್ಟ್ (Supreme Court) ಪುರಸ್ಕರಿಸಿದೆ.  ವಿದೇಶಿ ಜಾತಿಯ ಪ್ರಾಣಿ ಅಥವಾ ಸಸ್ಯ ಪ್ರಭೇದಗಳನ್ನು (Plant Species) ಅವುಗಳ ಮೂಲ ಸ್ಥಳದಿಂದ ಹೊಸ ಸ್ಥಳಕ್ಕೆ ರವಾನಿಸಲಾಗುತ್ತದೆ. ಇಂತಹ ಜಾತಿಯ ಪಕ್ಷಿ, ಪ್ರಾಣಿ ಸಸ್ಯಗಳು ಜನರ ಮೂಲಕ ಹೊಸ ಸ್ಥಳಕ್ಕೆ ಪರಿಚಯಗೊಳ್ಳುತ್ತವೆ.


ಝೂನೋಟಿಕ್ ಕಾಯಿಲೆ
ಕೋವಿಡ್ ಹೆಚ್ಚಳ, ವನ್ಯಜೀವಿ ವ್ಯಾಪಾರ ಹಾಗೂ ಝೂನೋಟಿಕ್ ಕಾಯಿಲೆಗಳ (ವೈರಸ್‌ಗಳು, ಬ್ಯಾಕ್ಟೀರಿಯಾಗಳು, ಪರಾವಲಂಬಿಗಳು ಮತ್ತು ಶಿಲೀಂಧ್ರಗಳಂತಹ ಹಾನಿಕಾರಕ ಸೂಕ್ಷ್ಮಜೀವಿಗಳಿಂದ ಉಂಟಾಗುವ ಕಾಯಿಲೆಗಳು) ಕುರಿತು ಜಾಗತಿಕ ಸಮಸ್ಯೆಯನ್ನು ಹೆಚ್ಚಿಸಿದ್ದರಿಂದ ಈ ಶಿಫಾರಸನ್ನು ಮಾಡಲಾಗಿದೆ.


ಜೀವಂತ ವಿದೇಶಿ ಪ್ರಾಣಿಗಳ ಆಮದು ಕಸ್ಟಮ್ಸ್ ಕಾಯ್ದೆ ಅಡಿಯಲ್ಲಿ ಒಳಪಟ್ಟಿದೆಯಾದರೂ, ಭಾರತದಲ್ಲಿ ಸಾಕುಪ್ರಾಣಿಗಳಂತೆ ಸಾಕುತ್ತಿರುವ ವಿದೇಶಿ ಪ್ರಾಣಿ ಹಾಗೂ ಸಸ್ಯವರ್ಗಗಳ ಸಂಖ್ಯೆಯನ್ನು ದಾಖಲಿಸಲು ಹಾಗೂ ನಿಯಂತ್ರಿಸಲು ಕಠಿಣ ಕಾನೂನು ಮತ್ತು ಮಾರ್ಗಸೂಚಿಗಳನ್ನು ತಜ್ಞರು ಕೋರಿದ್ದಾರೆ.


ಶಿಫಾರಸು ಯಾವೆಲ್ಲಾ ಅಂಶಗಳನ್ನು ಒಳಗೊಂಡಿದೆ
ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಗಳ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶದ ಅನುಬಂಧಗಳು I, II ಮತ್ತು III ವ್ಯಾಪ್ತಿಯಲ್ಲಿ ಹೆಸರಿಸಿರುವ ಪ್ರಾಣಿಗಳನ್ನು ಒಳಗೊಂಡಿದೆ ಮತ್ತು ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ವಿವರಗಳಲ್ಲಿರುವ ಪ್ರಭೇದಗಳನ್ನು ಒಳಗೊಂಡಿಲ್ಲ.


ಇದನ್ನೂ ಓದಿ: Dinosaur: ಬೆಕ್ಕಿನ ಗಾತ್ರದ ಡೈನೋಸಾರ್ ಪಳೆಯುಳಿಕೆ ಪತ್ತೆ: ಅರ್ಜೆಂಟೀನಾದ ಮರುಭೂಮಿಯಲ್ಲಿ ಉತ್ಖನನ!

ಸ್ವಇಚ್ಛೆಯಿಂದ ತಿಳಿಯಪಡಿಸುವುದು
ಇಂತಹ ಪ್ರಭೇದಗಳನ್ನು ತಮ್ಮ ಬಳಿ ಹೊಂದಿರುವವರು ಸ್ವಯಂಪ್ರೇರಿತರಾಗಿ ವಿದೇಶಿ ಪ್ರಾಣಿ ಅಥವಾ ಸಸ್ಯ ಸಂಕುಲಗಳ ಮಾಹಿತಿಯನ್ನು ಬಹಿರಂಗಪಡಿಸಲು MoEFCC ಅನುಮತಿಸುತ್ತದೆ. ಪ್ರಾಣಿಗಳ ಸಂಗ್ರಹಣೆ, ಹೊಸ ಸಂತತಿ ಅಂತೆಯೇ ಆಮದು ಹಾಗೂ ವಿನಿಮಯಕ್ಕಾಗಿ ನೋಂದಣಿಯನ್ನು ಮಾಡಬೇಕು.


ಆರು ತಿಂಗಳ ಗಡುವು
ಶಿಫಾರಸಿನ ದಿನಾಂಕದಿಂದ ಆರು ತಿಂಗಳೊಳಗೆ ಬಹಿರಂಗಗೊಳಿಸಿದ್ದರೆ ವಿದೇಶಿ ಪ್ರಭೇದಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳನ್ನು ಪೋಷಕರು ಸಲ್ಲಿಸಬೇಕಾಗಿಲ್ಲ. ಆರು ತಿಂಗಳ ನಂತರ ಮಾಡಿದ ಯಾವುದೇ ಬಹಿರಂಗಪಡಿಸುವಿಕೆಗೆ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ದಾಖಲಾತಿ ಅಗತ್ಯವನ್ನು ಪೋಷಕರು (ಪ್ರಾಣಿ ಪಾಲಕರು) ಅನುಸರಿಸಬೇಕಾಗುತ್ತದೆ.


ಶಿಫಾರಸಿನ ಮೂಲ ಉದ್ದೇಶವೇನು
ಪ್ರಭೇದಗಳ ಉತ್ತಮ ನಿರ್ವಹಣೆಯನ್ನು ಖಾತ್ರಿಪಡಿಸುವುದರ ಜೊತೆಗೆ ಉತ್ತಮ ವೈದ್ಯಕೀಯ ಆರೈಕೆ, ವಸತಿ ಹಾಗೂ ಯೋಗಕ್ಷೇಮದ ಕುರಿತು ಸೂಕ್ತ ತಿಳುವಳಿಕೆಯನ್ನು ನೀಡುತ್ತದೆ. ಪ್ರಾಣಿ ಹಾಗೂ ಮನುಷ್ಯರ ಸುರಕ್ಷತೆಯನ್ನು ಖಚಿತಪಡಿಸಲು ಝೂನೋಟಿಕ್ ಕಾಯಿಲೆಗಳ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಈ ಅಂಕಿಅಂಶಗಳು ನೆರವು ನೀಡುತ್ತವೆ.


ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಬಹಿರಂಗಪಡಿಸುವಿಕೆಯ ನಂತರ ರಾಜ್ಯ ಅಥವಾ UT ಯ ಮುಖ್ಯ ವನ್ಯಜೀವಿ ಉಸ್ತುವಾರಿ ಅಧಿಕಾರಿಯು ಭೌತಿಕವಾಗಿ ಪರಿಶೀಲನೆ ನಡೆಸಿದ ನಂತರ ಸಂಗ್ರಹಣೆಯನ್ನು ನೋಂದಾಯಿಸಿ ಅವರ ಕಚೇರಿಯಲ್ಲಿ ದಾಖಲೆಗಳನ್ನು ನಿರ್ವಹಿಸಬೇಕು ಹಾಗೂ ಸ್ವಾಧೀನದ ಆನ್‌ಲೈನ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು


CWLW ಅಥವಾ ಅಧಿಕೃತ ಅಧಿಕಾರಿಗಳು ಘೋಷಿಸಿರುವ ಮತ್ತು ಮನೆಯಲ್ಲಿ ಸಾಕಿರುವ ಪ್ರಭೇದಗಳನ್ನು ಪರಿಶೀಲಿಸಲು ಗೊತ್ತುಪಡಿಸಿರುವ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಭೇಟಿ ನೀಡಬಹುದು. ಘೋಷಣೆಯ ನಂತರ ಯಾವುದೇ ಸ್ವಾಧೀನ / ಸಾವು / ವ್ಯಾಪಾರ / ಸ್ವಾಧೀನ ಬದಲಾವಣೆಯನ್ನು 30 ದಿನಗಳ ಒಳಗೆ ಸಂಬಂಧಿತ CWLW ಗೆ ತಿಳಿಸಬೇಕು.


ಇದನ್ನೂ ಓದಿ:Viral Photos: ಕಾಡಿನ ರಾಜನ ಪರಿಸ್ಥಿತಿ ಹೇಗಿದೆ ನೋಡಿ, ಈ ಸಿಂಹಗಳ ಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ!

ಜೀವಂತ ಪ್ರಾಣಿಗಳ ಆಮದು
ಜೀವಂತ ವಿದೇಶಿ ಪ್ರಭೇದವನ್ನು ಆಮದು ಮಾಡಿಕೊಳ್ಳಲು ಪ್ರಯತ್ನಿಸುವವರು ಶಿಫಾರಸುಗಳ ನಿಬಂಧನೆಗಳ ಅಡಿಯಲ್ಲಿ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್‌ಗೆ (DGFT) ಪರವಾನಗಿಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆಮದುದಾರರು ಅರ್ಜಿಯೊಂದಿಗೆ ರಾಜ್ಯದ ಮುಖ್ಯ ವನ್ಯಜೀವಿ ಉಸ್ತುವಾರಿ ಅಧಿಕಾರಿಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಅನ್ನು ಸಹ ಲಗತ್ತಿಸಬೇಕು.

Published by:Ashwini Prabhu
First published: