Security for Women: ಮಹಿಳಾ ಉದ್ಯೋಗಿಗಳನ್ನು ಕೆಲಸದಿಂದ ಹೊರಗುಳಿಯದಂತೆ ತಡೆಯುವುದು ಹೇಗೆ?

Security for Women : ಮಹಿಳೆ ತಾನು ಯಾವ ಕ್ಷೇತ್ರದಲ್ಲಿಯೂ ಕಮ್ಮಿ ಇಲ್ಲ. ಗ್ರಾಮೀಣ ಪ್ರದೇಶದಿಂದ ಹಿಡಿದು ಪಟ್ಟಣದವರೆಗೂ ಉದ್ಯೋಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ ಈಕೆ. ಆದರೆ ಕೆಲ ವರ್ಷಗಳ ಸಮೀಕ್ಷೆಯ ಪ್ರಕಾರ ಮಹಿಳೆಯರ ಉದ್ಯೋಗದ ಕಡೆಗೆ ಹಿಮ್ಮುಖ ಮಾಡಿದ ರೀತಿ ತೋರ್ಪಡಿಸುತ್ತಿವೆ. ಕಾರಣ ಆದ್ರೂ ಏನಿರಬಹುದು?

 ಸಾಂಧರ್ಭಿಕ ಚಿತ್ರ

ಸಾಂಧರ್ಭಿಕ ಚಿತ್ರ

  • Share this:
ಮಹಿಳೆಯರು ಯಾರಿಗಿಂತ ಕಮ್ಮಿ ಹೇಳಿ? ಗ್ರಾಮೀಣ ಪ್ರದೇಶದಿಂದ (Rural area) ಹಿಡಿದು ಪಟ್ಟಣದವರೆಗೂ ತನ್ನದೇ  ಆದ ಕ್ಷೇತ್ರದಲ್ಲಿ ಛಾಪನ್ನು ಮೂಡಿಸುತ್ತಿದ್ದಾರೆ. ಪುರುಷರುರೆಷ್ಟು ಕೆಲಸ ಮಾಡುತ್ತಿದ್ದಾರೋ ಅಷ್ಟೇ ಕೆಲಸವನ್ನು ಮಹಿಳೆಯರೂ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ನಡೆದ ಸಮೀಕ್ಷೆ ಪ್ರಕಾರ  ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕ್ಷೀಣಿಸಿರುವುದನ್ನು ಕಾಣಬಹುದಾಗಿದೆ. ಇದಕ್ಕಾಗಿ ಪ್ರಧಾನಿ  ನರೇಂದ್ರ  ಮೋದಿ  (Prime minister Narendra Modi) ಮಹಿಳಾ ಉದ್ಯೋಗಿಗಳನ್ನು ನಿರುದ್ಯೋಗಿಗಳಾಗದಂತೆ ತಡೆಯುವ ಬಗ್ಗೆ ಒಂದಷ್ಟು ಯೋಜನೆಗಳನ್ನು ತಿಳಿಸಿದ್ದಾರೆ.

2010ರಲ್ಲಿ ಶೇಕಡಾ 23.4 ರಿಂದ 2021 ರಲ್ಲಿ 20.3 ಶೇಕಡಕ್ಕೆ, ಭಾರತದ ಜನಸಂಖ್ಯೆಯ ಸುಮಾರು 50 ರಷ್ಟು ಮಹಿಳೆಯರು, ಉದ್ಯೋಗಗಳಲ್ಲಿ ಸತತವಾಗಿ ಕ್ಷೀಣಿಸುತ್ತಿದ್ದಾರೆ.  ಇತ್ತೀಚೆಗೆ ನರೇಂದ್ರ ಮೋದಿ ಭಾರತದ ಮಹಿಳೆಯರ ಭಾಗವಹಿಸುವಿಕೆ ಗಣನೀಯವಾಗಿ ಹೆಚ್ಚಿಸುವ ಹಾಗೂ ಎಲ್ಲಾ ವ್ಯವಸ್ಥೆಗೆ ಅನುಗುಣವಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶಕ್ಕೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ತಿಳಿಸಿದ್ದಾರೆ. ವಾಸ್ತವವಾಗಿ, ಉದಯೋನ್ಮುಖ ಬೆಹೆಮೊತ್​​ಗೆ, ಭಾರತದ ಮಹಿಳಾ ಕಾರ್ಮಿಕ ಭಾಗವಹಿಸುವಿಕೆಯ ದರವು ಅತ್ಯಂತ ಕಡಿಮೆ ಸ್ಥಾನದಲ್ಲಿ. ಹಾಗಾಗಿ ಮೋದಿ ನೂತನ ಯೋಜನೆಯನ್ನು ಹೂಡಿದ್ದಾರೆ.

ವಿಶ್ವ ಬ್ಯಾಂಕ್ ನೀಡಿದ ಸಮೀಕ್ಷೆಯಲ್ಲಿ ಏನಿತ್ತು?
ಇತ್ತೀಚೆಗೆ ವಿಶ್ವ ಬ್ಯಾಂಕ್ ನೀಡಿದ ಸಮೀಕ್ಷೆಯ ಪ್ರಕಾರ, ಕಳೆದ ದಶಕದಲ್ಲಿ ಹೆಚ್ಚು ಮಹಿಳೆಯರು ಭಾರತದ ಉದ್ಯೋಗಿಗಳಿಂದ ಕಣ್ಮರೆಯಾಗುತ್ತಿದ್ದಾರೆ. 2010 ರಲ್ಲಿ 23.4 ರಷ್ಟು ಇದ್ದರೆ 2021 ರ ಹೊತ್ತಿಗೆ 20.3 ಶೇಕಡದಷ್ಟು ಕ್ಷೀಣಿಸಿದ್ದಾರೆ. ಅಂದರೆ, ಭಾರತದ ಜನಸಂಖ್ಯೆಯ ಸುಮಾರು ಶೇಕಡ 50 ರಷ್ಟು ಮಹಿಳೆಯರು ಹಿಂದುಳಿದಿದ್ದಾರೆ ಎಂದರೆ ನಂಬಲೇಬೆಕು. ಶೇಕಡ 90 ರಷ್ಟು ನಗರದ ಪುರುಷರು ಉದ್ಯೋಗದಲ್ಲಿ ಸಕ್ರಿಯರಾಗಿದ್ದಾರೆಯೇ ಹೊರತು, ಇದರ ಅರ್ಧದಷ್ಟು ಮಹಿಳೆಯರು ಪ್ರಸ್ತುತ ಉದ್ಯೋಗದಿಂದ ಹಿಮ್ಮುಖವಾಗಿದ್ದಾರೆ ಎಂಬುದು ವಿಷಾಧನೀಯ ಸಂಗತಿ.

ಇದನ್ನೂ ಓದಿ : Top-5 News: ತುಮಕೂರು ಪಾಲಿಕೆಯಲ್ಲಿ ಮೈತ್ರಿ, ಕೋಡಿಮಠ ಶ್ರೀ ಭಯಾನಕ ಭವಿಷ್ಯ! ಚಳಿ ಚಳಿ ಸಂಜೆಗೆ ಬಿಸಿ ಬಿಸಿ ನ್ಯೂಸ್

ಹಿಮ್ಮುಖವಾಗಲು ಕಾರಣವೇನು?
ಶೇಕಡ 100 ರಷ್ಟು ಮಹಿಳೆಯರ ಪಾಲ್ಗೊಳ್ಳುವಿಕೆ ಇದ್ದ ಭಾರತ ದೇಶದಲ್ಲಿ, ಒಮ್ಮೆಗೆ ಯಾಕೆ ಕ್ಷೀಣಿಸಿತು ಎಂಬ ಪ್ರಶ್ನೆ ಮೂಡುವುದಂತೂ ಸಹಜವೇ. ಇದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಒಂದು ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳು.  ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚಿನ ಮಾಹಿತಿಯ ಹೊರತಾಗಿಯೂ, ಭಾರತದ ಒಟ್ಟು ಅಪರಾಧ ದರದಲ್ಲಿ ಸ್ಥಿರವಾದ ಕುಸಿತವನ್ನು ವರದಿ ಮಾಡಿದೆ, ಇದು ಕಳೆದ ವರ್ಷ ಶೇಕಡ 7.6 ರಷ್ಟು ಕುಸಿದು 61 ಲಕ್ಷಕ್ಕೆ ತಲುಪಿದೆ.

ಇದಾಗಿಯೂ ಕೂಡ, ಇದರ ಮಧ್ಯೆ ಮಹಿಳೆಯರ ಮೇಲಿನ ಅಪರಾಧಗಳು ಕಳೆದ ವರ್ಷ ಶೇಕಡ 15. 3 ರಷ್ಟು ಏರಿಕೆಯಾಗಿದೆ. 2020 ರಲ್ಲಿ 3,71,503 ಕ್ಕೆ ಹೋಲಿಸಿದರೆ 2021 ರಲ್ಲಿ ಸುಮಾರು 4,28,278 ಪ್ರಕರಣಗಳು ದಾಖಲಾಗಿವೆ. ಇದರರ್ಥ 2021 ರಲ್ಲಿ ಪ್ರತೀ ಲಕ್ಷ ಮಹಿಳಾ ಜನಸಂಖ್ಯೆಯ ಅಪರಾಧದ ಪ್ರಮಾಣವು ಶೇಕಡ 64.5 ಕ್ಕೆ ಏರಿದೆ, 2020 ರಲ್ಲಿ 56.5ರಿಂದ ತೀವ್ರವಾಗಿ ಏರಿದೆ. ಮತ್ತು ಹೆಚ್ಚಿನ ಪ್ರಕರಣಗಳು ಅಂದರೆ, ಸುಮಾರು 31.8 ಶೇಕಡದಷ್ಟು ಈ ಪ್ರಕರಣಗಳು ಅನೈತಿಕ ಸಂಬಂಧ ಮತ್ತು ಹಿಂಸೆಯನ್ನು ಒಳಗೊಂಡಿವೆ.
ಪಶ್ಚಿಮ ಬಂಗಳಾವು ಈ ಪಟ್ಟಿಯಲ್ಲಿ ಅಗ್ರಸ್ಥಾನವಿದೆ,  ಹಾಗೂ ಯುಪಿ, ರಾಜಸ್ಥಾನ, ಅಸ್ಸಾಂ ನಂತರದ ಸ್ಥಾನದಲ್ಲಿದೆ. ಇದು ಉದ್ಯೋಗವನ್ನು ಮಾಡಲು ಬಯಸುವ ಮಹಿಳೆಯರು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆಗೆ ಸಮಾಜದಲ್ಲಿ ಒಳಗಾಗಿರುತ್ತಾರೆ.

ಇನ್ನು ಮೆಟ್ರೋ ಪ್ರದೇಶಗಳಲ್ಲಿ ಪರಿಸ್ಥಿತಿಯು ತುಂಬಾ ಕೆಟ್ಟದಾಗಿದೆ. ಎಸ್ ಬಿ ಐ ಗಳ ಇತ್ತೀಚಿನ ಇಕೋ- ವ್ರಾಪ್​ನ ಮಾಹಿತಿಯ ಪ್ರಕಾರ, ಮೆಟ್ರೋ ನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧವು ಶೇಕಡ 22.9 ಶೇಕಡದಷ್ಟು ಏರಿಕೆಯಾಗಿದೆ, ದೆಹಲಿಯು ಇದರಲ್ಲಿ 1/3 ರಷ್ಟಿವೆ. ಭಾರತದ ಉದ್ಯೋಗ ಕೇಂದ್ರಗಳಾದ ಬೆಂಗಳೂರು, ಮುಂಬೈ ಮತ್ತು ದೆಹಲಿಯು ಮೆಟ್ರೋ ನಗರಗಳಲ್ಲಿ ಸಂಭವಿಸುವ ಎಲ್ಲಾ ಅಪರಾಧಗಳಲ್ಲಿ ಶೇಕಡ 52ರಷ್ಟು ಬೃಹತ್ ಪ್ರಮಾಣದಲ್ಲಿರುತ್ತದೆ.

ದೆಹಲಿ ಮೂಲದ ಓರ್ವ ವೃತ್ತಿಪರರಾದ ನಿಮಿಷಾ (ಹೆಸರನ್ನು ಬದಲಿಸಲಾಗಿದೆ) 'ಮದುವೆಯ ನಂತರ, ನಾನು ದೆಹಲಿಗೆ ಹೋದಾಗ, ತಾನು ಕೆಲಸ ಮಾಡದಂತೆ ತಡೆಯಲಾಗಿತ್ತು. ದೆಹಲಿಯಲ್ಲಿ ಸಾಮಾನ್ಯವಾಗಿ ರಾತ್ರಿಯ ವೇಳೆ ಚಲಿಸುವುದು ಕಷ್ಟಕರ. ಕಂಪನಿಯ ಸಾರಿಗೆಯ ಹೊರತಾಗಿಯೂ, ಗಂಭೀರ ಸುರಕ್ಷತಾ ಸಮಸ್ಯೆಗಳು ಮುಂದುವರೆಯುತ್ತವೆ. ಸಾರ್ವಜನಿಕ ಸಾರಿಗೆಯಲ್ಲಿ ರಾತ್ರಿಯಲ್ಲಿ ಮನೆಗೆ ಹಿಂತಿರುಗಲು ಕಷ್ಟವಾಗಿತ್ತು. ಎಂದು ಹೇಳುತ್ತಾರೆ.

ಇದನ್ನೂ ಓದಿ : Kohinoor: ಬ್ರಿಟನ್ ರಾಣಿ ಮರಣದ ನಂತರ ಇವರ ಮುಡಿಗೇರಲಿದ್ಯಂತೆ ಕೊಹಿನೂರ್ ಕಿರೀಟ!

ಹೆಚ್ಚಿನ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಮತ್ತು ಹೂಡಿಕೆಯ ಬೆಳವಣಿಗೆಗೆ ನೇರವಾಗಿ ಅನುಪಾತದಲ್ಲಿರುತ್ತದೆ ಎಂದು ಹಲವು ಅಧ್ಯಯನಗಳು ಸಾಮಾನ್ಯವಾಗಿ ಕಡಿಮೆ ಅಪರಾಧ ಘಟನೆಗಳು 21 ಭಾರತೀಯ ರಾಜ್ಯಗಳಲ್ಲಿ 9 ರಲ್ಲಿ ಹೆಚ್ಚಿನ GSDP ಬೆಳವಣಿಗೆಗೆ ಕಾರಣವಾಗಿವೆ.

ಹಿಮಾಚಲ ಪ್ರದೇಶ, ಛತ್ತೀಸ್​ಗಢ, ತಮಿಳುನಾಡು, ಜಾರ್ಖಂಡ್, ಕರ್ನಾಟಕ, ಗುಜರಾತ್ ಮತ್ತು ಉತ್ತರಾಖಂಡಗಳು  ಕಡಿಮೆ ಅಪರಾಧದಲ್ಲಿ ಇವೆ. ಅಂದರೆ ಮಹಿಳೆಯರು ಸ್ವಾವಲಂಬಿ ಆಗಿರಲು ಭಯವಿಲ್ಲ ಎಂದು ತಿಳಿಯಬಹುದಾಗಿದೆ. ರಾಜಸ್ಥಾನ, ತೆಲಂಗಾಣ ಮತ್ತು ಒಡಿಶಾ ಮಾತ್ರ ಹೆಚ್ಚಿನ ಅಪರಾಧಗಳಿಂದ ಕೂಡಿದೆ. ಈ ರೀತಿಯಾದಂತಹ ಹಲವಾರು ಸಮಸ್ಯೆಗಳಿಂದ ಹಿಮ್ಮುಖವಾಗುತ್ತಿರುವ ಮಹಿಳೆ  ಉದ್ಯೋಗಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಬಹುದು.
First published: