ಒಂದು ರುಪಾಯಿಗೆ ಇಡ್ಲಿ ಮಾರುತ್ತಿರುವ ಅಜ್ಜಿಗೆ ಟ್ವಿಟ್ಟರ್ ಮೂಲಕವೇ ಸಿಕ್ತು ಗ್ಯಾಸ್ ಕನೆಕ್ಷನ್

ಕಮಲಥಾಲ್ ಹೆಸರಿನ ಅಜ್ಜಿ​ ಕೊಯಿಮತ್ತೂರಿನ ಪುಟ್ಟ ಹಳ್ಳಿಯೊಂದರ ನಿವಾಸಿ. ಬಡವರಿಗೋಸ್ಕರ ಒಂದು ರೂಪಾಯಿ ಇಡ್ಲಿ ಸಿದ್ಧಪಡಿಸಿಕೊಡುವುದು ಅಜ್ಜಿಯ ಕಾಯಕ. ಇಡ್ಲಿ ಮಾಡಲು ಅಜ್ಜಿ ಸೌದೇ ಒಲೆಯನ್ನು ನಂಬಿಕೊಂಡಿದ್ದರು.

Rajesh Duggumane | news18-kannada
Updated:September 13, 2019, 7:38 AM IST
ಒಂದು ರುಪಾಯಿಗೆ ಇಡ್ಲಿ ಮಾರುತ್ತಿರುವ ಅಜ್ಜಿಗೆ ಟ್ವಿಟ್ಟರ್ ಮೂಲಕವೇ ಸಿಕ್ತು ಗ್ಯಾಸ್ ಕನೆಕ್ಷನ್
ಎಲ್​ಪಿಜಿ ಪಡೆದ ಅಜ್ಜಿ
  • Share this:
ನವದೆಹಲಿ: ಬಡವರು, ಕೆಲಸಗಾರರಿಗೆ ಒಂದು ರೂಪಾಯಿಗೆ ಇಡ್ಲಿ ಸಿದ್ಧಪಡಿಸಿಕೊಡುತ್ತಿದ್ದ ಅಜ್ಜಿಗೆ ಟ್ವಿಟ್ಟರ್​ ಮೂಲಕ ಎಲ್​ಪಿಜಿ ಸಂಪರ್ಕ ದೊರೆತಿದೆ. ಅಜ್ಜಿಯ ಸಮಸ್ಯೆಗೆ ಕೇಂದ್ರ ಸರ್ಕಾರ ತಕ್ಷಣಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕಮಲಥಾಲ್ ಹೆಸರಿನ ಅಜ್ಜಿ​ ಕೊಯಿಮತ್ತೂರಿನ ಪುಟ್ಟ ಹಳ್ಳಿಯೊಂದರ ನಿವಾಸಿ. ಬಡವರಿಗೋಸ್ಕರ ಒಂದು ರೂಪಾಯಿ ಇಡ್ಲಿ ಸಿದ್ಧಪಡಿಸಿಕೊಡುವುದು ಅಜ್ಜಿಯ ಕಾಯಕ. ಇಡ್ಲಿ ಮಾಡಲು ಅಜ್ಜಿ ಬಳಸುತ್ತಿದ್ದು ಸೌದೆ ಒಲೆಯನ್ನು. ಇದನ್ನು ಗಮನಿಸಿದ್ದ ಉದ್ಯಮಿ ಆನಂದ್ ಮಹಿಂದ್ರಾ, ಟ್ವಿಟ್ಟರ್​ನಲ್ಲಿ ಅಜ್ಜಿ ಇಡ್ಲಿ ಮಾಡುವ ವಿಡಿಯೋ ಹಾಕಿದ್ದರು.

“ಈ ಅಜ್ಜಿ ಇನ್ನೂ ಕಟ್ಟಿಗೆ ಒಲೆ ಬಳಕೆ ಮಾಡುತ್ತಿದ್ದಾರೆ. ಇವರ ಪರಿಚಯ ಯಾರಿಗಾದರೂ ಇದೆಯಾ? ನಾನು ಅಜ್ಜಿಯ ಉದ್ಯಮದಲ್ಲಿ ಹೂಡಿಕೆ ಮಾಡಲು ಸಿದ್ಧನಿದ್ದೇನೆ. ಅವರಿಗೋಸ್ಕರ ಒಂದು ಎಲ್​ಪಿಜಿ ಸ್ಟೋವ್​ ನೀಡುತ್ತಿದ್ದೆ,” ಎಂದು ಬರೆದುಕೊಂಡಿದ್ದರು ಆನಂದ್.


ಈ ಟ್ವೀಟ್​ ನೋಡಿದ ಇಂಧನ, ನೈಸರ್ಗಿಕ ಅನಿಲಗಳ ಸಚಿವ ಧರ್ಮೇಂದ್ರ ಅಜ್ಜಿಗೆ ಎಲ್​ಪಿಜಿ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ವೇಳೆ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಗಲ್ಫ್​ ರಾಷ್ಟ್ರಕ್ಕೆ ತೆರಳಿದ್ದರು. ಇದಾದ ಮರುದಿನವೇ ಕಮಲಥಾಲ್​ ಮನೆಗೆ ಗ್ಯಾಸ್​ ಕನೆಕ್ಷನ್​ ದೊರೆತಿದ್ದು, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading